841 Office Attendant Vacancies in RBI : APPLY NOW
ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಶುಭ ಸುದ್ದಿ..!!! ಹತ್ತನೆಯ ತರಗತಿ ಪಾಸಾದವರಿಗೆ RBI ವಿವಿಧ ಕಛೇರಿಗಳಲ್ಲಿ 841 ಆಫೀಸ್ ಅಟೆಂಡೆಂಟ್ ಹುದ್ದೆಗಳಿವೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 15 ಕಡೆಯ ದಿನಾಂಕವಾಗಿದ್ದು, ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಕುರಿತಾದ ಅಧಿಕೃತ ಅಧಿಸೂಚನೆಯನ್ನು RBI ನ ಜಾಲತಾಣ www.rbi.org.in ಗೆ ಲಾಗಿನ್ ಆಗುವುದರ ಮೂಲಕ ನೋಡಬಹುದು ಹಾಗೂ ಅರ್ಜಿ ಸಲ್ಲಿಸಬಹುದು.
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
ಹುದ್ದೆಯ ಹೆಸರು : ಆಫೀಸ್ ಅಟೆಂಡೆಂಟ್
ಒಟ್ಟು ಹುದ್ದೆಗಳ ಸಂಖ್ಯೆ : 841
ಆಯ್ಕೆ ಪ್ರಕ್ರಿಯೆ :
ಸದರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆ (ಆನ್‌ಲೈನ್ ಟೆಸ್ಟ್) ಹಾಗೂ ನಂತರ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (ಪ್ರಾದೇಶಿಕ ಭಾಷೆಯಲ್ಲಿ) ನಡೆಸಲಾಗುತ್ತದೆ.
ವಯೋಮಿತಿ :
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 01-02-2021ಕ್ಕೆ ಅನ್ವಯಿಸುವಂತೆ 18 ರಿಂದ 25 ವರ್ಷಗಳ ವಯೋಮಿತಿ ಹೊಂದಿರಬೇಕು. ಅಂದರೆ ಅಭ್ಯರ್ಥಿಗಳು 02-02-1996 ಕ್ಕಿಂತ ಮೊದಲು ಜನಿಸಿರಬಾರದು ಹಾಗೂ ೦1-02-2003 ರ ನಂತರ ಜನಿಸಿದವರಿಗೂ ಅನ್ವಯಿಸುವುದಿಲ್ಲ. ಅಂದರೆ 25 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿರುವ ನೇಮಕಾತಿ ಕಚೇರಿಯ ಪ್ರಾದೇಶಿಕ ವ್ಯಾಪ್ತಿಗೆ ಒಳಪಡುವ ಸಂಬಂಧಪಟ್ಟ ಅಧಿಕೃತ ಶಿಕ್ಷಣ ಸಂಸ್ಥೆಗಳಿಂದ 10 ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಜೊತೆಗೆ, ಅಭ್ಯರ್ಥಿಯು ಅರ್ಜಿ ಸಲ್ಲಿಸುತ್ತಿರುವ ನೇಮಕಾತಿ ಕಚೇರಿಯ ಪ್ರಾದೇಶಿಕ ವ್ಯಾಪ್ತಿಗೆ ಒಳಪಡುವ ರಾಜ್ಯದ ನಿವಾಸಿ ಆಗಿರಬೇಕು.
ಆರ್‌ಬಿಐ ನೇಮಕಾತಿ ಪ್ರಯುಕ್ತ ನಿಗದಿಪಡಿಸಿದ ಕಚೇರಿಗೆ ಅಂದರೆ ಸ್ಥಳೀಯ ಕಚೇರಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆ ಕಚೇರಿಯ ಅಡಿಯಲ್ಲಿ ಬರುವ ರಾಜ್ಯ ಅಥವ ಕೇಂದ್ರಾಡಳಿತ ಪ್ರದೇಶದ ರಾಜ್ಯ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ತಿಳಿದಿರಬೇಕು.
ಉದಾಹರಣೆಗೆ : ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಅರ್ಜಿ ಅಲ್ಲಿಸುವುದಾದರೆ ಅವರಿಗೆ ಕನ್ನಡ ಬರೆಯಲು, ಓದಲು ಮತ್ತು ವ್ಯವಹರಿಸಲು ತಿಳಿದಿರಬೇಕು..
ಆನ್‌ಲೈನ್ ಟೆಸ್ಟ್ ಹಾಗೂ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.
💥💥💥💥💥💥💥💥💥💥💥💥💥💥💥💥💥💥💥💥💥💥💥💥💥
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳು 10940/- ದಿಂದ 23,700 ವೇತನ ಶ್ರೇಣಿಯ ಸಂಬಳ ಪಡೆಯಲಿದ್ದಾರೆ. ಜೊತೆಗೆ ಡಿಎ, ಹೆಚ್‌ಆರ್‌ಎ, ಗ್ರೇಡ್ ಅಲೋಯನ್ಸ್ ಹಾಗೂ ಇತರೆ ಭತ್ಯೆಗಳು ಸೇರಿ ಒಟ್ಟಾರೆ 26508/- ರೂ. ಆರಂಭಿಕ ಮಾಸಿಕ ವೇತನ ಪಡೆಯುತ್ತಾರೆ.
ಅರ್ಜಿ ಶುಲ್ಕ :
ಅರ್ಜಿ ಸಲ್ಲಿಸುವ SC / ST / PwBD / EXS ವರ್ಗದ ಅಭ್ಯರ್ಥಿಗಳಿಗೆ ₹ 50 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ / 450 / - ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಸದರಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ :
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2021 ರ ಫೆಬ್ರವರಿ 24 ರಿಂದ ಆರ್‌ಬಿಐನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿಗಳ ನೋಂದಣಿಗೆ ಕೊನೆಯ ದಿನಾಂಕ 15-03-2021.
💥💥💥💥💥💥💥💥💥💥💥💥💥💥💥💥💥💥💥
: ಪ್ರಮುಖ ದಿನಾಂಕಗಳು : | |
---|---|
841 Office Attendant Vacancies In RBI | |
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ | 24-02-2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 15-03-2021 |
ಆನ್‌ಲೈನ್ ಅರ್ಜಿ ಶುಲ್ಕ ಪಾವತಿಸುವ ದಿನಾಂಕ | 24-02-2021 ರಿಂದ 15-03-2021 |
ಸಲ್ಲಿಸಿದ ಅರ್ಜಿಗಳ ತಿದ್ದುಪಡಿಗೆ ಕೊನೆಯ ದಿನಾಂಕ | 15/03/2021 |
ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ | 9 ಮತ್ತು 10 ಏಪ್ರಿಲ್ 2021. |
THANK YOU FOR VISITING EDUTUBEKANNADA.COM | |
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
CLICK HERE TO APPLY | |
---|---|
841 Office Attendant Vacancies In RBI | |
ಅಧಿಸೂಚನೆ / Notification | Click Here To Download |
ಅರ್ಜಿ ಸಲ್ಲಿಸಲು / Apply Now | Click Here To Apply |
Spardha Vijetha All Magazines | Click Here to Download |
Join Our Telegram Channel | Click Here to Join |
Our YouTube Channel | Click Here to Subscribe |
Our Facebook Page | Click Here to Follow |
THANK YOU FOR VISITING EDUTUBEKANNADA.COM | |
How to Download PDF : Here is Quick Links For Download | |
---|---|
Files | Download Links |
FDA GK QP 28-02-2021 PDF | Click Here to Download |
Spardha Vijetha January 2021 | Click Here to Download |
Spardha Vijetha February 2021 | Click Here to Download |
All Spardha Vijetha Magazines 2021 | Click Here to Download |
Our YouTube Channel | Click Here to Subscribe |
Our Facebook Page | Click Here to Follow |
THANK YOU FOR VISITING EDUTUBEKANNADA.COM | |
No comments:
Post a Comment
If you have any doubts please let me know