ಹತ್ತನೇ ತರಗತಿ ಪಾಸಾದವರಿಗೆ ಭಾರತೀಯ ಸೈನ್ಯದಲ್ಲಿದೆ ಉದ್ಯೋಗ..!!!
ಭಾರತೀಯ ಸೇನೆಗೆ ಸೇರಬೇಕೆಂದು ಕನಸು ಕಾಣುತ್ತಿರುವ ಯುವಜನತೆಗೆ ಒಲ್ಲಿದೆ ಶುಭಸುದ್ದಿ..!!! ಭಾರತೀಯ ಸೇನೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ರ‍್ಯಾಲಿ ನಡೆಸುತ್ತಿದ್ದು, ಪಾಲ್ಗೊಳ್ಳಲು ಇಚ್ಛಿಸುವರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಅಧಿಸೂಚನೆಯಲ್ಲಿ ತಿಳಿಸಿದೆ..!!!
ಯಾವ ಜಿಲ್ಲೆಗಳ ಯುವಕರಿಗೆ ಅವಕಾಶವಿದೆ?
- ಬೆಂಗಳೂರು ನಗರ,
- ಬೆಂಗಳೂರು ಗ್ರಾಮೀಣ,
- ತುಮಕೂರು,
- ಮಂಡ್ಯ,
- ಮೈಸೂರು,
- ಬಳ್ಳಾರಿ,
- ಚಾಮರಾಜನಗರ,
- ರಾಮನಗರ,
- ಕೊಡಗು,
- ಕೋಲಾರ,
- ಚಿಕ್ಕಬಳ್ಳಾಪುರ,
- ಹಾಸನ ಮತ್ತು
- ಚಿತ್ರದುರ್ಗ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
🏵 ಹುದ್ದೆಗಳ ವಿವರ 🏵
- ಸೋಲ್ಜರ್ ಜನರಲ್ ಡ್ಯೂಟಿ
- ಸೋಲ್ಜರ್ ಟೆಕ್ನಿಕಲ್
- ಸೋಲ್ಜರ್ ಟ್ರೇಡ್ಸ್‍ಮನ್ (ಚೆಫ್ ವಾಷರ್‍ಮನ್) (ಎಸ್ಸೆಸ್ಸೆಲ್ಸಿ)
- ಸೋಲ್ಜರ್ ಟ್ರೇಡ್ಸ್‍ಮನ್ (ಮೆಸ್ ಕೀಪರ್, ಹೌಸ್ ಕೀಪರ್) (8ನೇ ತರಗತಿ)
- ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್, ಇನ್ವೆಂಟರಿ ಮ್ಯಾನೇಜ್‍ಮೆಂಟ್
- ಸೋಲ್ಜರ್ ಟೆಕ್ನಿಕಲ್- ನರ್ಸಿಂಗ್ ಅಸಿಸ್ಟೆಂಟ್, ನರ್ಸಿಂಗ್ ಅಸಿಸ್ಟೆಂಟ್ ವೆಟರ್ನರಿ
🏵 ವಿದ್ಯಾರ್ಹತೆ 🏵
ಸೋಲ್ಜರ್ ಜನರಲ್ ಡ್ಯೂಟಿಗೆ 10ನೇ ತರಗತಿ ಪಾಸಾಗಿದ್ದು, ಕನಿಷ್ಠ ಶೇ.45 ಅಂಕ ಪಡೆದಿರಬೇಕು.
ಟೆಕ್ನಿಕಲ್ ಹಾಗೂ ಟೆಕ್ ನರ್ಸಿಂಗ್ ಹುದ್ದೆಗಳಿಗೆ 12ನೇ ತರಗತಿಯಲ್ಲಿ ವಿಜ್ಞಾನ ವ್ಯಾಸಂಗ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ಕ್ಲರ್ಕ್ ಮತ್ತು ಸ್ಟೋರ್ ಕೀಪರ್ ಮೊದಲಾದ ಹುದ್ದೆಗಳಿಗೆ 12ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. ಸರಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳ ಪ್ರಮಾಣಪತ್ರವನ್ನಷ್ಟೇ ಪರಿಗಣಿಸಲಾಗುತ್ತದೆ.
🌺🌺🌺🌺🌺🌺🌺🌺🌺🌺🌺🌺🌺🌺🌺
🏵 ವಯೋಮಿತಿ: 🏵
ಎಲ್ಲ ಹುದ್ದೆಗಳಿಗೂ ಕನಿಷ್ಠ 17 ವರ್ಷ ಆರು ತಿಂಗಳು, ಸೋಲ್ಜರ್ ಜನರಲ್ ಹುದ್ದೆಗೆ ಗರಿಷ್ಠ 21 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 23 ವರ್ಷ ವಯೋಮಿತಿ ನಿಗದಿಯಾಗಿದೆ.
