12th March 2021 Current Affairs | Daily Current Affairs 2021 | 12th March 2021 Kannada Current Affairs
💥💥💥💥💥💥💥💥💥💥💥💥💥💥💥💥
ಆತ್ಮೀಯ ಸ್ನೇಹಿತರೇ,
ಎಲ್ಲರಿಗೂ ನಮಸ್ಕಾರ...
ಪ್ರಚಲಿತ ವಿದ್ಯಮಾನಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ದೈನಂದಿನ ಪ್ರಚಲಿತ ವಿದ್ಯಮಾನಗಳ ಅಧ್ಯಯನ ಯುಪಿಎಸ್‍ಸಿ, ಕೆಪಿಎಸ್‍ಸಿ, ಎಫ್‍ಡಿಎ, ಎಸ್‍ಡಿಎ, ಪಿಎಸ್‍ಐ, ಪಿಡಿಓ, ಪೊಲೀಸ್ ಕಾನ್‍ಸ್ಟೇಬಲ್, ಆರ್‍ಆರ್‍ಬಿ, ಎಸ್‍ಎಸ್‍ಸಿ, ಐಬಿಪಿಎಸ್ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ ವಿಸ್ತøತ ವಿವರಣೆ ಇಲ್ಲದೆ.
ಇವತ್ತಿನ ಈ ಲೇಖನದಲ್ಲಿ ನಾವು ದಿನಾಂಕ: 12 ಮಾರ್ಚ್ 2021 ರ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳನ್ನು ವಿವರಣೆ ಸಹಿತ ಚರ್ಚಿಸೋಣ…!!!
ಪ್ರ. ನಂ. 01 ಇತ್ತೀಚೆಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದವರು ಯಾರು?
1) ತ್ರಿವೇಂದ್ರ ಸಿಂಗ್ ರಾವತ್
2) ತೀರಥ್ ಸಿಂಗ್ ರಾವತ್
3) ಸುಂದರ್ ರಾಜನ್
4) ಮೇಲಿನ ಯಾರೂ ಅಲ್ಲ
ಸರಿಯಾದ ಉತ್ತರ : 2) ತೀರಥ್ ಸಿಂಗ್ ರಾವತ್
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
- ತಿರಥ್ ಸಿಂಗ್ ರಾವತ್ ಉತ್ತರಾಖಂಡ 9 ನೇ ಮುಖ್ಯಮಂತ್ರಿಗಳಾಗಿ ಮಾರ್ಚ್ 10, 2021 ರಂದು ಅಧಿಕಾರ ಸ್ವೀಕರಿಸಿದರು.
- ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಾರ್ಚ್ 09, 2021 ರಂದು ರಾಜಿನಾಮೆ ಸಲ್ಲಿಸಿದ್ದರು.
- ಸಂವಿಧಾನದ 163 ನೇ ವಿಧಿಯು ರಾಜ್ಯಪಾಲರು ಕಾರ್ಯ ನಿರ್ವಹಿಸಲು ಮುಖ್ಯಮಂತ್ರಿಯನ್ನು ಒಳಗೊಂಡ ಸಚಿವ ಸಂಪುಟವನ್ನು ಒದಗಿಸಿದೆ.
- 164 ನೇ ವಿಧಿ ಅನ್ವಯ ವಿಧಾನ ಸಭೆ ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ನಾಯಕನನ್ನು ಮುಖ್ಯಮಂತ್ರಿಯಾಗಿ ರಾಜ್ಯಪಾಲರು ನೇಮಕ ಮಾಡುತ್ತಾರೆ.
💥💥💥💥💥💥💥💥💥💥💥💥💥💥💥💥
ಪ್ರ. ನಂ. 02 ಇತ್ತೀಚೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬಿಡುಗಡೆಗೊಳಿಸಿದ ‘ಡಿಜಿಟಲ್ ಪೇಮೆಂಟ್ ಸ್ಕೋರ್ ಕಾರ್ಡ್’ ನಲ್ಲಿ ಅಗ್ರಸ್ಥಾನದಲ್ಲಿರುವ ಬ್ಯಾಂಕ್ ಯಾವುದು?
2) HDFC Bank
3) ICICI Bank
4) Axis Bank
ಸರಿಯಾದ ಉತ್ತರ : 1) State Bank of India
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬಿಡುಗಡೆಗೊಳಿಸಿದ ‘ಡಿಜಿಟಲ್ ಪೇಮೆಂಟ್ ಸ್ಕೋರ್ ಕಾರ್ಡ್’ ಪಟ್ಟಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಸತತ ಮೂರನೇ ತಿಂಗಳು ಅಗ್ರಸ್ಥಾನದಲ್ಲಿದೆ.
- ಎಸ್‍ಬಿಐ ಅಧ್ಯಕ್ಷರು: ದಿನೇಶ್ ಕುಮಾರ್ ಖಾರಾ.
- ಎಸ್‍ಬಿಐ ಪ್ರಧಾನ ಕಚೇರಿ: ಮುಂಬೈ.
- ಎಸ್‍ಬಿಐ ಸ್ಥಾಪನೆ: 1 ಜುಲೈ 1955.
ಪ್ರ. ನಂ. 03 ಇತ್ತೀಚೆಗೆ ಯಾವ ಬ್ಯಾಂಕ್ “ Wear N Pay” contactless payment wearable device ನ್ನು ಪರಿಚಯಿಸಿದೆ?
1) ಭಾರತೀಯ ಸ್ಟೇಟ್ ಬ್ಯಾಂಕ್
2) ಎಚ್‍ಡಿಎಫ್‍ಸಿ ಬ್ಯಾಂಕ್
3) ಆ್ಯಕ್ಸಿಸ್ ಬ್ಯಾಂಕ್
4) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ : 3) ಆ್ಯಕ್ಸಿಸ್ ಬ್ಯಾಂಕ್
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
- ವೇರ್ 'ಎನ್' ಪೇ ಬ್ರಾಂಡ್ ಅಡಿಯಲ್ಲಿ ಆಕ್ಸಿಸ್ ಬ್ಯಾಂಕ್ ಧರಿಸಬಹುದಾದ ಸಂಪರ್ಕವಿಲ್ಲದ ಪಾವತಿ ಸಾಧನಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ . ಈ ಸಾಧನಗಳು ಬ್ಯಾಂಡ್, ಕೀ ಚೈನ್ ಮತ್ತು ವಾಚ್ ಲೂಪ್ನಂತಹ ವಿವಿಧ ರೀತಿ ಧರಿಸಬಹುದಾದ ಬಟ್ಟೆಗಳಲ್ಲಿ ಬರುತ್ತವೆ. ಇವುಗಳ ಬೆಲೆ 750 ರೂ.ಗಳಿಂದ ಪ್ರಾರಂಭವಾಗುತ್ತದೆ.
- ಧರಿಸಬಹುದಾದ ವಸ್ತುಗಳನ್ನು ನೇರವಾಗಿ ಆಕ್ಸಿಸ್ ಬ್ಯಾಂಕ್ ಗ್ರಾಹಕರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿರುತ್ತದೆ. ಸಾಮಾನ್ಯ ಡೆಬಿಟ್ ಕಾರ್ಡ್‍ನಂತೆ ಇವು ಕಾರ್ಯನಿರ್ವಹಿಸುತ್ತದೆ. ಸಂಪರ್ಕವಿಲ್ಲದ ವಹಿವಾಟುಗಳನ್ನು ಸ್ವೀಕರಿಸುವ ಯಾವುದೇ ಅಂಗಡಿಯಲ್ಲಿ ಖರೀದಿಗೆ ಇದು ಅವಕಾಶ ನೀಡುತ್ತದೆ.
- ಆಕ್ಸಿಸ್ ಬ್ಯಾಂಕಿನ ಹೊಸ ‘ವೇರ್ ಎನ್ ಪೇ' ಸಾಧನಗಳು ಬ್ಯಾಂಡ್, ಕೀ ಚೈನ್ ಮತ್ತು ವಾಚ್ ಲೂಪ್ನಂತಹ ವಿವಿಧ ಪರಿಕರಗಳಲ್ಲಿ ಲಭ್ಯವಿದೆ.
- ಬಳಕೆದಾರರು ಇನ್ನು ಮುಂದೆ ಪಾವತಿಗಾಗಿ ತಮ್ಮ Smartphone ಮತ್ತು ವ್ಯಾಲೆಟ್ ಅನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಪ್ರಯಾಣದಲ್ಲಿರುವಾಗ ಸಂಪರ್ಕವಿಲ್ಲದ ವಹಿವಾಟು ನಡೆಸಲು ಈ ಧರಿಸಬಹುದಾದ ಸಾಧನಗಳನ್ನು ಸುಲಭವಾಗಿ ಧರಿಸಬಹುದು.
More Information About AXIS Bank
- ಆಕ್ಸಿಸ್ ಬ್ಯಾಂಕ್ ಆರಂಭವಾಗಿದ್ದು : 1994
- ಆಕ್ಸಿಸ್ ಬ್ಯಾಂಕ್ ಭಾರತದ 3ನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿದೆ.
- ಆಕ್ಸಿಸ್ ಬ್ಯಾಂಕ್‍ನ ಪ್ರಧಾನ ಕಚೇರಿ: ಮುಂಬೈ, ಮಹಾರಾಷ್ಟ್ರ.
- ಆಕ್ಸಿಸ್ ಬ್ಯಾಂಕ್‍ನ ಟ್ಯಾಗ್‍ಲೈನ್: ದಿಲ್ ಸೆ ಓಪನ್.
- ಆಕ್ಸಿಸ್ ಬ್ಯಾಂಕ್‍ನ ಎಂಡಿ ಮತ್ತು ಸಿಇಒ: ಅಮಿತಾಬ್ ಚೌಧರಿ.
ಪ್ರ. ನಂ. 04 ಇತ್ತೀಚೆಗೆ ಇಸ್ರೋ ಯಾವ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಸೇರಿ ಜಂಟಿ ಭೂ ವೀಕ್ಷಣಾ ಉಪಗ್ರಹ ಮಿಷನ್ ರಾಡಾರ್ ಅನ್ನು ಅಭಿವೃದ್ಧಿಪಡಿಸಿದೆ?
1) ನಾಸಾ
2) ರಷ್ಯನ್ ಫೆಡರೇಷನ್ ಸ್ಪೇಸ್ ಏಜನ್ಸಿ
3) ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್
4) ಜಪಾನ್ ಏರೋಸ್ಪೇಸ್ ಎಕ್ಸ್‍ಪ್ಲೋರೇಶನ್ ಏಜನ್ಸಿ
ಸರಿಯಾದ ಉತ್ತರ : 1) ನಾಸಾ
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
- ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಜೊತೆ ಜಂಟಿ ಭೂ ವೀಕ್ಷಣಾ ಉಪಗ್ರಹದ ಕಾರ್ಯಾಚರಣೆಗಾಗಿ ಹೈ ರೆಸಲ್ಯೂಶನ್ ಚಿತ್ರಗಳನ್ನು ಉತ್ಪಾದಿಸುವ ಸಾಮಥ್ರ್ಯವಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‍ಎಆರ್) ಅಭಿವೃದ್ಧಿಯನ್ನು ಇಸ್ರೋ ಪೂರ್ಣಗೊಳಿಸಿದೆ.
- ನಾಸಾ ಮತ್ತು ಇಸ್ರೋ ಸಹಯೋಗದೊಂದಿಗೆ ರಚಿತವಾದ ನಿಸಾರ್ ಎಂಬುದು ಭೂಮಿಯ ವೀಕ್ಷಣೆಗಾಗಿ ಹೈ ರೆಸೊಲ್ಯೂಷನ್ ಚಿತ್ರಗಳನ್ನು ಸೆರೆ ಹಿಡಿಯಬಲ್ಲ ರಾಡಾರ್ ಆಗಿದೆ.
