Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday, 22 November 2020

ಎಫ್‍ಡಿಎ ಪರೀಕ್ಷೆ ಬರೆಯುವ ಪ್ರತಿಯೊಬ್ಬರೂ ಇದನ್ನು ಓದಲೇಬೇಕು..!!

ಎಫ್‍ಡಿಎ ಪರೀಕ್ಷೆ ಬರೆಯುವ ಪ್ರತಿಯೊಬ್ಬರೂ ಇದನ್ನು ಓದಲೇಬೇಕು..!!



ಪ್ರಿಯ ಮಿತ್ರರೇ ಕೆಪಿಎಸ್‍ಸಿ ನಡೆಸುವ ಎಫ್‍ಡಿಎ ಮತ್ತು ಎಸ್‍ಡಿಎ ಪರೀಕ್ಷೆಯ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ.


ಈ ನಿಟ್ಟಿನಲ್ಲಿ ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚಿನ ಅಂಕಗಳನ್ನು ಪಡೆಯುವ ಟ್ರಿಕ್ಸ್‍ಗಳನ್ನು EduTube Kannada ಈಗಾಗಲೇ ನಡೆಸಿದೆ. EduTube Kannada  ಹಲವಾರು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪಿಡಿಎಫ್ ನೋಟ್ಸ್ ಆದಿಯಾಗಿ ಹಲವಾರು ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತಿದೆ.


ಎಫ್‍ಡಿಎ ಪರೀಕ್ಷೆ ಯಾವಾಗ ?

ಆತ್ಮೀಯ ಸ್ನೇಹಿತರೇ ದಿನಾಂಕ:24-01-2021 ರಂದು ಭಾನುವಾರ, ರಾಜ್ಯ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್‍ಡಿಎ) ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.


ಆದ್ದರಿಂದ ಹಲವಾರು ಅಭ್ಯರ್ಥಿಗಳು ಪರೀಕ್ಷೆಗೆ ಭರದಿಂದ ಸಿದ್ಧತೆ ನಡೆಸಿರುತ್ತೀರಿ. ಸ್ನೇಹಿತರೇ ಈ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಕಠಿಣ ಪರಿಶ್ರಮದಿಂದ ಓದಿದರೆ ಸಾಲದು. ಇಂದು ಹಾರ್ಡ್‍ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಎಲ್ಲದರಲ್ಲಿಯೂ ಸ್ಥಾನ ಪಡೆದಿದೆ. ಕಠಿಣ ಪರಿಶ್ರಮದಿಂದು ಓದುವುದು ಮನಸ್ಸಿಗೆ ಭಾರವೆನಿಸಿದರೆ, ಚತುರತೆ ಹಾಗೂ ಬುದ್ಧಿವಂತಿಕೆಯಿಂದ ಅಧ್ಯಯನ ನಡೆಸಿದರೆ, ಯಶಸ್ಸು ನಿಮ್ಮದೇ. ಹಾಗಾದರೆ ಸ್ಮಾರ್ಟ್ ಅಧ್ಯಯನ ನಡೆಸೋದು ಹೇಗೆ.? ಯಾವ ರೀತಿ ಅಧಧ್ಯಯನ ಮಾಡಬೇಕು.? ಮುಂಬರುವ ಫ್‍ಡಿಎ ಪರೀಕ್ಷೆಯಲ್ಲಿ ನಿಮಗೊಂದು ಹುದ್ದೆ ಮೀಸಲು ಪಡೆಯುದು ಹೇಗೆ.? ಯಾವ ರೀತಿ ಸ್ಮಾರ್ಟ್ ಸ್ಟಡಿ ಮಾಡಿದರೆ ಗೆಲುವು ನಮ್ಮದಾಗುತ್ತದೆ ಎಂದ ಹತ್ತು ಹಲವಾರು ವಿಚಾರಗಳ ಕುರಿತು ಎಜ್ಯುಟ್ಯೂಬ್ ಕನ್ನಡ ನಿಮಗಿಂದು ತಿಳಿಸಲಿದೆ.


ಸ್ನೇಹಿತರೇ, ಪರೀಕ್ಷೆ ತಯಾರಿಗೆ ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದುವುದರಿಂದಲೋ ಅಥವಾ ಹಲವಾರು ವರ್ಷ ಹಿಂದಿನ ಪುಸ್ತಕಗಳನ್ನು ಓದುವುದರಿಂದಲೋ ಯಶಸ್ಸು ಸಿಗುವುದು ಬಹಳ ವಿರಳ. ಹಾಗಾದರೆ ಎಫ್‍ಡಿಎ ಪರೀಕ್ಷೆಗೆ ಯಾವೆಲ್ಲ ಪುಸ್ತಕಗಳನ್ನು ಓದಬೇಕು.? ಯಾವ ರೀತಿ ಅಧ್ಯಯನ ಮಾಡಬೇಕು.? ಯಾವ ರೀತಿಯ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರಬಹುದು.? ಎಂಬೆಲ್ಲ ಹಲವಾರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡುವುದು ಸಹಜ. ಅದಕ್ಕೆಂದೇ ಎಜ್ಯುಟ್ಯೂಬ್ ಕನ್ನಡ ನಿಮ್ಮೆಲ್ಲರ ಸಮಸ್ಯೆಗಳನ್ನು ಪರಿಸಹರಿಸುವ ನಿಟ್ಟಿನಲ್ಲಿ ಇವತ್ತು ಮಹತ್ವದ ವಿಷಯವೊಂದನ್ನು ನಿಮ್ಮ ಮುಂದೆ ತಂದಿದೆ.


ಎಫ್‍ಡಿಎ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಅಭ್ಯರ್ಥಿಯೂ ಕೂಡ ಪರೀಕ್ಷಾ ಸಮಯ ಅಥವಾ ವೇಳೆ ನಿಗದಿಯಾದಾಗಿನಿಂದ ಗೊಂದಲಕ್ಕೆ ಒಳಗಾಗಿ ಯಾವುದನ್ನು ಓದಬೇಕು.? ಯಾವುದನ್ನು ಓದಬಾರದು ಎಂಬುದರ ತೊಳಲಾಟದಲ್ಲೇ ಸರಿಯಾಗಿ ಸಮಯ ನಿರ್ವಹಣೆಯಾಗಿದೆ. ಅರ್ಧಂಬರ್ಧ ಓದಿಕೊಂಡು ಹೋಗಿ ಪರೀಕ್ಷೆಯನ್ನು ಚನ್ನಾಗಿ ಎದುರಿಸಲಾಗದೇ ಸೋತು ಬಿಡುತ್ತಾರೆ. ಸ್ನೇಹಿತರೇ ಸೋಲನ್ನು ಸೋಲಿಸುವ ಧೈರ್ಯ ನಮ್ಮಲ್ಲಿ ಬರಬೇಕೆಂದರೆ ಮೊದಲು ನಮ್ಮ ಅಧ್ಯಯನವು ದೀರ್ಘವಾಗಿ ಸಾಗಿರಬೇಕು.


ಎಫ್‍ಡಿಎ ಪರೀಕ್ಷೆ ಸಮಯ ಈಗಾಗಲೇ ನಿಗದಿಯಾಗಿದೆ. ಪರೀಕ್ಷೆಗೆ ಇನ್ನೂ 2 ತಿಂಗಳು ಇದೆ. ಆದ್ದರಿಂದ ಇರುವ ಕಡಿಮೆ ಸಮಯದಲ್ಲಿ ಹೇಗೆ ಓದಬೇಕು.? ಏನನ್ನು ಓದಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಎಫ್‍ಡಿಎ ಪರೀಕ್ಷೆಯ ಸಿದ್ಧತೆಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.


ಎಫ್‍ಡಿಎ ಪರೀಕ್ಷೆಗೆ ಏನೆಲ್ಲ ಓದಬೇಕು :

ಎಫ್‍ಡಿಎ ಪರೀಕ್ಷೆಗೆ ಯಾವೆಲ್ಲ ವಿಷಯಗಳು ಬಹುಮುಖ್ಯ.? ಹಾಗೂ ಯಾವ ವಿಷಯಗಳನ್ನು ಓದಿಕೊಂಡರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ, ಯಶಸ್ಸು ಗಳಿಸಬಹುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ…:

