Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 20 March 2021

20th March 2021 Current Affairs || Daily Current Affairs 2021

   

20 ಮಾರ್ಚ್ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು




ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!!

ಪ್ರಚಲಿತ ವಿದ್ಯಮಾನಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಪ್ರಚಲಿತ ವಿದ್ಯಮಾನಗಳ ಜ್ಞಾನ ನಮ್ಮನ್ನ ಎಂತಹದೇ ಪರೀಕ್ಷೆಗಳಲ್ಲಿಯೂ ಅತೀ ಹೆಚ್ಚು ಅಂಕಗಳನ್ನು ತೆಗೆಯುವಲ್ಲಿ ಗಣನೀಯ ಪ್ರಮಾಣದ ಪಾಲುದಾರಿಕೆಯನ್ನು ಹೊಂದಿವೆ. ಅದಕ್ಕೆಂದೇ www.edutubekannada.com ತಂಡವು ಪ್ರತಿದಿನದ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನಿಮಗೆ ನೀಡುತ್ತಿದೆ. 


ಪ್ರತಿ ದಿನದ ಪ್ರಚಲಿತ ವಿದ್ಯಮಾನಗಳು, ಮಾಸಿಕ ಪ್ರಚಲಿತ ವಿದ್ಯಮಾನಗಳು ಹಾಗೂ ವಾರ್ಷಿಕ ಪ್ರಚಲಿತ ವಿದ್ಯಮಾನಗಳನ್ನು ಪ್ರತಿದಿನವೂ ನಮ್ಮ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಿರುತ್ತೇವೆ. ದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ ಪಡೆಯಲು ನಮ್ಮ ವೆಬ್‌ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ..!!!


🏵🏵🏵🏵🏵🏵🏵🏵🏵🏵🏵🏵🏵


ಈ ಕೆಳಗೆ ದಿನಾಂಕ : 20 ನೇ ಮಾರ್ಚ್ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳನ್ನು ಚರ್ಚಿಸಲಾಗಿದೆ‌.

20th March 2021 Current Affairs,

20th March 2021 Current Affairs Quiz,

20th March 2021 Current Affairs Daily Current Affairs, 




20th march 2021 Current Affairs

01. ಇತ್ತೀಚೆಗೆ ದೆಹಲಿ ಸರ್ಕಾರದ ಮನೆಮನೆಗೆ ಪಡಿತರ ಯೋಜನೆಯನ್ನು ಈ ಕೆಳಗಿನವುಗಳಲ್ಲಿ ಯಾರು ನಿಷೇಧಿಸಿದ್ದಾರೆ.?
ಎ) ಸರ್ವೋಚ್ಚ ನ್ಯಾಯಾಲಯ
ಬಿ) ದೆಹಲಿ ಉಚ್ಛ ನ್ಯಾಯಾಲಯ
ಸಿ) ಕೇಂದ್ರ ಸರಕಾರ
ಡಿ) ನೀತಿ ಆಯೋಗ

ಸರಿಯಾದ ಉತ್ತರ : ಸಿ) ಕೇಂದ್ರ ಸರಕಾರ

ವಿವರಣೆ :
ಕೇಂದ್ರ ಸರ್ಕಾರ ಮಾರ್ಚ್ 25 ರಿಂದ ದೆಹಲಿ ಸರ್ಕಾರದ ಮನೆ ಮನೆಗೆ ಪಡಿತರ ಯೋಜನೆಯನ್ನು ನಿಷೇಧಿಸಿದೆ. ಈ ಯೋಜನೆಯಡಿ 100 ಕುಟುಂಬಗಳಿಗೆ ಪಡಿತರ ವಿತರಿಸಬೇಕಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪಡಿತರ ನೀಡುತ್ತದೆ, ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದೆ.


