RRB : 1.4 ಲಕ್ಷ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟ
💢💢💢💢💢💢💢💢💢💢💢💢💢💢💢💢💢💢
ಹಾಯ್ ಸ್ನೇಹಿತರೇ, ಅರ್ಜಿ ಸಲ್ಲಿಸಿ ಎರಡು ವರ್ಷವಾಗಿದ್ದರೂ ಪರೀಕ್ಷೆಯ ಬಗ್ಗೆ ಸುಳಿವೇ ಇರಲಿಲ್ಲ. ರೈಲ್ವೆ ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂಬ ಗೊಂದಲವೂ ಇತ್ತು. ಅದಕ್ಕೆಲ್ಲ ಈಗ ಉತ್ತರ ದೊರಕಿದೆ. ಗೊಂದಲಗಳಿಗೆ RRB ತೆರೆ ಎಳೆದಿದೆ.
ರೈಲ್ವೆ ನೇಮಕಾತಿ ಮಂಡಳಿಯ ಬಹು ನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಇದೇ ಡಿಸೆಂಬರ್ 15 ರಿಂದ ಆರಂಭವಾಗಲಿವೆ.
💢💢💢💢💢💢💢💢💢💢💢💢💢💢💢💢💢
ನಿಮಗೆ ಗೊತ್ತೇ..? :
ಅರ್ಜಿ ಆಹ್ವಾನಿಸಿದ್ದ 1.40 ಲಕ್ಷ ಹುದ್ದೆಗಳಿಗೆ ಒಟ್ಟು 2.44 ಕೋಟಿ ಅರ್ಜಿಗಳು ಬಂದಿವೆ. ಸದರಿ ಪರೀಕ್ಷೆಗಳಲ್ಲಿ ಶ್ರದ್ಧೆಯಿಂದ ಅಧ್ಯಯನ ಮಾಡಿದವರಿಗೆ ಲಕ್ಷದಲ್ಲೊಂದು ಹುದ್ದೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಯಾವಾಗ & ಯಾವ ಯಾವ ಪರೀಕ್ಷೆಗಳು :-
🎯 ಡಿಸೆಂಬರ್ 15 ರಿಂದ 18 ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದ್ದು, ಒಟ್ಟು 1,663 ಹುದ್ದೆಗಳಿಗೆ 1.03 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
🎯 ತಾಂತ್ರಿಕೇತರ ಜನಪ್ರಿಯ ವರ್ಗ (ಎನ್ ಟಿಪಿಸಿ) ಪರೀಕ್ಷೆ ಡಿಸೆಂಬರ್ 18 ರಿಂದ ಮಾರ್ಚ್ 2021 ರ ನಡುವೆ ನಡೆಯಲಿದೆ. ಒಟ್ಟು 1.26 ಕೋಟಿ ಅಭ್ಯರ್ಥಿಗಳು 35,208 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
🎯 ಟ್ರ್ಯಾಕ್ ನಿರ್ವಹಣೆ, ಪಾಯಿಂಟ್ ಮೇನ್ ಮತ್ತು ವಿವಿಧ ಲೆವೆಲ್ 1 ಉದ್ಯೋಗಿ ಪಾತ್ರ ಸೇರಿದಂತೆ RRC ಲೆವೆಲ್ 1 ಹುದ್ದೆಗಳಿಗೆ ಪರೀಕ್ಷೆಗಳು ಏಪ್ರಿಲ್ ಮೊದಲ ವಾರದಿಂದ ಮುಂದಿನ ವರ್ಷದ ಜೂನ್ ನಡುವೆ ನಡೆಯಲಿದೆ.
💢💢💢💢💢💢💢💢💢💢💢💢💢💢💢💢💢💢
ಅಧಿಸೂಚನೆ ಆಗಿದ್ದು ಯಾವಾಗ..?
2018ರಲ್ಲಿ ಅಧಿಸೂಚನೆ ಗೊಂಡ ಆರ್ ಆರ್ ಬಿ ಗ್ರೂಪ್ ಡಿ ಪರೀಕ್ಷೆ 152 ಶಿಫ್ಟ್ ಗಳಲ್ಲಿ ನಡೆದಿದ್ದು, ಪ್ರತಿ ಶಿಫ್ಟ್ ನಲ್ಲಿ 1,64,026 ಅಭ್ಯರ್ಥಿಗಳು ಭಾಗವಹಿಸಿದ್ದರು. ಒಟ್ಟು 1,89,82,719 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.
ವೇಳಾಪಟ್ಟಿ ಹೇಗೆ ನೋಡೋದು.?
ಅಭ್ಯರ್ಥಿಗಳು RRB ಗಳ ಅಧಿಕೃತ ವೆಬ್ ಸೈಟ್ ನಲ್ಲಿ ವಿವರವಾದ ಪರೀಕ್ಷಾ ವೇಳಾಪಟ್ಟಿಯನ್ನು ಪ್ರವೇಶಿಸಬಹುದು.
ಸೂಚನೆ :
💥 ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ನೀಡುವ ಮುನ್ನ ಪರೀಕ್ಷಾ ನಗರ ಮತ್ತು ದಿನಾಂಕಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
💥 ಪ್ರವೇಶ ಪತ್ರಗಳು ಅಥವಾ ಪರೀಕ್ಷೆಯ ಹಾಲ್ ಟಿಕೆಟ್ʼಗಳನ್ನು ಪರೀಕ್ಷೆ ಪ್ರಾರಂಭವಾಗುವ 4 ದಿನಗಳ ಮೊದಲು ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
💢💢💢💢💢💢💢💢💢💢💢💢💢💢💢💢💢💢
ಆಯ್ಕೆ ಪ್ರಕ್ರಿಯೆ ಹೇಗೆ .?
ಅಭ್ಯರ್ಥಿಗಳು ಪಡೆದ ಅಂಕಗಳನ್ನ ಸಾಮಾನ್ಯಗೊಳಿಸಿ ಅಂತಿಮ ಮೆರಿಟ್ ಪಟ್ಟಿ ನಿರ್ಧರಿಸಲಾಗುವುದು. ಈ ಬಾರಿ ಅಭ್ಯರ್ಥಿಗಳು ಪ್ರವೇಶ ಪತ್ರದ ಮೇಲೆ ಸ್ವಯಂ ಘೋಷಣಾ ಪ್ಯಾರಾವನ್ನು ಬರೆಯಲು ಸೂಚಿಸಲಾಗಿದೆ. ಇದಕ್ಕಾಗಿ ಪ್ರವೇಶ ಪತ್ರದಲ್ಲಿ ಖಾಲಿ ಜಾಗ ಲಭ್ಯವಾಗಲಿದೆ.
ಪರೀಕ್ಷೆ ಬರೆಯುವ ಎಲ್ಲರಿಗೂ EduTube Kannada ತಂಡ ಶುಭ ಹಾರೈಸುತ್ತದೆ.
ಇನ್ನಿತರೇ ಪ್ರಮುಖ ನೇಮಕಾತಿಗಳ ಮಾಹಿತಿ | |
---|---|
ಕೆನರಾ ಬ್ಯಾಂಕ್ ನಲ್ಲಿ 220 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ 368 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಕೆನರಾ ಬ್ಯಾಂಕ್ ನಲ್ಲಿ 220 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
1367 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know