RRB Exam 2021-21 Exam Tips and Tricks
RRB NTPC 2020-21 ಪರೀಕ್ಷೆ ಬರೆಯುವ ಪ್ರತಿಯೊಬ್ಬ ಅಭ್ಯರ್ಥಿಗಳೂ ಈ ಅಂಶಗಳನ್ನು ಗಮನಿಸಬೇಕು
ಸ್ನೇಹಿತರೇ, RRB 2018 ರಲ್ಲಿ ದೇಶದಾದ್ಯಂತ 1.4 ಲಕ್ಷ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿತ್ತು. ಸದರಿ ಹುದ್ದೆಗಳಿಗೆ 2 ಕೋಟಿಗೂ ಅಧಿಕ ಅಭ್ಯರ್ಥಿಗಳು ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಸದರಿ ಹುದ್ದೆಗಳಿಗೆ ಪರೀಕ್ಷೆ ಯಾವಾಗ ಎಂಬುದು ನಿರ್ಧಾರವಾಗಿರಲಿಲ್ಲ.
ಸದ್ಯ RRB ಇದೇ ಡಿಸೆಂಬರ್ 15 ರಿಂದ 2021 ರ ಮಾರ್ಚ್ ತನಕ ವಿವಿಧ ಪರೀಕ್ಷೆಗಳನ್ನು ಏರ್ಪಡಿಸಿ, ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸಮಯ ನಿಗದಿ ಪಡಿಸಿ, ವೇಳಾ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
⏺⏺⏺⏺⏺⏺⏺⏺⏺⏺⏺⏺⏺⏺⏺⏺⏺⏺
ಹಾಗಾದ್ರೆ ಏನಿದು RRB NTPC ಪರೀಕ್ಷೆ..!? ಪರೀಕ್ಷೆ ಹೇಗೆಲ್ಲ ಇರುತ್ತೆ..!? Negative Marking ಇರುತ್ತಾ..!? ಎಂಬಿತ್ಯಾದಿ ಹಲವಾರು ಗೊಂದಲಗಳಿಗೆ EduTube Kannada ಉತ್ತರಿಸುತ್ತದೆ.
RRB NTPC ಅಂದ್ರೆ ಏನು..?
RRB - Railway Recruitment Board
ಸದ್ಯ ದೇಶದಲ್ಲಿ 21 ಕ್ರಿಯಾಶೀಲ RRB ಗಳಿವೆ. ಕರ್ನಾಟಕದ ಬೆಂಗಳೂರು ರೈಲ್ವೆ ನೇಮಕಾತಿ ಮಂಡಳಿ ಹೊಂದಿದೆ.
NTPC - Non- Technical Popular Categories
ಇದು ರೈಲ್ವೆ ಇಲಾಖೆಗೆ ಅಗತ್ಯವಿರುವ ತಾಂತ್ರಕೇತರ ಹುದ್ದೆಗಳನ್ನು ಸೂಚಿಸುತ್ತದೆ. ಅಂದರೆ
ಈ ಕೆಳಗಿನ ಹುದ್ದೆಗಳಿಗೆ ಆರ್‌ಆರ್‌ಬಿ ಎನ್‌ಟಿಪಿಸಿ ನೇಮಕಾತಿಯನ್ನು ಮಾಡುತ್ತದೆ:
- Junior Clerk cum Typist,
- Accounts Clerk cum Typist,
- Junior Time Keeper,
- Trains Clerk,
- Commercial cum Ticket Clerk,
- Traffic Assistant,
- Goods Guard,
- Senior Commercial cum Ticket Clerk,
- Senior Clerk cum Typist,
- Junior Account Assistant cum Typist,
- Senior Time Keeper,
- Commercial Apprentice,
- Station Master.