02. ಈ ಕೆಳಗಿನ ಯಾವ ರಾಜ್ಯದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ಯಾಮಲಾಜಿ ವಿಷ್ಣು ಮಂದಿರ ಟ್ರಸ್ಟ್ ಅತಿ ಕಡಿಮೆ ಬಟ್ಟೆಗಳನ್ನು ಧರಿಸುವ ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಿದೆ.?
ಎ) ಕೇರಳ
ಬಿ) ಪಂಜಾಬ್
ಸಿ) ಮಹಾರಾಷ್ಟ್ರ
ಡಿ) ಗುಜರಾತ್

ಸರಿಯಾದ ಉತ್ತರ : ಡಿ) ಗುಜರಾತ್

ವಿವರಣೆ :

ಗುಜರಾತ್ ನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ಯಾಮಲಾ ಜಿ ವಿಷ್ಣು ಮಂದಿರ ಟ್ರಸ್ಟ್ ನಲ್ಲಿ ಅತಿ ಕಡಿಮೆ ಅಂದರೆ ಅತಿ ಕಿರಿದಾದ ಬಟ್ಟೆಗಳನ್ನು ಧರಿಸುವ ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಿದೆ. ಸಣ್ಣ ಉಡುಪುಗಳು ಅಂದರೆ ಸ್ಕರ್ಟ್-ಬರ್ಮುಡಾ ಸೇರಿದಂತೆ ಇತ್ಯಾದಿ ಕಿರಿಯ ಬಟ್ಟೆಗಳನ್ನು ಧರಿಸುವ ಭಕ್ತರ ಪ್ರವೇಶಕ್ಕೆ ದೇವಸ್ಥಾನ ನಿಷೇಧ ಹೇರಿದೆ. ಆದರೆ ದರ್ಶನ ಮಾಡಲು ಬದಲಿ ಬಟ್ಟೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಟ್ರಸ್ಟ್ ಹೇಳಿದೆ.



03. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರನ್ನು ಯಾವ ವರ್ಷದ "Stop TB Partnership Board" ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ?
ಎ) 2021
ಬಿ) 2025
ಸಿ) 2022
ಡಿ) 2023

ಸರಿಯಾದ ಉತ್ತರ : ಬಿ) 2025

ವಿವರಣೆ :
ಭಾರತದಿಂದ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಅಭಿಯಾನದಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರನ್ನು 2025 ನೇ ಸಾಲಿನ "ಕ್ಷಯ ರೋಗ ನಿರ್ಮೂಲನಾ ಪಾಲುದಾರಿಕೆ ಮಂಡಳಿ" ಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜುಲೈ 2021 ರಂದು ಅವರು ತಮ್ಮ ಹುದ್ದೆಯನ್ನು ಅಲಂಕರಿಸಲಿದ್ದಾರೆ.

🏵🏵🏵🏵🏵🏵🏵🏵🏵🏵🏵🏵🏵

04. ಇತ್ತೀಚೆಗೆ ಕೊರೊನಾ ವೈರಸ್ ಕಾರಣದಿಂದಾಗಿ ಜಾನ್ ಮಾಗುಫುಲಿ ನಿಧನರಾದರು. ಅವರು ಯಾವ ದೇಶದ ಅಧ್ಯಕ್ಷ .?
ಎ) ತೈವಾನ್
ಬಿ) ಮಾಲ್ಡಿವ್ಸ್
ಸಿ) ಟಾಂಜಾನಿಯಾ
ಡಿ) ಶ್ರೀಲಂಕಾ

ಸರಿಯಾದ ಉತ್ತರ : ಸಿ) ಟಾಂಜಾನಿಯಾ

ವಿವರಣೆ :
ಇತ್ತೀಚೆಗೆ ಕರೋನ ವೈರಸ್ ನಿಂದ ಟಾಂಜಾನಿಯಾ ದೇಶದ   ಅಧ್ಯಕ್ಷರಾದ ಜಾನ್ ಮಾಗುಫುಲಿ ತಮ್ಮ 61 ನೇ ವಯಸ್ಸಿನಲ್ಲಿ ಮರಣ ಹೊಂದಿದರು. ಇವರ ಮರಣದ ನಂತರ ಟಾಂಜಾನಿಯಾದ ಉಪಾಧ್ಯಕ್ಷರಾದ ಸಮಿಯಾ ಸುಹುಲ್ ಹಸನ್ ದೇಶಾದ್ಯಂತ 14 ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದಾರೆ. ಸದ್ಯ  61 ವರ್ಷದ ಉಪಾಧ್ಯಕ್ಷರ ಹಸನ್ ಅವರು ಮುಂದಿನ ಐದು ವರ್ಷಗಳ ಅವಧಿಗೆ ಟಾಂಜಾನಿಯಾ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಮಾರ್ಚ್ 19, 2021 ರಂದು 61 ವರ್ಷದ ಸಮಿಯಾ ಸುಲುಹು‌ ಹಸನ್ ಟಾಂಜಾನಿಯಾದ ಮೊದಲ ಮಹಿಳಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಹಸನ್ ಟಾಂಜಾನಿಯಾದ 6 ನೇ ಅಧ್ಯಕ್ಷೆ ಮತ್ತು ಪೂರ್ವ ಆಫ್ರಿಕಾ ಸಮುದಾಯದ ಎರಡನೇ ಮಹಿಳಾ ಅಧ್ಯಕ್ಷೆಯಾಗಿದ್ದಾರೆ.

ಟಾಂಜಾನಿಯಾ ಕುರಿತು 

ರಾಜಧಾನಿ : ಡೊಡೊಮಾ
ಅಧ್ಯಕ್ಷ : ಸಮಿಯಾ ಸಲುಹು ಹಸನ್
ಪ್ರಧಾನಿ : ಕಾಸಿಮ್‌ ಮಜಲಿವಾ
ಕರೆನ್ಸಿ : ಟಾಂಜೇನಿಯಾದ ಶಿಲ್ಲಿಂಗ್


05. ಇತ್ತೀಚೆಗೆ ಈ ಕೆಳಗಿನ ಯಾವ ದೇಶ ಭಾರತದೊಂದಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕಿದೆ?
ಎ) ಅಮೆರಿಕಾ
ಬಿ) ಚೀನಾ
ಸಿ) ಇಟಲಿ
ಡಿ) ಸಿಂಗಾಪುರ

ಸರಿಯಾದ ಉತ್ತರ : ಸಿ) ಇಟಲಿ

ವಿವರಣೆ :

ಇತ್ತೀಚೆಗೆ ಇಟಲಿಯು ಭಾರತದೊಂದಿಗೆ ಅಂತರಾಷ್ಟ್ರೀಯ ಸೌರ ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟ ಒಪ್ಪಂದವನ್ನು ತಿದ್ದುಪಡಿ ಮಾಡಿದ ನಂತರ ಇಟಲಿಯು ಈ ಒಪ್ಪಂದಕ್ಕೆ ಸಹಿ ಹಾಕಿದೆ. ಅಂತರಾಷ್ಟ್ರೀಯ ಸೌರ ಒಕ್ಕೂಟವು 120 ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡಿರುವ ಮೈತ್ರಿ ಕೂಟವಾಗಿದೆ..

ಇತ್ತೀಚೆಗೆ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ ನ ಹೊಸ ಮಹಾನಿರ್ದೇಶಕರಾಗಿ ಡಾ. ಅಜಯ್ ಮಾಥರ್ ಅವರು ನೇಮಕಗೊಂಡಿದ್ದಾರೆ. ಈ ಹಿಂದೆ ಶ್ರೀ ಉಪೇಂದ್ರ ತ್ರಿಪಾಠಿ ಯವರು ISA ನ ಮಹಾನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ISA ಕುರಿತು :-
ಪ್ರಧಾನ ಕಚೇರಿ : ಗುರುಗ್ರಾಮ್, ಹರಿಯಾಣ
ಸ್ಥಾಪನೆ : 30 ನವೆಂಬರ್ 2015

🏵🏵🏵🏵🏵🏵🏵🏵🏵🏵🏵🏵🏵

06. ಮಾರ್ಚ್ 20 ರಂದು ವಿಶ್ವದಾದ್ಯಂತ ಯಾವ ದಿನವನ್ನು ಆಚರಿಸಲಾಗುತ್ತದೆ?
ಎ) ವಿಶ್ವ ಚಿರತೆ ದಿನ
ಬಿ) ವಿಶ್ವ ಗುಬ್ಬಚ್ಚಿ ದಿನ
ಸಿ) ವಿಶ್ವ ಆರೋಗ್ಯ ದಿನ
ಡಿ) ವಿಶ್ವ ಕ್ರೀಡಾ ದಿನ

ಸರಿಯಾದ ಉತ್ತರ : ಬಿ) ವಿಶ್ವ ಗುಬ್ಬಚ್ಚಿ ದಿನ

ವಿವರಣೆ :

ಪ್ರತಿವರ್ಷ ಮಾರ್ಚ್ 21 ವಿಶ್ವ ಗುಬ್ಬಚ್ಚಿ ದಿನ ಎಂದು ಆಚರಿಸಲಾಗುತ್ತದೆ. ಗುಬ್ಬಚ್ಚಿಯ ಕುರಿತಯ ಹೆಚ್ಚಿನ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪಕ್ಷಿಗಳ ಕುರಿತಾಗಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.




07. ಅಂತರರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್‌ಎ) ಹೊಸ ಮಹಾನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ?
ಎ) ಅಜಯ್ ಮಾಥುರ್
ಬಿ) ಸಂಜೀವ್ ನಂದನ್ ಸಹೈ
ಸಿ) ನರೇಂದ್ರ ಮೋದಿ
ಡಿ) ಪಿಯೂಷ್ ಗೋಯಲ್

ಸರಿಯದ ಉತ್ತರ : ಎ) ಅಜಯ್ ಮಾಥುರ್

ವಿವರಣೆ : 

ಡಾ. ಅಜಯ್ ಮಾಥುರ್ ಅವರು 2021 ರ ಮಾರ್ಚ್ 15 ರಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್ಎ) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಾಥುರ್ ಅವರು ಈ ಹಿಂದಿನ‌ ಮಹಾನಿರ್ದೇಶಕರಾದ ಶ್ರೀ ಉಪೇಂದ್ರ ತ್ರಿಪಾಠಿ ಅವರನ್ನು ಬದಲಿಸಲಿದ್ದಾರೆ. 

🏵🏵🏵🏵🏵🏵🏵🏵🏵🏵🏵🏵🏵


08. ಭಾರತದಲ್ಲಿ ಆರ್ಡನೆನ್ಸ್ ಕಾರ್ಖಾನೆಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಎ) 15 ಮಾರ್ಚ್
ಬಿ) 16 ಮಾರ್ಚ್
ಸಿ) 18 ಮಾರ್ಚ್
ಡಿ) 17 ಮಾರ್ಚ್

ಸರಿಯಾದ ಉತ್ತರ : ಸಿ) 18 ಮಾರ್ಚ್ 

ವಿವರಣೆ :

ಆರ್ಡ್‌ನೆನ್ಸ್ ಕಾರ್ಖಾನೆಗಳ ದಿನವನ್ನು ಪ್ರತಿವರ್ಷ ಮಾರ್ಚ್ 18 ರಂದು ಆಚರಿಸಲಾಗುತ್ತದೆ. ಕೋಲ್ಕತ್ತಾದ ಕೋಸಿಪೋರ್‌ನಲ್ಲಿರುವ ಭಾರತದ ಅತ್ಯಂತ ಹಳೆಯ ಆರ್ಡ್‌ನೆನ್ಸ್ ಕಾರ್ಖಾನೆಯ ಉತ್ಪಾದನೆಯನ್ನು 1802 ರ ಮಾರ್ಚ್ 18 ರಂದು ಪ್ರಾರಂಭಿಸಲಾಯಿತು. ಅದರ ಸವಿ ನೆನಪಿಗಾಗಿ ಪ್ರತಿ ವರ್ಷ ಮಾರ್ಚ್ 18 ನ್ನು ಆರ್ಡನನ್ಸ್ ಫ್ಯಾಕ್ಟರಿ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಆರ್ಡನನ್ಸ್ ಫ್ಯಾಕ್ಟರಿ ದಿನವನ್ನು "Hygiene Life : Healthy Life" ಎಂಬ ಅಭಿಯಾನದೊಂದಿಗೆ ಆಚರಿಸಲಾಯಿತು.


09. ಇತ್ತೀಚೆಗೆ ನಿಧನರಾದ ಜಾನ್ ಮಾಗುಫುಲಿ ಯಾವ ದೇಶದ ಮಾಜಿ ಅಧ್ಯಕ್ಷರಾಗಿದ್ದರು?
ಎ) ಟಾಂಜಾನಿಯಾ
ಬಿ) ಇಥಿಯೋಪಿಯಾ
ಸಿ) ಕೀನ್ಯಾ
ಡಿ) ಸೊಮಾಲಿಯಾ

ಸರಿಯಾದ ಉತ್ತರ : ಎ) ಟಾಂಜಾನಿಯಾ

ವಿವರಣೆ :

ಟಾಂಜಾನಿಯಾದ ಅಧ್ಯಕ್ಷ ಜಾನ್ ಮಾಗುಫುಲಿ ಹೃದಯ ಕಾಯಿಲೆ ಹಾಗೂ ಕೊರೋನಾ ವೈರಸ್ ಕಾರಣದಿಂದಾಗಿ ನಿಧನರಾದರು. "ಬುಲ್ಡೋಜರ್" ಎಂದು ಅಡ್ಡಹೆಸರು ಹೊಂದಿರುವ ಮಾಗುಫುಲಿ 2015 ರಿಂದ 2021 ರಲ್ಲಿ ನಿಧನದವರೆಗೂ ಟಾಂಜಾನಿಯಾದ ಐದನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಪ್ರಸ್ತುತ ಟಾಂಜಾನಿಯಾದ ಅಧ್ಯಕ್ಷರು : ಸಮಿಯಾ ಸುಲುಹು ಹಸನ್ (ಟಾಂಜಾನಿಯಾದ 6 ನೇ ಅಧ್ಯಕ್ಷೆ)

10. ವಿಶ್ವದ ಅತಿದೊಡ್ಡ ತೇಲುವ ಸೌರ ಫಾರ್ಮ್ ಅನ್ನು ಯಾವ ದೇಶದಲ್ಲಿ ನಿರ್ಮಿಸಲಾಗಿದೆ?
ಎ) ಭಾರತ
ಬಿ) ಚೀನಾ
ಸಿ) ದಕ್ಷಿಣ ಕೊರಿಯಾ
ಡಿ) ಸಿಂಗಾಪುರ್

ಸರಿಯಾದ ಉತ್ತರ : ಡಿ) ಸಿಂಗಾಪುರ್


11. ಮಿಷನ್ ಸಾಗರ್-IV ರ ಭಾಗವಾಗಿ ಐಎನ್‌ಎಸ್ ಜಲಾಶ್ವ ನೌಕೆಯು ಅಂಜೌನ್‌ ಬಂದರಿಗೆ ತಲುಪಿದೆ ಹಾಗಾದರೆ ಅಂಜೌನ್ ಬಂದರು ಯಾವ ದೇಶದಲ್ಲಿದೆ?
ಎ) ಈಸ್ವತಿನಿ
ಬಿ) ಲೆಸೊಥೊ
ಸಿ) ಬೋಟ್ಸ್ವಾನ
ಡಿ) ಕೊಮೊರೊಸ್

ಸರಿಯಾದ ಉತ್ತರ : ಡಿ) ಕೊಮೊರೊಸ್

ಮಿಷನ್ ಸಾಗರ್- IV ಯ ಭಾಗವಾಗಿ, ಭಾರತೀಯ ನೌಕಾ ಹಡಗು ಜಲಾಶ್ವ  ಮಾರ್ಚ್ 14, 2021 ರಂದು ಕೊಮೊರೊಸ್‌ನ ಬಂದರಾದ ಅಂಜೌವಾನ್‌ಗೆ ತಲುಪಿತು. ಇದು 1,000 ಮೆಟ್ರಿಕ್ ಟನ್ ಅಕ್ಕಿ ಹೊತ್ತುಬಸಾಗಿತ್ತು. 2021 ರ ಮಾರ್ಚ್ 15 ರಂದು ಭಾರತ ಸರ್ಕಾರದಿಂದ ಆಹಾರ ಸಹಾಯವನ್ನು ಕೊಮೊರೊಸ್ ಸರ್ಕಾರಕ್ಕೆ ಹಸ್ತಾಂತರಿಸುವ ಅಧಿಕೃತ ಸಮಾರಂಭ ನಡೆಯಿತು.

🏵🏵🏵🏵🏵🏵🏵🏵🏵🏵🏵🏵🏵

12. ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್‌ಎ) ಪ್ರಸ್ತುತ ಅಧ್ಯಕ್ಷ ದೇಶ ಯಾವುದು?
ಎ) ರಷ್ಯಾ
ಬಿ) ಭಾರತ
ಸಿ) ಯುಕೆ
ಡಿ) ಜಪಾನ್

ಸರಿಯಾದ ಉತ್ತರ: ಬಿ) ಭಾರತ

ವಿವರಣೆ :

ಭಾರತ ಮತ್ತು ಫ್ರಾನ್ಸ್ ದೇಶಗಳು ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐಎಸ್‌ಎ) ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರಾಷ್ಟ್ರಗಳಾಗಿವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮಹಾನಿರ್ದೇಶಕರಾಗಿ ಶ್ರೀ ಅಜಯ್ ಮಾಥುರ್ ನೇಮಕಗೊಂಡಿದ್ದಾರೆ.


13. ಇತ್ತೀಚೆಗೆ ಈ ಕೆಳಗಿನ ಯಾವ ರಾಜ್ಯ / ಕೇಂದ್ರಾಡಳಿತ ಪ್ರದೇಶ  “ಅವಮ್ ಕಿ ಬಾತ್” ಎಂಬ ರೇಡಿಯೋ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
ಎ) ದೆಹಲಿ
ಬಿ) ಚಂಡೀಗಡ
ಸಿ) ಜಮ್ಮು ಮತ್ತು ಕಾಶ್ಮೀರ
ಡಿ) ಪಂಜಾಬ್

ಸರಿಯಾದ ಉತ್ತರ : ಸಿ) ಜಮ್ಮು ಮತ್ತು ಕಾಶ್ಮೀರ

ವಿವರಣೆ : 

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ  ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಅವರು ಜಮ್ಮುವಿನ ರಾಜ್ ಭವನದಲ್ಲಿ ವೆಬ್‌ಸೈಟ್ ಮೂಲಕ ರೇಡಿಯೋ ಕಾರ್ಯಕ್ರಮವಾದ “ಅವಾಮ್ ಕಿ ಬಾತ್” ಯೋಜನೆಯನ್ನು ಪ್ರಾರಂಭಿಸಿದರು.

14. ಈ ಕೆಳಗಿನ ಯಾರು ಅಂತಾರಾಷ್ಟ್ರೀಯ (ಸ್ಟಾಪ್ ಟಿಬಿ ಪಾರ್ಟನರ್ಶಿಪ್ ಬೋರ್ಡ್) ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
ಎ) ಪ್ರಕಾಶ್ ಜಾವಡೇಕರ್
ಬಿ) ಸ್ಮೃತಿ ಜುಬಿನ್ ಇರಾನಿ
ಸಿ) ಮಹೇಂದ್ರ ನಾಥ್ ಪಾಂಡೆ
ಡಿ) ಡಾ.ಹರ್ಷ್ ವರ್ಧನ್

ಸರಿಯಾದ ಉತ್ತರ : ಡಿ) ಡಾ.ಹರ್ಷ್ ವರ್ಧನ್

ವಿವರಣೆ : 
ಡಾ. ಹರ್ಷ್ ವರ್ಧನ್ ಅವರನ್ನು ಅಂತರರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಪಾಲುದಾರಿಕೆ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

🏵🏵🏵🏵🏵🏵🏵🏵🏵🏵🏵🏵🏵

15. ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಅಫ್ಘಾನಿಸ್ತಾನದ ಆಟಗಾರ ಯಾರು?
ಎ) ರಶೀದ್ ಖಾನ್
ಬಿ) ಅಸ್ಗರ್ ಅಫಘಾನ್
ಸಿ) ಹಶ್ಮತ್ ಉಲ್ಲಾ ಶಾಹಿದಿ
ಡಿ) ಮೊಹಮ್ಮದ್ ನಬಿ

ಸರಿಯಾದ ಉತ್ತರ : ಸಿ) ಹಶ್ಮತ್ ಉಲ್ಲಾ ಶಾಹಿದಿ

ವಿವರಣೆ :

ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಅಫ್ಘಾನಿಸ್ತಾನದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಹಶ್ಮತ್ ಉಲ್ಲಾ ಶಾಹಿದಿ (200*) ಪಾತ್ರರಾದರು. ಶಾಹಿದಿ ಗಿಂತ ಮೊದಲು ಅಸ್ಗರ್ ಅಫಘಾನ್ ತನ್ನ 164 ರನ್ ಗಳೊಂದಿಗೆ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರ  ಎಂಬ ದಾಖಲೆಯನ್ನು ಹೊಂದಿದ್ದರು. 

16. ಕೊಮೊರೊಸ್‌ನ ರಾಜಧಾನಿ ಯಾವುದು?
ಎ) ಲಿಲೋಂಗ್ವೆ
ಬಿ) ಮೊರೊನಿ
ಸಿ) ಮನಾಗುವಾ
ಡಿ) ತೆಗುಸಿಗಲ್ಪಾ

ಸರಿಯದ ಉತ್ತರ ‌: ಬಿ) ಮೊರೊನಿ

ಮೊರೊನಿ ಆಫ್ರಿಕಾದ ಪೂರ್ವ ಕರಾವಳಿಯ ಜ್ವಾಲಾಮುಖಿ ದ್ವೀಪಸಮೂಹವಾದ ಕೊಮೊರೊಸ್ ನ ರಾಜಧಾನಿ.


No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads