ಭಾರತದ ಸರ್ವೋಚ್ಛ ನ್ಯಾಯಾಲಯದ ಬಗ್ಗೆ ನಿಮಗೆಷ್ಟು ಗೊತ್ತು...?
- ಸಂವಿಧಾನದ 5ನೇ ಭಾಗದ 4ನೇ ಅಧ್ಯಾಯದ 124 ನೇ ವಿಧಿಯಿಂದ 147 ವರೆಗಿನ ವಿಧಿಗಳು ಸುಪ್ರೀಂ ಕೋರ್ಟ್ ಬಗ್ಗೆ ಸಂಬಂಧಿಸಿದೆ.
- 1773 ರ ರೆಗ್ಯುಲೇಟಿಂಗ್ ಕಾಯ್ದೆಯ ಪ್ರಕಾರ 1774 ರಲ್ಲಿ ಕಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಯಾಯಿತು.
- 1881 ರಲ್ಲಿ ‘ಭಾರತೀಯ ಹೈಕೋರ್ಟ್ ಕಾಯ್ದೆ’ಯ ಪ್ರಕಾರ ಸುಪ್ರೀಂ ಕೋರ್ಟ್‍ಗಳನ್ನು ವಜಾಗೊಳಿಸಿ ಹೈಕೋರ್ಟ್‍ಗಳು ಆರಂಭವಾದವು.
- 1935 ರ ‘ಭಾರತ ಸರಕಾರ ಕಾಯ್ದೆ’ಯ ಅಡಿಯಲ್ಲಿ ಫೆಡರಲ್ ಕೋರ್ಟ್‍ಗಳನ್ನು ಸ್ಥಾಪಿಸಲು ಅವಕಾಶ ನೀಡಲಾಯಿತು. 1937 ಅಕ್ಟೋಬರ್ 01 ರಂದು ಮೊದಲ ಫೆಡರಲ್ ಕೋರ್ಟ್ ದೆಹಲಿಯಲ್ಲಿ ಆರಂಭವಾಯಿತು.
- ಸಂವಿಧಾನ ಜಾರಿಗೆ ಬಂದ ನಂತರ ಫೆಡರಲ್ ಕೋರ್ಟ್‍ನ್ನು ಮತ್ತೆ ಸುಪ್ರೀಂ ಕೋರ್ಟ್ ಆಗಿ ಮುಂದುವರಿಸಲಾಯಿತು.
- ಸ್ಥಾಪನೆ : ಜನೆವರಿ 28, 1950, ಸ್ಥಳ ನವದೆಹಲಿ.
- ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಸಂವಿಧಾನದ 124 ನೇ ವಿಧಿ ಅನ್ವಯ ನೇಮಕ ಮಾಡುತ್ತಾರೆ. ಅಲ್ಲದೇ ಪ್ರಮಾಣ ವಚನವನ್ನೂ ರಾಷ್ಟ್ರಪತಿಗಳೇ ಬೋಧಿಸುತ್ತಾರೆ.
- ಸುಪ್ರೀಂ ಕೋರ್ಟ್ ನ್ಯಾಯಾಧೀಶರು ರಾಷ್ಟ್ರಪತಿಯವರಿಗೆ ಪ್ರಮಾಣ ವಚನ ಬೋಧಿಸುತ್ತಾರೆ.
- ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸಂಖ್ಯೆ : 31 (1 ಮುಖ್ಯ ನ್ಯಾಯಾಧೀಶ, 30 ನ್ಯಾಯಾಧೀಶರುಗಳು)
- ಸುಪ್ರೀಂ ಕೋರ್ಟ್ ನ್ಯಾಯಾಧೀಶರು ರಾಷ್ಟ್ರಪತಿಯವರಿಗೆ ಪ್ರಮಾಣ ವಚನ ಬೋಧಿಸುತ್ತಾರೆ.
- ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು 124 (4) ನೇ ವಿಧಿಯನ್ವಯ ಮಹಾಭಿಯೋಗದ ಮೂಲಕ ತೆಗೆದು ಹಾಕಲಾಗುತ್ತದೆ.
- ಮಹಾಭಿಯೋಗ ಎಂದರೇನು : ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರು ಕರ್ತವ್ಯ ಲೋಪ ಎಸಗಿದಾಗ ಸಂಸತ್ತಿನ ಎರಡೂ ಸದನಗಳ ನಿರ್ದಿಷ್ಟ ಬಹುಮತಗಳ ಕೋರಿಕೆಯಂತೆ ರಾಷ್ಟ್ರಪತಿಗಳು ಅವರನ್ನು ಸೇವೆಯಿಂದ ವಜಾಗೊಳಿಸಬಹುದು.
- ಮಹಾಭಿಯೋಗ ನಡೆಯುವುದು ಹೇಗೆ : ಲೋಕಸಭೆಯ ಕನಿಷ್ಟ 100 ಸದಸ್ಯರು ನ್ಯಾಯಮೂರ್ತಿಗಳ ಪದಚ್ಯುತಿ ನಿಲುವಳಿ ನೋಟೀಸ್‍ಗೆ ಸಹಿ ಹಾಕಿ ಸ್ಪೀಕರ್ ಗೆ ಸಲ್ಲಿಸಬೇಕು. ಹಾಗೂ ರಾಜ್ಯಸಭೆಯ ಕನಿಷ್ಟ 50 ಸದಸ್ಯರು ಪದಚ್ಯುತಿ ನಿಲುವಳಿ ನೋಟೀಸ್‍ಗೆ ಸಹಿ ಹಾಕಿ ಸಭಾಧ್ಯಕ್ಷರಿಗೆ ಸಲ್ಲಿಸಬೇಕು. ಸ್ಪೀಕರ್ ಮತ್ತು ರಾಜ್ಯಸಭಾ ಸಭಾಧ್ಯಕ್ಷರು ಇಬ್ಬರೂ ಪರಸ್ಪರ ಚರ್ಚಿಸಿ, ನಿಲುವಳಿ ನೋಟೀಸ್ ಗೆ ಮನ್ನಣೆ ನೀಡಬೇಕೇ ಬೇಡವೆ ಎಂಬುದನ್ನು ನಿರ್ಧರಿಸುತ್ತಾರೆ. ಮನ್ನಣೆ ಕೊಡಬೇಕು ಎಂದೆನಿಸಿದಲ್ಲಿ ಆರೋಪದ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿ ರಚನೆ ಮಾಡುತ್ತಾರೆ.
- ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ಮುಖ್ಯನ್ಯಾಯಾಧೀಶರು ಮತ್ತು ವಿಶೇಷ ನ್ಯಾಯವಾದಿ ಇರುತ್ತಾರೆ. ಸದಸ್ಯರು ಆರೋಪದ ಆಧಾರದ ಮೇಲೆ ತನಿಖೆ ನಡೆಸಿ, ಆರೋಪ ಪಟ್ಟಿಯನ್ನು ತಯಾರು ಮಾಡುತ್ತಾರೆ. ಆರೋಪ ಪಟ್ಟಿಯ ಪ್ರತಿಯನ್ನು ಆರೋಪಿತ ಸಿಜೆಐ (ಚೀಫ್ ಜಸ್ಟೀಸ್ ಆಫ್ ಇಂಡಿಯಾ) ರವರಿಗೆ ಕಳುಹಿಸಿ, ಆರೋಪಗಳಿಗೆ ಉತ್ತರ ನೀಡಲು ಸಿಜೆಐ ಅವರಿಗೆ ಕಾಲಾವಕಾಶ ನೀಡಲಾಗುತ್ತದೆ. ಸಿಜೆಐ ವಿರುದ್ಧದ ಆರೋಪಗಳು ಹಾಗೂ ಸಿಜೆಐ ನೀಡಿದ ಲಿಖಿತ ಉತ್ತರದ ಆಧಾರದ ಮೇಲೆ ಸಮಿತಿ ತನ್ನ ವರದಿಯನ್ನು ಸಿದ್ಧಪಡಿಸಿ, ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ನೀಡುತ್ತದೆ. ಸ್ಪೀಕರ್ ಅಥವಾ ಸಭಾಧ್ಯಕ್ಷರು ಸದರಿ ವರದಿಯನ್ನು ಸಂಬಂಧಪಟ್ಟ ಸಂಸತ್ತಿನಲ್ಲಿ ಮಂಡಿಸುತ್ತಾರೆ.