  • ಭಾರತದ ಇತಿಹಾಸ, ಇತಿಹಾಸದಲ್ಲಿ ಬರುವ ಪ್ರಮುಖ ಘಟನೆಗಳು, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರೋತ್ತರ ಭಾರತ.
  • ಕರ್ನಾಟಕದ ಇತಿಹಾಸ, ಕರ್ನಾಟಕದ ಪರಂಪರೆ ಮತ್ತು ಸಾಹಿತ್ಯ ಹಾಗೂ ಸಂಸ್ಕøತಿ.
  • ಭಾರತದ ಸಂಸ್ಕøತಿ, ಸಾಹಿತ್ಯ, ಭೌಗೋಳಿಕ ಮಹತ್ವ, ಭಾರತದ ಪಾರಂಪರಿಕ ಹಿನ್ನೆಲೆ, ದೇಶದ ನೈಸರ್ಗಿಕ ಸಂಪನ್ಮೂಲಗಳು, ಕೃಷಿ, ಶಿಕ್ಷಣ ಇತ್ಯಾದಿ.
  • ಸಾರ್ವಜನಿಕ ಉದ್ಯಮಗಳು, ಆರ್ಥಿಕತೆ, ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಗಳು.
  • ಸಾರ್ವಜನಿಕ ಉದ್ಯಮಗಳು, ಆರ್ಥಿಕತೆ, ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಗಳು. 
  • ಸಂವಿಧಾನ, ಯೋಜನೆಗಳು, ನೀತಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿನ ಪ್ರಮುಖರು, ಬದಲಾದ ಧೋರಣೆಗಳು.
  • ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಪುರಸ್ಕಾರಗಳು ಹಾಗೂ ಪಡೆದ ಗಣ್ಯರು. ಪ್ರಖ್ಯಾತ ಕೃತಿಗಳು ಮತ್ತು ಕೃತಿಕಾರರು, ಪಡೆದ ಪ್ರಶಸ್ತಿಗಳು .
  • ಕ್ರೀಡೆ, ಕ್ರೀಡಾಕೂಟಗಳು, ಸಂಗೀತ, ಕಲೆ ,ಸಿನಿಮಾ, ಜನಪದ, ಈ ಕ್ಷೇತ್ರದಲ್ಲಿನ ವಿದ್ಯಮಾನಗಳು. 
  • ವಿಶ್ವದ ಸಂಕ್ಷಿಪ್ತ ಇತಿಹಾಸ, ಪ್ರಮುಖ ಘಟನೆಗಳು, ಚಳವಳಿಗಳು ಇತ್ಯಾದಿ 
  • ಪ್ರಮುಖ ಸಂಶೋಧನೆ, ಮೂಲ ವಿಜ್ಞಾನ, ವೈಜ್ಞಾನಿಕ ಸಂಶೋಧನೆ. 
  • ಪ್ರಚಲಿತ ವಿದ್ಯಮಾನ, ವಿದೇಶಿ ನೀತಿ, ಅಂತಾರಾಷ್ಟ್ರೀಯ ಸಂಬಂಧ ಇತ್ಯಾದಿ. 

ಸ್ನೇಹಿತರೇ ಇದಿಷ್ಟೂ ಎಫ್‍ಡಿಎ ಪರೀಕ್ಷೆಯಲ್ಲಿ ಕೇಳಲಾಗುವ ಮಹತ್ವದ ಅಂಶಗಳು. ಇವುಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತಾದ ಪ್ರಶ್ನೆಗಳು ಬಹುಮುಖ್ಯ ಪಾತ್ರವಹಿಸುತ್ತವೆ. ದೈನಂದಿನ ಜೀವನದಲ್ಲಿ ನಡೆಯುವ ಪ್ರಮುಖ ಘಟನೆಗಳ ಕುರಿತಾಗಿಯೇ ಪ್ರಶ್ನೆಗಳು ಬರುವುದುರಿಂದ ದಿನ ಪತ್ರಿಕೆಗಳನ್ನು ಓದುವ ಅಭ್ಯರ್ಥಿಗಳು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ಅತ್ಯಂತ ಸಯಲಭವಾಗಿ ತಿಳಿದುಕೊಳ್ಳಬಹುದು. ಇನ್ನೂ ಈ ಮೇಲಿನ ವಿಷಯಗಳನ್ನು ಹೇಗೆ ಓದಬೇಕು ಗೊತ್ತೇ.? ಅದನ್ನೂ ಇಲ್ಲಿ ತಿಳಿಸಿಕೊಡುತ್ತೇವೆ ನೋಡಿ...


ಹೇಗೆ ಓದಬೇಕು ಗೊತ್ತೇ.?


ಓದಿದ್ದನ್ನು ಬರೆದಿಟ್ಟುಕೊಳ್ಳಿ :



“ಒಂದು ಬಾರಿಯ ಬರೆಯುವುದು, ಹತ್ತು ಬಾರಿ ಓದಿದ್ದಕ್ಕೆ ಸಮ” ಎನ್ನುವಂತೆ, ಓದುವ ಪ್ರತಿಯೊಂದು ವಿಷಯವನ್ನೂ ಬರೆಯಬೇಕು. ಇದರಿಂದ ಓದಿದ ವಿಷಯವು ದೀರ್ಘಕಾಲ ಸ್ಮರಣೆಯಲ್ಲಿ ಉಳಿಯುವುದು ಅಲ್ಲದೇ ಪರೀಕ್ಷೆಯ ಸಮಯದಲ್ಲಿ ಬರೆದಿದ್ದನ್ನು ಓದಲೂ ಕೂಡ ಸಹಾಯಕವಾಗುತ್ತದೆ. ಆದ್ದರಿಂದ ಓದಿರು ವಿಚಾರಗಳನ್ನು ಬರೆದಿಟ್ಟುಕೊಳ್ಳುವುದು ಒಳಿತು.


ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ನೋಟ್ ಪುಸ್ತಕ ಮಾಡಿಕೊಳ್ಳಿ :



ಪರೀಕ್ಷೆ ಅನ್ನೋದು ಒಂದು ಯುದ್ಧ, ಈ ಯುದ್ಧದಲ್ಲಿ ಉತ್ತಮವಾದ ಶಸ್ತ್ರಗಳನ್ನು ಹೊಂದಿ, ಆ ಶಸ್ತ್ರಗಳನ್ನು ಸಮಯಕ್ಕೆ ತಕ್ಕಂತೆ ಹಾಗೂ ಸಮರ್ಪಕವಾಗಿ ಬಳಸುವ ಜಾಣ್ಮೆಯಿರುವ ವ್ಯಕ್ತಿ ಯುದ್ಧದಲ್ಲಿ ವೈರಿಯ ವಿರುದ್ಧ ಯಶಸ್ವಿಯಾಗಿ ಹೋರಾಡಿ, ಯುದ್ಧವನ್ನು ಜಯಿಸಬಲ್ಲ. ಅಂತೆಯೇ ಪರೀಕ್ಷೆಯಲ್ಲಿಯೂ ಸಹ ಅಷ್ಟೇ ಉತ್ತಮವಾಗಿ ನೋಟ್ಸ್‍ಗಳನ್ನು ತನಗೆ ತಿಳಿಯುವ ಹಾಗೆ ಸುಂದರವಾಗಿ ಬರೆದಿಟ್ಟಟುಕೊಮಡು, ಸಮಯಕ್ಕ ತಕ್ಕಂತೆ ಅವುಗಳನ್ನು ಬಳಸಿದರೆ ಮಾತ್ರ ನಮ್ಮ ಓದು ಪರಿಪೂರ್ಣವಾಗುತ್ತದೆ. ಅಲ್ಲದೇ ಪ್ರತಿಯೊಂದು ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ನೋಟ್ ಪುಸ್ತಕಗಳನ್ನು ಮಾಡುವುದರಿಮದ ಒಂದು ವಿಷಯಕ್ಕೆ ಸಂಬಂಧಿಸಿದ ವಿಷಯ ಒಂದೇ ಕಡೆ ಸುಲಭವಾಗಿ ಸಿಗುತ್ತದೆ. ಅಲ್ಲದೇ ಓದಲೂ ಕೂಡ ಸುಲಭವೆನಿಸುತ್ತದೆ. ಆದ್ದರಿಂದ ಪ್ರತ್ಯೇಕ ನೋಟ್ಸ್ ಮಾಡಿಕೊಂಡು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಓದುವ ಪ್ರಮುಖ ವಿಷಯಗಳನ್ನು ನೋಟ್ ಮಾಡಿಕೊಳ್ಳಿ: 



ಹೌದು, ಓದುವ ಯಾವುದೇ ವಿಷಯವಾದರೂ ಅದರಲ್ಲಿರುವ ಪ್ರಮುಖ ಅಂಶಗಳನ್ನು ನೋಟ್ ಮಾಡಿಕೊಳ್ಳುವುದು ಒಳಿತು. ನೋಟ್ ಮಾಡಿದ ಪ್ರತಿಯೊಂದು ಅಂಶವನ್ನೂ ಹೈಲೈಟರ್ ಬಳಸಿ ಹೈಲೈಟ್ ಮಾಡಬೇಕು. ಇದರಿಂದ ಪರೀಕ್ಷೆ ಹತ್ತಿರ ಬಂದಾಗ ಹಾಗೂ ಪುನರಾವರ್ತನೆಯ ಸಮಯದಲ್ಲಿ ಇಡಿಯಾದ ವಿಷಯವನ್ನು ಓದುವುದನ್ನು ತಪ್ಪಿಸಿ, ಪ್ರಮುಖವಾದ ವಿಷಯವನ್ನು ಮಾತ್ರ ಕಣ್ಣಾಡಿಸಬಹುದು. 


  ದಿನಪತ್ರಿಕೆಗಳನ್ನು ನಿತ್ಯವೂ ಓದಿ:



ಪ್ರಿಯ ಮಿತ್ರರೇ, ಇಂದಿನ ಬಹುತೇಕ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ “ಪ್ರಚಲಿತ ವಿದ್ಯಮಾನಗಳಿಗೆ” ಸಂಬಂಧಪಟ್ಟಂತೆ ಹಲವಾರು ಪ್ರಶ್ನೆಗಳು ಬಂದಿರುತ್ತವೆ. ಈ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬೇಕೆಂದರೆದಿನನಿತ್ಯವೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಇಟ್ಟುಕೊಳ್ಳಬೇಕು. ಕೇವಲ ದಿನಪತ್ರಿಕೆಗಳನ್ನು ಓದಿದರೆ ಸಾಲದು ಅದರಲ್ಲಿರುವ ಪ್ರಮುಖ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಎಲ್ಲ ಪ್ರಚಲಿತ ಘಟನೆಗಳ ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸಬಹುದು.


6-12 ನೇ ತರಗತಿ ಪಠ್ಯಪುಸ್ತಕಗಳನ್ನು ಓದಿಕೊಳ್ಳಿ :




ಸ್ನೇಹಿತರೇ ಈಗಾಗಲೇ ಹಲವಾರು ಬಾರಿ ಹೇಳಿದಂತೆ, ಶಾಲಾ ಪಠ್ಯಪುಸ್ತಕಗಳನ್ನು ಓದುವುದರಿಂದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಜಯಿಸಬಹುದು. ಆದ್ದರಿಂದ ಪರೀಕ್ಷೆಯ ಯಶಸ್ವಿಯಲ್ಲಿ ಶಾಲಾ ಪಠ್ಯಪುಸ್ತಕದ ನೆರವು ಅಗತ್ಯ. ಆದ್ದರಿಂದ ಶಾಲಾ ಪಠ್ಯಪುಸ್ತಕಗಳ ಓದುಕೂಡ ಅವಶ್ಯಕವಾಗಿದೆ. ಶಾಲಾ ಪಠ್ಯಗಳನ್ನು ವಿಸ್ತøತವಾಗಿ ಓದುವುದ ಅಸಾಧ್ಯವೆನಿಸಿದರೂ ವೇಳಾ ಪಟ್ಟಿಯ ಪ್ರಕಾರ ಓದಿದರೆ ಸಾಧ್ಯವಾಗುತ್ತದೆ.


ಹಿಂದಿನ ಪ್ರಶ್ನೆಪತ್ರಿಕೆಗಳನ್ನು ನೋಡಿಕೊಳ್ಳಿ :




ಸ್ನೇಹಿತರೇ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದಿನ ವರ್ಷದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಮಹತ್ವದ ಪಾತ್ರವಹಿಸುತ್ತವೆ. ಹಿಂದಿನ ವರ್ಷದ ಪ್ರಶ್ನೆಪತ್ರಿಕಗಳು ಮುಂದಿನ ವರ್ಷದ ಪ್ರಶ್ನೆಗಳಿಗೆ ಮುನ್ನುಡಿ ಎಂತಲೂ ಹೇಳಬಹುದು. ಅಂದರೆ ಹಿಂದೆ ಕೇಳಿದ ಪ್ರಶ್ನೆಗಳೇ ಈ ವರ್ಷವೂ ಬರುತ್ತವೆ ಎಂದಲ್ಲ. ಆದರೆ ಯಾವ ರೀತಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದರ ರೂಪುರೇಷೆ ಸುಲಭವಾಗಿ ಸಿಗುತ್ತದೆ.