🏵 ರ್ಯಾಲಿ ದಿನಾಂಕ: 🏵
ಮೇ 7 ರಿಂದ 12ರ ವರೆಗೆ ಕೋಲಾರದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ನಡೆಯಲಿದೆ.
🏵 ದೈಹಿಕ ಅರ್ಹತೆ 🏵
ಹುದ್ದೆಗಳಿಗೆ ಅನುಗುಣವಾಗಿ ಎತ್ತರ 162-166 ಸೆಂ. ಮೀಟರ್ ಇರಬೇಕು. ಎದೆಯ ಸುತ್ತಳತೆ 77 ಸೆಂ. ಮೀಟರ್ ಇರಬೇಕು. ಎದೆಯುಬ್ಬಿಸಿದಾಗ 5 ಸೆಂ. ಮೀ ಹೆಚ್ಚಾಗಬೇಕು.
🌺🌺🌺🌺🌺🌺🌺🌺🌺🌺🌺🌺🌺🌺🌺
🏵 ಆಯ್ಕೆ ಪ್ರಕ್ರಿಯೆ 🏵
1.6 ಕಿ.ಮೀ ಓಟವನ್ನು 5 ನಿಮಿಷ 30 ಸೆಕೆಂಡ್‍ಗಳಲ್ಲಿ ಪೂರೈಸಬೇಕು. ಟೆಕ್ನಿಕಲ್ ಹುದ್ದೆಗಳಿಗೆ 5 ನಿಮಿಷ 45 ಸೆಕೆಂಡ್‍ಗಳು. ಇದಲ್ಲದೇ, ಪುಲ್‍ಅಪ್ಸ್ ಹಾಗೂ ಉದ್ದ ಜಿಗಿತದಲ್ಲಿ ಅರ್ಹತೆ ಪಡೆಯಬೇಕು. ಇದಾದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಲಿಖಿತ ಪರೀಕ್ಷೆ ಇರುತ್ತದೆ.
🏵 ರ‍್ಯಾಲಿ ವೇಳೆ ತರಬೇಕಾದ ದಾಖಲೆಗಳು 🏵
ರ‍್ಯಾಲಿ ವೇಳೆ ಅಭ್ಯರ್ಥಿಗಳು ಕೆಲ ಪ್ರಮಾಣ ಪತ್ರಗಳನ್ನು ತರಬೇಕಿದ್ದು, ಅದರ ವಿವರ ಇಂತಿದೆ:
- ಪ್ರವೇಶ ಪತ್ರ,
- 20 ಫೋಟೋಗಳು (3 ತಿಂಗಳಿಗಿಂತ ಹಳೆಯದಾಗಿರಬಾರದು),
- ಶೈಕ್ಷಣಿಕ ದಾಖಲೆಗಳ ಪ್ರಮಾಣ ಪತ್ರ,
- ನಿವಾಸಿ ಪ್ರಮಾಣ ಪತ್ರ ( ತಹಸೀಲ್ದಾರ್ ಕಚೇರಿಯಿಂದ ಪಡೆದ),
- ಜಾತಿ ಪ್ರಮಾಣ ಪತ್ರ,
- ಕೊನೆಯ ವಿದ್ಯಾಭ್ಯಾಸ ಮಾಡಿದ ಸಂಸ್ಥೆಯಿಂದ ನಡವಳಿಕೆ ಪ್ರಮಾಣ ಪತ್ರ,
- ಎನ್‍ಸಿಸಿ ಹಾಗೂ ಕ್ರೀಡಾಪಟುಗಳು ಎರಡು ವರ್ಷಕ್ಕಿಂತ ಹಳೆಯದ್ದಲ್ಲದ ಸಾಧನೆಯ ಪ್ರಮಾಣ ಪತ್ರ,
- ಅವಿವಾಹಿತ ಪ್ರಮಾಣಪತ್ರ,
- ಹಾಗೂ ಇನ್ನಿತರ ಸಂಬಂಧದ ಪ್ರಮಾಣ ಪತ್ರಗಳನ್ನು ತರಬೇಕು.
ನೋಂದಣಿಗೆ ಕೊನೆಯ ದಿನ: 26.04.2021
ಅಧಿಸೂಚನೆಗೆ: https://bit.ly/2OGGjkb
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://www.joinindianarmy.nic.in
No comments:
Post a Comment
If you have any doubts please let me know