Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday, 14 February 2021

Love : One word with Different Meanings

 ಪ್ರೀತಿ : ಪದ ಒಂದು ಅರ್ಥ ಹಲವು





ಹಾಯ್, ಎಲ್ಲರಿಗೂ ನಮಸ್ಕಾರ..!!!


ಫೆಬ್ರುವರಿ 14 ಬಹುಶಃ ಜಗತ್ತಿನ ಎಲ್ಲಾ ಪ್ರೇಮಿಗಳಿಗೂ ಸುಂದರ ದಿನವೆಂದೇ ಪರಿಚಿತ...!!! ಪ್ರೀತಿ ಪ್ರೇಮ ಪದಗಳು ಉಚ್ಚರಿಸಲು ಸಾಮಾನ್ಯವೇ ಎಂದೆನಿಸಿದರೂ ಆ ಪದಗಳಿಗೆ ಅದರದ್ದೇ ಆದ ಪಾವಿತ್ರ್ಯತೆ ಎನ್ನುವುದು ಇದೆ.


ಪ್ರೀತಿ ಪ್ರೇಮ ಎಂಬರೆಡು ಪದಗಳಿಗೆ ಇತಿಹಾಸದ ಪುಟಗಳು ವಿಶೇಷವಾದ ವ್ಯಾಖ್ಯಾನ ನೀಡಿರುವುದನ್ನು ನಾವುಗಳು ಕಾಣುತ್ತೇವೆ. ಇಡೀ ಜಗತ್ತಿನಲ್ಲಿ ಪ್ರೀತಿ ಪ್ರೇಮಕ್ಕೆ ಹಲವಾರು ಉತ್ಕೃಷ್ಟ ಉದಾಹರಣೆಗಳು ಸಿಗುತ್ತವೆ. ಪ್ರೀತಿ ಎಂಬ ಪದವನ್ನು ಹಲವರು ಹಲವಾರು ಬಗೆಗಳಲ್ಲಿ, ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿರುವುದನ್ನು ಕಾಣುತ್ತೇವೆ.


ಪ್ರೀತಿಗೆ ನಿಖರ ಮತ್ತು ನಿರ್ದಿಷ್ಟವಾದ ವ್ಯಾಖ್ಯಾನವನ್ನು ನೀಡಲು ಯಾರಿಗೂ ಇದುವರೆಗೂ ಸಾಧ್ಯವಾಗಿಲ್ಲ ಎನ್ನುವ ವಿಚಾರವಂತೂ ಸತ್ಯ. ಕಾರಣ ಪ್ರೀತಿಯು ಕಾಲ ಮತ್ತು ಸನ್ನಿವೇಶಗಳಿಗೆ ತಕ್ಕಂತೆ, ಸಂಬಂಧಗಳಿಗೆ ತಕ್ಕಂತೆ ಇರುತ್ತದೆ ಎನ್ನುವುದು ಸಾರ್ವತ್ರಿಕ ಸತ್ಯ.


ಪ್ರೀತಿಯೆಂದರೆ ಕೇವಲ ಒಬ್ಬ ಹುಡುಗ ಹುಡುಗಿಯಲ್ಲಿ ಉದ್ಭವಿಸುವ ಪರಸ್ಪರ ಕಾಳಜಿ, ನಂಬಿಕೆ, ವಿಶ್ವಾಸ ಎಂಬುದಷ್ಟೇ ಎಂದು ಭಾವಿಸಿದರೆ ಪ್ರೀತಿಯ ವ್ಯಾಪ್ತಿಯು ನಿಜಕ್ಕೂ  ಸಂಕುಚಿತ‌ ಎನಿಸದೇ ಇರಲಾರದು...!!!


ಪ್ರೀತಿಗೆ ವಿಶೇಷ ಮತ್ತು ವಿಶಿಷ್ಠವಾದ ಅರ್ಥವಿದೆ ಎಂದರೆ ತಪ್ಪಾಗಲಾರದು..!!! ಪ್ರೀತಿ ಇಂಗ್ಲೀಷಿನ LOVE ಎಂಬ ನಾಲ್ಕು ಪದಗಳ ಸಮ್ಮಿಲನ ಮಾತ್ರವಲ್ಲ...!! 


ಪ್ರೀತಿ ಪ್ರೇಮಕ್ಕೆ ನಮ್ಮ ದೇಶ ಸೇರಿದಂತೆ ಹಲವಾರು ದೇಶಗಳಲ್ಲಿ ಹಲವಾರು ಉದಾಹರಣೆಗಳನ್ನು ನೀಡಬಹುದು.