ಸೂಚನೆ : ಸ್ನೇಹಿತರೇ 1991-2017 ರವರೆಗಿನ ಎಫ್‍ಡಿಎ ಹಾಗೂ ಎಸ್‍ಡಿಎ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಪಿಡಿಎಫ್‍ನ್ನು ಈಗಾಗಲೇ ನಮ್ಮ ಎಜ್ಯುಟ್ಯೂಬ್ ಕನ್ನಡ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅವುಗಳನ್ನು ನೀವು ಇನ್ನೂ ನೋಡಿಲ್ಲವೆಂದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಡೌನ್‍ಲೋಡ್ ಮಾಡಿಕೊಳ್ಳಿ...

ಡಾ. ಕೆ. ಎಮ್. ಸುರೇಶ ಅವರ ಎಫ್‍ಡಿಎ ಹಾಗೂ ಎಸ್‍ಡಿಎ ಪ್ರಶ್ನೋತ್ತರ ಮಾಲಿಕೆಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.





ಗುಂಪು ಚರ್ಚೆ ಮಾಡಿ :



ಸ್ನೇಹಿತರೇ “ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ, ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ” ಎನ್ನುವಂತೆ ಓದಿರುವುದನ್ನು ಇತರರೊಂದಿಗೆ ಹಂಚಿಕೊಂಡರೆ ನಮ್ಮ ಜ್ಞಾನವು ಇನ್ನೂ ಹೆಚ್ಚುತ್ತದೆ. ಈ ಜಗತ್ತಿನಲ್ಲಿ ಕೊಟ್ಟಷ್ಟು/ನೀಡಿದಷ್ಟು ಹೆಚ್ಚಾಗುವ ಒಂದೇ ಒಂದು ವಸ್ತು ಅಂದ್ರೆ ಅದು ವಿದ್ಯೆ/ಜ್ಞಾನ. ಗುಂಪು ಚರ್ಚೆಗಳು ಒಬ್ಬರ ಜ್ಞಾನವು ಇನ್ನೊಬ್ಬರಲ್ಲಿ ವಿನಿಮಯವಾಗುವುದನ್ನು ಗಮನಿಸಬಹುದು. ಇದರಿಂದ ಸ್ಮರಣ ಶಕ್ತಿಯೂ ಹೆಚ್ಚಾಗುತ್ತದೆ.


ಸಮಯ ಪ್ರಜ್ಞೆಯೊಂದಿಗೆ ಅಧ್ಯಯನ ನಡೆಸಿ :




ಸ್ನೇಹಿತರೇ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳೂ ಕೂಡ ಸಮಯ ಪ್ರಜ್ಷೆಯೊಂದಿಗೆ ಅಧ್ಯಯನ ನಡೆಸಬೇಕು. ಯಾವ ಸಮಯದಲ್ಲಿ ಏನು ಓದಬೇಕು ಎಂಬ ವಿಚಾರವನ್ನು ಪ್ರತಿಯೊಬ್ಬ ಸ್ಪರ್ಧಾಕಾಂಕ್ಷಿಯೂ ಅರಿತಿರಬೇಕು. ಇಷ್ಟೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ನಿರಂತರವಾಗಿ ಅಧ್ಯಯನ ನಡೆಸಿದರೆ ಉತ್ತಮ ಫಲಿತಾಂಶ ಪಡೆಯುವುದಷ್ಟೇ ಅಲ್ಲದೇ ಸರಕಾರಿ ಉದ್ಯೋಗ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ನಿರಂತರ ಪ್ರಯತ್ನ ಹಾಗೂ ಧೃಢನಿಷ್ಠೆಯಿಂದ ಅಧ್ಯಯನ ನಡೆಸುವ ನಿರ್ಧಾರ ತೆಗೆದುಕೊಳ್ಳಬೇಕು.


(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .



ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads