IAS, KAS Free Coaching Apply Online
ಪ್ರಿಯ ಮಿತ್ರರೇ, ಶುಭಸುದ್ದಿ....!!!
IAS, KAS ಹುದ್ದೆಗಾಗಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇದೇ ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ...!!!!
💥💥💥💥💥💥💥💥💥💥💥💥💥💥
2020-21ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಿಂದ ಯುಪಿಎಸ್ಸಿ, ಕೆಎಎಸ್, ಗ್ರೂಪ್-ಸಿ, ಬ್ಯಾಂಕಿಂಗ್, ಎಸ್ ಎಸ್ ಸಿ ಮತ್ತು ಆರ್ ಆರ್ ಬಿ ಪರೀಕ್ಷೆಗಳ ಪೂರ್ವಭಾವಿ ಉಚಿತ ತರಬೇತಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸಮಾಜ ಕಲ್ಯಾಣ ಇಲಾಖೆಯು, 2020-21ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳನ್ನು ಆನ್ ಲೈನ್, ಆಫ್ ಲೈನ್ ಮೂಲಕ ಯುಪಿಎಸ್ಸಿ, ಕೆಎಎಸ್, ಗ್ರೂಪ್-ಸಿ, ಬ್ಯಾಂಕಿಂಗ್, ಎಸ್ ಎಸ್ ಸಿ ಮತ್ತು ಆರ್ ಆರ್ ಬಿ ಪರೀಕ್ಷೆಗಳ ಪೂರ್ವಭಾವಿ ತರಬೇತಿ ನೀಡಲು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
💥💥💥💥💥💥💥💥💥💥💥💥💥💥💥💥
ಯುಪಿಎಸ್ಸಿ, ಕೆಎಎಸ್, ಗ್ರೂಪ್-ಸಿ, ಬ್ಯಾಂಕಿಂಗ್, ಎಸ್ ಎಸ್ ಸಿ ಮತ್ತು ಆರ್ ಆರ್ ಬಿ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳನ್ನು ಕೋವಿಡ್-19 ಹಿನ್ನಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ, ಆಯ್ಕೆ ಮಾಡಲು ಸಾಧ್ಯವಾಗದ ಕಾರಣ, ಪದವಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಗೆ ಶಿಷ್ಯವೇತನವನ್ನು ಸರ್ಕಾರದಿಂದ ಮಂಜೂರಾದ ದರದಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಾಜರಾತಿಯನ್ವಯ ವರ್ಗಾಯಿಸಲಾಗುವುದು.
💥💥💥💥💥💥💥💥💥💥💥💥💥
ಇಂತಹ ಯುಪಿಎಸ್ಸಿ, ಕೆಎಎಸ್, ಗ್ರೂಪ್-ಸಿ, ಬ್ಯಾಂಕಿಂಗ್, ಎಸ್ ಎಸ್ ಸಿ ಮತ್ತು ಆರ್ ಆರ್ ಬಿ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಬಯಸುವಂತ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳು ದಿನಾಂಕ 31-12-2020ರ ಸಂಜೆ 5.30ರ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
(SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ
::ನಮ್ಮ ಎಲ್ಲಾ Social Media links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
may i know the link to apply for free coaching
ReplyDelete