⏺⏺⏺⏺⏺⏺⏺⏺⏺⏺⏺⏺⏺⏺⏺⏺⏺⏺
ಆರ್‌ಆರ್‌ಬಿ ಎನ್‌ಟಿಪಿಸಿ 12 ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು (ಪದವಿಪೂರ್ವ) ಹುದ್ದೆಗಳ ವಿವರಗಳು ಹೀಗಿವೆ:
💠 ಒಟ್ಟು ಹುದ್ದೆಗಳು: 10628
ಹುದ್ದೆಗಳ ಪ್ರಕಾರ ಖಾಲಿ ಹುದ್ದೆಗಳ ವರ್ಗೀಕರಣ ಈ ರೀತಿ ಇದೆ :-
🔵 ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ : 4,319
🔵 ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ : 760
🔵 ಜೂನಿಯರ್ ಟೈಮ್ ಕೀಪರ್ : 17
🔵 ಟ್ರಾನ್ಸ್ ಕ್ಲರ್ಕ್ : 592
🔵 ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ : 4,940
ಆರ್‌ಆರ್‌ಬಿ ಎನ್‌ಟಿಪಿಸಿ ಪದವೀಧರರ ಹುದ್ದೆಗಳ ವಿವರಗಳು ಹೀಗಿವೆ :
💠 ಒಟ್ಟು ಹುದ್ದೆಗಳು: 24,649
ಹುದ್ದೆಗಳ ಪ್ರಕಾರ ಖಾಲಿ ಹುದ್ದೆಗಳ ವರ್ಗೀಕರಣ ಈ ರೀತಿ ಇದೆ :-
🔴 ಸಂಚಾರ ಸಹಾಯಕ : 88
🔴 ಗೂಡ್ಸ್ ಗಾರ್ಡ್ : 5,748
🔴 ಹಿರಿಯ ವಾಣಿಜ್ಯ ಕಮ್ ಟಿಕೆಟ್ ಗುಮಾಸ್ತ : 5,638
🔴 ಕಿರಿಯ ಖಾತೆ ಅಸಿಸ್ಟೆಂಟ್ ಕಮ್ ಟೈಪಿಸ್ಟ್ : 3,164
🔴 ಸೀನಿಯರ್ ಟೈಮ್ ಕೀಪರ್ : 14
🔴 ಕಮರ್ಷಿಯಲ್ ಅಪ್ರೆಂಟಿಸ್ : 259
🔴 ಸ್ಟೇಷನ್ ಮಾಸ್ಟರ್ : 6,865
⏺⏺⏺⏺⏺⏺⏺⏺⏺⏺⏺⏺⏺⏺⏺⏺⏺⏺
ಸದರಿ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಈ ರೀತಿ ನಡೆಯುತ್ತೆ :
🔯 ಎಲ್ಲಾ ಹುದ್ದೆಗಳಿಗೆ 2 ಹಂತಗಳಲ್ಲಿ ಸಿಬಿಟಿ ಅಂದರೆ (Computer Based Test) (ಸಿಬಿಟಿ 1 ಮತ್ತು ಸಿಬಿಟಿ 2) ಇರುತ್ತದೆ ಮತ್ತು ನಂತರ ಕೌಶಲ್ಯ ಪರೀಕ್ಷೆ ಇರುತ್ತದೆ.
🔯 ಸ್ಟೇಷನ್ ಮಾಸ್ಟರ್, ಟ್ರಾಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಕೌಶಲ್ಯ ಪರೀಕ್ಷೆ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ ಆಗಿರುತ್ತದೆ.
🔯 ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಟೈಮ್ ಕೀಪರ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಅಕೌಂಟ್ಸ್ ಕಮ್ ಟೈಪಿಸ್ಟ್, ಸೀನಿಯರ್ ಟೈಪ್ ಕೀಪರ್ ಗಾಗಿ ಟೈಪಿಂಗ್ ಕೌಶಲ್ಯ ಪರೀಕ್ಷೆ ಇರುತ್ತದೆ.
🗓 ಸಿಬಿಟಿ 1 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಸಿಬಿಟಿ-2 ಪರೀಕ್ಷೆಗೆ ಆಯ್ಕೆಯಾಗುತ್ತಾರೆ. ಒಟ್ಟು ಖಾಲಿ ಇರುವ ಹುದ್ದೆಗಳಿಗೆ 1: 20 ಅಭ್ಯರ್ಥಿಗಳಿಗೆ ಸಿಬಿಟಿ 2 ರಲ್ಲಿ ಪ್ರವೇಶ ನೀಡಲಾಗುತ್ತದೆ. ಅಭ್ಯರ್ಥಿಗಳು ಸಿಬಿಟಿ 2 ರಲ್ಲಿ ಕೌಶಲ್ಯ ಪರೀಕ್ಷೆ (Skill Test) ಎದುರಿಸಬೇಕಾಗುತ್ತದೆ.
