ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು : 16-02-2021
ಕರ್ನಾಟಕ ರಾಜ್ಯದ ಪ್ರಮುಖ ಹುದ್ದೆಗಳು
☘ ಕರ್ನಾಟಕದ ರಾಜ್ಯಪಾಲರು
- ವಾಜುಬಾಯಿ ವಾಲಾ
☘ ವಿಧಾನ ಸಭಾ ಸಭಾಪತಿ
- ವಿಶ್ವೇಶ್ವರ ಹೆಗಡೆ ಕಾಗೇರಿ
☘ ವಿಧಾನ ಸಭಾ ಉಪಸಭಾಪತಿ
- ಆನಂದ್ ಸಿ .ಮಾಮನಿ
☘ ವಿಧಾನ ಪರಿಷತ್ತಿನ ಸಭಾಪತಿ
- ಬಸವರಾಜ ಹೊರಟ್ಟಿ
☘ ವಿಧಾನ ಪರಿಷತ್ತಿನ ಉಪಸಭಾಪತಿ
- ಎಂ.ಕೆ ಪ್ರಾಣೇಶ್
☘ ಮುಖ್ಯಮಂತ್ರಿ, ರಾಜ್ಯ ಹಣಕಾಸು ಸಚಿವರು, ರಾಜ ಯೋಜನಾ ಮಂಡಳಿ ಅಧ್ಯಕ್ಷರು
- ಬಿ.ಎಸ್. ಯಡಿಯೂರಪ್ಪ
☘ ವಿಧಾನ ಸಭೆ ವಿರೋಧ ಪಕ್ಷದ ನಾಯಕ
- ಸಿದ್ದರಾಮಯ್ಯ
☘ ವಿಧಾನ ಪರಿಷತ್ತಿನ ಪಕ್ಷದ ನಾಯಕ
- ಕೆ. ಶ್ರೀನಿವಾಸ ಪೂಜಾರಿ
☘ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
- ಎಸ್.ಆರ್. ಪಾಟೀಲ್
💥💥💥💥💥💥💥💥💥💥💥💥💥💥
☘ ಭಾರತದ ಮೊದಲ ಕಾರ್ಮಿಕ ಚಳುವಳಿಯ ಮ್ಯೂಸಿಯಂ
- ಕೇರಳದ ಅಳಪ್ಪುಳ ( Alappuzha)
☘ ಭಾರತದ ಮೊದಲ ಪ್ರಿಂಟೆಕ್ ಕ್ಲಸ್ಟರ್ ಪಾರ್ಕ್ - ರಾಮನಗರ
☘ ನಿರುದ್ಯೋಗ ಎಂದರೆ
- ಕೆಲಸಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿ
☘ ಭ್ರಷ್ಟಾಚಾರ ಎಂದರೆ
- ಎಲ್ಲಾ ವಿಧಿ - ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ
☘ ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು
- ಲೋಕಪಾಲ & ಲೋಕಾಯುಕ್ತ
☘ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ
- ಡಿ.ಎಂ.ನಂಜುಂಡಪ್ಪ ಸಮಿತಿ
☘ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ವಿಧಿ
- 371ಜೆ
☘ ಕೋಮುವಾದವೆಂದರೆ
- ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು.
☘ ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ
- ಸ್ತ್ರೀ ಶಕ್ತಿ
☘ ಭಯೋತ್ಪಾದನೆ ಎಂದರೆ
- ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ
☘ 21ನೇ ಶತಮಾನದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಸವಾಲಾಗಿರುವುದು
- ಕಾರ್ಪೋರೇಟ್ ತಂತ್ರಗಾರಿಕೆ
☘ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ
- 1956
☘ ವಿದೇಶಾಂಗ ನೀತಿ ಎಂದರೆ
- ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ
☘ ಆಫ್ರಿಕಾದ ಗಾಂಧಿ ಎಂದು ಹೆಸರಾದವರು
- ನೆಲ್ಸನ್ ಮಂಡೇಲಾ
☘ ಜಗತ್ತಿನ ಧೃವೀಕರಣದ ಸಮಯದಲ್ಲಿ ಭಾರತ
- ಅಲಿಪ್ತ ನೀತಿ ಅನುಸರಿಸಿತು
☘ ಅಂತರರಾಷ್ಟ್ರೀಯ ಶಾಂತಿ & ಸೌಹಾರ್ದತೆಯ ಕುರಿತು ತಿಳಿಸುವ ವಿಧಿ
- 51 ವಿಧಿ
☘ ಭಾರತ & ಚೀನಾದ ನಡುವೆ ಉತ್ತಮ ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ
- ಕೌಟಿಲ್ಯನ ಅರ್ಥಶಾಸ್ತ್ರ
☘ ಭಾರತ & ಚೀನಾ ಪ್ರಯತ್ನದ ಫಲವಾಗಿ 2015 ಪ್ರಾರಂಭಗೊಂಡ ಸಂಘಟನೆ
- BRICS ( ಬ್ರಿಕ್ಸ್ )
☘ ಗೋವಾ ವಿಮೋಚನೆಗೊಂಡ ವರ್ಷ
- 1961
☘ ಭಾರತ & ರಷ್ಯಾ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ
- 1971
☘ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ
- ರಷ್ಯಾ
☘ ಭಾರತ & ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ
- ಕಾಶ್ಮೀರ ಸಮಸ್ಯೆ
☘ 1971 ಭಾರತ - ಪಾಕಿಸ್ತಾನ ಯುದ್ಧದ ಪರಿಣಾಮ
- ಬಾಂಗ್ಲಾದೇಶದ ಉದಯ
☘ ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ
- 24 ಆಕ್ಟೋಬರ 1945
☘ ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಅಂಗೀಕರಿಸಿದ ವರ್ಷ
- 1948 ಡಿಸೆಂಬರ್ 10
☘ “ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು , ಹಣ ಮಾತ್ರ ಪೋಲು ಮಾಡುವುದಿಲ್ಲ . ಬದಲಾಗಿ ಕಾರ್ಮಿಕರ ಬೆವರನ್ನು , ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಯನ್ನು ವ್ಯಯಗೊಳಿಸುತ್ತದೆ ” ಈ ಹೇಳಿಕೆ ನೀಡಿದವರು
- ಐಸನ್ ಹೊವರ್
☘ ತೃತೀಯ ಜಗತ್ತು ಎಂಬ ವಿಚಾರ ಸಂಬಂಧಿಸಿದ್ದು
- ಬಡರಾಷ್ಟ್ರಗಳು
☘ ಅಣು ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟೆಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮ
- ಪರಸ್ಪರ ನಿಶ್ಚಿತ ನಾಶ
☘ 1ನೇ ಮಹಾಯುದ್ಧದ ನಂತರ ವಿಶ್ವಶಾಂತಿಗಾಗಿ ಸ್ಥಾಪಿತವಾದ ಸಂಸ್ಥೆ
- ಲೀಗ್ ಆಫ್ ನೇಷನ್ಸ್
☘ ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು
- ಚರ್ಚಿಲ್ , ಸ್ಟಾಲಿನ್ ಹಾಗೂ ರೂಸ್‌ವೆಲ್ಟ್
☘ ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು
- ಪ್ರಾಂಕ್ಲಿನ್ ಡಿ ರೂಸ್‌ವೆಲ್ಟ್
☘ ಯುನೆಸ್ಕೋ ಸ್ಥಾಪನೆಯ ಉದ್ದೇಶ
- ವಿಶ್ವದಾದ್ಯಂತ ವಿಜ್ಞಾನ , ಶಿಕ್ಷಣ , ಸಂಸ್ಕೃತಿಗಳಿಗೆ ಪ್ರೋತ್ಸಾಹ
☘ ಮಾನವೀಯ ದೃಷ್ಟಿಕೋನ ಹೊಂದಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ
- ಯುನಿಸೆಫ್
☘ ನೊಬೆಲ್ ಬಹುಮಾನ ಪಡೆದ ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆ
- ಯುನಿಸೆಫ್ ( 1965 )
☘ ಯುನೆಸ್ಕೋದ ಕೇಂದ್ರ ಕಛೇರಿ ಇರುವ ಸ್ಥಳ
- ಪ್ಯಾರಿಸ್ ( 1946 )
☘ ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ
- ವಿಶ್ವ ವ್ಯಾಪಾರ ಸಂಘ
☘ ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಃಶ್ವೇತನಕ್ಕಾಗಿ ಸ್ಥಾಪಿಸಿದ ಸಂಸ್ಥೆ
- IBRD ( ವಿಶ್ವ ಬ್ಯಾಂಕ್ )
☘ IBRD ಕೇಂದ್ರ ಕಛೇರಿ ಇರುವ ಸ್ಥಳ
- ವಾಷಿಂಗ್ಟನ್
☘ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಛೇರಿ ಇರುವ ಸ್ಥಳ
- ಜಿನೇವಾ
☘ ಶಿಕ್ಷಣ ಮೂಲಭೂತ ಹಕ್ಕು ಎಂದು ತಿಳಿಸುವ ಸಂವಿಧಾನದ ವಿಧಿ
- 21ಎ
☘ ಅಸ್ಪೃಶ್ಯತೆ ವಿರೋಧಿಸುವ ಸಂವಿಧಾನದ ವಿಧಿ : 17
☘ ಅಸ್ಪಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ
- 1955
☘ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಾಗಿ ತಿದ್ದುಪಡಿಯಾದ
- 1976
☘ ಮೋಡಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿ ಮಳೆಯಾಗಿಸುವ ಮೋಡಬಿತ್ತನೆ
'ವರ್ಷಧಾರೆ ' ಕಾರ್ಯಕ್ರಮ ಯಾವ ರಾಜ್ಯದಲ್ಲಿ ನಡೆಯಿತು ?
- ಕರ್ನಾಟಕದಲ್ಲಿ
☘ 2017 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಘೋಷವಾಕ್ಯ ಏನಾಗಿತ್ತು ?
- ಪ್ರಜಾಪ್ರಭುತ್ವ ಮತ್ತು ಸಂಘರ್ಷ ಪ್ರತಿಬಂಧ
☘ ಅಂಬೇಡ್ಕರ್‌ರವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲು ಕಾರಣ
- ಸಂವಿಧಾನ ಕರಡು ರಚನೆಯಲ್ಲಿ ನಿರ್ಣಾಯಕ ಮತ್ತು ಮಹತ್ವದ ಪಾತ್ರ ನಿರ್ವಹಿಸಿದ್ದರಿಂದ
☘ ಬಾಲಕಾರ್ಮಿಕತನ ಎಂದರೆ
- ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆ
☘ ಬಾಲ ಕಾರ್ಮಿಕರು ಎಂದರೆ
- ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ ಮಕ್ಕಳು
☘ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ
- 24 ನೇ
☘ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ
- 1986
☘ ಕಾಣದ ಹಸಿವು ಎಂದರೆ
- ಪೋಷಕಾಂಶಗಳ ಅಭಾವದಿಂದ ಉಂಟಾಗುವ ಹಸಿವು
☘ ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ
- 2012
☘ ಪೋಕ್ಸೋ ಕಾಯಿದೆಯ ಉದ್ದೇಶ
- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು
☘ ಹೆಣ್ಣು ಭ್ರೂಣ ಹತ್ಯೆ ಎಂದರೆ.?
- ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವುದು
☘ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
- 1994
☘ ಭಾರತದಲ್ಲಿ ಹೆಣ್ಣು ಮಕ್ಕಳ ಮರಣ ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆಂದರೆ
- ಆರೋಗ್ಯ ಸೌಲಭ್ಯ , ಪೌಷ್ಠಿಕ ಆಹಾರ ಕೊರತೆ
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
You May Also Download These Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Indian Economic BookPDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
FDA SDA Model Question Paper 2020 PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
10000+ Science Question Answers 411 pages PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2010-2017 Old Police Constable Question Papers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)
💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥
::ನಮ್ಮ ಎಲ್ಲಾ Social Media Links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
No comments:
Post a Comment
If you have any doubts please let me know