🌺 ಬರೋಬ್ಬರಿ 400 ವರ್ಷಗಳ ಬಳಿಕ ಇಂದು ನಡೆಯಲಿದೆ ಈ ವಿಸ್ಮಯಕಾರಿ ಘಟನೆ 🌺
ಹೌದು ಸ್ನೇಹಿತರೇ,
ನಭೋಮಂಡಲದಲ್ಲಿಂದು ಒಂದು ವಿಶೇಷ ಘಟನೆ ನಡೆಯಲಿದೆ. ಇಂತಹ ಘಟನೆ ನಡೆದು 400 ವರ್ಷಗಳೇ ಕಳೆದುಹೋಗಿವೆ. 2020 ರಲ್ಲಿ ಆ ಘಟನೆಯು ಮತ್ತೊಮ್ಮೆ ನಡೆಯಲಿದ್ದು, ಈ ಘಟನೆಯನ್ನು ಕಣ್ತುಂಬ ನೋಡುವ ಅದೃಷ್ಟ ಮತ್ತು ಭಾಗ್ಯ ನಮ್ಮದಾಗಲಿದೆ. ಅದೇನು ಆ ಕೌತುಕದ ಘಟನೆ ಎನ್ನುವಿರಾ...!!!?? ಹಾಗಾದರೇ ನೀವು ಈ ಲೇಖನ ಪೂರ್ತಿ ಓದಲೇಬೇಕು...!!!!
🔯🔯🔯🔯🔯🔯🔯🔯🔯🔯🔯🔯🔯🔯🔯🔯
ಖಗೋಳವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನವೊಂದು ದಿನಾಂಕ : 21-12-2020 ರಂದು ಸೋಮವಾರ ಘಟಿಸಲಿದೆ. ಗುರು ಮತ್ತು ಶನಿಗ್ರಹಗಳು 400 ವರ್ಷಗಳ ನಂತರ ಇದೇ ಮೊದಲ ಬಾರಿ ಅತ್ಯಂತ ಸಮೀಪಕ್ಕೆ ಬರಲಿವೆ. ಇದನ್ನು ಖಗೋಳ ವಿಜ್ಞಾನಿಗಳು ‘ಮಹಾ ಸಂಯೋಗ’ ಎಂದು ಕರೆದಿದ್ದಾರೆ. ಇಂತಹ ವಿದ್ಯಮಾನ ಇನ್ನೊಮ್ಮೆ ಘಟಿಸುವುದು 60 ವರ್ಷಗಳ ನಂತರ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಹೇಳಿದೆ.
ಆತ್ಮೀಯರೇ, 2020 ರ ಡಿಸೆಂಬರ್, ಬಾಹ್ಯಾಕಾಶದ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದೆ. ಜೆಮಿನಿಡ್ಸ್ ಉಲ್ಕಾಪಾತ, ಸಂಪೂರ್ಣ ಸೂರ್ಯಗ್ರಹಣ… ಇದರ ಬೆನ್ನಲ್ಲೇ ದಿನಾಂಕ :21-12-2020 ಸೋಮವಾರದಂದು ಸೌರವ್ಯೂಹದ 2 ದೈತ್ಯ ಗ್ರಹಗಳಾದ ಗುರು ಮತ್ತು ಶನಿ ಅತೀ ಹತ್ತಿರದಲ್ಲಿ ಹಾದುಹೋಗಲಿವೆ! ಅರೇ ನಿಜಾನಾ..!?? ಹೌದು...!! ಖಗೋಳತಜ್ಞರು ಹೇಳಿದ್ದೇ ಇದನ್ನು...!!!
ನಿಮಗೆ ಗೊತ್ತೇ..!? ಡಿಸೆಂಬರ್ 13 ರಿಂದಲೇ ಈ ಎರಡೂ ಗ್ರಹಗಳು ಸಮೀಪಕ್ಕೆ ಬರುತ್ತಿವೆಯಂತೆ. ಪ್ರತಿದಿನ ಇವುಗಳ ನಡುವಿನ ಅಂತರ ಕಡಿಮೆಯಾಗಲಿದೆಯಂತೆ. ಡಿಸೆಂಬರ್ 21, ಅಂದರೆ ಸೋಮವಾರ ಎರಡೂ ಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿವೆ. ಮತ್ತು ಡಿಸೆಂಬರ್ 22 ರ ನಂತರ ದೂರವಾಗಲಿವೆ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
ಜಗತ್ತಿನಾದ್ಯಂತ ಆಸಕ್ತರು ಈ ವಿದ್ಯಮಾನವನ್ನು ಡಿಸೆಂಬರ್ 13 ರಿಂದಲೇ ವೀಕ್ಷಿಸುತ್ತಿದ್ದಾರೆ. ಶನಿಗ್ರಹವು ಮೇಲ್ಭಾಗದಲ್ಲಿ, ಗುರು ಗ್ರಹವು ಕೆಳಭಾಗದಲ್ಲಿ ಗೋಚರಿಸಿದೆ. ಸೋಮವಾರ ರಾತ್ರಿಯಿಂದ ಗುರು ಗ್ರಹವು ಮೇಲ್ಭಾಗದಲ್ಲಿ ಮತ್ತು ಶನಿಗ್ರಹವು ಕೆಳಭಾಗದಲ್ಲಿ ಗೋಚರಿಸಲಿದೆ.
ಗುರು- ಶನಿಯ “ಮಹಾ ಸಂಯೋಗ’ ಇದಾಗಿದ್ದು, ನಾಸಾ ಇದನ್ನು ಈ ವರ್ಷದ “ಕ್ರಿಸ್ಮಸ್ ಸ್ಟಾರ್’ ಗೆ ಹೋಲಿಸಿದೆ. ಖಗೋಳ ವಿಜ್ಞಾನದ ಈ ವಿಸ್ಮಯಕಾರಿ ವಿದ್ಯಮಾನ ಬರೋಬ್ಬರಿ 400 ವರ್ಷಗಳ ಅನಂತರ ಘಟಿಸುತ್ತಿದೆ.
ಹಾಗಾದರೆ ಈ ಘಟನೆ ಈ ಹಿಂದೆ ಯಾವಾಗ ನಡೆದಿತ್ತು..!!?
🔯🔯🔯🔯🔯🔯🔯🔯🔯🔯🔯🔯🔯🔯🔯🔯
ಈ ಎರಡೂ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ, ಪರಸ್ಪರ ಹಾದುಹೋಗಲಿವೆ. ಶನಿ ಮತ್ತು ಗುರು ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗಲಿವೆ. ಆದರೆ, ಈ ಬಾರಿ ಈ ಎರಡೂ ಗ್ರಹಗಳಿಗೆ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗಲಿದೆ. ಹೀಗಾಗಿ ಈ ವಿದ್ಯಮಾನ ಗೋಚರಿಸಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಸ್ನೇಹಿತರೇ ಖಗೋಳ ತಜ್ಞರು ಉಲ್ಲೇಖಿಸಿದಂತೆ ಇಂತಹ ವಿಸ್ಮಯಕಾರಿ ಘಟನೆ ನಭೋಮಂಡಲದಲ್ಲಿ ನಡೆದಿದ್ದು ಕ್ರಿ.ಶ 1623 ರಲ್ಲಿ.