- ಇಸ್ರೋ ಅಧ್ಯಕ್ಷರು: ಕೆ. ಶಿವನ್.
- ಇಸ್ರೋ ಪ್ರಧಾನ ಕಚೇರಿ: ಬೆಂಗಳೂರು, ಕರ್ನಾಟಕ.
- ಇಸ್ರೋ ಸ್ಥಾಪನೆ: 15 ಆಗಸ್ಟ್ 1969.
- ನಾಸಾದ ಪ್ರಧಾನ ಕಚೇರಿ: ವಾಷಿಂಗ್ಟನ್ ಡಿಸಿ, ಯುನೈಟೆಡ್ ಸ್ಟೇಟ್ಸ್.
- ನಾಸಾ ಸ್ಥಾಪನೆ: 1 ಅಕ್ಟೋಬರ್ 1958.
ಪ್ರ. ನಂ. 05 ಮಾರ್ಚ್ 09 ರಿಂದ 19 ರವರೆಗೆ ಭಾರತ ಯಾವ ದೇಶದೊಂದಿಗೆ ತನ್ನ “DUSTLIK-II” ಜಂಟಿ ಮಿಲಿಟರಿ ವ್ಯಾಯಾಮ ನಡೆಸಲಿದೆ ?
1) ಪಾಕಿಸ್ಥಾನ
2) ಉಜ್ಬೆಕಿಸ್ತಾನ
3) ಅಮೇರಿಕ
4) ಫ್ರಾನ್ಸ್
ಸರಿಯಾದ ಉತ್ತರ : 2) ಉಜ್ಬೆಕಿಸ್ತಾನ
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
- ಭಾರತ ಮತ್ತು ಉಜ್ಬೇಕಿಸ್ತಾನ ಸೇನೆಗಳು ಮಾರ್ಚ್ 09 ರಿಂದ ಮಾರ್ಚ 19 ರವರಗೆ ತಮ್ಮ ದ್ವಿಪಕ್ಷೀಯ ಜಂಟಿ ಮಿಲಿಟರಿ ವ್ಯಾಯಾಮವಾದ “DUSTLIK-II” ರ ಎರಡನೆಯ ಆವೃತ್ತಿಯನ್ನು ಉತ್ತರಾಖಂಡದ ರಾಣಿಕೇತ್ ಬಳಿಯ ಚೌಬಾಟಿಯಾದಲ್ಲಿ ನಡೆಸಲಿವೆ.
- ಸದರಿ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನೆಯ ಕಡೆಯಿಂದ 13 ನೇ ಕುಮಾವೂನ್ ರೆಜಿಮೆಂಟ್ (ರೇಜಾಂಗ್ ಲಾ ಬೆಟಾಲಿಯನ್) ಭಾಗವಹಿಸಲಿದೆ.
- ಕಾಶ್ಮೀರದಂತಹ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಮರುಸೃಷ್ಟಿಸುವ ಈ ವ್ಯಾಯಾಮದಲ್ಲಿ ಉಭಯ ದೇಶಗಳ 45 ಸೈನಿಕರು ಭಾಗವಹಿಸಲಿದ್ದಾರೆ.
- “DUSTLIK-I” ಜಂಟಿ ಮಿಲಿಟರಿ ವ್ಯಾಯಾಮದ ಮೊದಲನೇ ಆವೃತ್ತಿಯು 2019 ನವೆಂಬರ್ 04 ರಿಂದ 13 ರ ವರೆಗೆ ತಾಷ್ಕೆಂಟ್‍ನ ಚಿರ್ಚಿಕ್ ತರಬೇತಿ ಕೇಂದ್ರದಲ್ಲಿ ನಡೆದಿದೆ.
More About Uzbekistan
- ಅಧ್ಯಕ್ಷ- ಶೌಕತ್ ಮಿರ್ಜಿಯೋಯೆವ್
- ರಾಜಧಾನಿ – ತಾಷ್ಕೆಂಟ್
- ಕರೆನ್ಸಿ – ಉಜ್ಬೆಕಿಸ್ತಾನ್ ಸೋಮ್ (ಉಝಡ್‍ಎಸ್)
💥💥💥💥💥💥💥💥💥💥💥💥💥💥💥💥
ಪ್ರ. ನಂ. 06 ಭಾರತದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ರಾವ ರಾಜ್ಯದಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ?
1) ಕರ್ನಾಟಕ
2) ನವದೆಹಲಿ
3) ಆಂಧ್ರಪ್ರದೇಶ
4) ತೆಲಂಗಾಣ
ಸರಿಯಾದ ಉತ್ತರ : 4) ತೆಲಂಗಾಣ
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
- ತೆಲಂಗಾಣ ರಾಜ್ಯದ ಪೆದ್ದಪಳ್ಳಿ ಜಿಲ್ಲೆಯ ರಾಮಗುಂಡಂ ನಲ್ಲಿ 100 ಮೆಗಾ ವ್ಯಾಟ್ ಸಾಮಥ್ರ್ಯದ ಭಾರತದ ಅತಿ ದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರವನ್ನು 2021 ಮೇ-ಜೂನ್ ವೇಳೆಗೆ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ.
- ಇದನ್ನು ಶ್ರೀ ರಾಮಸಾಗರ ಜಲಾಶಯದ ನೀರಿನ ಮೇಲ್ಮೈ ಸುಮಾರು 423 ಕೋಟಿ ರೂ. ವೆಚ್ಚದಲ್ಲಿ ಎನ್‍ಟಿಪಿಸಿ (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್) ಅಭಿವೃದ್ಧಿ ಪಡಿಸುತ್ತಿದೆ.
- ಇದರ ಜೊತೆಗೆ ಕೇರಳದ ಕಾಯಕುಂಡಂ ನಲ್ಲಿ 92 ಮೆಗಾವ್ಯಾಟ್ ಸಾಮಥ್ರ್ಯದ ತೇಲುವ ಘಟಕ ಮತ್ತು, ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಿಂಹಾದ್ರಿ ವಿದ್ಯುತ್ ಸ್ಥಾವರದಲ್ಲಿ 25 ಮೆಗಾವ್ಯಾಟ್ ಘಟಕವನ್ನೂ ಸಹ 2021 ರ ಮೇ-ಜೂನ್ ವೇಳೆಗೆ ಕಾರ್ಯಾರಂಭ ಮಾಡುವ ಯೋಜನೆಯನ್ನುರೂಪಿಸಲಾಗಿದೆ.
NTPC : National Thermal Power Corporation Limited
- ಎನ್‍ಟಿಪಿಸಿ ಸ್ಥಾಪನೆ : 1975
- ಎನ್‍ಟಿಪಿಸಿ ಸಿಎಮ್‍ಡಿ : ಗುರುದೀಪ್ ಸಿ0ಗ್
- ಎನ್‍ಟಿಪಿಸಿ ಪ್ರಧಾನ ಕಚೇರಿ : ಹೊಸ ದೆಹಲಿ
ಪ್ರ. ನಂ. 07 2020 ರ ಬಿಸಿಸಿ ವರ್ಷದ ಭಾರತೀಯ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದವರು ಯಾರು ?
1) ಕೊನೆರು ಹಂಪಿ
2) ಮನು ಭಾಕೇರ್
3) ವಿನೇಶ್ ಫೋಗಟ್
4) ರಾಣಿ ರಾಂಪಾಲ್
ಸರಿಯಾದ ಉತ್ತರ : 1) ಕೊನೆರು ಹಂಪಿ
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
- ಪದ್ಮಶ್ರೀ ಪುರಸ್ಕøತ, ಆಂಧ್ರಪ್ರದೇಶದ 33 ವರ್ಷದ ಚೆಸ್ ಆಟಗಾರ್ತಿಯಾದ ಕೊನೆರು ಹಂಪಿ, 2020 ನೇ ಸಾಲಿನ ಬಿಸಿಸಿ ಇಂಡಿಯನ್ ಸ್ಪೋಟ್ರ್ಸ್‍ವುಮೆನ್ ಆಫ್ ದಿ ಇಯರ್ (BCC ISWOTY-2020) ರ ಎರಡನೆಯ ಆವೃತ್ತಿಯನ್ನು ಗೆದ್ದಿದ್ದಾರೆ. ಸಾರ್ವಜನಿಕ ಮತಗಳ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
- ಕೊನೆರು ಹಂಪಿ ಅವರು ಸ್ಪ್ರಿಂಟ್ ರನ್ನರ್ ಆದ ದುತಿ ಚಂದ್, ಏರ್‍ಗನ್ ಶೂಟರ್ ಆದ ಮನು ಭಾಕೇರ್, ಕುಸ್ತಿಪಟುವಾದ ವಿನೇಶ್ ಫೋಗಟ್, ಮತ್ತು ಹಾಕಿ ಕ್ಯಾಪ್ಟನ್ ರಾಣಿ ರಾಂಪಾಲ್ ಅವರ ವಿರುದ್ಧ ಈ ಪ್ರಶಸ್ತಿಯನ್ನು ಗೆದ್ದರು.
- ಬಿಸಿಸಿ ಮಹಾನಿರ್ದೇಶಕರಾದ ಟಿಮ್ ಡೇವಿ ಈ ಪ್ರಶಸ್ತಿವಿಜೇತರ ಹೆಸರನ್ನು ಘೋಷಿಸಿದರು.
- ಕೊನೆರು ಹಂಪಿ ತಮ್ಮ 15 ನೇ ವಯಸ್ಸಿನಲ್ಲಿ ಕಿರಿಯ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಆದರು, ಇವರ ಈ ದಾಖಲೆಯನ್ನು 2008 ರಲ್ಲಿ ಚೀನಾದ ಹೂ ಯಿಫಾನ್ ಮುರಿದರು.
- ಇವರ ಕ್ರೀಡಾ ಸಾಧನೆಗಾಗಿ 2007 ರಲ್ಲಿ ಇವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿದೆ.
- ಬಿಸಿಸಿ ಇಂಡಿಯನ್ ಸ್ಪೋಟ್ರ್ಸ್‍ವುಮೆನ್ ಆಫ್ ದಿ ಇಯರ್ ಪ್ರಶಸ್ತಿಯನ್ನು 2019 ರಲ್ಲಿ ಮಹಿಳಾ ಕ್ರೀಡಾ ಸಾಧಕಿಯರು ಭಾರತದಲ್ಲಿ ಎದುರಿಸುವ ಸಮಸ್ಯೆಗಳನ್ನು ಗುರುತಿಸಿ, ಅವರ ಸಾಧನೆಯನ್ನು ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ.
- 2019 ರಲ್ಲಿ ಬಿಸಿಸಿ ಇಂಟಿಯನ್ ಸ್ಪೋಟ್ರ್ಸ್‍ವುಮೆನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಪಡೆದಿದ್ದಾರೆ.
ಪ್ರ. ನಂ. 08 ಇತ್ತೀಚೆಗೆ ವಿಶ್ವಸಂಸ್ಥೆಯ ಬಾಹ್ಯ ಲೆಕ್ಕಪರಿಶೋಧಕರ ಸಮಿತಿಯ ಅಧ್ಯಕ್ಷರಾಗಿ ಭಾರತದ ಯಾವ ಸಿಎಜಿ ನೇಮಕಗೊಂಡಿದ್ದಾರೆ ?
