ದೆಹಲಿಯ ಕರ್ನಾಟಕ ಭವನದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ
ಸ್ನೇಹಿತರೇ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಶುಭಸುದ್ದಿ..!!!
ದೆಹಲಿಯ ಕರ್ನಾಟಕ ಭವನದಲ್ಲಿ ಖಾಲಿ ಇರುವ ವಿವಿಧ ಗ್ರೂಪ್ ಸಿ ಮತ್ತು ಗ್ರೂಪ್ ಡಿ ದರ್ಜೆಯ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಇದೇ ಮಾರ್ಚ್ 31, 2021 ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
🏵🏵🏵🏵🏵🏵🏵🏵🏵🏵🏵🏵🏵🏵🏵
ಹುದ್ದೆಗಳ ವಿವರ ಹೀಗಿದೆ :-
ಗ್ರೂಪ್-ಸಿ ಹುದ್ದೆಗಳು
1) ಸಹಾಯಕ ವ್ಯವಸ್ಥಾಪಕರು - 2 ಹುದ್ದೆ
2) ಸ್ವಾಗತಕಾರರು - 3
ಗ್ರೂಪ್-ಡಿ ಹುದ್ದೆಗಳು
1) ಅಡುಗೆ ಸಹಾಯಕ - 9
2) ದಲಾಯತ್ - 6
3) ಹೂದೋಟ ಮೇಲ್ವಿಚಾರಕ - 2
4) ರೂಮ್ ಬಾಯ್ / ಪರಿಚಾರಕ - 10
ವೇತನ ಶ್ರೇಣಿ :
ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಗ್ರೂಪ್ ಸಿ ದರ್ಜೆಯ ನೌಕರರಿಗೆ ಮಾಸಿಕ 27650 ರಿಂದ 52650 ರೂ ಸಂಬಳವಿದೆ. ಇನ್ನು ಗ್ರೂಪ್ ಡಿ ನೌಕರರು ಮಾಸಿಕವಾಗಿ 21400 ರಿಂದ 42000 ವೇತನ ಪಡೆಯಲಿದ್ದಾರೆ. ವೇತನದ ವಿಸ್ತೃತ ವಿವಿರಣೆಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು.
🏵🏵🏵🏵🏵🏵🏵🏵🏵🏵🏵🏵🏵🏵🏵
ಪ್ರಮುಖ ದಿನಾಂಕಗಳು :-
🌺 ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 22/02/2021
🌺 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 31/3/2021
🌺 ಅರ್ಜಿ ಶುಲ್ಕವನ್ನು ಪಾವತಿಸಲು ಏಪ್ರಿಲ್ 07 ಕೊನೆಯ ದಿನ.
ವಿದ್ಯಾರ್ಹತೆ :-
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ಅನುಸಾರ ಪದವಿ, ಡಿಪ್ಲೋಮಾ, ಪಿಯುಸಿ, 10 ನೇ ತರಗತಿ ಪಾಸ್ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ :-
ಸರಕಾರದ ನಿಯಮಾನುಸಾರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಂದರೆ31 ಮಾರ್ಚ್ 2021 ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 35 ವರ್ಷ ದಾಟಿರಬಾರದು. ಸದರಿ ಹುದ್ದೆಗಳಿಗೆ ನಿಯಮಾನುಸಾರ ಜಾತಿವಾರು ಮೀಸಲಾತಿ ಅನ್ವಯವಾಗುತ್ತದೆ.
🏵🏵🏵🏵🏵🏵🏵🏵🏵🏵🏵🏵🏵🏵🏵
ಅರ್ಜಿ ಶುಲ್ಕ :
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 200 ರೂ., ಹಾಗೂ ಪ.ಜಾತಿ/ ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ :
ಸದರಿ ಹುದ್ದೆಗಳಿಗೆ ಆಯ್ಕೆಯಾಗಬಯಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಧಿಕೃತ ನೋಟಿಫಿಕೇಶನ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ..!!
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
🏵🏵🏵🏵🏵🏵🏵🏵🏵🏵🏵🏵🏵🏵🏵
No comments:
Post a Comment
If you have any doubts please let me know