1610 ರಲ್ಲಿ ಗೆಲಿಲಿಯೊ ಗೆಲಿಲಿ ಅವರು ತಮ್ಮ ದೂರದರ್ಶಕದ ಮೂಲಕ ಗುರುಗ್ರಹ ಮತ್ತು ಅದರ ನಾಲ್ಕು ಚಂದ್ರಗಳನ್ನು ಗುರುತಿಸಿದ್ದರು. 1623 ರಲ್ಲಿ ಮತ್ತೊಮ್ಮೆ ಗುರುಗ್ರಹವನ್ನು ವೀಕ್ಷಿಸುವಾಗ ಶನಿಗ್ರಹವು ಅತ್ಯಂತ ಸಮೀಪದಲ್ಲಿ ಗೋಚರಿಸಿತ್ತು. ಆನಂತರ ಇಲ್ಲಿಯವರೆಗೆ ಇಂತಹ ವಿದ್ಯಮಾನ ಘಟಿಸಿಲ್ಲ.
ನಿಮಗೆ ತಿಳಿದಿರಲಿ : ಗೆಲಿಲಿಯೋ ಗೆಲಿಲಿ ದೂರದರ್ಶಕದ ಮೂಲಕ ಆಕಾಶಕಾಯಗಳನ್ನು ಬರಿಗಣ್ಣಿನಿಂದ ನೋಡಿದ್ದರಿಂದಲೇ ತಮ್ಮ ಕಣ್ಣುಗಳನ್ನು ಕಳೆದುಕೊಂಡರು ಎಂದು ಹೇಳಲಾಗಿತ್ತದೆ.
ಮತ್ತೊಂದು ವಿಶೇಷ :
ಚಳಿಗಾಲ ಋತುವಿನ ಅತ್ಯಂತ ದೀರ್ಘ ದಿನ ಡಿಸೆಂಬರ್ 21 ರಂದೇ ಈ ಅಪರೂಪದ ವಿದ್ಯಮಾನ ಘಟಿಸುತ್ತಿರುವುದು ವಿಜ್ಞಾನಿಗಳ ಕುತೂಹಲ ನೂರ್ಮಡಿಗೊಳಿಸಿದೆ. ಈ ವರ್ಷ ಮಹಾ ಸಂಯೋಗ ವೀಕ್ಷಣೆ ತಪ್ಪಿಸಿಕೊಂಡರೆ, ಮತ್ತೆ ಇದರ ವೀಕ್ಷಣೆಗೆ 60 ವರ್ಷ ಕಾಯಬೇಕು ಎಂದು ಖಗೋಳತಜ್ಞರ ಅಭಿಮತ...
🔯🔯🔯🔯🔯🔯🔯🔯🔯🔯🔯🔯🔯🔯🔯🔯
ಹಾಗಾದರೆ ಗುರು ಮತ್ತು ಶನಿ ಗ್ರಹದ ವಿಶೇಷತೆಗಳೇನು...!? ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಗ್ರಹಗಳ ಕುರಿತು ಅತಿ ಹೆಚ್ಚು ಬಾರಿ ಬಂದಿರುವ ಪ್ರಶ್ನೆಗಳ ಆಧಾರದ ಮೇಲೆ ಅತ್ಯಂತ ಮಹತ್ವದ ಮಾಹಿತಿಯನ್ನು Edutube Kannada ಸಂಗ್ರಹಿಸಿ ನಿಮಗೆ ನೀಡುತ್ತಿದೆ.
🏵 ಸೌರವ್ಯೂಹದಲ್ಲಿನ ಗ್ರಹಗಳು :
ಬುಧ,
ಶುಕ್ರ,
ಭೂಮಿ,
ಮಂಗಳ,
ಗುರು,
ಶನಿ,
ಯುರೇನಸ್,
ನೆಪ್ಚೂನ್
ಪ್ಲೂಟೊ ಗ್ರಹವನ್ನು ಕ್ಷುದ್ರಗ್ರಹಗಳ ಸಮೂಹಕ್ಕೆ ಸೇರಿಸಿದ್ದರಿಂದ ಪ್ರಸ್ತುತ ಪ್ಲೂಟೋ ಕ್ಷುದ್ರಗ್ರಹವಾಗಿದೆ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
🏵 ಸೌರವ್ಯೂಹದ ಇತಿಹಾಸ 🏵
ಪ್ರಾಚೀನ ಕಾಲದಿಂದಲೂ ವಿದ್ವಾಂಸರು ಮತ್ತು ಸಾಮಾನ್ಯ ಜನರು ಈ ಜಗತ್ತಿನ ಕೇಂದ್ರ ಭೂಮಿಯೆಂದು ಭಾವಿಸಿದ್ದರು. 15 ನೇ ಶತಮಾನದಲ್ಲಿ ನಿಕೊಲಸ್ ಕೋಪರ್ನಿಕಸ್ ಸೂರ್ಯಕೇಂದ್ರಿತ ಗಣಿತ ಭವಿಷ್ಯಸೂಚಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲಿಗರಾಗಿದ್ದರು. 17 ನೇ ಶತಮಾನದಲ್ಲಿ ಗೆಲಿಲಿಯೋ ಗೆಲಿಲೈ, ಜೊಹಾನ್ಸ್ ಕೆಪ್ಲರ್, ಮತ್ತು ಐಸಾಕ್ ನ್ಯೂಟನ್'ರ ಭೂಮಿಯನ್ನು ಕುರಿತ ಭೌತಶಾಸ್ತ್ರ ತಿಳುವಳಿಕೆಯ ಅಭಿವೃದ್ಧಿಯು ಕ್ರಮೇಣ ಹೊಸ ಕಲ್ಪನೆಯನ್ನು ಜನರು ಒಪ್ಪಿಕೊಳ್ಳಲು ದಾರಿಮಾಡಿಕೊಟ್ಟಿತು.
"ಭೂಮಿಯು ಚಲಿಸುತ್ತದೆ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತವೆ", ಎಂದು ಎಲ್ಲರೂ ಒಪ್ಪುವಂತಾಯಿತು. ದೂರದರ್ಶಕದ ಆವಿಷ್ಕಾರ, ಮತ್ತಷ್ಟು ಗ್ರಹಗಳು ಮತ್ತು ಚಂದ್ರರ ಆವಿಷ್ಕಾರಕ್ಕೆ ದಾರಿಯಾಯಿತು. ದೂರದರ್ಶಕ ಮತ್ತು ಮಾನವರಹಿತ ಬಾಹ್ಯಾಕಾಶ ಉಪಗ್ರಹ ಬಳಕೆಗಳು ಭೂವೈಜ್ಞಾನಿಕ ವಿದ್ಯಮಾನಗಳಿಗೆ, ಸಂಶೋಧನೆಗಳಿಗೆ ಅವಕಾಶ ಮಾಡಿಕೊಟ್ಟಿತು. ಉದಾಹರಣೆಗೆ ಮೋಡಗಳು, ಧೂಳಿನ ಬಿರುಗಾಳಿಗಳು ಮತ್ತು ಇತರ ಗ್ರಹಗಳ ಮೇಲೆ ಪರ್ವತಗಳು, ಮಂಜುಗಡ್ಡೆ, ಕುಳಿಗಳು, ಕಾಲೋಚಿತ ಭೂಗರ್ಭದ ಪ್ರಕ್ರಿಯೆಗಳು ಇತ್ಯಾದಿ ಅಪರಿಮಿತ ಸಂಶೋಧನೆಗಳು ನೆಡೆದವು. ಇದರಲ್ಲಿ ಬಾಹ್ಯಾಕಾಶ ಶೋಧನೆಯು ಅಧ್ಬುತವಾದುದು. ಖಭೌತಶಾಸ್ತ್ರವು ಜಗತ್ತಿನ ಬಗೆಗೆ, ಸೂರ್ಯ,ಚಂದ್ರ, ನಕ್ಷತ್ರಗಳ ವಿಚಾರವಾಗಿ ಜನರಿಗೆ ಹಿಂದೆ ಇದ್ದ ಕಲ್ಪನೆಗಳನ್ನು ಹಿಂದೆ ಹಾಕಿ ಹೊಸ ವಿಚಾರಕ್ಕೆ ಅವಕಾಶಮಾಡಿಕೊಟ್ಟಿತು.