ಪವಿತ್ರವಾದ ಪ್ರೀತಿಯಲ್ಲಿ ಯಾವುದೆ ರೀತಿಯ ಅಪೇಕ್ಷೆಗಳಾಗಲೀ, ಬಯಕೆಗಳಾಗಲೀ ಇರುವುದಿಲ್ಲ. ಅಲ್ಲಿ ಕೇವಲ ಭಾವನೆಗಳ ಸಮಾಗಮದ ಸ್ಪರ್ಶ ಮಾತ್ರ ಇರುತ್ತದೆ. ಪ್ರೀತಿ ಎಂದರೆ ಪರಸ್ಪರ ಕಾಳಜಿಯ ಅವ್ಯಕ್ತ ಭಾವದ ಪ್ರಸ್ತುತಿ ಎಂದರೆ ತಪ್ಪಾಗಲರದು. ಪ್ರೀತಿಯು ಯಾವುದೋ ಒಂದು ದಿನ ಹೆಚ್ಚಾಗಿ ಮತ್ತೊಂದು ದಿನ ಕಡಿಮೆಯಾಗುವಂಥದ್ದಲ್ಲ.


ಪ್ರೀತಿಯ ಎಂದರೆ ಹೆಚ್ಚು ಬೆಲೆಯ ಉಡುಗೊರೆಗಳನ್ನು ಕೊಟ್ಟು ಸಂತಸಪಡಿಸುವುದು ಎಂದರ್ಥವಲ್ಲ. ಬದಲಾಗಿ ನೋವು ದುಃಖದಲ್ಲಿದ್ದಾಗ ಒಂದೆರಡು ಸಾಂತ್ವನದ ನುಡಿಗಳನ್ನೋ, ಸಮಾಧಾನದ ಮಾತುಗಳನ್ನೋ ಆಡಿ, ನಿನ್ನ ದುಃಖದಲ್ಲಿ, ಕಷ್ಟದಲ್ಲಿ ನನಗೂ ಪಾಲಿದೆ ಎಂಬ ಭರವಸೆಯನ್ನು ಮೂಡಿಸುವುದೇ ಪ್ರೀತಿ ಎಂಬುದು ಬಹುಜನ ಒಪ್ಪಿತ ಪ್ರೀತಿಯ ವ್ಯಾಖ್ಯಾನ..!!


ಪ್ರೀತಿ ಎಂದರೆ ದೊಡ್ಡ ದೊಡ್ಡ ಕಾರು, ಬೈಕುಗಳಲ್ಲಿ ಸಂಗಾತಿಗಳನ್ನು ಕೂರಿಸಿ, ಸುತ್ತಾಡಿಸುವುದೋ ಅಥವಾ ಭವ್ಯ ಹೊಟೇಲುಗಳಲ್ಲಿ ತಿಂಡಿಯನ್ನು ತಿನ್ನಿಸುವುದಲ್ಲ., ಅವರವರ ಭಾವನೆಗಳಿಗೆ ಬೆಲೆ ನೀಡಿ, ಪ್ರತೀ ಕಷ್ಟದ ಸಮಯದಲ್ಲಿ ಅವರೊಂದಿಗಿದ್ದು, ಅವರವರ ಭಾವನೆಗಳಿಗೆ ಸ್ಪಂದಿಸುವುದು ನಿಜವಾದ ಪ್ರೀತಿ ಎನಿಸುತ್ತದೆ‌.


ಪ್ರೀತಿಯ ಬಗೆಗಿನ ಹಲವಾರು ವ್ಯಾಖ್ಯಾಗಳು ತಮ್ಮದೇ ಆದ ವಿಶೇಷತೆ ಹೊಂದಿದ್ದರೂ, ತಮ್ಮದೇ ಅದ ವಿಶಿಷ್ಠತೆಯನ್ನು ಹೊಂದಿದೆ ಎನ್ನಬಹುದು.


ಪ್ರೀತಿಯಲ್ಲಿನ ಒಂದು ಸಣ್ಣ ಅನುಮಾನವು ಎಂತಹದೇ ಪವಿತ್ರ ಬಂಧಗಳನ್ನು ಹಾಳು ಮಾಡಬಹುದು. ಆದ್ದರಿಂದ ನಂಬಿಕೆಯ ಶಿಲೆಗಳಿಂದ ಪ್ರೀತಿಯ ಮಹಲು ಕಟ್ಟಿಸಿದ ಮೇಲೆ ಅದು ಬೀಳದಂತೆ ಕಾಪಾಡುವ ಜವಾಬ್ದಾರಿಯು ಪ್ರೀತಿಸುವ ಪ್ರತಿಯೊಬ್ಬರ ಮೇಲೂ ಇರುತ್ತದೆ.


ಎಲ್ಲರಿಗೂ Valentines Day ದಿನದ ಹಾರ್ದಿಕ ಶುಭಾಶಯಗಳು.


No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads