ಸ್ಪರ್ಧಾ ವಿಜೇತ ಜನೆವರಿ 2021 ಪ್ರಶ್ನೋತ್ತರಗಳು
ಭಾರತದ ರಾಷ್ಟ್ರಪತಿಗಳು ಪ್ರತಿ ವರ್ಷಗಳಿಗೊಮ್ಮೆ ಕೇಂದ್ರ ಹಣಕಾಸು ಆಯೋಗವನ್ನು ನೇಮಿಸುತ್ತಾರೆ.
ಸಂವಿಧಾನದ 279/ಎ ವಿಧಿ ಅನ್ವಯ ಕೇಂದ್ರವಿತ್ತ ಸಚಿವರು ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
ರಾಷ್ಟ್ರಪತಿಗಳು 360 ನೇ ವಿಧಿ ಅನ್ವಯ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬಹುದು.
ಯೂರೋಪಿನ್ ಯೂನಿಯನ್ ನ ರಾಷ್ಟ್ರಗಳಲ್ಲಿ ಯೂರೋ ನಾಣ್ಯ ಹೊಂದಿರುವ ರಾಷ್ಟ್ರಗಳನ್ನು ಯೂರೋ ವಲಯ ಎನ್ನುವರು.
ಯುರೋಪಿಯನ್ ಯೂನಿಯನ್ ನ 27 ರಾಷ್ಟ್ರಗಳಲ್ಲಿ 19 ರಾಷ್ಟ್ರಗಳು ಯೂರೋ ನಾಣ್ಯವನ್ನು ಅಳವಡಿಸಿಕೊಂಡಿವೆ.
1999 ಜನವರಿ 01 ರಂದು ಒಪ್ಪಂದವಾಗಿದ್ದು, 2002 ರ ಜನವರಿ 01 ರಿಂದ ಯೂರೋ ನಾಣ್ಯ ಚಲಾವಣೆಗೆ ಬಂದಿದೆ.
ಬ್ರಿಟನ್ ನ ಈಗಿನ ಪ್ರಧಾನಿ - ಬೋರಿಸ್ ಜಾನ್ಸನ್.
ಮೌಂಟ್ ಎವರೆಸ್ಟ್ ನ ಈಗಿನ ಪ್ರಸ್ತುತ ಎತ್ತರ : 8846.86 ಮೀ.
ಜಗತ್ತಿನ ಅತಿ ಎತ್ತರದ ಶಿಖರ - ಮೌಂಟ್ ಎವರೆಸ್ಟ್
ಮೌಂಟ್ ಎವರೆಸ್ಟ್ ನ ಇತರ ಹೆಸರುಗಳು : ಸಾಗರ್ ಮಾತಾ (ನೇಪಾಳ), ಚ್ಯುಮೋಲುಂಗಮ್ (ಟಿಬೆಟ್)
ಮೌಂಟ್ ಎವರೆಸ್ಟ್ ನ ಎತ್ತರವನ್ನು ಮೊದಲು ಸಮೀಕ್ಷೆ ಮಾಡಿದವರು - ಈಸ್ಟ್ ಇಂಡಿಯಾ ಕಂಪನಿ (1847) ಎತ್ತರ 8778 ಮೀಟರ್.
ಇತ್ತೀಚೆಗೆ ಮೌಂಟ್ ಎವರೆಸ್ಟ್ ನ ಎತ್ತರದ ಸಮೀಕ್ಷೆ ಮಾಡಿದ ದೇಶಗಳು - ಚೀನಾ ಮತ್ತು ನೇಪಾಳ (2020) ಎತ್ತರ - 8846.86 ಮೀಟರ್
ಜಗತ್ತಿನ 2 ನೇ& ಭಾರತದ ಅತಿ ಎತ್ತರದ ಶಿಖರ : ಕೆ2. ಇದನ್ನು ಗಾಡ್ವಿನ್ ಆಸ್ಟಿನ್ ಎಂದೂ ಕರೆಯುತ್ತಾರೆ. ಇದರ ಎತ್ತರ 8611 ಮೀಟರ್.
ಜಗತ್ತಿನ 3 ನೇಎತ್ತರದ ಶಿಖರ - ಕಾಂಚನ ಗಂಗಾ 8586 ಮೀಟರ್ ಎತ್ತರ.
ಜಗತ್ತಿನ 4 ನೇಎತ್ತರದ ಶಿಖರ - ಲೋಥ್ಸೆ 8516 ಮೀಟರ್ ಎತ್ತರ
ಮೌಂಟ್ ಎವರೆಸ್ಟ್ ಏರಿದ ಮೊದಲಿಗರು : 1953 ಮೇ 29 ನ್ಯೂಜಿಲೆಂಡ್ ನ ಎಡ್ಮಂಡ್ ಹಿಲೇರಿ ಮತ್ತು ನೇಪಾಳದ ಶೆರ್ಫಾ ತೇನ್ ಸಿಂಗ್.
