ಭಾರತೀಯ ವಾಯುಪಡೆಯಲ್ಲಿವೆ 1524 ಭರ್ಜರಿ ವಿವಿಧ ಹುದ್ದೆಗಳು
ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಶುಭಸುದ್ದಿ..!! ಭಾರತೀಯ ವಾಯುಪಡೆಯಲ್ಲಿ 1524 ಗ್ರೂಪ್-ಸಿ ನಾಗರಿಕ ಹುದ್ದೆಗಳ ನೇಮಕಾತಿಗಾಗಿ ಭಾರತೀಯ ವಾಯುಪಡೆ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಮುಂದೆ ಓದಿ.
ಗ್ರೂಪ್ ಸಿ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಮೇ 02 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ ಹೀಗಿದೆ :
ಗ್ರೂಪ್ ಸಿ ವೃಂದದ ನಾಗರಿಕ ವರ್ಗದ ಹುದ್ದೆಗಳು
ಒಟ್ಟು ಹುದ್ದೆಗಳು : 1524 ಹುದ್ದೆಗಳು
ವೆಸ್ಟರ್ನ್ ಏರ್ ಕಮಾಂಡ್ ಯೂನಿಟ್ - 362
ಸೌತ್ ಏರ್ ಕಮಾಂಡ್ ಯುನಿಟ್ - 28
ಈಸ್ಟ್ ಏರ್ ಕಮಾಂಡ್ ಯೂನಿಟ್ - 132
ಸೆಂಟ್ರಲ್ ಏರ್ ಕಮಾಂಡ್ ಯೂನಿಟ್ - 116
ಮ್ಯಾನೇಜಿಂಗ್ ಕಮಾಂಡ್ ಯೂನಿಟ್ - 479
ಟ್ರೈನಿಂಗ್ ಕಮಾಂಡ್ ಯೂನಿಟ್ - 407
ಮೇಲಿನ ಘಟಕಗಳಲ್ಲಿ ನಾಗರಿಕ ಯಾಂತ್ರಿಕ ಸಾರಿಗೆ ಚಾಲಕ ಸಾಮಾನ್ಯ ದರ್ಜೆ, ಕಿರಿಯ ದರ್ಜೆ ಸಹಾಯಕ, ಸ್ಟೆನೊಗ್ರಾಫರ್ ವರ್ಣಚಿತ್ರಕಾರ, ಬೆರಳಚ್ಚುಗಾರ, ಕಂಪ್ಯೂಟರ್ ಆಪರೇಟರ್ ಸೂಪರಿಂಟೆಂಡೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
🏵🏵🏵🏵🏵🏵🏵🏵🏵🏵🏵🏵🏵🏵🏵🏵🏵🏵
KSCDRC RECRUITMENT FOR 56 VARIOUS POST : APPLY NOW
ವಿದ್ಯಾರ್ಹತೆ:
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯ. ವಿವಿಧ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಯನ್ನು ನಿಗದಿ ಪಡಿಸಿದ್ದು ಅಭ್ಯರ್ಥಿಗಳು ವಿದ್ಯಾರ್ಹತೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಿರುವ ಅಧಿಸೂಚನೆಯಲ್ಲಿ ನೋಡಿಕೊಳ್ಳತಕ್ಕದ್ದು.
ವಯೋಮಿತಿ:
ವಯೋಮಿತಿ ಕುರಿತಾದ ಅಧಿಕೃತ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ನೋಡಿಕೊಳ್ಳತಕ್ಕದ್ದು.
🏵🏵🏵🏵🏵🏵🏵🏵🏵🏵🏵🏵🏵🏵🏵🏵🏵🏵
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ :
ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.
ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅಲಿಖಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಪರೀಕ್ಷೆಯಲ್ಲಿ ಮುಖ್ಯವಾಗಿ ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್, ನ್ಯೂಮರಿಕಲ್ ಆಪ್ಟಿಟ್ಯೂಡ್, ಜನರಲ್ ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತಹ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆಯು ಒಳಗೊಂಡಿರುತ್ತದೆ. ಪ್ರಶ್ನೆಪತ್ರಿಕೆಯು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಇರುತ್ತದೆ.
ಪರೀಕ್ಷೆಗಳಲ್ಲಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ನಂತರ ದೈಹಿಕ/ಪ್ರಾಯೋಗಿಕ ಪರೀಕ್ಷೆಗಳಿಗೆ ಆಹ್ವಾನಿಸಲಾಗುತ್ತದೆ.
ಅರ್ಜಿ ಸಲ್ಲಿಕೆ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://indianairforce.nic.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಮೇ 02, 2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
🏵🏵🏵🏵🏵🏵🏵🏵🏵🏵🏵🏵🏵🏵🏵🏵🏵🏵..
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 03-04-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02 ಮೇ 2021
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
🏵🏵🏵🏵🏵🏵🏵🏵🏵🏵🏵🏵🏵🏵🏵🏵🏵🏵
No comments:
Post a Comment
If you have any doubts please let me know