ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ
ಆತ್ಮೀಯ ಸ್ನೇಹಿತರೇ,
ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದೀರಾ..!? ಹಾಗಾದರೆ ನಿಮಗೆ ಇಲ್ಲಿದೆ ಶುಭ ಸುದ್ದಿ...!!!
ಹೌದು ಕರ್ನಾಟಕದ ರಾಜ್ಯ ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಸದರಿ ಹುದ್ದೆಗಳ ನೇಮಕಾತಿಗೆ ನಡೆಯುವ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸವುಂತೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
💥💥💥💥💥💥💥💥💥💥💥💥💥💥💥💥💥💥💥
ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 'ಸ್ವಚ್ಛ ಭಾರತ್ ಮಿಷನ್ - ಗ್ರಾಮೀಣ ಮತ್ತು ಜಲ್ ಜೀವನ ಯೋಜನೆ'ಯನ್ನು ಅನುಷ್ಠಾನಕ್ಕೆ ತಂದು ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯ ಅಭಿವೃದ್ಧಿ ಸಲುವಾಗಿ ಇಲಾಖೆಯು ಅಗತ್ಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
💥💥💥💥💥💥💥💥💥💥💥💥💥💥💥💥💥💥💥
🌼 ಹುದ್ದೆಗಳ ವಿವರ 🌼
1⃣ ರಾಜ್ಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಲಹೆಗಾರ - 01
2⃣ WQMS ಸಲಹೆಗಾರ - 02
3⃣ ಸಹಾಯಕ ಇಂಜಿನಿಯರ್ - 20
4⃣ ಸಿಸ್ಟಮ್ ಇಂಜಿನಿಯರ್ - 01
5⃣ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ - 01
6⃣ IEC ಜಿಲ್ಲಾ ಸಲಹೆಗಾರ - 01
7⃣ ಜಿಲ್ಲಾ ಸ್ಯಾನಿಟೇಶನ್ ಮತ್ತು ಹೈಜೇನ್ ಪ್ರೊಮೋಷನ್ ಕನ್ಸಲ್‌ಟಂಟ್ - 01
8⃣ SLWM ಜಿಲ್ಲಾ ಸಲಹೆಗಾರ - 01
9⃣ MIS/M&E ಜಿಲ್ಲಾ ಸಲಹೆಗಾರ - 01
🔟 ಜಿಲ್ಲಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಲಹೆಗಾರ - 01
- ಒಟ್ಟು ಹುದ್ದೆಗಳು = 30
💥💥💥💥💥💥💥💥💥💥💥💥💥💥💥💥💥💥💥
💠 ವಿದ್ಯಾರ್ಹತೆ 💠
ಸದರಿ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಸ್ನಾತಕೋತ್ತರ ಪದವಿ / ಬಿಇ / ಎಂಇ / ಎಂಸಿಎ / ಎಂಬಿಎ ಪದವಿ ಪಡೆದಿರಬೇಕು. .
ವಿಶೇಷ ಸೂಚನೆ :-
ಈ ಹುದ್ದೆಗಳನ್ನು ಮೊದಲಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುತ್ತದೆ. ನಂತರದಲ್ಲಿ ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಅಭ್ಯರ್ಥಿಯ ಕಾರ್ಯದಕ್ಷತೆ ಪರಿಗಣಿಸಿ ಪ್ರತಿವರ್ಷ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗುತ್ತದೆ. ಕಾರ್ಯದಕ್ಷತೆ ಮೆಚ್ಚದೆಹೋದಲ್ಲಿ ಅಭ್ಯರ್ಥಿಗೆ ಒಂದು ತಿಂಗಳ ಮುಂಚೆ ನೋಟಿಸ್ ನೀಡಿ ಗುತ್ತಿಗೆ ಅವಧಿಯಿಂದ ತೆಗೆಯಲಾಗುತ್ತದೆ.
💥💥💥💥💥💥💥💥💥💥💥💥💥💥💥💥💥💥💥
🔷 ಅರ್ಜಿ ಸಲ್ಲಿಸುವುದು ಹೇಗೆ 🔷
ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅಪ್‌ಡೇಟೆಡ್ ರೆಸ್ಯೂಮ್ ಜತೆಗೆ, ನಿಗದಿತ ನಮೂನೆಯನ್ನು ಇಲಾಖೆಯ ವೆಬ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಅಭ್ಯರ್ಥಿ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೋ, ಆ ಹುದ್ದೆಗೆ ತಾನು ಹೇಗೆ ಅರ್ಹ ಎಂದು 100 ಪದಗಳಲ್ಲಿ ಬರೆದಿರಬೇಕು.
💥💥💥💥💥💥💥💥💥💥💥💥💥💥💥💥💥💥💥
💠 ಅರ್ಜಿ ಸಲ್ಲಿಸಬೇಕಾದ ವಿಳಾಸ 💠
'ಕಮಿಷನರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆಹೆಚ್‌ಬಿ ಕಾಂಪ್ಲೆಕ್ಸ್, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು - 560009.
🔵 ಅರ್ಜಿ ಸಲ್ಲಿಸಲು ಕೊನೆ ದಿನಾಂಕ 🔵
11-01-2021 (ಸಂಜೆ 05-30 ಗಂಟೆವರೆಗೆ)
💥💥💥💥💥💥💥💥💥💥💥💥💥💥💥💥💥💥💥
ಮೇಲಿನ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ವೆಬ್ ವಿಳಾಸ https://rdpr.karnataka.gov.in ಗೆ ಭೇಟಿ ನೀಡಿರಿ.
No comments:
Post a Comment
If you have any doubts please let me know