ಮೊದಲ ಮಹಿಳೆ - ಜಪಾನ್ ನ ಜುಂಕೋ ತಬಾಯ್ (1975)
ಮೊದಲ ಭಾರತೀಯ ಮಹಿಳೆ : ಬಚೇಂದ್ರಿ ಪಾಲ್ (1984)
ಮೊದಲ ಅಂಗವಿಕಲ ಮಹಿಳೆ - ಅರುಣಿಮಾ ಸಿನ್ಹಾ (2011)
💥💥💥💥💥💥💥💥💥💥💥💥💥💥💥💥💥
ಕಪ್ಪುಕ್ರಾಂತಿಯು ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪಾದನೆಗೆ ಸಂಬಂಧಿಸಿದೆ.
ಹಸಿರು ಚಿನ್ನ - ಬಿದಿರು
ಕೆಂಪು ಚಿನ್ನ - ಕೇಸರಿ
ಬಿಳಿ ಚಿನ್ನ - ಹತ್ತಿ
ಗೋಲ್ಡನ್ ರೆವಲೂಷನ್ ಎನ್ನುವುದು ತೋಟಗಾರಿಕಾ ಬೆಳೆಗೆಳಿಗೆ ಸಂಬಂಧಿಸಿದೆ.
ಕರ್ನಾಟಕದಲ್ಲಿ ವಿಸ್ತೀರ್ಣವಾರು ದೊಡ್ಡ ಜಿಲ್ಲೆ - ಬೆಳಗಾವಿ
ಕರ್ನಾಟಕದ HDI ನಲ್ಲಿ ಮೊದಲ ಸ್ಥಾನದಲ್ಲಿರುವ ಜಿಲ್ಲೆ - ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿರುವ ಜಿಲ್ಲೆ ಯಾದಗಿರಿ
ರಾಜ್ಯದಲ್ಲಿರುವ ಹೆಚ್ಚು ನಗರೀಕರಣ ಹೊಂದಿದ ಜಿಲ್ಲೆ ವೆಂ ಬೆಂಗಳೂರು ನಗರ, ಕಡಿಮೆ ನಗರೀಕರಣ ಕೊಡಗು ಜಿಲ್ಲೆ.
💥💥💥💥💥💥💥💥💥💥💥💥💥💥💥💥💥
ಭಾರತದಲ್ಲಿ ಹಣಕಾಸು ನೀತಿ ರೂಪಿಸುವವರು - RBI
ವಿಶ್ವಸಂಸ್ಥೆಯ ಸ್ಥಾಪನೆ : ಅಕ್ಟೋಬರ್ 24, 1945
UNO ಕೇಂದ್ರ ಕಚೇರಿ - ಅಮೇರಿಕಾದ ನ್ಯೂಯಾರ್ಕ್
ವಿಶ್ವಸಂಸ್ಥೆಯಲ್ಲಿ ಭಾರತ ಸದಸ್ಯತ್ವ ಪಡೆದಿದ್ದು - 1945 ಅಕ್ಟೋಬರ್ 30
UNITED NATIONS ಎಂಬ ಪದವನ್ನು ಪರಿಚಯಿಸಿದವರು - ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್ (ಅಮೇರಿಕಾ)
ವಿಶ್ವಸಂಸ್ಥೆಯ ಪ್ರಸ್ತುತ ಪ್ರಧಾನ ಕಾರ್ಯದರ್ಶಿ - ಆಂಟೋನಿಯೋ ಗುಟೆರೆಸ್ (ಪೋರ್ಚುಗಲ್)
ವಿಶ್ವಸಂಸ್ಥೆಯ ಪ್ರಾರಂಭದ ಸದಸ್ಯ ರಾಷ್ಟ್ರಗಳ ಸಂಖ್ಯೆ - 51
ವಿಶ್ವಸಂಸ್ಥೆಯ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ - 193 (South Sudan-2011 July 14)
ವಿಶ್ವ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಿದ್ದು - 2001
ವಿಶ್ವ ಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿ ಇತ್ತೀಚೆಗೆ ಆಯ್ಕೆಯಾದವರು - ಟಿ. ಎಸ್. ತಿರುಮೂರ್ತಿ.
ವಿಶ್ವ ಸಂಸ್ಥೆಯ ಜಿನಿವಾ ಕಚೇರಿಯ ಖಾಯಂ ಪ್ರತಿನಿಧಿಯಾಗಿ ಆಯ್ಕೆಯಾದವರು - ಭಾರತದ ಇಂದ್ರಮಣಿ ಪಾಂಡೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕೇಂದ್ರ ಕಚೇರಿ - ನ್ಯೂಯಾರ್ಕ್
ವಿಶ್ವ ಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು 5 - ಚೀನಾ, ಅಮೇರಿಕಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಇವುಗಳು ವಿಟೋ ಅಧಿಕಾರ ಹೊಂದಿದ ದೇಶಗಳಾಗಿವೆ.
