Interesting Facts About World's Constitution
ಜಗತ್ತಿನ ಅತ್ಯಂತ ಹಳೆಯ ಸಂವಿಧಾನ : Worlds Oldest Constitution : San Marino Constitution
ಜಗತ್ತಿನ ಅತ್ಯಂತ ಹಳೆಯ ಸಂವಿಧಾನವೆಂದು ಸ್ಯಾನ್ ಮೆರಿನೊ ಸಂವಿಧಾನವನ್ನು ಕರೆಯುತ್ತಾರೆ. ಈ ಸಂವಿಧಾನವನ್ನು 1600 ಅಕ್ಟೋಬರ್ 8 ರಂದು ರಚಿಸಲಾಯಿತು. ಸ್ಯಾನ್ ಮೆರಿನೊ ಎಂಬುದು ಯೂರೋಪ್ ನಲ್ಲಿ ಬರುವ ಒಂದು ಸಾರ್ವಭೌಮ ಗಣತಂತ್ರ ದೇಶವಾಗಿದೆ.
ಸ್ಯಾನ್ ಮೆರಿನೊ ಸಂವಿಧಾನದ ನಂತರ ಅಮೆರಿಕದ ಸಂವಿಧಾನವು ಹಳೆಯ ಸಂವಿಧಾನ ಎಂದು ಒರಿಗಣಿಸಲಾಗುತ್ತದೆ. ಅಮೆರಿಕದ ಸಂವಿಧಾನವನ್ನು 1787 ಸೆಪ್ಟೆಂಬರ್ 17 ರಚಿಸಲಾಯಿತು. 1789ರಲ್ಲಿ ಸಂವಿಧಾನವು ಜಾರಿಗೆ ಬಂದಿತು.
ಅಮೇರಿಕಾ ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು 1776 ಜುಲೈ 4 ರಂದು ಪಡೆದುಕೊಂಡಿತು. ಜುಲೈ 4 ನ್ನು ಅಮೆರಿಕವು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತದೆ.
🏵🏵🏵🏵🏵🏵🏵🏵🏵🏵🏵🏵🏵🏵🏵🏵🏵
ಜಗತ್ತಿನ ಅತಿ ದೊಡ್ಡ ಸಂವಿಧಾನ : Worlds Biggest Constitution :
ಜಗತ್ತಿನ ಸಾರ್ವಭೌಮ ರಾಷ್ಟ್ರಗಳಲ್ಲಿ ಭಾರತದ ಸಂವಿಧಾನವು ಅತಿದೊಡ್ಡ ಸಂವಿಧಾನವಾಗಿದೆ. ಆದರೆ ರಾಜ್ಯಗಳನ್ನು ಪರಿಗಣಿಸಿದರೆ ಆಲ್ಬಮ ಸಂವಿಧಾನವು ಅತಿದೊಡ್ಡದಾಗಿದೆ. ಆಲ್ಬಮ ಎಂಬುದು ಅಮೆರಿಕದ ಒಂದು ರಾಜ್ಯವಾಗಿದೆ.
ಸಂವಿಧಾನ ದಿನ (Constitutional Day)
ಭಾರತದ ಸಂವಿಧಾನವು 1949ರ ನವಂಬರ್ 26ರಂದು ಅಂಗೀಕಾರವಾಗಿದ್ದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ (1891 ಏಪ್ರಿಲ್ 14) ಅವರ 125ನೇ ಜನ್ಮ ವರ್ಷದ ಹಿನ್ನೆಲೆಯಲ್ಲಿ, 2015 ನವಂಬರ್ 26 ನ್ನು ಸಂವಿಧಾನದ ದಿನವನ್ನಾಗಿ ಆಚರಿಸಲು 2015 ರಿಂದ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿತು. ಮೊದಲ ಬಾರಿಗೆ 2015ರ ನವಂಬರ್ 26 ರಂದು ದೇಶಾದ್ಯಂತ ಸಂವಿಧಾನ ದಿನವನ್ನು ಆಚರಿಸಲಾಯಿತು.
🏵🏵🏵🏵🏵🏵🏵🏵🏵🏵🏵🏵🏵🏵🏵🏵🏵
ಗಣರಾಜ್ಯ ದಿನ (Republic Day)
ಪ್ರತಿವರ್ಷ ಜನವರಿ 26 ಇನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 26 ಪ್ರಮುಖ ದಿನವಾಗಿದ್ದು 1929 ರ ಡಿಸೆಂಬರ್ 31 ರಂದು ಜವಾಹರ್ ಲಾಲ್ ನೆಹರು ಅವರ ಅಧ್ಯಕ್ಷತೆಯ ಲಾಹೋರ್ ಅಧಿವೇಶನದಲ್ಲಿ ಜನವರಿ 26 1930 ನ್ನು ಪೂರ್ಣ ಸ್ವರಾಜ್ಯ ದಿನವನ್ನಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನವನ್ನೂ ಕೂಡ 1950 ಜನವರಿ 26 ರಂದು ಅಳವಡಿಸಿಕೊಳ್ಳಲಾಯಿತು. ಪ್ರತಿವರ್ಷ ಗಣರಾಜ್ಯ ದಿನದಂದು ಗಣರಾಜ್ಯದ ಅತಿಥಿಗಳಾಗಿ ವಿದೇಶಿ ಮುಖ್ಯಸ್ಥರುಗಳು ಭಾಗವಹಿಸುತ್ತಾರೆ. 1950 ರಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಡಾ. ಸುಕಾರ್ನೋ ಅವರು ಭಾಗವಹಿಸಿದ್ದರು.
2021 ರ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರವರಿಗೆ ಆಹ್ವಾನ ನೀಡಿತ್ತಾದರೂ ಕೋವಿಡ್-19 ರೂಪಾಂತರಿ ಕೊರೋನಾ ಕಾರಣದಿಂದಾಗಿ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಅನಂತರ ಸುರಿನಾಮ್ ಅಧ್ಯಕ್ಷ ಚಂದ್ರಿಕಾ ಪ್ರಸಾದ್ ರವರನ್ನು ಆಹ್ವನಿಸಲಾಗುತ್ತದೆ ಎನ್ನಲಾಗಿತ್ತಾದರೂ ಅನಂತರ ಆ ನಿರ್ಧಾರವನ್ನು ಕೈಬಿಡಲಾಯಿತು. ಹೀಗಾಗಿ 2021 ರಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ವಿದೇಶೀ ಅತಿಥಿಗಳು ಭಾಗವಹಿಸಲಿಲ್ಲ.
Important Quick Links For PDF Download | |
---|---|
Files | Download Links |
FDA GK QP 28-02-2021 PDF | Click Here to Download |
Spardha Vijetha January 2021 | Click Here to Download |
Spardha Vijetha February 2021 | Click Here to Download |
All Spardha Vijetha Magazines 2021 | Click Here to Download |
Our YouTube Channel | Click Here to Subscribe |
Our Facebook Page | Click Here to Follow |
THANK YOU FOR VISITING EDUTUBEKANNADA.COM | |
No comments:
Post a Comment
If you have any doubts please let me know