ಉದ್ಯೋಗದ ಹುಡುಕಾಟದಲ್ಲಿರುವ ಮಹಿಳೆಯರಿಗೆ ಶುಭಸುದ್ದಿ...!!! ಹಾಸನ ಜಿಲ್ಲಾ ವ್ಯಾಪ್ರಿಯಲ್ಲಿವೆ ಭರ್ಜರಿ 101 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳು. ಈಗಲೇ ಅರ್ಜಿ ಸಲ್ಲಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ..!!!🌼🌼🌼🌼🌼🌼🌼🌼🌼🌼🌼🌼🌼ಹಾಸನ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 8 ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆ ಮಹಿಳೆಯರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.🌼🌼🌼🌼🌼🌼🌼🌼🌼🌼🌼🌼🌼ಹುದ್ದೆಗಳ ವಿವರ ಹೀಗಿದೆ :🌺 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು : 21🌺 ಅಂಗನವಾಡಿ ಸಹಾಯಕಿಯರ ಹುದ್ದೆಗಳು: 80🌺 ಒಟ್ಟು ಹುದ್ದೆಗಳು - 101🌼🌼🌼🌼🌼🌼🌼🌼🌼🌼🌼🌼🌼ಹಾಸನದ ಎಲ್ಲೆಲ್ಲಿ ಹುದ್ದೆಗಳು ಖಾಲಿ ಇವೆ :ಹಾಸನ ಜಿಲ್ಲೆಯಆಲೂರು,ಸಕಲೇಶಪುರ,ಚನ್ನರಾಯಪಟ್ಟಣ,ಹಾಸನ,ಬೇಲೂರು,ಅರಸೀಕೆರೆ,ಹೊಳೆನರಸೀಪುರ,ಅರಕಲಗೂಡು ತಾಲೂಕುಗಳ ವ್ಯಾಪ್ತಿಯಲ್ಲಿ ಹುದ್ದೆಗಳು ಖಾಲಿ ಇದ್ದು, ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.🌼🌼🌼🌼🌼🌼🌼🌼🌼🌼🌼🌼🌼ನೆನಪಿರಲಿ :ಸಹಾಯಕಿ ಹುದ್ದೆಗೆ ಅಂಗವಿಕಲರು ಅರ್ಹರಾಗಿರುವುದಿಲ್ಲ.ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ (ತಹಸೀಲ್ದಾರ್ ಕಚೇರಿಯಿಂದ ಪಡೆದದ್ದು), ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು.ಈ ಮೀಸಲಾತಿಗಳೂ ಅನ್ವಯಿಸುತ್ತವೆ :ಅಭ್ಯರ್ಥಿಗಳು ವಿಧವೆ, ವಿಚ್ಛೇದಿತೆ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಯಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. ದೇವದಾಸಿಯರ ಮಕ್ಕಳು, ಅಂಗವಿಕಲರಾಗಿದ್ದಲ್ಲಿ ಸರ್ಕಾರದಿಂದ ದೃಢೀಕರಿಸಿದ ಪ್ರಮಾಣಪತ್ರ, ಪರಿತ್ಯಕ್ತೆ ಎಂದು ಗ್ರಾಪಂನಿಂದ ನೀಡಿದ ಪತ್ರ, ಯೋಜನಾ ನಿರಾಶ್ರಿತರಾಗಿದ್ದಲ್ಲಿ ತಹಸೀಲ್ದಾರ್ ಅವರಿಂದ ಪಡೆದ ಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬಹುದು. ಈ ಪ್ರಮಾಣಪತ್ರಗಳನ್ನು ಆಯಾ ಮೀಸಲಾತಿಗೆ ಪರಿಗಣಿಸಲಾಗುತ್ತದೆ.🌼🌼🌼🌼🌼🌼🌼🌼🌼🌼🌼🌼🌼ವಿದ್ಯಾರ್ಹತೆ ಏನಿರಬೇಕು :🍀 ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ,🍀 ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ, ಗರಿಷ್ಠ 9ನೇ ತರಗತಿ. ಕನ್ನಡ ಭಾಷೆ ಜ್ಞಾನ ಅವಶ್ಯ.ವಯೋಮಿತಿ ಎಷ್ಟಿರಬೇಕು :18 ರಿಂದ 35 ವರ್ಷ. ಅಂಗವಿಕಲರಿಗೆ 10 ವರ್ಷ ವಯೋಸಡಿಲಿಕೆ ಇದೆ.🌼🌼🌼🌼🌼🌼🌼🌼🌼🌼🌼🌼🌼ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ:ವಿದ್ಯಾರ್ಹತೆ, ವಯೋಮಿತಿ, ಆಸಿಡ್ ದಾಳಿಗೆ ತುತ್ತಾದವರು, ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದವರಿಗೆ, ವಿಧವೆಯರಿಗೆ, ಸ್ಥಳೀಯರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.🌼🌼🌼🌼🌼🌼🌼🌼🌼🌼🌼🌼🌼ಇವುಗಳು ಗೌರವಧನ ಆಧಾರಿತ ಹುದ್ದೆ :ಈ ನೇಮಕಾತಿಗಳು ಗೌರವಧನ ಆಧಾರಿತವಾಗಿವೆ.🏵 ಅಂಗನವಾಡಿ ಕಾರ್ಯಕರ್ತೆಗೆ ಮಾಸಿಕ 10,000ರೂ,🏵 ಮಿನಿ ಅಂಗನವಾಡಿ ಕಾರ್ಯಕರ್ತೆಗೆ 5,750 ರೂ.,🏵 ಸಹಾಯಕಿಯರಿಗೆ 5,000 ರೂ. ವೇತನ ನಿಗದಿಯಾಗಿದೆ.🌼🌼🌼🌼🌼🌼🌼🌼🌼🌼🌼🌼🌼ಪ್ರಮುಖ ದಿನಾಂಕಗಳು :🌸 ಅರ್ಜಿ ಸಲ್ಲಿಸಲು ಕೊನೇ ದಿನ: 30 ಜನೆವರಿ 2021ಮಾಹಿತಿಗೆ: https://anganwadirecruit.kar.nic.in
🔮🔮🔮🔮🔮🔮🔮🔮🔮🔮🔮🔮🔮🔮🔮🔮🔮
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ
💥 ನಮ್ಮ ಎಲ್ಲಾ Social Media links 💥
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ...
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know