🌄 ಸೂರ್ಯ 🌄
ನಮ್ಮ ಸೌರ ಮಂಡಲದ ಹೃದಯ ಭಾಗವಾಗಿರುವ ಸೂರ್ಯನು 4.5 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಆಕಾಶಗಂಗೆಯ "ಒರಿಯನ್ ಸ್ಪರ್" ಎನ್ನುವ ಭಾಗದಲ್ಲಿ ಸೃಷ್ಟಿಯಾದನು. ಬಲವಾದ ಗುರುತ್ವಾಕರ್ಷಣೆ ಹಾಗು ಕಾಂತೀಯ ಕ್ಷೇತ್ರ ಹೊಂದಿರುವ ಸೂರ್ಯನನ್ನು 6 ಪದರಗಳಾಗಿ ವಿಂಗಡಿಸಿ ಅಧ್ಯಯನ ಮಾಡಲಾಗಿದೆ. ಆ ಆರು ಪದರಗಳು ಈ ರೀತಿ ಇದೆ "ಕೊರೋನ, ಕ್ರೋಮೋಸ್ಪಿಯರ್, ಫೋಟೋಸ್ಫಿಯರ್, ಕನ್ವೆಕ್ಟಿವ್ ಜೋನ್, ರೇಡಿಯೆಟಿವ್ ಜೋನ್ ಹಾಗು ಕೋರ್". ಶೇಕಡ 91 ರಷ್ಟು ಹೈಡ್ರೋಜೆನ್, 8.9 ರಷ್ಟು ಹೀಲಿಯಂ ಹಾಗು ಶೇಖಡ 0.1 ರಷ್ಟು ಇಂಗಾಲ ಮತ್ತು ನೈಟ್ರೋಜನ್ ಅನಿಲಗಳಿಂದ ತುಂಬಿರುವ ಸೂರ್ಯನು ಸುಡುವ ಬೆಂಕಿಯ ಉಂಡೆಯಾಗಿದ್ದಾನೆ.
ಬರೋಬ್ಬರಿ ಒಂದುಕೋಟಿ ಹದಿನೈದು ಲಕ್ಷ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿರುವ ಸೂರ್ಯನ ಕೋರ್ ಭಾಗದಲ್ಲಿ ಹೈಡ್ರೋಜನ್ ಅಣುಗಳು ಜೊತೆಗೂಡಿ ಹೀಲಿಯಮ್ ಅನಿಲವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ವಿಕಿರಣ, ವಿದ್ಯುತ್ ಹಾಗು ಸೋಲಾರ್ ಗಾಳಿ ಉತ್ಪತ್ತಿಯಾಗಿ ಭೂಮಿಯ ಮೇಲೆ ಹೊಸ ಜೀವಿ ಸೃಷ್ಟಿಯಾಗಲು ಕಾರಣವಾಗುತ್ತಿದೆ. ಸೂರ್ಯನು ಅದೆಷ್ಟು ದೊಡ್ಡ ನಕ್ಷತ್ರವೆಂದರೆ ಭೂಮಿಯ ಹಾಗೆ ಇರುವ ಇನ್ನೂ 13 ಲಕ್ಷ ಭೂಮಿಗಳನ್ನು ಅದರ ಒಳಗೆ ಹಿಡಿಸಬಹುದಾಗಿದೆ.
ಇಷ್ಟೊಂದು ದೊಡ್ಡ ಗಾತ್ರದಲ್ಲಿರುವ ಸೂರ್ಯನ ಗುರುತ್ವಾಕರ್ಷಣೆ ನಮ್ಮ ಸೌರ ಮಂಡಲದಲ್ಲಿರುವ ಎಲ್ಲಾ ಗ್ರಹಗಳನ್ನು ನಿರ್ಧಿಷ್ಟ ಜಾಗದಲ್ಲಿ ಇರುವ ಹಾಗೆ ನೋಡಿಕೊಳ್ಳುತ್ತಿದೆ. ಅಕಸ್ಮಾತ್ ಸೂರ್ಯನು ಇಲ್ಲವಾದಲ್ಲಿ ನಮ್ಮ ಸೌರ ಮಂಡಲದ ಎಲ್ಲಾ ಗ್ರಹ ನಕ್ಷತ್ರಗಳು ಗುರುತ್ವಾಕರ್ಷಣೆ ಕಳೆದುಕೊಂಡು ಚಿಲ್ಲಾ ಪಿಲ್ಲಿಯಾಗಿ ಎಲ್ಲೆಡೆ ಬೀಳುತ್ತವೆ. ಇದೇ ಕಾರಣಕ್ಕೆ ಸೂರ್ಯನು ನಮ್ಮ ಸೌರಮಂಡಲದ ಹೃದಯ ಎಂದು ಕರೆದಿರುವುದು.
🔥 ನೆನಪಿನಲ್ಲಿಡಬೇಕಾದ ಅಂಶಗಳು 🔥
🔮 ಸೂರ್ಯನು ಸೌರವ್ಯವಸ್ಥೆಯ ಅತ್ಯಂತ ದೊಡ್ಡ ಸದಸ್ಯ.
🔮 ಸೌರವ್ಯೂಹದ ಎಲ್ಲಾ ಗ್ರಹಗಳೂ ಇವನ ಸುತ್ತ ಪ್ರದಕ್ಷಿಣೆ ಹಾಕುತ್ತವೆ.
🔮 ಸೂರ್ಯ ತನ್ನ ಅಕ್ಷದ ಸುತ್ತ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿದ್ದಾನೆ.
🔮 ಸಂಪೂರ್ಣ ಸೌರವ್ಯವಸ್ಥೆಯ ಶಾಖ ಮತ್ತು ಬೆಳಕಿಗೆ ಸೂರ್ಯನೇ ಏಕೈಕ ಆಧಾರ.
🔮 ಸೂರ್ಯನ ಕಿರಣವು ಭೂಮಿಯನ್ನು ತಲುಪಲು 8 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
🔶 ಚಂದ್ರ 🔶
◾ ಭೂಮಿಗಿರುವ ಏಕೈಕ ನೈಸರ್ಗಿಕ ಉಪಗ್ರಹ ಎಂದರೆ ಚಂದ್ರ.
