ಗಣರಾಜ್ಯೋತ್ಸವ 2021 ಬಗ್ಗೆ ಸಮಗ್ರ ಮಾಹಿತಿ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗಳೂ "ಗಣರಾಜ್ಯೋತ್ಸವ 2021" ಸಂಬಂಧಿಸಿದ ಈ ಮಾಹಿತಿಗಳನ್ನು ತಿಳಿದುಕೊಳ್ಳಲೇಬೇಕು...!!!
UPSC, KPSC, KAS, FDA, SDA, PSI, PDO, PSI, Teachers Recruitment, TET, CET ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಈ ಮಾಹಿತಿ ನೀವುಗಳು ತಿಳಿದುಕೊಳ್ಳಲೇಬೇಕು...!!!
🔯🔯🔯🔯🔯🔯🔯🔯🔯🔯🔯🔯🔯🔯🔯🔯
ದಿನಾಂಕ: 26 ಜನವರಿ 2021 ಕ್ಕೆ ಭಾರತದ 72 ನೇ ಗಣರಾಜ್ಯೋತ್ವದ ಸಂಭ್ರಮ. ದೇಶದಲ್ಲಿ ಇದು ಮೊದಲ ರಾಷ್ಟ್ರೀಯ ಹಬ್ಬವೂ ಹೌದು. ಈ ನಿಟ್ಟಿನಲ್ಲಿ ದೆಹಲಿ ಸಂಭ್ರಮದ ಸಡಗರಲ್ಲಿ ತೇಲಾಡುತ್ತಿತ್ತು. ನವದೆಹಲಿ ರಾಜಪಥದಲ್ಲಿ ಭಾರತೀಯ ಸೇನೆಯ ಪಥಸಂಚಲನ, ವಿವಿಧ ರಾಜ್ಯಗಳಿಂದ ಬಂದ ಸ್ತಬ್ಧ ಚಿತ್ರಗಳ ಮೆರವಣಿಗೆ, ಯುದ್ಧ ವಿಮಾನಗಳ ಸಾಹಸ ಪ್ರದರ್ಶನ ಎಲ್ಲವೂ ಗಣರಾಜ್ಯೋತ್ಸವದ ಸಮಾರಂಭಕ್ಕೆ ಮತ್ತಷ್ಟು ಮೆರಗು ತಂದಿದ್ದಂತು ಸತ್ಯ.
ಭಾರತದ ರಾಷ್ಟ್ರಪತಿಗಳಾದ ಮಾನ್ಯ ರಾಮನಾಥ್ ಕೋವಿಂದ್ ಅವರು ನವದೆಹಲಿಯ ರಾಜಪಥದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಕೇಂದ್ರ ರಕ್ಷಣಾ ಸಚಿವಾಲಯದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
🔯🔯🔯🔯🔯🔯🔯🔯🔯🔯🔯🔯🔯🔯🔯🔯
🌼 ನಿಮಗೆ ತಿಳಿದಿರಲಿ : 2021 ರ ಗಣರಾಜ್ಯೋತ್ಸವ ಸಮಾರಂಭದಲ್ಲಿ 🌼
➡ 17 ಪ್ರಮುಖ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋ
➡ 9 ಕೇಂದ್ರ ಸಚಿವಾಲಯಗಳ ಟ್ಯಾಬ್ಲೋ
➡ ರಕ್ಷಣಾ ಘಟಕಗಳ 6 ಟ್ಯಾಬ್ಲೋಗಳು ಪ್ರದರ್ಶನ ಕಂಡವು.
➡ ದೇಶದ ಸೇನಾ ಸಾಮರ್ಥ್ಯ, ಸಾರ್ವಭೌಮತೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆ ಈ ಸಮಾರಂಭದಲ್ಲಿ ಜಗತ್ತಿನ ಎದುರು ಅನಾವರಣಗೊಂಡಿತು.
➡ ವಿಶೇಷವೆಂದರೆ ಈ ಸಮಾರಂಭದ ಪಥಸಂಚಲದಲ್ಲಿ 'ಬಾಂಗ್ಲಾದೇಶ ಸಶಸ್ತ್ರ ಪಡೆಯ ತುಕಡಿ' ಯೂ ಇತ್ತು.
🔯🔯🔯🔯🔯🔯🔯🔯🔯🔯🔯🔯🔯🔯🔯🔯
🔮 ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳೇಕೆ..!? 🔮
🍀 ಗಣರಾಜ್ಯೋತ್ಸವ ದಿನಕ್ಕೆ ವಿದೇಶಿ ಅತಿಥಿಗಳನ್ನು ಆಹ್ವಾನಿಸುವುದು ಮೊದಲಿಂದಲೂ ಬಂದ ಸಂಪ್ರದಾಯ.
🍀 1950 ಜನವರಿ 26 ರಂದು ನಡೆದ ಮೊದಲ ಗಣರಾಜ್ಯೋತ್ಸವ ಆಚರಣೆಗೆ ಇಂಡೋನೇಷ್ಯಾ ಅಧ್ಯಕ್ಷರಾದ ಸುಕಾರ್ನೋ ಭಾಗವಹಿಸಿದ್ದರು.
🍀 ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಪಾಕಿಸ್ತಾನದ ಮೊದಲ ನಾಯಕ ಜನರಲ್ ಮಲ್ಲಿಕ್ ಗುಲಾಮ್ ಮೊಹಮ್ಮದ್
🍀 ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಭಾಗವಹಿಸಿದ ಪಾಕಿಸ್ತಾನದ ಕೊನೆಯ ಗಣ್ಯರು - 1965 ರಲ್ಲಿ ಅಂದಿನ ಪಾಕಿಸ್ತಾನದ ಕೃಷಿ & ಆಹಾರ ಸಚಿವ -ರಾಣಾ ಅಬ್ದುಲ್ ಹಮೀದ್
🍀 2020 ರ ಗಣರಾಜ್ಯೋತ್ಸವದ ಆತಿಥ್ಯವಹಿಸಿದ ಗಣ್ಯರು - ಬ್ರೆಜಿಲ್ ದೇಶದ ಅಧ್ಯಕ್ಷ ಜೈರ್ ಬೋಲ್ಸನಾರೋ
🍀 2021 ರ ಗಣರಾಜ್ಯೋತ್ವದ ಮುಖ್ಯ ಅತಿಥಿಗಳಾಗಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಆಹ್ವಾನ ನೀಡಲಾಗಿತ್ತಾದರೂ, ರೂಪಾಂತರಿ ಕೊರೋನಾ ಸಲುವಾಗಿ ಅವರು ಬರಲಾಗಲಿಲ್ಲ.
ಅನಂತರ ಸುರಿನೇಂ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾ ಪ್ರಸಾದ್ ಸಂತೋಖಿ ಅವರನ್ನು ಆಹ್ವಾನಿಸಲಾಗಿತ್ತು, ಅನಿವಾರ್ಯ ಕಾರಣಗಳಿಂದ ಅವರೂ ಸಮಾರಂಭದಲ್ಲಿ ಭಾಗವಹಿಸಲಿಲ್ಲ.
ಹೀಗಾಗಿ 2021ರ ಗಣರಾಜ್ಯೋತ್ಸವಕ್ಕೆ ಯಾವುದೇ ವಿದೇಶಿ ಅತಿಥಿಗಳು ಭಾಗವಹಿಸಲಿಲ್ಲ.
🍀 1966 ರ ನಂತರ ಇದೇ ಮೊದಲ ಬಾರಿಗೆ ವಿದೇಶೀ ಮುಖ್ಯ ಅತಿಥಿಗಳಿಲ್ಲದೇ ಪರೇಡ್ ನಡೆಯಿತು.
🌸 ನಿಮಗೆ ನೆನಪಿರಲಿ : 1952, 1953 ಹಾಗೂ 1966 ರಲ್ಲಿ ಗಣರಾಜ್ಯೋತ್ಸವ ಯಾವುದೇ ವಿದೇಶಿ ಮುಖ್ಯ ಅತಿಥಿಗಳಿಲ್ಲದೇ ನಡೆದಿದೆ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
🔯 ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಪ್ರಮುಖ ಸ್ತಬ್ಧ ಚಿತ್ರಗಳ ಮಾಹಿತಿ 🔯
▶ ಅಯೋಧ್ಯೆ ರಾಮಮಂದಿರ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ :-
ಉತ್ತರಪ್ರದೇಶ ರಾಜ್ಯವು ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಯೋಧ್ಯೆಯ ಪ್ರಾಚೀನ ಪರಂಪರೆಯನ್ನು ಪ್ರತಿನಿಧಿಸುವ "ಅಯೋಧ್ಯೆ: ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆ" (Ayodhya : The Cultural Heritage of Uttar Pradesh) ಎಂಬ ಹೆಸರಿನ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿತು (Replica of Ram Temple-Ayodhya). ಈ ಚಿತ್ರಕ್ಕೆ ಪ್ರಥಮ ಬಹುಮಾನ ದೊರೆತಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮಾದರಿಯ ಮುಂದೆ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಯವರು ಕುಳಿತಿರುವ ಟ್ಯಾಬ್ಲೋ ದೇಶದ ಜನಮನದ ಗಮನ ಸೆಳಿದಿದ್ದಂತೂ ಖಂಡಿತ.
ನಿಮಗೆ ಗೊತ್ತೇ..!?
ಉತ್ತರಪ್ರದೇಶ ರಾಜ್ಯವು ಸತತವಾಗಿ ಎರಡನೇ ವರ್ಷ ಪ್ರಥಮ ಬಹುಮಾನ ಪಡೆದಿದೆ.
▶ ಬಹುಮಾನ ಪಡೆದ ದ್ವಿತೀಯ ಸ್ತಬ್ಧ ಚಿತ್ರ - ತ್ರಿಪುರ
ಪರಿಸರ ಸ್ನೇಹಿಯಾಗಿ ಆತ್ಮನಿರ್ಭರತೆ ಸಾಧಿಸುವ ಕುರಿತಾದ ತ್ರಿಪುರದ ಚಿತ್ರವಾದ (Eco-Friendly and Aatma Nirbhar) ಎಂಬ ಚಿತ್ರಕ್ಕೆ ದ್ವಿತೀಯ ಬಹುಮಾನ ದೊರೆತಿದೆ.
▶ Dev- Bhoomi - The Land of The Gods ಎಂಬ ಸ್ತಬ್ಧಚಿತ್ರ ಪ್ರದರ್ಶಿಸಿದ ಚಿತ್ರವು ಮೂರನೇ ಪ್ರಶಸ್ತಿ ಪಡೆದಿದೆ.
▶ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಗತವೈಭವ (City of Victory) ಸಾರುವ ಸ್ತಬ್ಧ ಚಿತ್ರವು ಪಾಲ್ಗೊಂಡಿತ್ತು. ರಾಜ್ಯ ವಾರ್ತಾ ಇಲಾಖೆಯು ಈ ಸ್ತಬ್ಧ ಚಿತ್ರವನ್ನು ತಯಾರಿಸಿತ್ತು.
🔯🔯🔯🔯🔯🔯🔯🔯🔯🔯🔯🔯🔯🔯🔯🔯
ಗಣರಾಜ್ಯೋತ್ಸವದಲ್ಲಿ ಬಾಂಗ್ಲಾ ಸೈನಿಕರು :-
ಇದೇ ಮೊದಲ ಬಾರಿಗೆ ಬಾಂಗ್ಲಾದೇಶದ ಸಶಸ್ತ್ರ ತುಕಡಿಯ 122 ಜನ ಸೈನಿಕರು ಭಾಗವಹಿಸಿದ್ದರು. ಪರೇಡ್ ನಲ್ಲಿ ಭಾಗವಹಿಸಿದ ಬಹುತೇಕ ಸೈನಿಕರು 1971 ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆಯಲ್ಲಿ ಸ್ಥಾಪನೆಯಾದ ಸೇನಾಪಡೆಗೆ ಸೇರಿದವರು.
ಬಾಂಗ್ಲಾದೇಶದ ಪಿತಾಮಹ - ಶೇಖ ಮುಜೀಬರ್ ರೆಹಮಾನ್
ವಾಯುಪಡೆಯ ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್ - ಭಾವನಾಕಾಂತ್ ರವರು ಮಿಗ್-21 ಬಿಸನ್ ಯುದ್ಧವಿಮಾನಗಳನ್ನು ಹಾರಿಸುವ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ, ಮೊದಲ ಮಹಿಳಾ ಯುದ್ಧ ವಿಮಾನ ಪೈಲೆಟ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
2020 ರಲ್ಲಿ ಸೇನಾದಳದ ನೇತೃತ್ವ ವಹಿಸಿದ ಮೊದಲ ಮಹಿಳಾ ಯೋಧೆ - ಕ್ಯಾ. ತಾನಿಯಾ ಶೆರ್ಗಿಲ್.
🔯🔯🔯🔯🔯🔯🔯🔯🔯🔯🔯🔯🔯🔯🔯🔯🔯
ನಿಮಗೆ ಗೊತ್ತೆ..!!?
2019 ಅಕ್ಟೋಬರ್ 31 ರಂದು ರಚನೆಯಾದ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಇದೇ ಮೊದಲ ಬಾರಿ ಪರೇಡ್ ನಲ್ಲಿ ತನ್ನ ಸಂಸ್ಕೃತಿ ಪ್ರದರ್ಶಿಸಿತು. ಲಡಾಖ್ 'ಪುರಾತನ ತಿಂಗ್ಸೆ ಬೌದ್ಧ ವಿಹ ಹಾಗೂ ಪ್ರಾಂತ್ಯದ ಸಂಸ್ಕೃತಿ ಸೂಚಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಿತು.
ಸ್ಪರ್ಧಾ ವಿಜೇತ ಜನವರಿ-2021 ರ ಪ್ರಮುಖ ಪ್ರಶ್ನೋತ್ತರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ...!!!
🛡 ನಮ್ಮ ಟೆಲಿಗ್ರಾಮ್ : https://t.me/edutubekannada
🛡 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ PDF ನೋಟ್ಸ್ ಗಾಗಿ ನಮ್ಮ ವೆಬ್‌ಸೈಟ್ ಭೇಟಿ ನೀಡಿ : www.edutubekannada.com
💐💐💐💐❤️❤️💐💐💐💐
(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know