ವಿಶ್ವಸಂಸ್ಥೆಯ 8 ನೇ ಸಾಮಾನ್ಯ ಅಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದವರು - ವಿಜಯಲಕ್ಷ್ಮೀ ಪಂಡಿತ್ (1953)
1977 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದವರು - ಅಟಲ್ ಬಿಹಾರಿ ವಾಜಪೇಯಿ.
2014 ರಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದವರು - ಪ್ರಧಾನಿ ನರೇಂದ್ರ ಮೋದಿ.
💥💥💥💥💥💥💥💥💥💥💥💥💥💥💥💥💥
ಬೆಳಕಿನ 7 ಬಣ್ಣಗಳಲ್ಲಿ ನೇರಳೆ ಬಣ್ಣ ಅತಿ ಹೆಚ್ಚು ತೀಕ್ಷ್ಣವಾಗಿದ್ದು, ಆವೃತ್ತಿ ಹೆಚ್ಚಾಗಿದೆ ಮತ್ತು ತರಂಗ ದೂರ ಕಡಿಮೆ ಇರುತ್ತದೆ.
ಕೆಂಪು ಬಣ್ಣವು ತರಂಗ ದೂರವನ್ನು ಹೆಚ್ಚು ಹೊಂದಿದೆ ಹಾಗೂ ಆವೃತ್ತಿ ಕಡಿಮೆ ಇರುತ್ತದೆ. ಆದ್ದರಿಂದಲೇ ಕೆಂಪು ಬಣ್ಣವನ್ನು ಟ್ರಾಫಿಕ್ ನಲ್ಲಿ ನಿಲ್ಲಿಸಲು ಬಳಸುತ್ತಾರೆ.
ಜೀವಕೋಶದ ಶಕ್ತಿ ಉತ್ಪಾದಕ ಕೇಂದ್ರ - ಮೈಟೋಕಾಂಡ್ರಿಯಾ
ಜೀವಕೋಶದ ಆತ್ಮಹತ್ಯಾ ಸಂಚಿ - ಲೈಸೋಸೋಮ್
ಜೀವಕೋಶದ ಪ್ರೋಟೀನ್ ಕಾರ್ಖಾನೆ - ರೈಬೋಸೋಮ್ಸ್
ಜೀವಕೋಶದಲ್ಲಿ ಸಾಗಾಣಿಕೆ ವ್ಯವಸ್ಥೆ - ಎಂಡೋ ಪ್ಲಾಸ್ಮಿಕ್ ರೆಟಿಕ್ಯುಲಂ (ಕೋಶ ರಸಜಾಲಿಕೆ)
ಮೂತ್ರಪಿಂಡಗಳ ರಚನಾತ್ಮಕ ಮತ್ತು ಕ್ರಿಯಾತ್ಮಕ ಘಟಕ - ನೆಫ್ರಾನ್ಸ್
ಕೃತಕವಾಗಿ ರಕ್ತ ಶುದ್ಧಿಕರಣ ಮಾಡುವ ವಿಧಾನ - ಡಯಾಲಿಸಿಸ್.
ಮೂತ್ರಪಿಂಡದ ಕಲ್ಲಿನ ರಾಸಾಯನಿಕ ಹೆಸರು - ಕ್ಯಾಲ್ಸಿಯಂ ಆಕ್ಸ್ ಲೇಟ್
ಮೂತ್ರಪಿಂಡದ ಕಲ್ಲುಗಳನ್ನು ಹೊಡೆಯುವುದನ್ನು ಲಿಥೋಟ್ರಿಪ್ಸಿ ಎನ್ನುತ್ತಾರೆ.
ಭಾರತದ ಮೊದಲ ಪ್ರಾಣಿಗಳ ಸ್ಮಶಾನ - ದೆಹಲಿ
ಹೃದಯದ ಅಧ್ಯಯನ - ಕಾರ್ಡಿಯಾಲಜಿ
ಹೃದಯದ ವಿದ್ಯುತ್ ತರಂಗಗಳನ್ನು ಪತ್ತೆ ಮಾಡುವುದನ್ನೇ ಇಸಿಜಿ ಎನ್ನುತ್ತಾರೆ.
ಇಸಿಜಿ ವಿಸ್ತೃತ ರೂಪ : ಎಲೆಕ್ಟ್ರೋ ಕಾರ್ಡಿಯೋಗ್ರಾಫ್
ಮೆದುಳಿನ ವಿದ್ಯುತ್ ತರಂಗಗಳನ್ನು ಪತ್ತೆಹಚ್ಚುವದನ್ಜು ಇಇಜಿ ಎನ್ನುತ್ತಾರೆ.
💥💥💥💥💥💥💥💥💥💥💥💥💥💥💥💥💥
ಸಂವಿಧಾನದ 315 ನೇ ವಿಧಿಯು ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ.
UPSC ಯ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರಾವಧಿ - 6 ವರ್ಷಗಳು ಅಥವಾ 65 ವರ್ಷ ವಯೋಮಿತಿ ಆಗುವವರೆಗೆ.
ರಾಜ್ಯ ಲೋಲಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರಾವಧಿ - 6 ವರ್ಷ ಅಥವಾ 62 ವರ್ಷ.
ಕರ್ನಾಟಕದ ಮೊದಲ ಮಹಿಳಾ ಡಿಜಿಮತ್ತು ಐಜಿಪಿ - ನೀಲಮಣಿ ಎಮ್. ರಾಜು.
ಬೆಂಗಳೂರು ನಗರದ ಮೊದಲ ಪೊಲೀಸ್ ಕಮಿಷನರ್ - ಚಾಂಡಿ
ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು - ತಮಿಳು (2004) ಸಂಸ್ಕೃತ (2005) ತೆಲುಗು & ಕನ್ನಡ (2008) ಮಲಯಾಳಂ (2013) ಒರಿಯಾ (2014).
ಕರ್ನಾಟಕ ರಾಜ್ಯ ಸರಕಾರದ 38 ನೇ ಮುಖ್ಯ ಕಾರ್ಯದರ್ಶಿ - ಪಿ. ರವಿಕುಮಾರ್.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆ : ಡಿಜಿ ಮತ್ತು ಐಜಿಪಿ
ಕರ್ನಾಟಕದ ಪ್ರಸ್ತುತ ಡಿಜಿ ಮತ್ತು ಐಜಿಪಿ - ಪ್ರವೀಣ್ ಸೂದ್., ಐಪಿಎಸ್.
💥💥💥💥💥💥💥💥💥💥💥💥💥💥💥💥💥
ಆಪರೇಷನ್ ಗ್ರೀನ್ ಎಂಬುದು ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಗಳ ಉತ್ಪಾದನೆಗೆ ಸಂಬಂಧಿಸಿತ್ತು.
ಭಾರತದ ಮೊದಲ ಚಾಲಕ ರಹಿತ ಮೆಟ್ರೋ ದೆಹಲಿಯ ಜನಕಪುರಿ ವೆಸ್ಟ್ ನಿಂದ ಬಟಾನಿಕಲ್ ಗಾರ್ಡನ್ ವರೆಗೆ.
ಜಗತ್ತಿನ ಮೊದಲ ಸ್ವಯಂಚಾಲಿತ ಚಾಲಕ ರಹಿತ ರೈಲು ಸೇವೆ ಆರಂಭವಾಗಿದ್ದು - ಜಪಾನ್‌ನ ಕೋಬೆಯಲ್ಲಿ (1981)
ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಆರಂಭವಾಗಿದ್ದು - 1984 ಅಕ್ಟೋಬರ್ 24 ರಂದು ಕಲ್ಕತ್ತದಲ್ಲಿ.
ಕರ್ನಾಟಕದ ಮೊದಲ ಮೆಟ್ರೋ ಸೇವೆ - ನಮ್ಮ ಮೆಟ್ರೋ 2011 ಅಕ್ಟೋಬರ್ 20 ರಂದು ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ಎಂಜಿ ರಸ್ತೆ ನಡುವೆ ಮೊದಲು ಪ್ರಾರಂಭವಾಯಿತು.
ಭಾರತದ ಮೆಟ್ರೋ ಮ್ಯಾನ್ - ಇ. ಶ್ರೀಧರನ್ (ಇವರು ಕೊಂಕಣ ರೈಲ್ವೆ ಮತ್ತು ದೆಹಲಿ ರೈಲ್ವೆ ವ್ಯವಾ್ಥೆಯ ಆರಂಭದ ನಾಯಕತ್ವ ವಹಿಸಿದ್ದರು.)
ಭಾರತದ ಅತಿದೊಡ್ಡ ಮೆಟ್ರೋ ದೆಹಲಿ ಮೆಟ್ರೋ, ಎರಡನೆಯ ದೊಡ್ಡ ಮೆಟ್ರೋ ಬೆಂಗಳೂರು ಮೆಟ್ರೋ ಆಗಿದೆ.
ದೇಶದ ಮೊದಲ ಸಬ್ ಅರ್ಬನ್ ರೈಲ್ವೆ - ಮುಂಬೈ
ಕೊಂಕಣ ಸಬ್ ಅರ್ಬನ್ ರೈಲ್ವೆಯು ದೇಶದ ಅತ್ಯಂತ ದೊಡ್ಡ ಸಬ್ ಅರ್ಬನ್ ರೈಲ್ವೆ ಎನಿಸಿದೆ.
💥💥💥💥💥💥💥💥💥💥💥💥💥💥💥💥💥
ಭಾರತದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಕೇರಳ ರಾಜಧಾನಿ ತಿರುವನಂತಪುರಂ ನ ಆರ್ಯಾ ರಾಜೇಂದ್ರನ್ (21)
ಕೇರಳ ರಾಜ್ಯದ ಅತಿ ದೊಡ್ಡ ಮಹಾನಗರ ಪಾಲಿಕೆ - ತಿರುವನಂತಪುರಂ ಮಹಾನಗರ ಪಾಲಿಕೆ.