- ಸಮಿತಿಯ ವರದಿಯಲ್ಲಿ ಸಿಜೆಐ ವಿರುದ್ಧದ ಆರೋಪದಲ್ಲಿ ಸತ್ಯ ಕಂಡುಬಂದಲ್ಲಿ ಅಥವಾ ಸಿಜೆಐ ಕರ್ತವ್ಯದಲ್ಲಿ ಲೋಪ ಎಸಗಿದ್ದು ಕಂಡುಬಂದಲ್ಲಿ ಸಂಬಂಧಪಟ್ಟ ಸಂಸತ್ ಸದನದಲ್ಲಿ ವರದಿ ಕುರಿತು ಚರ್ಚೆ ನಡೆಸುತ್ತಾರೆ.
- ಸಂಸತ್‍ನ ಒಂದು ಸಭೆಯಲ್ಲಿ ಸಿಜೆಐ ಪದಚ್ಯುತಿಗೊಳಿಸುವ ನಿಣಯಕ್ಕೆ ಬಹುಮತ ಲಭಿಸಿದ್ದೇ ಆದರೆ ಮತ್ತೊಂದು ಸದನದ ಅನುಮೋದನೆಗಾಗಿ ನಿರ್ಣಯವನ್ನು ರವಾನೆ ಮಾಡಲಾಗುತ್ತದೆ. ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕಾರವಾದರೆ, ಬಳಿಕ ನಿರ್ಣಯವನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳ ಆದೇಶದ ನಂತರವಷ್ಟೇ ಸಿಜೆಐ ರವರನ್ನು ಸೇವೆಯಿಂದ ವಜಾಗೊಳಿಸಬಹುದಾಗಿದೆ.
- ನಿಮಗಿದು ಗೊತ್ತಿರಲಿ : ಭಾರತದಲ್ಲಿ ಇದುವರೆಗೂ ಯವುದೇ ಸಿಜೆಐ ರವರನ್ನು ಮಹಾಭಿಯೋಗದ ಮೂಲಕ ಪದಚ್ಯುತಿಗೊಳಿಸಿದ ಉದಾಹರಣೆಗಳಿಲ್ಲ. ಮಹಾಭಿಯೋಗದ ಪ್ರಕ್ರಿಯೆ ಪೂರ್ಣಗೊಳ್ಳಲು 6 ತಿಂಗಳು ಬೇಕಾಗುತ್ತದೆ.
- ಆಗಸ್ಟ್ 28, 2017 ರಂದು ಪ್ರಮಾಣ ವಚನ ಸ್ವೀಕರಿಸಿ, ದೇಶದ 45 ನೇ ಸಿಜೆಐ ಆಗಿದ್ದ ದೀಪಕ್ ಮಿಶ್ರಾ ಅವರ ವಿರುದ್ಧ ಸಹೋದ್ಯೋಗಿ ನ್ಯಾಯಮೂರ್ತಿಗಳೇ ಆರೋಪ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
- ಸದ್ಯದ ಲೋಕಸಭೆಯ ಸ್ಪೀಕರ್ - ಓಂ ಬಿರ್ಲಾ (17 ನೇ ಲೋಕಸಭೆ) ಮತ್ತು ರಾಜ್ಯ ಸಭೆಯ ಅಧ್ಯಕ್ಷರು-ಉಪರಾಷ್ಟ್ರಪತಿ-ಎಂ. ವೆಂಕಯ್ಯ ನಾಯ್ಡು.
- ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಎರಡೂ ಹುದ್ದೆಗಳು ಖಾಲಿ ಇದ್ದಾಗ ಸಿಜೆಐ ರವರು ಹಂಗಾಮಿ ರಾಷ್ಟ್ರಪತಿಗಳಾಗಿ ಕರ್ತವ್ಯ ನಿರ್ವಹಿಸುತ್ತಾರೆ.
- ಸಿಜೆಐ ರವರು ನಿವೃತ್ತಿ ಅಥವಾ ವಜಾಗೊಂಡ ನಂತರ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಾದ ಮಾಡುವಂತಿಲ್ಲ.
- ಸಿಜೆಐ ರವರು ಮಾಸಿಕ 1 ಲಕ್ಷ ವೇತನ ಪಡೆದರೆ ಇತರೆ ನ್ಯಾಯಾಧೀಶರು ಕೇಂದ್ರ ಸಂಚಿತ ನಿಧಿಯಿಂದ 90 ಸಾವಿರ ವೇತನ ಪಡೆಯುತ್ತಾರೆ.
- ಸುಪ್ರೀಂ ಕೋರ್ಟ್‍ನ ಮೊದಲ ಮುಖ್ಯನ್ಯಾಯಾಧೀಶರು : ಎಚ್. ಜೆ. ಕಾನಿಯಾ (1947-51) (ಗುಜರಾತ)
- ಮೊದಲ ಮಹಿಳಾ ನ್ಯಾಯಾಧೀಶರು - ಫಾತಿಮಾ ಬೀವಿ. (ತಿರುವಾಂಕೂರ್, ಸದ್ಯ ಕೇರಳ)
- ಮೊದಲ ಮುಸ್ಲೀಂ ಸಿಜೆಐ – ಎಂ. ಹಿದಾಯತ್‍ವುಲ್ಲಾ (ಲಕ್ನೋ, ಉತ್ತರ ಪ್ರದೇಶ)
- ಮೊದಲ ದಲಿತ ಸಿಜೆಐ – ಕೆ. ಜಿ. ಬಾಲಕೃಷ್ಣನ್ (37 ನೇ ಸಿಜೆಐ, ಕೇರಳ)
- ಪಾರ್ಸಿ ಸಮುದಾಯದ ಮೊದಲ ಸಿಜೆಐ – ಎಸ್. ಎಚ್. ಕಪಾಡಿಯಾ (ಮುಂಬೈ)
- 44 ನೇ ಸಿಜೆಐ ಜೆ. ಎಸ್. ಖೆಹರ್ (2017 ಜನೆವರಿ 4 ರಿಂದ ಆಗಸ್ಟ್ 27, 2017)
- 45 ನೇ ಸಿಜೆಐ ದೀಪಕ್ ಮಿಶ್ರಾ (28 ಆಗಸ್ಟ್ 2017 ರಿಂದ 02 ಅಕ್ಟೋಬರ್ 2018)
- 46 ನೇ ಸಿಜೆಐ ರಂಜನ್ ಗೊಗೋಯ್ (3 ಅಕ್ಟೋಬರ್ 2018 ರಿಂದ 17 ನವೆಂಬರ್ 2019)
- ಪ್ರಸ್ತುತ 47 ನೇ ಸಿಜೆಐ - ಶರದ್ ಅರವಿಂದ ಬೋಬ್ಡೆ (ಮಹಾರಾಷ್ಟ್ರ, 18 ನವೆಂಬರ್ 2019 ರಿಂದ ಇಲ್ಲಿಯವರೆಗೆ. ಇವರು ದಿನಾಂಕ 23 ಏಪ್ರೀಲ್ 2021 ಕ್ಕೆ ನಿವೃತ್ತಿಯಾಗಲಿದ್ದಾರೆ. )
ಸುಪ್ರೀಂ ಕೋರ್ಟ್ ಕಟ್ಟಡದ ಕುರಿತಾದ ಮಾಹಿತಿ
- ಶಂಕು ಸ್ಥಾಪನೆ : 1954 ಅಕ್ಟೋಬರ್ 24
- ಉದ್ಘಾಟಕರು : ಭಾರತ ಮೊದಲು ರಾಷ್ಟ್ರಪತಿ ಡಾ|| ಬಾಬು ರಾಜೇಂದ್ರ ಪ್ರಸಾದ
- ಕಟ್ಟಡದ ಶೈಲಿ : ಇಂಡೋ-ಬ್ರಿಟೀಷ್ ಶೈಲಿ
- ಶಿಲ್ಪಿ : ಗಣೇಶ ಭಿಕಾಜಿ ಡಿಯೋ ಲಾಲಿಕಾರ್
- ವಿಸ್ತೀರ್ಣ : 17 ಎಕರೆ ತ್ರಿಕೋನಾಕೃತಿಯಲ್ಲಿ ನಿರ್ಮಾಣ.
- ಧ್ಯೇಯ ವಾಕ್ಯ : ಯತೋ ಧರ್ಮಸ್ತತೋ ಜಯಃ
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)
💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥
::ನಮ್ಮ ಎಲ್ಲಾ Social Media Links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
No comments:
Post a Comment
If you have any doubts please let me know