◾ ಇದು ಸೌರವ್ಯೂಹದ ಮೊದಲ ಉಪಗ್ರಹವಾಗಿದೆ.
◾ ಚಂದ್ರನು ಭೂಮಿಯ ಸುತ್ತ ಒಂದು ಪ್ರದಕ್ಷಿಣೆ ಹಾಕಲು 27 ದಿನ, 7 ಘಂಟೆ ,43 ನಿಮಿಷ ಹಾಗೂ 11.47 ಸೆಕೆಂಡುಗಳ ಕಾಲವನ್ನು ತೆಗೆದುಕೊಳ್ಳತ್ತಾನೆ.
🌍 ಗ್ರಹಗಳು 🌍
🔸 ಸೂರ್ಯನ ಸುತ್ತ ಸುತ್ತುತ್ತಿರುವ ಆಕಾಶಕಾಯಗಳನ್ನೇ 'ಗ್ರಹಗಳು' ಎಂದು ಹೆಸರಿಸಲಾಗಿದೆ.
🔸 ಮೊದಲು 9 ಗ್ರಹಗಳನ್ನು ಗುರುತಿಸಲಾಗಿತ್ತು. ಆದರೆ 2006 ರಲ್ಲಿ ನಡೆದ ವಿಶ್ವ ಖಗೋಳಶಾಸ್ತ್ರಜ್ಞರ ಸಮ್ಮೇಳನದಲ್ಲಿ 9 ನೇ ಗ್ರಹವಾದ "ಪ್ಲೂಟೋ"ವು ಗ್ರಹ ಎನಿಸಿಕೊಳ್ಳಬಹುದಾದ ಕೆಲ ಲಕ್ಷಣಗಳನ್ನು ಹೊಂದಿಲ್ಲವಾದ್ದರಿಂದ ಅದನ್ನು ಗ್ರಹ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು. ಹಾಗಾಗಿ ಈಗ ಸೌರವ್ಯೂಹದಲ್ಲಿ 8 ಗ್ರಹಗಳಿವೆ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
🔳 ಸೌರವ್ಯೂಹದ 8 ಗ್ರಹಗಳು ಮತ್ತು ಅವುಗಳ ವಿಶೇಷತೆ 🔳
1.ಬುಧ :
ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತ್ಯಂತ ಚಿಕ್ಕ ಗ್ರಹ. ಸೂರ್ಯನಿಂದ 36 ಮಿಲಿಯನ್ ಮೈಲಿಗಳಷ್ಟು ದೂರದಲ್ಲಿರುವ ಈ ಗ್ರಹದ ಉಷ್ಣಾಂಶವು ಬೆಳಗಿನ ವೇಳೆಯಲ್ಲಿ 427 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ಸಮಯದಲ್ಲಿ -273 ಡಿಗ್ರಿ ಸೆಲ್ಸಿಯಸ್ ಆಗುತ್ತದೆ. 4880 ಕಿಲೋಮೀಟರ್ ಸುತ್ತಳತೆ ಹೊಂದಿರುವ ಈ ಗ್ರಹವನ್ನು "ಕೋರ್, ಮ್ಯಾನ್ಟಲ್ ಹಾಗು ಕ್ರಸ್ಟ್" ಎನ್ನುವ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಗ್ರಹದ ಇನ್ನೊಂದು ವಿಶೇಷತೆ ಏನೆಂದರೆ ಸೂರ್ಯನ ಸುತ್ತ ಸುತ್ತಲು ಕೇವಲ 88 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಪ್ರತಿ 88 ದಿನಕ್ಕೊಮ್ಮೆ ಇಲ್ಲಿ ಹೊಸ ವರ್ಷ ಬರುತ್ತದೆ.
🔳 ನೆನಪಿನಲ್ಲಿಡಬೇಕಾದ ಅಂಶಗಳು 🔳
🔵 ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಹಾಗೂ ಸೌರವ್ಯವಸ್ಥೆಯ ಅತ್ಯಂತ ಸಣ್ಣ ಗ್ರಹವಾಗಿದೆ.
🔵 ಬುಧಗ್ರಹಕ್ಕೆ ಬೇರಾವ ಉಪಗ್ರಹಗಳು ಇಲ್ಲ.
🔵 ಇದು ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು 88 ದಿನಗಳನ್ನು ತೆಗೆದುಕೊಳ್ಳುತ್ತದೆ.
🔵 ಬುಧ ಗ್ರಹದ ಭ್ರಮಣಾ ಅವಧಿ 176 ದಿನಗಳು ಅಂದರೆ ಬುಧ ಗ್ರಹವು ತನ್ನ ಅಕ್ಷದ ಮೇಲೆ ಒಂದು ಸುತ್ತು ಬರಲು 176 ದಿನಗಳನ್ನು ತೆಗೆದುಕೊಳ್ಳುತ್ತದೆ.
🔵 ಬುಧ ಗ್ರಹದ ಮೆಲೆ ಯಾವುದೇ ಜೀವಿಗಳಲ್ಲಿ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
2. ಶುಕ್ರ
ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹ. ಮರ್ಕುರಿ ಗ್ರಹದ ನಂತರ ಇರುವ ಈ ಗ್ರಹದಲ್ಲಿ ಅನೇಕ ಜ್ವಾಲಾಮುಖಿ ಪರ್ವತಗಳಿದ್ದು ಭೂಮಿಯ ಸುತ್ತಳತೆಯನ್ನೇ ಈ ಗ್ರಹವೂ ಕೂಡ ಹೊಂದಿದೆ. ಭೂಮಿಗೆ ಹಾಗು ಶುಕ್ರ ಗ್ರಹಕ್ಕೆ ಇರುವ ಒಂದೇ ಒಂದು ವ್ಯತ್ಯಾಸವೆಂದರೆ ಈ ಗ್ರಹದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಿದ್ದು ಇದರಿಂದ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ. ಇದರಿಂದಲೇ ಈ ಗ್ರಹದ ಉಷ್ಣಾಂಶ ಬರೋಬ್ಬರಿ 471 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ನಮ್ಮ ಸೌರ ಮಂಡಲದಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವ ಗ್ರಹವಿದು. ಈ ಗ್ರಹದ ಮೇಲೆ "ಮ್ಯಾಕ್ಸ್ವೆಲ್ ಮೊಂಟಾಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಅದರ ಎತ್ತರ ಮೌಂಟ್ ಎವರೆಸ್ಟ್ ನಷ್ಟು ಇದೆ. ಈ ಗ್ರಹದ ಮೇಲೆ ಸಲ್ಪ್ಹುರಿಕ್ ಆಸಿಡ್ ಮಳೆ ಆಗುವುದಲ್ಲದೆ ಘಂಟೆಗೆ 224 ಮೈಲಿಗಳಷ್ಟು ವೇಘದಲ್ಲಿ ಬೀಸುವ ಬಿರುಗಾಳಿಗಳು ಈ ಗ್ರಹದ ತುಂಬೆಲ್ಲ ಇದೆ. ವಿಜ್ಞ್ಯಾನಿಗಳ ಪ್ರಕಾರ 2.9 ಬಿಲಿಯನ್ ವರ್ಷಗಳ ಹಿಂದೆ ಈ ಗ್ರಹದ ಮೇಲೆ ಭೂಮಿಯ ಮೇಲೆ ಇರುವ ವಾತಾವರಣ ಇತ್ತಂತೆ. ಅಂದರೆ ಈ ಗ್ರಹದ ಮೇಲೆ ಕೂಡ ಜೀವಿಗಳು ಜೀವಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ಗ್ರಹವನ್ನು ಅಧ್ಯಯನ ಮಾಡಲೆಂದು ಕಳುಹಿಸಿದ ಸ್ಯಾಟಲೈಟ್ಗಳು ಅಲ್ಲಿಯ ವಾತಾವರಣಕ್ಕೆ ಸಿಕ್ಕು ಸುಟ್ಟು ಬಸ್ಮವಾಗಿರುವುದು ಒಂದು ದುರಂತದ ಸಂಗತಿ.