ದೇಶದ ಅತ್ಯಂತ ಹಳೆಯ ಮುನ್ಸಿಪಲ್ ಕಾರ್ಪೊರೇಶನ್ - ಕಾರ್ಪೊರೇಷನ್ ಆಫ್ ಮದ್ರಾಸ್ (ಪಸ್ತುತ ಗ್ರೇಟರ್ ಚನ್ನೈ ಕಾರ್ಪೋರೇಷನ್).
ಸಂವಿಧಾನದ 12 ನೇ ಅನುಸೂಚಿಯು ಮುನ್ಸಿಪಾಲಿಟಿಗೆ ಸಂಬಂಧಿಸಿದೆ.
ಕರ್ನಾಟಕದಲ್ಲಿರುವ ಒಟ್ಟು ಮುನ್ಸಿಪಲ್ ಕಾರ್ಪೊರೇಶನ್ ಗಳು - 11 ( ಹುಬ್ಬಳ್ಳಿ-ಧಾರವಾಡ, ಮೈಸೂರು, ಕಲಬುರಗಿ, ಮಂಗಳೂರು, ದಾವಣಗೆರೆ, ಬಳ್ಳಾರಿ, ವಿಜಯಪುರ, ತುಮಕೂರು, ಶಿವಮೊಗ್ಗ ಹಾಗೂ ಬೆಂಗಳೂರಿನ BBMP)
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25 ನ್ನು ಉತ್ತಮ ಆಡಳಿತ ದಿನ ಎಂದು ಆಚರಿಸಲಾಗುತ್ತದೆ.
1928 ರ ಫೆಬ್ರುವರಿ 28 ರಂದು ಸರ್. ಸಿ.ವಿ. ರಾಮನ್ ಅವರು 'ರಾಮನ್ ಪರಿಣಾಮ' ವನ್ನು ಸಂಶೋಧಿಸಿದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಫೆಬ್ರುವರಿ 28 ನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ.
2020 ರ ಫೆಬ್ರುವರಿ 28 ರಂದು ನಡೆದ ರಾಷ್ಟ್ರೀಯ ವಿಜ್ಞಾನ ದಿನವನ್ನು 'ವಿಜ್ಞಾನದಲ್ಲಿ ಮಹಿಳೆಯರು' ಎಂಬ ಧ್ಯೇಯ ವ್ಯಾಕ್ಯದೊಂದಿಗೆ ಆಚರಿಸಲಾಗಿದೆ.
💥💥💥💥💥💥💥💥💥💥💥💥💥💥💥💥💥
2020 ನೇ ಸಾಲಿನ ಫೀಫಾ ಶ್ರೇಷ್ಠ ಫುಟ್‌ಬಾಲ್ ಆಟಗಾರ - ರಾಬರ್ಟ್ ಲೆವಾಂಡೋವ್ಸ್ಕಿ. (ಪೋಲ್ಯಾಂಡ್)
FIFA - Federation Internationale de Football Association
FIFA ಕೇಂದ್ರ ಕಚೇರಿ - ಸ್ವಿಟ್ಜರ್ಲೆಂಡ್ ನ ಜ್ಯೂರಿಚ್
FIFA ಧ್ಯೇಯ ವಾಕ್ಯ - For The Game, For The World
FIFA ಸ್ಥಾಪನೆ - 1904 ಮೇ 21 ಫ್ರಾನ್ಸ್‌ನ ಪ್ಯಾರಿಸ್ ನಲ್ಲಿ
ಪ್ರಸ್ತುತ FIFA ಅಧ್ಯಕ್ಷರು - ಗಿಯಾನಿ ಇನ್ ಫ್ಯಾಂಟಿನೋ
ಪ್ರಸ್ತುತ FIFA ಮಹಾ ಕಾರ್ಯದರ್ಶಿ - ಫಾಕ್ಮಾ ಸಮೋಯುರಾ
FIFA 1930 ರಿಂದ ಫುಟ್‌ಬಾಲ್ ಟೂರ್ನಿಯನ್ನು ನಡೆಸುತ್ತ ಬಂದಿದೆ.
2018 ರ ರಷ್ಯಾ ಆತಿಥ್ಯದಲ್ಲಿ ನಡೆದ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ಚಾಂಪಿಯನ್ ಆಗಿದೆ, ಕ್ರೊವೇಷಿಯಾ ರನ್ನರ್ ಅಪ್ ಪ್ರಶಸ್ತಿ ಪಡೆದಿದೆ.
ಮುಂದಿನ 2022 ನೇ ಫೀಫಾ ವಿಶ್ವಕಪ್ - ಕತಾರ್ ಆತಿಥ್ಯ ವಹಿಸಲಿದೆ.
ಅತಿ ಹೆಚ್ಚು FIFA ವಿಶ್ವಕಪ್ ಪ್ರಶಸ್ತಿಯನ್ನು ಪಡೆದ ತಂಡ - ಬ್ರೆಜಿಲ್ (5 ಬಾರಿ.)
FIFA ಪ್ರಶಸ್ತಿಯನ್ನು ಮೊದಲ ಬಾರಿಗೆ 2016 ನೇ ಸಾಲಿನಲ್ಲಿ ಫುಟ್‌ಬಾಲ್ ಕ್ರೀಡೆಯಲ್ಲಿ ವಿಶ್ವ ಮಟ್ಟದ ಸಾಧನೆ ಮಾಡಿದವರಿಗೆ 2017 ರ ಜನವರಿ 9 ರಂದು ಪ್ರಶಸ್ತಿಯನ್ನು ನೀಡಲಾಯಿತು.
ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ - ಸರ್ದಾರ್ ಪಟೇಲ್ ಸ್ಟೇಡಿಯಂ (ಮೊಟೇರಾ ಕ್ರೀಡಾಂಗಣ)
ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಕ್ರೀಡಾಂಗಣ ಈಡನ್ ಗಾರ್ಡನ್.
ಭಾರತದಲ್ಲಿ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆದ ಮೊದಲ ಸ್ಥಳ - ಕೊಲ್ಕತ್ತಾ (ಭಾರತ ಮತ್ತು ಬಾಂಗ್ಲಾ ನಡುವೆ).
💥💥💥💥💥💥💥💥💥💥💥💥💥💥💥💥💥
ICC ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದವರು ವಿರಾಟ್ ಕೊಹ್ಲಿ
ICC ದಶಕದ ಮಹಿಳಾ ಕ್ರಿಕೆಟ್ ಆಟಗಾರ್ತಿ ಆಸ್ಟ್ರೇಲಿಯಾದ ಎಲಿಸಾ ಪೆರ್ರಿ.
ICC ಸ್ಪಿರಿಟ್ ಆಫ್ ದಿ ಕ್ರಿಕೆಟ್ ಗೌರಕ್ಕೆ ಪಾತ್ರರಾದವರು ಎಂ. ಎಸ್. ಧೋನಿ.
ICC ದಶಕದ ಟೆಸ್ಟ್ ಆಟಗಾರ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್
ICC ದಶಕದ ಟಿ-20 ಟೆಸ್ಟ್ ಆಟಗಾರ - ಅಫ್ಘಾನಿಸ್ತಾನದ ರಶೀದ್ ಖಾನ್
ICC ಸ್ಥಾಪನೆಯಾಗಿದ್ದು - 1909 ಜೂನ್ 15
ಕೇಂದ್ರ ಕಚೇರಿ - ಯುಇಎ ದುಬೈ.
ICC ಸದಸ್ಯ ರಾಷ್ಟ್ರಗಳು - 104
ICC ಪ್ರಸ್ತುತ ಅಧ್ಯಕ್ಷರು - ಗ್ರೇಕ್ ಬ್ಲಾರ್ಕೆ (ನ್ಯೂಜಿಲ್ಯಾಂಡ್)
ICC ಪ್ರಸ್ತುತ ಸಿಇಒ - ಮನು ಸಾಹ್ನೆ (ಭಾರತ)
ಐಸಿಸಿ ಏಕದಿನ ವಿಶ್ವಕಪ್ - ಭಾರತ ಆತಿಥ್ಯ (2023)
💥💥💥💥💥💥💥💥💥💥💥💥💥💥💥💥💥
ಭಾರತದ ಮೊದಲ ತೃತೀಯ ಲಿಂಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ - ಪ್ರೀತಿಕಾ ಯಾಶಿನಿ (ತಮಿಳುನಾಡು)
ಮೊದಲ ತೃತೀಯ ಲಿಂಗಿ ಕ್ರೀಡಾಕೂಟ - ಕೇರಳದ ತಿರುವನಂತಪುರಂ
ಮೊದಲ ತೃತೀಯ ಲಿಂಗಿ ಕಾಲೇಜು ಪ್ರಾಂಶುಪಾಲರು - ಮನಬಿ ಭಂಡೋಪಾಧ್ಯಾಯ (ಪಶ್ಚಿಮ ಬಂಗಾಳ)
ಮೊದಲ ವಕೀಲರು - ಸತ್ಯಶ್ರೀ ಶರ್ಮಿಳಾ (ತಮಿಳು ನಾಡು)
ಮೊದಲ ನ್ಯಾಯಾಧೀಶ - ಜೋಯಿತಾ ಮೊಂಡಾಲ್ (ಪಶ್ಚಿಮ ಬಂಗಾಳ)
ಮೊದಲ ವಿಶ್ವವಿದ್ಯಾಲಯ - ಖುಷಿನಗರ ಜಿಲ್ಲೆ (ಉತ್ತರ ಪ್ರದೇಶ)
ತೃತೀಯ ಲಿಂಗಿಗಳ ಮೊದಲ ಸಾಹಿತ್ಯೋತ್ಸವ - ಕೋಲ್ಕತ್ತಾ
ಇಸ್ಲಾಂ ರಾಷ್ಟ್ರಗಳಲ್ಲಿ ತೃತೀಯ ಲಿಂಗಿಗಳಿಗಾಗಿ ಶಾಲೆಯನ್ನು ಸ್ಥಾಪಿಸಿದ ಮೊದಲ ದೇಶ - ಪಾಕಿಸ್ತಾನ
ತೃತೀಯ ಲಿಂಗಿ ಪರಿಕಲ್ಪನೆ ನೀಡಿದ್ದು - ಸುಪ್ರೀಂ ಕೋರ್ಟ್ (ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ v/s ಕೇಂದ್ರ ಸರಕಾರದ ಪ್ರಕರಣ)
ತೃತೀಯ ಲಿಂಗಿಗಳ ಕ್ಷೇಮಭಿವೃದ್ಧಿಗಾಗಿ ಇರುವ ಕಾಯ್ದೆ - ತೃತೀಯ ಲಿಂಗಿಗಳ (ಹಕ್ಕು ರಕ್ಷಣೆ) ಕಾಯ್ದೆ - 2019.
ಯಾವುದೇ ಜಾತಿ-ಧರ್ಮಕ್ಕೆ ಸೇರಿಲ್ಲವೆಂದು ತಹಶಿಲ್ದಾರರಿಂದ ಪ್ರಮಾಣ ಪತ್ರ ಪಡೆದ ದೇಶದ ಮೊದಲ ಮಹಿಳೆ - ಎಂ. ಎ. ಸ್ನೇಹ (ತಮಿಳುನಾಡು)
ಭಾರತದ ಮೊಟ್ಟಮೊದಲ ಟ್ರಾನ್ಸ್ ಕ್ವೀನ್ ಛತ್ತೀಸ್ಗಡದ ವೀಣಾ ಸೇಂದ್ರೆ
💥💥💥💥💥💥💥💥💥💥💥💥💥💥💥💥💥
ತೇಜಸ್ ಎಂಬುದು ಏಕ ಎಂಜಿನಿನ 4ನೇ ಪೀಳಿಗೆಯ ಬಹು ಉದ್ದೇಶಿತ ಲಘು ಯುದ್ಧ ವಿಮಾನವಾಗಿದೆ. ಇದನ್ನು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯವರು ವಿನ್ಯಾಸಗೊಳಿಸಿದ್ದು, HAL ನವರು ನಿರ್ಮಿಸಿದ್ದಾರೆ 2015ರ ಜನವರಿ 17 ರಿಂದ ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದೆ.
1971 ಡಿಸೆಂಬರ್ 16 ರಂದು ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಭಾರತ ವಿಮೋಚನೆಗಿಳಿಸಿತ್ತು, ಈ ಹಿನ್ನೆಲೆಯಲ್ಲಿ 2020 ಡಿಸೆಂಬರ್ 16 ರಂದು ಭಾರತದಲ್ಲಿ ವಿಜಯ ದಿವಸ ಮತ್ತು ಬಾಂಗ್ಲಾದೇಶದಲ್ಲಿ ವಿಮೋಚನಾ ದಿನವನ್ನಾಗಿ ಆಚರಿಸಲಾಯಿತು.
ಬಾಂಗ್ಲಾದೇಶದ ಈಗಿನ ಪ್ರಧಾನಿ ಶೇಖ್ ಹಸೀನಾ
ಬಾಂಗ್ಲಾದೇಶದ ಪಿತಾಮಹ ಶೇಖ್ ಮುಜಿಬರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಬಂಗಬಂಧು ಎಂಬ ಅಂಚೆ ಚೀಟಿಯನ್ನು ಬಾಂಗ್ಲಾದೇಶ ಮತ್ತು ಭಾರತ ಬಿಡುಗಡೆ ಮಾಡಿತು.
ಬಾಂಗ್ಲಾದೇಶ ವಿಮೋಚನೆಯ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ - ಎ.ಎ.ಕೆ.ನಿಯಾಜ್ ಆಗಿದ್ದರು.
ನೌಕಾಪಡೆಯ ದಿನ - ಡಿಸೆಂಬರ್ 04
1971 ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ 1971 ರ ಡಿಸೆಂಬರ್ 4 ಮತ್ತು 5 ರಂದು ಭಾರತೀಯ ನೌಕಾಪಡೆಯು ಕರಾಚಿ ಬಂದರಿನಲ್ಲಿ Operation Trident ಕಾರ್ಯಚರಣೆ ನಡೆಸಿ ಯಶಸ್ಸು ಸಾಧಿಸಿದ್ದರ ಸವಿನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 04 ನ್ನು ಭಾರತೀಯ ನೌಕಾದಿನ ಎಂದಿ ಆಚರಿಸಲಾಗುತ್ತದೆ.
2020 ರ ಭಾರತೀಯ ನೌಕಾಪಡೆಯ ಧ್ಯೇಯವಾಕ್ಯ - "Indian Navy Combat Ready, Crefible & Cohesive"
💥💥💥💥💥💥💥💥💥💥💥💥💥💥💥💥💥
ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಚಿವಾಲಯದ ಕೇಂದ್ರ ಕಚೇರಿ ಇರುವ ನ್ಯೂಯಾರ್ಕ್ ನಗರದಲದಲಿ ಗಾಂಧಿ ಸೋಲಾರ್ ಪಾರ್ಕ್ ನ್ನು 2019 ರ ಸೆಪ್ಟೆಂಬರ್ ನಲ್ಲಿ ಉದ್ಘಾಟಿಸಿದರು.
UNEP - United Nations Environment Programme 2020 ರ ಡಿಸೆಂಬರ್ ನಲ್ಲಿ ಚಾಂಪಿಯನ್ಸ್ ಆಫ್ ಅರ್ಥ್ ಪ್ರಶಸ್ತಿಯನ್ನು ಘೋಷಿಸಿತು.
UNEP ಜೀವಮಾನ ಸಾಧನೆ ಪ್ರಶಸ್ತಿ ಪಡೆದವರು - ರಾಬರ್ಟ್ ಬಿಲ್ಲಾರ್ಡ್ (ಅಮೇರಿಕ)
UNEP ಕೇಂದ್ರ ಕಚೇರಿ - ಕೀನ್ಯಾದ ನೈರೋಬಿಯಲ್ಲಿದೆ.
UNEP ಸ್ಥಾಪನೆ - ಜೂನ್ 05, 1972.
ಚಾಂಪಿಯನ್ಸ್ ಆಫ್ ಅರ್ಥ್ ಎಂಬ ಪ್ರಶಸ್ತಿಯನ್ನು UNEP 2005 ರಂದಲೂ ನೀಡುತ್ತಿದೆ.
ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದ ಸದ್ಭಾವನಾ ರಾಯಭಾರಿ, ಮತ್ತು ಭಾರತದ ಪರಿಸರ ಅರ್ಥಶಾಸ್ತ್ರಜ್ಞ ಖ್ಯಾತಿಯ ಪವನ್ ಸುಖದೇವ್ ಅವರಿಗೆ 2020 ರ 'ಪರಿಸರ ಕ್ಷೇತ್ರದ ನೊಬೆಲ್' ಎಂದೇ ಪ್ರಖ್ಯಾತವಾದ "ಟೈಲರ್" ಪ್ರಶಸ್ತಿ ಲಭಿಸಿದೆ.
💥💥💥💥💥💥💥💥💥💥💥💥💥💥💥💥💥
ಭಾರತದ ಚಿರತೆ ಗಣತಿ ಕರ್ನಾಟಕ 2 ನೇ ಸ್ಥಾನದಲ್ಲಿದೆ (ಒಟ್ಟು 1783 ಚಿರತೆಗಳು)
NTCA - National Tiger Conservation Authority
ಮಧ್ಯಪ್ರದೇಶವು ದೇಶದಲ್ಲಿಯೇ ಅತಿಹೆಚ್ಚು ಚಿರತೆಗಳನ್ನು (3421) ಹೊಂದಿದ ರಾಜ್ಯವಾಗಿದೆ.
ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶ (526) (2018 ರ ಗಣತಿ ವರದಿ)
ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ 2 ನೇ ರಾಜ್ಯ ಕರ್ನಾಟಕ (524)
ದೇಶದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ (6049) (2017 ರ ಗಣತಿ ವರದಿ)
ಭಾರತದಲ್ಲಿ ಅತಿ ಹೆಚ್ಚು ಮಳೆ ದಾಖಲಾದ ಸ್ಥಳ - ಮೇಘಾಲಯದ ಮೌಸಿನ್ ರಾಮ್
ಕಡಿಮೆ ಮಳೆ - ರಾಜಸ್ಥಾನದ ರೋಯ್ಲಿ
ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ದಾಖಲಾದ ಸ್ಥಳ - ಶಿವಮೊಗ್ಗದ ಆಗುಂಬೆ
ಅತಿ ಕಡಿಮೆ ಮಳೆ - ಚಿತ್ರದುರ್ಗದ ನಾಯಕನಹಟ್ಟಿ
ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಸ್ಥಳ - ರಾಜಸ್ಥಾನದ ಗಂಗಾನಗರ.
ದೇಶದಲ್ಲಿ ಕಡಿಮೆ ಉಷ್ಣಾಂಶ ದಾಖಲಾದ ಸ್ಥಳ - ಲಡಾಖ್ ನ ಲೇಹ್.
ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್.
💥💥💥💥💥💥💥💥💥💥💥💥💥💥💥💥💥
You May Also Download These Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Indian Economic BookPDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
FDA SDA Model Question Paper 2020 PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
10000+ Science Question Answers 411 pages PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2010-2017 Old Police Constable Question Papers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)
💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥
::ನಮ್ಮ ಎಲ್ಲಾ Social Media Links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
No comments:
Post a Comment
If you have any doubts please let me know