1) ಶಶಿಕಾಂತ್ ಶರ್ಮಾ
2) ಗಿರೀಶ್ ಮುರ್ಮು
3) ಗಿರೀಶ್ ವರ್ಮಾ
4) ಮೇಲಿನ ಯಾರೂ ಅಲ್ಲ
ಸರಿಯಾದ ಉತ್ತರ : 2) ಗಿರೀಶ್ ಮುರ್ಮು
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
- ಮಾರ್ಚ್ 09, 2021, 14 ನೇ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ), ಶ್ರೀ ಗಿರೀಶ್ ಚಂದ್ರ ಮುರ್ಮು ಅವರನ್ನು 2021 ರ ವಿಶ್ವಸಂಸ್ಥೆಯ (ಯುಎನ್) ಬಾಹ್ಯ ಲೆಕ್ಕ ಪರಿಶೋಧಕರ ಸಮಿತಿಯ ಅಧ್ಯಕ್ಷರನ್ನಾಗಿ ಪುನಃ ನೇಮಿಸಲಾಯಿತು.
ಜಿ. ಸಿ. ಮೂರ್ಮು ಬಗ್ಗೆ:
- ಜಮ್ಮು ಮತ್ತು ಕಾಶ್ಮೀರದ ಮರುಸಂಘಟನೆ ಕಾಯ್ದೆ, 2019 ರ ಅಡಿಯಲ್ಲಿ ರಚನೆಯಾದ ನಂತರ 2019 ರ ಅಕ್ಟೋಬರ್‍ನಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರ ಪ್ರಾಂತ್ಯದ (ಯುಟಿ) ಮೊದಲ ಲೆಫ್ಟಿನೆಂಟ್ ಗವರ್ನರ್.
- ಅವರು ಪ್ರಸ್ತುತ ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿಗಳ ಬಾಹ್ಯ ಲೆಕ್ಕ ಪರಿಶೋಧಕರಾಗಿದ್ದಾರೆ.
ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಬಗ್ಗೆ:
- ಸಂವಿಧಾನದ 148 ರ ಅಡಿಯಲ್ಲಿ ಈ ಹುದ್ದೆಯನನ್ನು ಸೃಜಿಸಲಾಗಿದೆ.
- ಸ್ಥಾಪನೆ- 1858
- ಪ್ರಧಾನ ಕಛೇರಿ- ನವದೆಹಲಿ
- ಪ್ರಸ್ತುತ / 14 ನೇ ಸಿಎಜಿ - ಗಿರೀಶ್ ಚಂದ್ರ ಮುರ್ಮು ರವರು ಆಗಸ್ಟ್ 8, 2020 ರಂದು ಅಧಿಕಾರ ವಹಿಸಿಕೊಂಡರು.
ಯುಎನ್ ಬಾಹ್ಯ ಲೆಕ್ಕ ಪರಿಶೋಧಕರ ಸಮಿತಿಯ ಕುರಿತಾದ ಮಾಹಿತಿ
- ಸ್ಥಾಪನೆ - 1959 ಯುಎನ್ ಜನರಲ್ ಅಸೆಂಬ್ಲಿ.
- ಬಾಹ್ಯ ಲೆಕ್ಕ ಪರಿಶೋಧಕರ ಸಮಿತಿಯು 13 ದೇಶಗಳಿಂದ ಲೆಕ್ಕ ಪರಿಶೋಧಕರನ್ನು ಹೊಂದಿದೆ.
💥💥💥💥💥💥💥💥💥💥💥💥💥💥💥💥
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
Important Quick Links For PDF Download | |
---|---|
Files | Download Links |
FDA GK QP 28-02-2021 PDF | Click Here to Download |
Spardha Vijetha January 2021 | Click Here to Download |
Spardha Vijetha February 2021 | Click Here to Download |
All Spardha Vijetha Magazines 2021 | Click Here to Download |
Our YouTube Channel | Click Here to Subscribe |
Our Facebook Page | Click Here to Follow |
THANK YOU FOR VISITING EDUTUBEKANNADA.COM | |
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
EdutubeKannada.com is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (Edutube Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. Thank You for visiting us. Please be in touch with us On Our YouTube Channel, Telegram Channel, and also Like Our Edutube Kannada Facebook Page for regular updates of Current affairs, Old & Model Question Papers, and Other Study Materials.
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
No comments:
Post a Comment
If you have any doubts please let me know