ಎಲ್ಲಾ ಪ್ರಕ್ರಿಯೆ ಮುಗಿದ ನಂತರ, ಮೂಲ ದಾಖಲಾತಿಗಳ ಪರಿಶೀಲನೆ (ಡಿವಿ) ಮತ್ತು ವೈದ್ಯಕೀಯ ಪರೀಕ್ಷೆ ಇರುತ್ತದೆ. ಮೂಲ ದಾಖಲಾತಿಗಳ ಪರಿಶೀಲನೆ (ಡಿವಿ) ಮತ್ತು ವೈದ್ಯಕೀಯ ಪರೀಕ್ಷೆಯು ಆಯ್ಕೆ ಪ್ರಕ್ರಿಯೆಯ ಕೊನೆಯ ಹಂತವಾಗಿದ್ದು, ಇದೆಲ್ಲವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಉದ್ಯೋಗ ಪಡೆಯುತ್ತಾರೆ.
⏺⏺⏺⏺⏺⏺⏺⏺⏺⏺⏺⏺⏺⏺⏺⏺⏺⏺
ಪರೀಕ್ಷೆಯ ಹೇಗಿರುತ್ತೆ.?
🔯 ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1) 90 ನಿಮಿಷಗಳ ಅವಧಿ ಹೊಂದಿದ್ದು, ಒಟ್ಟು 100 ಪ್ರಶ್ನೆಗಳಿರುತ್ತವೆ. ಸಾಮಾನ್ಯ ಜ್ಞಾನ (GK) 40, ಗಣಿತದ 30 ಮತ್ತು ತಾರ್ಕಿಕ ಚಿಂತನೆಯ ಒಟ್ಟು 30 ಪ್ರಶ್ನೆಗಳಿವೆ.
🔯 ಎರಡನೇ ಹಂತದ ಸಿಬಿಟಿ ಪರೀಕ್ಷೆಯು ಒಟ್ಟು 120 ಅಂಕಗಳನ್ನು ಹೊಂದಿರುತ್ತದೆ. ಇದು ಸಾಮಾನ್ಯ ಜ್ಞಾನ ದ 50, ಗಣಿತಕ್ಕೆ 35 ಮತ್ತು ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್‌ಗೆ 35 ಅಂಕಗಳನ್ನು ಹೊಂದಿದೆ.
🔯 ಪರೀಕ್ಷೆಯ ಎರಡೂ ಹಂತಗಳಿಗೆ ಒಟ್ಟು 90-90 ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿದೆ. ಅಂಗವಿಕಲ (PH) ಅಭ್ಯರ್ಥಿಗಳಿಗೆ ಗರಿಷ್ಠ ಮಿತಿ 120 ನಿಮಿಷಗಳು.
🔯 ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿರುತ್ತವೆ.
🔯 ಸದರಿ ಪರೀಕ್ಷೆಯಲ್ಲಿ ನಕಾರಾತ್ಮಕ ಅಂಕಗಳಿರುತ್ತವೆ.
🔯 ಕ್ಲರ್ಕ್, ಅಕೌಂಟ್ ಅಸಿಸ್ಟೆಂಟ್, ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಟೈಪಿಂಗ್ ಕೌಶಲ್ಯ ಪರೀಕ್ಷೆ ಇರುತ್ತದೆ.
🔯 ಅಭ್ಯರ್ಥಿಗಳು ಹುದ್ದೆಗಳ ಪ್ರಕಾರ ನಿಗದಿತ ವೈದ್ಯಕೀಯ ಮಾನದಂಡವನ್ನು ಪೂರೈಸಬೇಕು.
ವಿಶೇಷ ಸೂಚನೆ : ಸ್ನೇಹಿತರೇ ಸದರಿ ಎರಡೂ ಸಿಬಿಟಿ ಪರೀಕ್ಷೆಗಳಲ್ಲಿ ನಕಾರಾತ್ಮಕ ಅಂಕಗಳು ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕವನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಉತ್ತರಿಸುವುದು ಒಳಿತು.
ಪರೀಕ್ಷೆ ಬರೆಯುವ ಎಲ್ಲರಿಗೂ EduTube Kannada ತಂಡ ಶುಭ ಹಾರೈಸುತ್ತದೆ.
ಇನ್ನಿತರೇ ಪ್ರಮುಖ ನೇಮಕಾತಿಗಳ ಮಾಹಿತಿ | |
---|---|
ಕೆನರಾ ಬ್ಯಾಂಕ್ ನಲ್ಲಿ 220 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ 368 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಕೆನರಾ ಬ್ಯಾಂಕ್ ನಲ್ಲಿ 220 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
1367 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know