🔳 ನೆನಪಿನಲ್ಲಿಡಬೇಕಾದ ಅಂಶಗಳು 🔳
🔵 ಶುಕ್ರಗ್ರಹವು ಸೌರವ್ಯೂಹದ ಅತ್ಯಂತ ಹೊಳೆಯುವ ಗ್ರಹವಾಗಿದ್ದು, ರಾತ್ರಿ ಆಕಾಶದಲ್ಲಿ ಚಂದ್ರನನ್ನು ಬಿಟ್ಟರೆ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಕಾಯವೆಂದರೆ ಶುಕ್ರಗ್ರಹ.
🔵 ಗ್ರೀಕರ ಸೌಂದರ್ಯ ದೇವತೆಯಾದ "ವೀನಸ್" ಳ ಹೆಸರನ್ನು ಈ ಗ್ರಹಕ್ಕೆ ಇಡಲಾಗಿದೆ.
🔵 ಇದು ಭೂಮಿಗೆ ಅತ್ಯಂತ ಸಮೀಪದಲ್ಲಿರು ಗ್ರಹವಾಗಿದೆ.
🔵 ಶುಕ್ರಗ್ರಹದ ಮೇಲೆ ಇಂಗಾಲದ ಡೈ ಆಕ್ಸೈಡ್‍ನಿಂದ ಕೂಡಿರುವ ವಾತಾವರಣದ ದಟ್ಟ ಹೊದಿಕೆ ಇದೆ. ಇದರಿಂದ ಇದರ ತಾಪ 400 ಡಿಗ್ರಿ ಸೆಲ್ಸಿಯಸ್‍ಗಿಂತ ಅಧಿಕವಾಗಿದೆ. ಆದ್ದರಿಂದ ಇದು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ.
🔵 ಇದು ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು(ಪರಿಭ್ರಮಣಾ) 224 ದಿನಗಳನ್ನು ತೆಗೆದುಕೊಳ್ಳುತ್ತದೆ.
🔵 ಇದರ ಭ್ರಮಣೆಯ ಅವಧಿ 243 ದಿನಗಳು.
🔵 ಶುಕ್ರ ಗ್ರಹಕ್ಕೆ ಯಾವುದೇ ಉಪಗ್ರಹಗಳಿಲ್ಲ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
3. ಭೂಮಿ
ಭೂಮಿಯು (ಸೂರ್ಯನಿಂದ ಇರುವ ದೂರವನ್ನು 1 ಖಗೋಳ ಮಾನ ಎನ್ನುವರು = ಸೂರ್ಯನಿಂದ 15ಕೋಟಿ ಕಿ.ಮೀ.(ಒಂದು ಖಗೋಲಮಾನ ದೂರ) ದೂರದಲ್ಲಿದೆ. ನಿಖರ ಸರಾಸರಿ ದೂರ 149,598,023 ಕಿಮೀ.(92,955,902 ಮೈಲಿ: ಭೂಮಿಯ ಉಪಸೌರ ಮತ್ತು ಅಪರವಿ ನಡುವಿನ ವ್ಯತ್ಯಾಸ 50 ಲಕ್ಷ ಕಿ.ಮೀ. ಇದು ಭೂಮಿ ಸೂರ್ಯನನ್ನು ಸುತ್ತುವಾಗ ಹತ್ತಿರದ ಮತ್ತು ದೂರದ ಬಿಂದುಗಳ ವ್ಯತ್ಯಾಸ. ಭೂಮಿಯ ದ್ರವ್ಯರಾಶಿಯು ಸುಮಾರು 5.98×1024 ಕಿ.ಗ್ರಾಮ್.ಗಳಷ್ಟಿದೆ.
ಪರಿಭ್ರಮಣ ಕಕ್ಷೆ ಅಂಡಾಕಾರವಾಗಿದೆ). ಸರಾಸರಿ ತ್ರಿಜ್ಯ 6,372.797 ಕಿ.ಮೀ. ಒಳ ನೈಸರ್ಗಿಕ ಗ್ರಹಗಳಲ್ಲಿ ಇದು ದೊಡ್ಡದು ಮತ್ತು ಹೆಚ್ಚಿನ ಸಾಂದ್ರತೆ (ದಟ್ಟಣೆ)ಯದು. ಪ್ರಸ್ತುತ ತಿಳಿದಂತೆ ಭೂವೈಜ್ಞಾನಿಕ ಚಟುವಟಿಕೆಯುಳ್ಳ ಮತ್ತು ಜೀವ ಜಾಲ ಅಸ್ತಿತ್ವದಲ್ಲಿರುವ ಒಂದೇ ಗ್ರಹ. ಭೂಮಿಯ ಜಲಗೋಳ ಗ್ರಹಗಳಲ್ಲಿ ವಿಶಿಷ್ಟವಾಗಿದೆ ಮತ್ತು ಇತರ ಗ್ರಹಗಳಲ್ಲಿ ಕಾಣದ ವಿಶಿಷ್ಟ ಗಮನಾರ್ಹವಾದ ಶಿಲಾಪದರ ರಚನೆಗಳನ್ನು ಹೊಂದಿರುವ ಏಕೈಕ ಗ್ರಹ. ಭೂಮಿಯ ವಾತಾವರಣದಲ್ಲಿ ಜೀವಿಗಳ ಅಸ್ತಿತ್ವಕ್ಕೆ ಬೇಕಾದ 21% ಆಮ್ಲಜನಕ ಹೊಂದಿರುವ ವಾತಾವರಣವಿದ್ದು ಇತರ ಗ್ರಹಗಳ ವಾತಾವರಣಕ್ಕೆ ಸಂಪೂರ್ಣವಾಗಿ ಭಿನ್ನವಾಗಿದೆ.
🔳 ನೆನಪಿನಲ್ಲಿಡಬೇಕಾದ ಅಂಶಗಳು 🔳
🔺 ಜೀವಿಗಳಿರುವ ಏಕೈಕ ಗ್ರಹ ಭೂಮಿ.
🔺 ಇದನ್ನು ನೀಲಿ ಗ್ರಹವೆಂದು ಕರೆಯುತ್ತಾರೆ. ಏಕೆಂದರೆ ಇದರ 70 ಶೇಕಡಾ ಭಾಗ ನೀರಿನಿಂದ ಆವೃತ್ತವಾಗಿದೆ. ಇದನ್ನು ಮೇಲಿನಿಂದ ನೋಡಿದಾಗ ನೀಲಿಬಣ್ಣದಲ್ಲಿ ಗೋಚರವಾಗುತ್ತದೆ.
🔺 ಭೂಮಿಯ ಪರಿಭ್ರಮಣೆಯ ಅವಧಿ 365 ದಿನ 6 ಗಂಟೆ 9 ನಿಮಿಷ 9.54 ಸೆಕೆಂಡ್‍ಗಳು.
🔺 ಭೂಮಿಯ ಭ್ರಮಣೆಯ ಅವಧಿ 23 ಗಂಟೆ 56 ನಿಮಿಷ 4.09 ಸೆಕೆಂಡ್‍ಗಳು.
🔺 ಭೂಮಿಯ ಏಕೈಕ ಉಪಗ್ರಹ "ಚಂದ್ರ".
🔯🔯🔯🔯🔯🔯🔯🔯🔯🔯🔯🔯🔯🔯🔯🔯
4. ಮಂಗಳ :
ನಮ್ಮ ಸೌರ ಮಂಡಲದ ಎರಡನೆಯ ಚಿಕ್ಕ ಗ್ರಹವಾಗಿರುವ ಮಂಗಳ ಗ್ರಹದ ಮೇಲೆ 3.5 ಬಿಲಿಯನ್ ವರ್ಷಗಳ ಹಿಂದೆ ಜೀವಿಗಳು ಇದ್ದವೆಂದು ತಿಳಿದುಬಂದಿದೆ. ಸೂರ್ಯನಿಂದ 227.9 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಗ್ರಹವು ಇಂದು ಯಾವುದೇ ಜೀವಿಗಳಿಗೆ ಆಶ್ರಯ ನೀಡುತ್ತಿಲ್ಲ. ಆದರೆ ಈ ಗ್ರಹದ ಮೇಲೆ ಬೃಹತ್ ಮಂಜು ಗಡ್ಡೆಗಳು ಇದ್ದು ಅದನ್ನು ಕರಗಿಸುವುದರಿಂದ ಸಾಕಷ್ಟು ಪ್ರಮಾಣದ ನೀರು ಪಡೆಯಬಹುದಾಗಿದೆ. ಈ ಗ್ರಹದ ಮೇಲೆ "ಒಲಂಪಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಸಂಪೂರ್ಣ ಸೌರ ಮಂಡಲದಲ್ಲಿಯೇ ಅತ್ಯಂತ ದೊಡ್ಡ ಪರ್ವತ ಇದಾಗಿದೆ. ಸೂರ್ಯನ ಸುತ್ತ ಸುತ್ತಲು 687 ದಿನಗಳನ್ನು ತೆಗೆದುಕೊಳ್ಳುವ ಈ ಗ್ರಹದ ಮೇಲೆ ಶೇಕಡ 95 ರಷ್ಟು ಇಂಗಾಲದ ಡೈ ಆಕ್ಸೈಡ್ ಹಾಗು ಶೇಕಡ 5 ರಷ್ಟು ನೈಟ್ರೋಜೆನ್ ಇದೆ. ಆಗಾಗ್ಗೆ ಬೀಸುವ ದೊಡ್ಡ ದೊಡ್ಡ ಬಿರುಗಾಳಿಯು ಈ ಗ್ರಹದ ವಾತಾವರಣದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.
🔳 ನೆನಪಿನಲ್ಲಿಡಬೇಕಾದ ಅಂಶಗಳು 🔳
🔻 ಬರಿಗಣ್ಣಿಗೆ ಕಾಣುವ ಕೆಂಪು ಬಣ್ಣದ ಗ್ರಹ ಮಂಗಳ.
🔻 ಮಂಗಳಗ್ರಹವನ್ನು ಅಂಗಾರಕ, ಕುಜ, ಕೆಂಪುಗ್ರಹ ಎಂದು ಕರೆಯುತ್ತಾರೆ.
🔻 ಮಂಗಳಗ್ರಹದ ವಾತಾವರಣದಲ್ಲಿ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ್ ಮುಖ್ಯವಾಗಿದೆ.
🔻 ತನ್ನ ಸುತ್ತ ತಾನು ತಿರುಗುವ ಅಕ್ಷವು ಪರಿಭ್ರಮಣಾ ಪಥದಿಂದ 24 ಡಿಗ್ರಿ ಕೊನದಲ್ಲಿ ವಾಲಿದೆ. ಹೀಗಾಗಿ ಅದು ಭೂಮಿಯಲ್ಲಿ ಇರುವ ಹಾಗೇಯೇ ಋತುಗಳನ್ನು ಹೊಂದಿದೆ.
🔻 ಮಂಗಳದ ಧ್ರುವಗಳಲ್ಲಿನ ಹಿಮದ ಹೊದಿಕೆಗಳು ಅದರ ಅತ್ಯಂತ ಪ್ರಮುಖ ಲಕ್ಷಣಗಳು. ಇವುಗಳ ಆಕಾರ ಮತ್ತು ಚಹರೆಗಳು ಋತುಮಾನಗಳೊಂದಿಗೆ ಬದಲಾಗುವುದು ಕಂಡುಬಂದಿದೆ.
🔻 ಮಂಗಳ ಗ್ರಹವು ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು 687 ದಿನಗಳನ್ನು ತೆಗೆದುಕೊಳ್ಳುತ್ತದೆ.
🔻 ಮಂಗಳನ ಭ್ರಮಣಾ ಅವಧಿ 24 ಗಂಟೆ, 37 ನಿಮಿಷ 23 ಸೆಕೆಂಡ್‍ಗಳು.
🔻 ಮಂಗಳ ಗ್ರಹಕ್ಕೆ 2 ಉಪಗ್ರಹಗಳಿವೆ. "ಪೋಬೋಸ್" ಮತ್ತು "ಡೈಮೋಸ್".
🔯🔯🔯🔯🔯🔯🔯🔯🔯🔯🔯🔯🔯🔯🔯🔯
5. ಗುರು :
ನಮ್ಮ ಸೌರ ಮಂಡಲದಲ್ಲಿ ಸೃಷ್ಟಿಯಾದ ಮೊಟ್ಟಮೊದಲ ಗ್ರಹವೆಂದರೆ ಗುರು ಗ್ರಹ. ಈ ಗ್ರಹವು ಅದೆಷ್ಟು ದೊಡ್ಡದಾಗಿದೆ ಎಂದರೆ 1300 ಭೂಮಿಗಳು ಸೇರಿದರೆ ಒಂದು ಗುರು ಗ್ರಹಕ್ಕೆ ಸಮನಾಗಿದೆ. ಸೂರ್ಯನಿಂದ ಬರೋಬ್ಬರಿ 778.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಗ್ರಹವು ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೈಡ್ರೋಜನ್, ಹೀಲಿಯಮ್, ಮೀಥೇನ್, ಅಮೋನಿಯಾ ದಂತಹ ಅನಿಲಗಳಿಂದ ತುಂಬಿರುವ ಈ ಗ್ರಹವು ಸ್ವಲ್ಪ ಪ್ರಮಾಣದ ನೀರನ್ನೂ ಹೊಂದಿದೆ. ಇನ್ನೊಂದು ಅಚ್ಚರಿ ಸಂಗತಿಯೆಂದರೆ ಈ ಗ್ರಹದ ಮೇಲೆ ನಮ್ಮ ಭೂಮಿಯ ಹಾಗೆ ಘನ ರೂಪದ ಪದರವಿಲ್ಲ. ಸಂಪೂರ್ಣ ಗ್ರಹವೇ ಅನಿಲದಿಂದ ಮಾಡಲ್ಪಟ್ಟಿದೆ. ಹೇಗೆ ಭೂಮಿಯು ಒಂದು ಚಂದ್ರನನ್ನು ಹೊಂದಿದೆ ಹಾಗೆಯೇ ಈ ಗ್ರಹವು ಬರೋಬ್ಬರಿ 67 ಚಂದ್ರನನ್ನು ಹೊಂದಿದೆ.
🔲 ನೆನಪಿನಲ್ಲಿಡಬೇಕಾದ ಅಂಶಗಳು 🔲
🔻 ಗುರು ಗ್ರಹ ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹವಾಗಿದೆ.
🔻 ಇದೊಂದು ದೈತ್ಯಾಕಾರದ ಅನಿಲಗ್ರಹವಾಗಿದೆ.
🔻 ಸೌರವ್ಯೂಹದಲ್ಲಿರುವ ಒಟ್ಟು ದ್ರವ್ಯದ 2/3 ಅಂಶ ಗುರು ಗ್ರಹದಲ್ಲಿದೆ. ಇಷ್ಟೊಂದು ದ್ರವ್ಯರಾಶಿ ಮತ್ತು ಗಾತ್ರ ಇದ್ದರೂ ಇದು ಗ್ರಹಗಳಲ್ಲೆ ಅತ್ಯಂತ ವೇಗವಾಗಿ ಪರಿಭ್ರಮಿಸುವ ಗ್ರಹ.
🔻 ಇದರ ದಕ್ಷಿಣ ಗೋಳಾರ್ಧದಲ್ಲಿ ಸಮಭಾಜಕವೃತ್ತದ ಸಮೀಪದಲ್ಲಿರುವ 'ದೊಡ್ಡ ಕೆಂಪು ಮಚ್ಚೆ' ಯು ಗುರುವಿನ ಅತ್ಯಂತ ಪ್ರಮುಖ ಮೇಲ್ಮೈ ಲಕ್ಷಣ.
🔻 ಗುರುಗ್ರಹವು ಉಂಗುರವ್ಯವಸ್ಥೆಯನ್ನು ಹೊಂದಿದೆ.
🔻 ಮಹಾನ್ ವಿಜ್ಞಾನಿ ಗೆಲಿಲಿಯೋ ಗೆಲಿಲಿ ಗುರುಗ್ರಹದ ನಾಲ್ಕು ಉಪಗ್ರಹಗಳನ್ನು ಮೊತ್ತಮೊದಲ ಬಾರಿಗೆ ದೂರದರ್ಶಕದ ಮೂಲಕ ಕಂಡುಹಿಡಿದನು. ಇವುಗಳನ್ನು "ಗೆಲಿಲಿಯನ್" ಉಪಗ್ರಹಗಳು ಎನ್ನುವರು.
🔻 ಈ ನಾಲ್ಕು ಉಪಗ್ರಹಗಳೆಮದರೆ- ಐಯೋ, ಯುರೋಪ, ಗ್ಯಾನಿಮೇಡ್ ಮತ್ತು ಕ್ಯಾಲಿಸ್ಟೋ.
🔻 ಗ್ಯಾನಿಮೆಡ್ ಉಪಗ್ರಹವು ಸೌರವ್ಯೂಹದ ಅತ್ಯಂತ ದೊಡ್ಡ ಉಪಗ್ರಹವಾಗಿದೆ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
6. ಶನಿ :
ಈ ಗ್ರಹವು ನಮ್ಮ ಸೌರ ಮಂಡಲದಲ್ಲಿ ಎರಡನೆಯ ದೊಡ್ಡ ಗ್ರಹ. ಭೂಮಿಗಿಂತ ಹತ್ತು ಪಟ್ಟು ದೊಡ್ಡದಿರುವ ಈ ಗ್ರಹವು ಸೂರ್ಯನಿಂದ 1.43 ಬಿಲಿಯನ್ ಕಿಲೋಮೀಟರ್ ದೂರದಲ್ಲಿದ್ದು ಸೂರ್ಯನ ಸುತ್ತ ಸುತ್ತಲು 29 ವರ್ಷಗಳನ್ನು ತೆಗೆದುಕೊಳ್ಳುವುದು. ಈ ಗ್ರಹವು ಕೂಡ ಗುರು ಗ್ರಹದ ಹಾಗೆ ಸಂಪೂರ್ಣ ಅನಿಲದಿಂದ ಕೂಡಿದ್ದು ಭೂಮಿಯ ಹಾಗೆ ಯಾವುದೇ ಮೇಲ್ಮೈ ಹೊಂದಿಲ್ಲ. ಈ ಗ್ರಹವು ಕೂಡ ಐವತ್ತಕ್ಕಿಂತ ಹೆಚ್ಚು ಚಂದ್ರನನ್ನು ಹೊಂದಿದ್ದು ಕೆಲವು ಚಂದ್ರಗಳು ಸಂಪೂರ್ಣ ಮಂಜಿನಿಂದ ಕೂಡಿವೆ. ಬರೋಬ್ಬರಿ 764 ಭೂಮಿಗಳಷ್ಟು ದೊಡ್ಡದಿರುವ ಈ ಗ್ರಹದ ಸುತ್ತಲು ಸುಂದರವಾಗಿ ಕಾಣುವ ಸುರುಳಿ ಇದ್ದು ಚಿಕ್ಕ ಚಿಕ್ಕ ದೂಳಿನ ಕಣದಿಂದ ಹಿಡಿದು ದೊಡ್ಡ ದೊಡ್ಡ ಬೆಟ್ಟಗಳು ಹಾಗು ಚಂದ್ರಗಳು ಅದರಲ್ಲಿ ಇವೆ.
🔲 ನೆನಪಿನಲ್ಲಿಡಬೇಕಾದ ಅಂಶಗಳು 🔲
🔹 ಸೌರವ್ಯೂಹದ ಅತ್ಯಂತ ಸುಂದರವಾದ ಗ್ರಹ ಶನಿ.
🔹 ಶನಿಗ್ರಹವು ಅತ್ಯಂತ ಸುಂದರವಾಗಿರಲು ಕಾರಣ ಅದರ ಸುತ್ತಲೂ ಇರುವ ಉಂಗುರ ವ್ಯವಸ್ಥೆ.
🔹 ಭೂಮಿಯ ಮೇಲಿನಿಂದ ತೆಗೆದಿರುವ ಚಿತ್ರಗಳು ಶನಿಗೆ ಎರಡು ಉಂಗುರಗಳಿರುವುದನ್ನು ತೋರಿಸುತ್ತದೆ. ಈ ಉಂಗುರಗಳ ಮಧ್ಯದಲ್ಲಿರುವ ಖಾಲಿ ಜಾಗವನ್ನು " ಕ್ಯಾಸಿನಿ ವಿಭಾಜಕ"
ಎಂದು ಕರೆಯುವರು.
🔹 ಶನಿ ಗ್ರಹಕ್ಕೆ ಸುಮಾರು 18 ಕ್ಕಿಂತಲೂ ಹೆಚ್ಚಿನ ಉಪಗ್ರಹಗಳಿವೆ. ಇವುಗಳ ಪೈಕಿ ಅತ್ಯಂತ ಪ್ರಮುಖವಾದದ್ದು "ಟೈಟಾನ್"
🔹 ಟೈಟಾನ್ ಉಪಗ್ರಹವು ಸ್ವತ: ವಾತಾವರಣವನ್ನು ಹೊಂದಿದೆ. ಇದು ಸೌರವ್ಯೂಹದಲ್ಲಿ ವಾತಾವರಣವನ್ನು ಹೊಂದಿರುವ ಏಕೈಕ ಉಪಗ್ರಹವಾಗಿದೆ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
7. ಯುರೇನಸ್
ಈ ಗ್ರಹವು ನಮ್ಮ ಸೌರ ಮಂಡಲದ ಏಳನೆಯ ಗ್ರಹವಾಗಿದ್ದು ಸೂರ್ಯನಿಂದ 2.87 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಸೂರ್ಯನ ಸುತ್ತ ಸುತ್ತಲು 84.3 ವರ್ಷಗಳನ್ನು ತೆಗೆದುಕೊಳ್ಳುವ ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಕಡಿಮೆ ಉಷ್ಣಾಂಶ ಹೊಂದಿರುವ ಗ್ರಹವಾಗಿದೆ. ಭೂಮಿಯ ಹಾಗೆ ಈ ಗ್ರಹಕ್ಕೆ 27 ಚಂದ್ರರಿದ್ದು ಶನಿ ಗ್ರಹದ ಹಾಗೆ ತನ್ನ ಸುತ್ತಲೂ ಸುರುಳಿಯನ್ನು ಹೊಂದಿದೆ.
🔳 ನೆನಪಿನಲ್ಲಿಡಬೇಕಾದ ಅಂಶಗಳು 🔳
🔸 ದೂರದರ್ಶಕದ ಸಹಾಯದಿಂದ ಕಂಡುಹಿಡಿಯಲಾದ ಮೊದಲ ಗ್ರಹ ಯುರೇನಸ್.
🔸 ಇದನ್ನು 1781 ರಲ್ಲಿ ವಿಲಿಯಂ ಹರ್ಷಲ್ ಎಂಬ ವಿಜ್ಞಾನಿಯು ಕಂಡುಹಿಡಿದನು.
🔸 ಇದು ಸೂರ್ಯದ ತುಂಬಾ ದೂರದಲ್ಲಿದೆ.
🔸 ಇದರ ಪ್ರಮುಖ ಉಪಗ್ರಹಗಳೆಂದರೆ- ಟೈಟಾನಿಯಾ ಮತ್ತು ಒಬೆರನ್
🔸 ಶನಿ ಮತ್ತು ಗುರು ಗ್ರಹಗಳಿಗಿರುವಂತೆ ಯುರೇನಸ್ ಗ್ರಹವು ಉಂಗುರ ವ್ಯವಸ್ಥೆಯನ್ನು ಹೊಂದಿದೆ ಎಂದು ಪತ್ತೆಹಚ್ಚಲಾಗಿದೆ.
🔯🔯🔯🔯🔯🔯🔯🔯🔯🔯🔯🔯🔯🔯🔯🔯
8. ನೆಪ್ಚೂನ್ :
ಈ ಗ್ರಹವು ನಮ್ಮ ಸೌರ ಮಂಡಲದ ಎಂಟನೆಯ ಗ್ರಹವಾಗಿದ್ದು ಸೂರ್ಯನಿಂದ 4.5 ಬಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಸೂರ್ಯನ ಸುತ್ತ ಸುತ್ತಲು 164.8 ವರ್ಷಗಳನ್ನು ತೆಗೆದುಕೊಳ್ಳುವ ಈ ಗ್ರಹವನ್ನು ಕೇವಲ ಲೆಕ್ಕಾಚಾರದ ಮೂಲಕ ಪತ್ತೆ ಹಚ್ಚಲಾಗಿದೆ. ಗುರು ಮತ್ತು ಶನಿ ಗ್ರಹದ ಹಾಗೆ ಈ ಗ್ರಹದ ವಾತಾವರಣವು ಕೂಡ ಹೈಡ್ರೋಜನ್ ಹಾಗು ಹೀಲಿಯಮ್ ಅನಿಲಗಳಿಂದ ಕೂಡಿದೆ.
🔳 ನೆನಪಿನಲ್ಲಿಡಬೇಕಾದ ಅಂಶಗಳು 🔳
🔹 ನ್ಯೂಟನ್ ಚಲನೆಯ ನಿಯಮ ಮತ್ತು ಗುರುತ್ವ ನಿಯಮಗಳ ಅನ್ವಯದ ಫಲವೇ ನೆಪ್ಚೂನ್ ಗ್ರಹದ ಸಂಶೋಧನೆ.
🔹 ಯುರೇನಸ್ ಗ್ರಹದ ಕಕ್ಷೆಯಲ್ಲಿ ಉಂಟಾದ ಪಲ್ಲಟವು ನೆಪ್ಚೂನ್ ಗ್ರಹದ ಇರುವಿಕೆಯನ್ನು ಮುನ್ಸೂಚಿಸಿತು.
🔹 ನ್ಯೂಟನ್ ಚಲನೆಯ ನಿಯಮಗಳು ಮತ್ತು ಆತನ ಗುರುತ್ವ ನಿಯಮ ಇವುಗಳ ಆಧಾರದ ಮೇಲೆ ಫ್ರಾನ್ಸ್‍ನ ಜೋಸೆಫ್ ಲೇವೆರಿನ್ ಮತ್ತು ಇಂಗ್ಲೆಂಡ್‍ನ ಜಾನ್ ಆಡಮ್ಸ್ ಎಂಬ ಇಬ್ಬರು ಖಗೋಳ ಶಾಸ್ತ್ರಜ್ಞರು ನೆಪ್ಚೂನ್ ಗ್ರಹದ ಅಸ್ಥಿತ್ವದ ಬಗ್ಗೆ ಮುನ್ಸೂಚಿಸಿದರು.
🔹 ಇವುಗಳ ಆಧಾರದ ಮೆಲೆ 1846 ರಲ್ಲಿ ದೂರದರ್ಶಕದ ಸಹಾಯದಿಂದ ಜೋಹಾನ್‍ಗಾಲಿ ಎಂಬ ವಿಜ್ಞಾನಿ ಇದನ್ನು ಪತ್ತೆಹಚ್ಚಿದನು.
🔹 ನೆಪ್ಚೂನ್ ಗ್ರಹದ ಉಪಗ್ರಹಗಳೆಂದರೆ- ಟ್ರೈಟನ್ ಮತ್ತು ನೆರೈಡ್
🌟🌟🌟🌟🌟🌟🌟🌟🌟🌟🌟🌟🌟🌟🌟🌟🌟
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
No comments:
Post a Comment
If you have any doubts please let me know