Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 29 December 2020

How to memorize Study Things Faster For Competitive Exams

How to remember Study Things Faster For Competitive Exams




💥💥💥💥💥💥💥💥💥💥💥💥💥💥💥💥💥💥💥💥💥💥


ಪ್ರಿಯ ಮಿತ್ರರೇ,
ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿದರೂ ಕಡಿಮೆಯೇ. ಓದುವುದು ಒಂದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಯಶಸ್ಸಿಗೆ ಕಾರಣವಲ್ಲ. ಓದಿದ್ದನ್ನು ಸನಯಕ್ಕೆ ತಕ್ಕಂತೆ ನೆನಪು ಮಾಡಿಕೊಳ್ಳುವ ಜಾಣ್ಮೆ ನಮಗೆ ಇರದೇ ಇದ್ದರೆ ನಾವು ಎಷ್ಟೇ ಓದಿದರೂ ವ್ಯರ್ಥವೇ ಸರಿ. ಹಾಗಾದಲ್ಲಿ ನಮ್ಮ ಓದು ಕರ್ಣನ ವಿದ್ಯೆಯಂತಾಗುತ್ತದೆ. ಕರ್ಣನಿಗೇನೋ ಕಷ್ಟದ ಸಂದರ್ಭದಲ್ಲಿ ಪರಶುರಾಮ ರು ಕಲಿಸಿದ ಯಾವುದೇ ವಿದ್ಯೆಗಳು ನೆನಪಾಗದಂತೆ ಶಾಪವಿತ್ತು ಎಂದು ಓದಿದ್ದೇವೆ. ಆದ್ದರಿಂದಲೇ ಕರ್ಣನು ಯುದ್ಧಭೂಮಿಯಲ್ಲಿ ಆತ ಕಲಿತ ಯಾವುದೇ ವಿದ್ಯೆಗಳು ನೆನಪಿಗೆ ಬಾರದೇ ಮರೆತುಹೋದವು.

ನಮಗೆ ಯಾರ ಶಾಪವೂ ಇಲ್ಲ ಅಲ್ಲವೇ...!??

ಅಂದಮೇಲೆ‌ ಓದಿರುವುದನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ ತಂತ್ರ ನಮಗಿರಬೇಕು ಅಷ್ಟೇ...!!!


💥💥💥💥💥💥💥💥💥💥💥💥💥💥💥💥💥💥💥💥💥💥


ಸ್ನೇಹಿತರೇ, ಯಾವುದೇ ಪರೀಕ್ಷೆಗಳಿಗೆ ಪಠ್ಯಕ್ರಮದ ಪ್ರಕಾರ ಓದಿದರೂ ಕಲಿತದ್ದು ಪೂರ್ಣವಾಗಿ ನೆನಪಿನಲ್ಲಿ ಉಳಿಯುತ್ತಿಲ್ಲ, ಪರೀಕ್ಷೆಗೆ ಪ್ರಮುಖವಾದ ಮಾಹಿತಿಗಳನ್ನೇ ಮರೆತುಬಿಟ್ಟಿರುತ್ತೇವೆ ಎಂದು ಅನೇಕ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಹೇಳಿರುವುದನ್ನು ನಾನು ಕೇಳಿದ್ದೇನೆ.

ಓದಿದ್ದೆಲ್ಲಾ ನೆನಪಿನಲ್ಲಿ ಉಳಿಯಬೇಕೆಂದರೆ ಅದಕ್ಕೆ ಮತ್ತೊಂದು ಶೈಲಿಯ ಅಧ್ಯಯನವನ್ನೇ ರೂಢಿಸಿಕೊಂಡು, ದಿನನಿತ್ಯ ಅದೇ ಕ್ರಮಗಳನ್ನು ಅನುಸರಿಸಿ ಅಧ್ಯಯನ ಮಾಡವುದನ್ನು ರೂಢಿಸಿಕೊಳ್ಳುವುದು ಉತ್ತಮ ಎನ್ನುವುದು ಹಲವು ತಜ್ಞರ ಅಭಿಪ್ರಾಯ. 

ಇಂತಹ ಸಲಹೆಗಳು ಒಂದು ರೀತಿ ಯುನಿವರ್ಸಲ್ ಫಾರ್ಮುಲಾಗಳಾಗಿದ್ದು, ಓದಿದ್ದನ್ನು ವೇಗವಾಗಿ ನೆನಪು ಮಾಡಿಕೊಳ್ಳಲು ಸಹಕಾರಿಯಾಗಿವೆ.


💥💥💥💥💥💥💥💥💥💥💥💥💥💥💥💥💥💥💥💥💥💥


ಓದಿರುವುದನ್ನು ಅತ್ಯಂತ ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ ಇಂತಹ ಸಾರ್ವಕಾಲಿಕ ಸೂತ್ರಗಳನ್ನು,  ವಿಧಾನಗಳನ್ನು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದವರು ಜರ್ಮನಿ ಮನೋಶಾಸ್ತ್ರಜ್ಞರಾದ Hermann Ebbinghaus ರವರು.

ಹರ್ಮನ್ ಎಬ್ಬಿಂಗ್ ಹಾಸ್ ರವರು ನೀಡಿದ ಆ ವಿಧಾನಗಳನ್ನು ಈ ಕೆಳಗೆ ನೀಡಲಾಗಿದ್ದು, ಆ ಸೂತ್ರ/ವಿಧಾನಗಳನ್ನು ಸ್ಪರ್ಧಾತ್ಮಕ ಪರೀಕ್ಷೆ, ಶೈಕ್ಷಣಿಕ ವಾರ್ಷಿಕ ಪರೀಕ್ಷೆಗಳನ್ನು ಬರೆಯುವ ಪ್ರತಿಯೊಬ್ಬ ಅಭ್ಯರ್ಥಿಗಳು ಬಳಸಿದ್ದೇ ಆದಲ್ಲಿ,



💥💥💥💥💥💥💥💥💥💥💥💥💥💥💥💥💥💥💥💥💥💥



ಸಾಮಾನ್ಯವಾಗಿ ಓದಿರುವ ಅಂಶಗಳು ನೆನಪಿನಲ್ಲಿ ಉಳಿಯುತ್ತಿಲ್ಲವೆಂದರೆ ಅದಕ್ಕೆ ಮರೆವು ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಾಮಾನ್ಯ ಸಂಗತಿಯಾಗಿದೆ.

ಹಾಗಾದರೆ ಮರೆವು ಎಂದರೇನು..!?? ಮರೆವಿಗೆ ಪ್ರಮುಖ ಕಾರಣಗಳೇನು ಎನ್ನುವ ಸಣ್ಣ ಸಂಗತಿಗಳನ್ನೊಮ್ಮೆ ಅರಿತುಕೊಂಡರೆ ಬಹುದೊಡ್ಡ ಸಮಸ್ಯೆಯೊಂದನ್ನು ಪರಿಹರಿಸಿದಂತೆಯೇ ಸರಿ ಅಲ್ಲವೇ..!!!

ಶೈಕ್ಷಣಿಕ ಪರಿಭಾಷೆಯಲ್ಲಿ ಮರೆವು ಎನ್ನುವುದು 'ಕಲಿತ ವಿಷಯವೊಂದನ್ನು ಸಂದರ್ಭಕ್ಕೆ ತಕ್ಕಂತೆ ನೆನಪಿಸಿಕೊಳ್ಳುವಲ್ಲಿ ಆಗುವ ವಿಫಲತೆಯೇ'  ಆಗಿದೆ. ಅಂದರೆ  ಈ ಹಿಂದೆ ಕಲಿತ ವಿಷಯವೊಂದನ್ನು ಅಗತ್ಯ ಬಂದಾಗ ನೆನಪಿಗೆ ತಂದುಕೊಳ್ಳುವಲ್ಲಿ ಎದುರಿಸುವ ಸಮಸ್ಯೆಯೇ ಮರೆವು ಎನ್ನಬಹುದು.



💥💥💥💥💥💥💥💥💥💥💥💥💥💥💥💥💥💥💥💥💥💥



ಇಂತಹ ಮರೆವಿಗೆ ಪ್ರಮುಖ ಕಾರಣಗಳೆಂದರೆ :-

⏩ ಮೆದುಳು ಅನಗತ್ಯ ಮಾಹಿತಿಗಳಿಂದ ಓವರ್‌ಲೋಡ್‌ ಆಗುವುದು.
⏩ ಇಲ್ಲ ಸಲ್ಲದ ವಿಚಾರಗಳು ತಲೆಯಲ್ಲಿ ತುಂಬಿಕೊಳ್ಳುವುದು‌.
⏩ ನಿರಂತರ ಚಟುವಟಿಕೆಗಳು
⏩ ವಿಶ್ರಾಂತಿ ಇಲ್ಲದ ಕೆಲಸಗಳು
⏩ ಓದುವ ವಿಷಯದಲ್ಲಿ ಆಸಕ್ತಿ ಇಲ್ಲದಿರುವುದು

ಇವುಗಳೆಲ್ಲವನ್ನು ಸೇರಿದಂತೆ ಇನ್ನೂ ಹಲವಾರು ಸಂಗತಿಗಳು ಮರೆವಿಗೆ ಕಾರಣವಾಗಿವೆ.



💥💥💥💥💥💥💥💥💥💥💥💥💥💥💥💥💥💥💥💥💥💥


ಇನ್ನೊಂದು ಮಹತ್ವದ ವಿಚಾರ ಏನೆಂದರೆ, ಮೆದುಳಿಗೆ ಬರುವ ಎಲ್ಲಾ ಹೊಸ ಮಾಹಿತಿಗಳು ಶಾರ್ಟ್‌ ಟರ್ಮ್‌ ಮೆಮೊರಿಯಲ್ಲಿ ಸ್ಟೋರ್ ಆಗುತ್ತವೆಯೇ ಹೊರತು, ದೀರ್ಘ ಮೆಮೊರಿಯಲ್ಲಲ್ಲ. ಓದಿದ, ತಿಳಿದ, ಕಲಿತ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಓದದೇ ಇದ್ದರೇ ಅಥವಾ ಬಳಸದಿದ್ದಲ್ಲಿ, ಮಾಹಿತಿಗಳು ಬಹುಬೇಗ ಮರೆತುಹೋಗುತ್ತವೆ.

ಅಂದರೆ ಕಲಿತ ವಿಷಯವೊಂದನ್ನು ಪದೇ ಪದೇ ಬಳಸದೇ ಇದ್ದರೆ ಅವುಗಳು ಸಹಜವಾಗಿಯೇ ಮರೆತು ಹೋಗುತ್ತವೆ. ಅದಕ್ಕೆಂದೇ ಇಂಗ್ಲೀಷ್‌ ನಲ್ಲಿ "Practice Makes Perfect" ಅನ್ನುವ ಮಾತೊಂದು ರೂಢಿಯಲ್ಲಿರುವುದು. ಹೆಚ್ಚು ಹೆಚ್ಚು ಬಳಸಿದಷ್ಟು ಕಲಿಕೆಯು ಗಟ್ಟಿಯಾಗುತ್ತ ಸಾಗುತ್ತದೆ.


💥💥💥💥💥💥💥💥💥💥💥💥💥💥💥💥💥💥💥💥💥💥


ಅದಕ್ಕೆಂದೆ ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ ಎಂದೇ ಖ್ಯಾತಿ ಪಡೆದ ಥಾರ್ನಡೈಕ್ ರವರು ತಮ್ಮ ಪ್ರಯತ್ನ ಪ್ರಮಾದ ಕಲಿಕೆಯಲ್ಲಿ "ಅಭ್ಯಾಸ ನಿಯಮ" ಎಂಬ ಹಂತವನ್ನು ಸೂಚಿಸಿದ್ದು. ಅಂದರೆ ಕಲಿತ ವಿಷಯವೊಂದನ್ನು ಅಭ್ಯಾಸ ಮಾಡದೇ ಹೋದಲ್ಲಿ ಆದ ಕಲಿಕೆಯು ನಿಷ್ಪ್ರಯೋಜಕವಾಗುತ್ತದೆ ಎಂದು ಅತ್ಯಂತ ಸ್ಪಷ್ಟವಾಗಿ ತಿಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಓದಿರುವುದನ್ನು ದೀರ್ಘಕಾಲ ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ...!?

ಓದಿದ್ದು ದೀರ್ಘಕಾಲ ನೆನಪಿನಲ್ಲಿರಬೇಕು ಎಂದರೆ ಲಾಂಗ್ ಟರ್ಮ್‌ ಮೆಮೊರಿಯಲ್ಲಿ ಶೇಖರಣೆ ಮಾಡಬೇಕು. ನೆನಪು ಮಾಡಿಕೊಳ್ಳಲು ಮೆದುಳಿಗೆ ಹೆಚ್ಚು ಕೆಲಸಕೊಡುವುದು ತುಂಬಾ ಕಷ್ಟದ ಕೆಲಸವೇನಲ್ಲ. ದೀರ್ಘಕಾಲ ವಿಷಯಗಳನ್ನು ಮರೆಯಬಾರದು ಎಂದರೆ, ಕೆಲವು ದಿನಗಳು ಮತ್ತು ಅಥವಾ ಒಂದು ವಾರಗಟ್ಟಲೇ ಅದೇ ಮಾಹಿತಿಗಳನ್ನು ನೆನಪು ಮಾಡಿಕೊಳ್ಳುವ ಮತ್ತು ಪುನಃ ಪುನಃ ಓದುವ ಚಟುವಟಿಕೆಗಳನ್ನು ಮಾಡಬೇಕು.



💥💥💥💥💥💥💥💥💥💥💥💥💥💥💥💥💥💥💥💥💥💥



♓ ಇತರೆ ಹಲವು ಮೆಮೊರೈಜಿಂಗ್ ಟಿಪ್ಸ್‌ಗಳು ಈ ಕೆಳಗಿನಂತಿವೆ ♓

🔶 ಓದಿಗೆ ಅರ್ಥವಿರಲಿ :

ಹೌದು, ಸುಮ್ಮನೆ ಓದುವ ಬದಲು ಓದಿದ್ದನ್ನು ಅರ್ಥಮಾಡಿಕೊಳ್ಳುತ್ತಾ ಓದಬೇಕು. ಅರ್ಥಮಾಡಿಕೊಂಡ ಮಾಹಿತಿಗಳು 9 ಪಟ್ಟು ವೇಗವಾಗಿ ನೆನಪಿಗೆ ಬರುತ್ತವೆ. ಹಾಗೆ ಅಗತ್ಯ ಮಾಹಿತಿಗಳನ್ನು ಮಾತ್ರ ಹೆಚ್ಚು ಓದಿ ಮತ್ತು ಕಲಿಯಿರಿ. ಯಾವುದಕ್ಕೆ ಎಷ್ಟು ಪ್ರಾಧಾನ್ಯತೆ ನೀಡಬೇಕೋ ಅಷ್ಟು ಮಾತ್ರ ನೀಡಿರಿ.

🔶 ಮಹತ್ವದ ಅಂಶಗಳನ್ನು ನೋಟ್ ಮಾಡಿ :

ಓದು ಯಾಂತ್ರಿಕವಾಗಿರದೇ ಅದು ತನ್ನದೇ ಮಹತ್ವದಿಂದ ಕೂಡಿರಬೇಕು. ಓದುವಾಗ ಯಾವ ಅಂಶವು ಮಹತ್ವದ್ದು ಎಂದು ನಿಮಗೆ ಅನ್ನಿಸುತ್ತದೆಯೋ ಅಂತಹ ಅತ್ಯಂತ ಮಹತ್ವದ ಅಂಶಗಳನ್ನು ಒಂದು ಪುಸ್ತಕದಲ್ಲಿ ನೋಟ್ ಮಾಡುವುದನ್ನು ಮರೆಯಬೇಡಿ.



💥💥💥💥💥💥💥💥💥💥💥💥💥💥💥💥💥💥💥💥💥💥



🔶 ಓದಿರುವುದನ್ನು ಪುನಃ ಸ್ಮರಿಸಿಕೊಳ್ಳಿ :

ಮೊದಲೇ ಹೇಳಿದಂತೆ ಯಾಂತ್ರಿಕ ಓದು ಬಹುಕಾಲ ಸ್ಮರಣೆಯಲ್ಲಿ ಉಳಿಯದು, ಆದ್ದರಿಂದ ಥಾರ್ನಡೈಕ್ ರವರ ಅಭ್ಯಾಸ ನಿಯಮದ ಪ್ರಕಾರ ಕಲಿತ ವಿಷಯವನ್ನು ಆಗಾಗ ಪುನ
 ಸ್ಮರಿಸಬೇಕು. ಅಂದಾಗ ಮಾತ್ರ ಓದಿರುವ ವಿಷಯಗಳು ನೆನಪಿನಲ್ಲಿ ಬರುತ್ತವೆ.

🔶 ಓದುವ ವಿಷಯಗಳೊಡನೆ ಸಹಸಂಬಂಧ ಇರಲಿ :

ಓದುವಾಗ ಒಂದು ಟಾಫಿಕ್‌ನಿಂದ ಮತ್ತೊಂದು ಟಾಫಿಕ್‌ಗೆ ಲಿಂಕ್‌ ಮಾಡಿ ಗಮನಿಸಿ. ಹೀಗೆ ಮಾಡುವುದರಿಂದ ವಿಷಯಗಳು ಬಹುಬೇಗ ನೆನಪಿಗೆ ಬರುತ್ತವೆ.

ಉದಾಹರಣೆಗೆ ಒಂದು ಸ್ಥಳವನ್ನು ತೆಗೆದುಕೊಂಡಾಗ, ಅದರ ಸುತ್ತಮುತ್ತಲ ಬಗ್ಗೆ ಯೋಚಿಸಿದರೆ, ಮತ್ತಷ್ಟು ಮಾಹಿತಿಗಳು ಸಿಗುತ್ತದೆ. ಹಾಗೆಯೇ ನೀವು ಓದಿದ ಮಾಹಿತಿಗೂ ಕೂಡ ಸಹಸಂಬಂಧ ಗುರುತಿಸಿ ಓದಿವುದರಿಂದ ವಿಷಯ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.



💥💥💥💥💥💥💥💥💥💥💥💥💥💥💥💥💥💥💥💥💥💥



🔶 ಓದಿ ವಿಷಯಕ್ಕೊಂದು ಕಥಾ ರೂಪ ಕೊಡಿ :

ಸ್ನೇಹಿತರೇ, ಓದುವ ವಿಷಯ ಹಾಗೂ ಮಾಹಿತಿಯೊಂದನ್ನು ನೀವು  ಕಾಲಾನುಕ್ರಮವಾಗಿ ನೆನಪು ಮಾಡಿಕೊಳ್ಳಬೇಕು ಎಂದಲ್ಲಿ, ಸಣ್ಣ ವಿಷಯಗಳನ್ನು ಒಂದು ಕಥೆಯನ್ನಾಗಿ ರೂಪಿಸಿ. ಹೀಗೆ ಮಾಡಿದಾಗ ವಿಷಯಗಳನ್ನು ನೆನಪು ಮಾಡಿಕೊಳ್ಳುವುದು ತುಂಬಾ ಸುಲಭ.

🔶 ಓದಿರುವುದನ್ನು ರೆಕಾರ್ಡ್ ಮಾಡಿಕೊಳ್ಳಿ :

ಇದು ತಾಂತ್ರಿಕ ಜಗತ್ತು, ಎಲ್ಲ ತಾಂತ್ರಿಕ ಸಾಧನಗಳನ್ನು ಬಳಸಿ ಇಂದು ನಮ್ಮ ಅಧ್ಯಯನವನ್ನು ಸುಲಭಗೊಳಿಸಬಹುದು. ಕಲಿಯುತ್ತಿರುವ ಮಾಹಿತಿಯನ್ನು ರೆಕಾರ್ಡ್‌ ಮಾಡಿ. ಸ್ವಲ್ಪ ಸಮಯಗಳ ಕಾಲ ಕೇಳಿರಿ. ಈ ವಿಧಾನವು ಬಹಳ ಜನರಿಗೆ ವರ್ಕ್ ಆಗುತ್ತದೆ. ಹಾಗೆ ಕಲಿಕೆ ವೇಳೆ ಉತ್ತಮ ಆಂಗಿಕ ಭಾಷೆ (Body Language) ಬಳಸಿ. ಇದರಿಂದ ಮೆಮೊರಿ ಪವರ್‌ ವೃದ್ಧಿಗೆ ಸಹಾಯವಾಗುತ್ತದೆ.



💥💥💥💥💥💥💥💥💥💥💥💥💥💥💥💥💥💥💥💥💥💥



🔶 ಅಧ್ಯಯನ ಸಾಮಗ್ರಿಯ ಆಯ್ಕೆ :

ಅಧ್ಯಯನ ಸಾಮಾಗ್ರಿ ಆಯ್ಕೆಯಲ್ಲಿ ಉತ್ತಮವಾದುದ್ದನ್ನು ಆರಿಸಿಕೊಳ್ಳಿ. ತೀರ ಹಳೆಯ ಪುಸ್ತಕಗಳು ಮತ್ತು ವಿಧಾನಗಳನ್ನು ಅನುಸರಿಸದಿರಿ. ತಲೆಯೊಳಗೆ ಹೋಗದ ವಿಧಾನದಲ್ಲಿ ಯಾವುದನ್ನೂ ಕಲಿಯಬಾರದು. ಸುಲಭವಾಗಿ ಅರ್ಥವಾಗುವ ವಿಧಾನದಲ್ಲಿ ಅಧ್ಯಯನ ನಡೆಸಿ. ಉತ್ತಮ ಪುಸ್ತಕಗಳು, ನೆನಪು ಮಾಡಿಕೊಳ್ಳಲು ಸರಳ ಮಾದರಿಯಲ್ಲಿ ನೀಡಲಾದ ಮೆಟೀರಿಯಲ್‌ಗಳನ್ನು ಆಯ್ಕೆ ಮಾಡಿಕೊಂಡು ಓದಿರಿ. ಇದರಿಂದ ಯಶಸ್ಸು ಶತಸಿದ್ಧ...!!!




Thanking You : Team Edutube Kannada
Copyright : Edutube Kannada

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads