🔘 ಭಾರತದ ಮೇಲೆ ವಿದೇಶಿಯರ ದಾಳಿ 🔘
ಭಾರತದ ಮೇಲೆ ಮುಸ್ಲಿಂ ರು ದಾಳಿ ಮಾಡಿದರು. ಇವರಲ್ಲಿ ಮೊದಲಿಗೆ ಅರಬ್ಬರು. ಎರಡನೆಯದಾಗಿ ತುರ್ಕರು, ಮತ್ತು ಮೂರನೆಯದಾಗಿ ಅಪ್ಘನ್ನರು ದಾಳಿ ಮಾಡಿದರು.
ಅರಬ್ಬರು:-
# ಭಾರತದ ಮೇಲೆ ಮೊಟ್ಟಮೊದಲು ದಾಳಿ ಮಾಡಿದ ಮುಸ್ಲಿಂ ದಾಳಿಗಾರ ಎಂದರೇ ಅದು ’ಮಹ್ಮದ್ ಬಿನ್ ಖಾಸಿಂ’ ಆಗಿದ್ದಾನೆ.
# ಮಹ್ಮದ್ ಬಿನ್ ಖಾಸಿಂನು ಕ್ರಿ.ಶ 712 ರಲ್ಲಿ ಭಾರತದ ಸಿಂಧ್ ಪ್ರಾಂತ್ಯ (ಈಗಿನ ಪಾಕಿಸ್ತಾನ)ದ ಮೇಲೆ ದಾಳಿ ಮಾಡಿದನು. ಆಗ ಅಲ್ಲಿದ್ದ ಹಿಂದೂ ದೊರೆ ’ದಾಹಿರ್’ ಆಗಿದ್ದನು. ಖಾಸಿಂ ನು ’ದಾಹಿರ್’ ನನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಸೋತ ದಾಹಿರ್ ಮುಲ್ತಾನ್ ಗೆ ಓಡಿ ಹೋಗುತ್ತಾನೆ. ಮಹ್ಮದ್ ಬಿನ್ ಖಾಸಿಂ ಸಿಂಧ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಾನೆ.
# ಕ್ರಿ.ಶ 713 ರಲ್ಲಿ ಮಹ್ಮದ್ ಬಿನ್ ಖಾಸಿಂ ಮುಲ್ತಾನ್ ಮೇಲೆ ದಾಳಿ ಮಾಡಿ ಮತ್ತೆ ದಾಹಿರ್ ನನ್ನು ಕೊಂದು ಮುಲ್ತಾನ್ ನನ್ನು ಗೆಲ್ಲುತ್ತಾನೆ. ಅರಬ್ಬರ ನಂತರ ತುರ್ಕರು ಭಾರತಕ್ಕೆ ಭೇಟಿ ನೀಡುತ್ತಾರೆ.
ತುರ್ಕರು:-
# ತುರ್ಕರ ದಾಳಿಗಾರ ಮಹ್ಮದ್ ಘಜ್ನಿಯು ಭಾರತದ ಅಪಾರ ಸಂಪತ್ತನ್ನು ದೋಚಲು ಭಾರತದ ಮೇಲೆ ದಾಳಿ ಮಾಡಿದನು.
# ಇವನು ಕ್ರಿ.ಶ 1000 ದಿಂದ 1027 ರಲ್ಲಿ ಭಾರತದ ಮೇಲೆ 17 ಬಾರಿ ದಾಳಿ ಮಾಡಿದನು.
# ಮಹ್ಮದ್ ಘಜ್ನಿಯ 17 ದಾಳಿಗಳಲ್ಲಿ ಇತಿಹಾಸ ಪ್ರಸಿದ್ಧ ದಾಳಿ ಎಂದರೇ ಅದು 16 ನೇ ದಾಳಿಯಾಗಿದೆ. ಇದು ಕ್ರಿ.ಪೂ 1025-26 ರ ಮಧ್ಯದಲ್ಲಿ ನಡೆಯಿತು.
# ಸೌರಾಷ್ಟ್ರ (ಗುಜರಾತ್)ದ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣ ನಾಶಮಾಡಿ ಅಪಾರ ಸಂಪತ್ತು ದೋಚಿ ಅಪಘಾನಿಸ್ತಾನದ ತನ್ನ ರಾಜ್ಯಕ್ಕೆ ಅಂದರೇ ಘಜ್ನಿಗೆ ಹೋದನು.
# ಇದರ ಬಗ್ಗೆ ಇತಿಹಾಸಕಾರ ಅಲ್ಬೆರೋನಿಯು ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಅಲ್ಬೆರೋನಿಯ ಪ್ರಸಿದ್ಧ ಕೃತಿ "ತಹ್ಕೀಕ್ ಇ ಹಿಂದ್" ಇದು ಘಜ್ನಿಯ ದಾಳಿಯ ಬಗ್ಗೆ ನಮಗೆ ತಿಳಿಸಿಕೊಡುತ್ತದೆ.
# ಅಲ್ಲದೇ ಪಿರ್ದೌಸಿಯ ಕೃತಿ "ಷಹನಾಮ" ಕೂಡ ಇವನ ಬಗ್ಗೆ ಮಾಹಿತಿ ನೀಡುತ್ತದೆ. ಪಿರ್ದೌಸಿಯನ್ನು ಪರ್ಷಿಯನ್ ಹೂಮರ್ ಎಂದು ಕರೆಯಲಾಗಿದೆ.
ಮಹ್ಮದ್ ಘೋರಿ:-
# ಇವನು ಒಬ್ಬ ಮುಸ್ಲಿಂ ದಾಳಿಗಾರನಾಗಿದ್ದು, ಭಾರತದಲ್ಲಿ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸಬೇಕೆಂಬ ಆಶಯವನ್ನು ಹೊಂದಿದ್ದನು. ಅದಕ್ಕಾಗಿ ಭಾರತದ ಮೇಲೆ ದಾಳಿ ಮಾಡಿದನು.
ಒಂದನೇ ತರೈನ್ ಯುದ್ಧ:-
ಇದು ಕ್ರಿ.ಶ 1191 ರಲ್ಲಿ 3 ನೇ ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘೋರಿಯ ನಡುವೆ ನಡೆಯಿತು. ಈ ಯುದ್ಧದಲ್ಲಿ ದೆಹಲಿ ಮತ್ತು ಅಜ್ಮಿರ್ ರಾಜ್ಯಗಳ ದೊರೆಯಾಗಿದ್ದ ಪೃಥ್ವಿರಾಜ್ ಚೌಹಾಣ್ ನು ಘೋರಿಯನ್ನು ಸೋಲಿಸಿದನು.
ಎರಡನೇ ತರೈನ್ ಯುದ್ಧ:-
# ಕ್ರಿ.ಶ 1192 ರಲ್ಲಿ ಪೃಥ್ವಿರಾಜ್ ಚೌಹಾಣ್ ಮತ್ತು ಘೋರಿಯ ನಡುವೆ ಈ ಯುದ್ಧವು ನಡೆಯಿತು. ಇಲ್ಲಿ ಈ ಯುದ್ಧದಲ್ಲಿ ಚೌಹಾಣನು ಸೋತು ಕೊಲ್ಲಲ್ಪಟ್ಟನು. ಹೀಗಾಗಿ ಮಹ್ಮದ್ ಘೋರಿಯು ಜಯಶಾಲಿಯಾದನು.
# ಇತಿಹಾಸ ಪ್ರಸಿದ್ಧ ಕಾಳಗ ಇದಾಗಿದ್ದು ಇದರಲ್ಲಿ ಪೃಥ್ವಿರಾಜನ ಮರಣದೊಂದಿಗೆ ರಜಪೂತರ ಆಳ್ವಿಕೆ ಮುಕ್ತಾಯವಾಯಿತು.
# ರಜಪೂತರ ಕೊನೆಯ ದೊರೆ 3 ನೆ ಪೃಥ್ವಿರಾಜ್ ಚೌಹಾಣನಾಗಿದ್ದಾನೆ.
# 1196 ರಲ್ಲಿ ಮಹ್ಮದ್ ಘೋರಿಯು ಚಾಂದವಾರ್ ಕದನದಲ್ಲಿ ರಾಜಾ ಜಯಚಂದ್ರನನ್ನು ಎದುರಿಸಿದನು. ಇವನು ಪೃಥ್ವಿರಾಜ್ ನ ಮಾವನಾಗಿದ್ದನು. ರಜಪೂತ ವಂಶದ ಈ ದೊರೆಯು ಯುದ್ಧದಲ್ಲಿ ಸಾವನ್ನಪ್ಪಿದನು.
# ನಂತರ ದೆಹಲಿ, ಅಜ್ಮೀರ, ಕನೌಜ್ ರಾಜ್ಯಗಳನ್ನು ಗೆದ್ದುಕೊಂಡನು. ಘೋರಿಯು ಕುತುಬುದ್ದೀನ್ ಐಬಕ್ ನನ್ನು ನೇಮಕ ಮಾಡಿ ತನ್ನ ಘೋರ್ ರಾಜ್ಯಕ್ಕೆ ಹಿಂದಿರುಗಿ 1206 ರಲ್ಲಿ ಸಾವನ್ನಪ್ಪಿದನು.
# ಭಾರತದಲ್ಲಿ ಮುಸ್ಲಿಂ ರ ಆಳ್ವಿಕೆಯನ್ನು ಪ್ರಾರಂಭಿಸಿದವನು
"ಕುತುಬುದ್ದೀನ್ ಐಬಕ್" . ಇವನು ದೆಹಲಿ ಸುಲ್ತಾನ್ ರಾಜ್ಯವನ್ನು ಸ್ಥಾಪಿಸಿದನು.
ಪ್ರಶ್ನೆಗಳು👇👇👇
1) ಘೋರಿಯು ಭಾರತದಲ್ಲಿ ಯಾರನ್ನು ತನ್ನ ರಾಜ ಪ್ರತಿನಿಧಿಗಳನ್ನಾಗಿ ನೇಮಿಸಿದನು?
A). ಬಾಬರ್
B). ಜಹಾಂಗೀರ್
C). ಕುತುಬುದ್ದೀನ್ ಐಬಕ್
D). ಸೆಲ್ಯುಕಸ್
Correct Ans: (C)
ಮಹ್ಮದ್ ಘೋರಿಯು ಭಾರತದಲ್ಲಿ ನೇಮಿಸಿದ ರಾಜ್ಯ ಪ್ರತಿನಿಧಿಗಳೆಂದರೇ ಕುತುಬುದ್ದೀನ್ ಐಬಕ್ ಮತ್ತು ಭಕ್ತಿಯಾರ್ ಖಿಲ್ಜಿಯಾಗಿದ್ದಾರೆ.
2) ಮಹ್ಮದ್ ಘೋರಿಯು ಯಾವಾಗ ಸಾವನ್ನಪ್ಪಿದನು?
A). ಕ್ರಿ.ಶ 1205
B). ಕ್ರಿ.ಶ 1206
C). ಕ್ರಿ.ಶ 1204
D). ಕ್ರಿ.ಶ 1203
Correct Ans: (B)
1196 ರಲ್ಲಿ ಮಹ್ಮದ್ ಘೋರಿಯು ಚಾಂದವಾರ್ ಕದನದಲ್ಲಿ ರಾಜಾ ಜಯಚಂದ್ರನನ್ನು ಎದುರಿಸಿದನು. ಇವನು ಪೃಥ್ವಿರಾಜ್ ನ ಮಾವನಾಗಿದ್ದನು. ರಜಪೂತ ವಂಶದ ಈ ದೊರೆಯು ಯುದ್ಧದಲ್ಲಿ ಸಾವನ್ನಪ್ಪಿದನು. ನಂತರ ದೆಹಲಿ, ಅಜ್ಮೀರ, ಕನೌಜ್ ರಾಜ್ಯಗಳನ್ನು ಗೆದ್ದುಕೊಂಡನು. ಘೋರಿಯು ಕುತುಬುದ್ದೀನ್ ಐಬಕ್ ನನ್ನು ನೇಮಕ ಮಾಡಿ ತನ್ನ ಘೋರ್ ರಾಜ್ಯಕ್ಕೆ ಹಿಂದಿರುಗಿ 1206 ರಲ್ಲಿ ಸಾವನ್ನಪ್ಪಿದನು.
3) ದೆಹಲಿ ಸುಲ್ತಾನ್ ರಾಜ್ಯವನ್ನು ಸ್ಥಾಪಿಸಿದವನು ಯಾರು?
A). ಬಾಬರ್
B). ಹುಮಾಯೂನ್
C). ಕುತುಬುದ್ದೀನ್ ಐಬಕ್
D). ಮಹ್ಮದ್ ಘೋರಿ
Correct Ans: (C)
ಭಾರತದಲ್ಲಿ ಮುಸ್ಲಿಂ ರ ಆಳ್ವಿಕೆಯನ್ನು ಪ್ರಾರಂಭಿಸಿದವನು "ಕುತುಬುದ್ದೀನ್ ಐಬಕ್" . ಇವನು ದೆಹಲಿ ಸುಲ್ತಾನ್ ರಾಜ್ಯವನ್ನು ಸ್ಥಾಪಿಸಿದನು.
4) ಯಾವ ರಾಜ್ಯವನ್ನು ಹಿಂದೆ ಗೂರ್ಜ ರಾಷ್ಟ್ರ ಎಂದು ಕರೆಯಲಾಗುತ್ತಿತ್ತು?
A). ರಾಜಸ್ಥಾನ
B). ಪಂಜಾಬ್
C). ಗುಜರಾತ್
D). ಅರುಣಾಚಲಪ್ರದೇಶ
Correct Ans: (A)
ಈಗಿನ ರಾಜಸ್ಥಾನವನ್ನು ರಜಪೂತರ ಕಾಲದಲ್ಲಿ ಗೂರ್ಜ ರಾಷ್ಟ್ರ ಎಂದು ಕರೆಯಲಾಗುತ್ತಿತ್ತು.
5) ಮಹ್ಮದ್ ಘೋರಿಯ ನಿಜವಾದ ಹೆಸರೇನು?
A). ಮೈನುದ್ದೀನ್ ಮಹ್ಮದ್
B). ಮೈನುದ್ದೀನ್ ಪಾಷಾ
C). ಅಕ್ಬರ್ ಅನ್ವರುದ್ದೀನ್
D). ಅಹ್ಮದ್ ಬರ್ಕದಾರ್ ಮಹ್ಮದ್
Correct Ans: (A)
ಮಹ್ಮದ್ ಘೋರಿಯ ನಿಜವಾದ ಹೆಸರು ಮೈನುದ್ದೀನ್ ಮಹ್ಮದ್ ಆಗಿದೆ. ಇವನ ಕೊನೆಯ ದಂಡೆಯಾತ್ರೆ ಪಂಜಾಬಿನ ಜಾಟರ ಮೇಲೆ ಆಯಿತು. ಇವನನ್ನು ಷಹಾಬುದ್ದೀನ್ ಎಂತಲೂ ಕರೆಯಲಾಗುತ್ತಿತ್ತು.
6) ರಜಪೂತರ ಕೊನೆಯ ದೊರೆ ಯಾರು?
A). ಮೊದಲನೇ ಪೃಥ್ವಿರಾಜ್ ಚೌಹಾಣ
B). ಬೋಜರಾಜ
C). ಗುಹದತ್ತ
D). ಮೂರನೇ ಪೃಥ್ವಿರಾಜ್ ಚೌಹಾಣ
Correct Ans: (D)
ಇತಿಹಾಸ ಪ್ರಸಿದ್ಧ ಕಾಳಗವಾದ ಎರಡನೇ ತರೈನ್ ಯುದ್ದದಲ್ಲಿ ಪೃಥ್ವಿರಾಜನ ಮರಣದೊಂದಿಗೆ ರಜಪೂತರ ಆಳ್ವಿಕೆ ಮುಕ್ತಾಯವಾಯಿತು. ರಜಪೂತರ ಕೊನೆಯ ದೊರೆ 3 ನೆ ಪೃಥ್ವಿರಾಜ್ ಚೌಹಾಣನಾಗಿದ್ದಾನೆ.
7) ಎರಡನೇಯ ತರೈನ್ ಯುದ್ಧದಲ್ಲಿ ಜಯಶಾಲಿಯಾದವರು ಯಾರು?
A). ಪೃಥ್ವಿರಾಜ್ ಚೌಹಾಣ್
B). ಮಹ್ಮದ್ ಘೋರಿ
C). ಮಹ್ಮದ್ ಘಜ್ನಿ
D). ಯಾರೂ ಅಲ್ಲ
Correct Ans: (B)
ಕ್ರಿ.ಶ 1192 ರಲ್ಲಿ ಪೃಥ್ವಿರಾಜ್ ಚೌಹಾಣ್ ಮತ್ತು ಘೋರಿಯ ನಡುವೆ ಈ ಯುದ್ಧವು ನಡೆಯಿತು. ಇಲ್ಲಿ ಈ ಯುದ್ಧದಲ್ಲಿ ಚೌಹಾಣನು ಸೋತು ಕೊಲ್ಲಲ್ಪಟ್ಟನು. ಹೀಗಾಗಿ ಮಹದ್ ಘೋರಿಯು ಜಯಶಾಲಿಯಾದನು.
8) ಮೊದಲನೆ ತರೈನ್ ಯುದ್ಧವು ಯಾರ ಮಧ್ಯೆ ನಡೆಯಿತು?
A). ಜಾಮೂರಿನ್ ಮತ್ತು ಮಹ್ಮದ್ ಘೋರಿಯ ನಡುವೆ
B). ಬಾಬರ್ ಮತ್ತು ಮಹ್ಮದ್ ಘೋರಿಯ ನಡುವೆ
C). ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘಜ್ನಿಯ ನಡುವೆ
D). ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘೋರಿಯ ನಡುವೆ
Correct Ans: (D)
ಇದು ಕ್ರಿ.ಶ 1191 ರಲ್ಲಿ 3 ನೇ ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘೋರಿಯ ನಡುವೆ ನಡೆಯಿತು. ಈ ಯುದ್ಧದಲ್ಲಿ ದೆಹಲಿ ಮತ್ತು ಅಜ್ಮಿರ್ ರಾಜ್ಯಗಳ ದೊರೆಯಾಗಿದ್ದ ಪೃಥ್ವಿರಾಜ್ ಚೌಹಾಣ್ ನು ಘೋರಿಯನ್ನು ಸೋಲಿಸಿದನು.
9) ಪರ್ಷಿಯನ್ ಹೂಮರ್ ಎಂದು ಯಾರನ್ನು ಕರೆಯಲಾಗಿದೆ?
A). ಅಲ್ಬೆರೋನಿ
B). ಪಿರ್ದೌಸಿ
C). ಬಲ್ಬನ್
D). ಸೆಲ್ಯುಕಸ್
Correct Ans: (B)
ಪಿರ್ದೌಸಿಯ ಕೃತಿ "ಷಹನಾಮ" ಘಜ್ನಿ ಮಹ್ಮದ್ ನ ದಾಳಿಯ ಬಗ್ಗೆ ಮಾಹಿತಿ ನೀಡುತ್ತದೆ. ಪಿರ್ದೌಸಿಯನ್ನು ಪರ್ಷಿಯನ್ ಹೂಮರ್ ಎಂದು ಕರೆಯಲಾಗಿದೆ.
10) "ತಹ್ಕೀಕ್ ಇ ಹಿಂದ್" ಇದು ಯಾರ ಪ್ರಸಿದ್ಧ ಕೃತಿಯಾಗಿದೆ?
A). ಅಲ್ಬೆರೋನಿ
B). ಬಲ್ಬನ್
C). ಘಜ್ನಿ ಮಹ್ಮದ್
D). ಘೋರಿ ಮಹ್ಮದ್
Correct Ans: (A)
ಮಹ್ಮದ್ ಘಜ್ನಿಯು ಸೌರಾಷ್ಟ್ರ (ಗುಜರಾತ್)ದ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣ ನಾಶಮಾಡಿ ಅಪಾರ ಸಂಪತ್ತು ದೋಚಿ ಅಪಘಾನಿಸ್ತಾನದ ತನ್ನ ರಾಜ್ಯಕ್ಕೆ ಅಂದರೇ ಘಜ್ನಿಗೆ ಹೋದನು. ಇದರ ಬಗ್ಗೆ ಇತಿಹಾಸಕಾರ ಅಲ್ಬೆರೋನಿಯು ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಅಲ್ಬೆರೋನಿಯ ಪ್ರಸಿದ್ಧ ಕೃತಿ "ತಹ್ಕೀಕ್ ಇ ಹಿಂದ್" ಇದು ಘಜ್ನಿಯ ದಾಳಿಯ ಬಗ್ಗೆ ನಮಗೆ ತಿಳಿಸಿಕೊಡುತ್ತದೆ.
11) ಮಹ್ಮದ್ ಘೋರಿಯು ಯಾವ ಯುದ್ಧದಲ್ಲಿ ಸೋತನು?
A). ಮೊದಲನೇ ತರೈನ್ ಯುದ್ಧ
B). ಎರಡನೇ ತರೈನ್ ಯುದ್ಧ
C). ಮೂರನೇ ತರೈನ್ ಯುದ್ಧ
D). ಸೋತೇ ಇಲ್ಲ
Correct Ans: (A)
ಮೊದಲನೇ ತರೈನ್ ಯುದ್ಧದಲ್ಲಿ ಮಹ್ಮದ್ ಘೋರಿಯು ಕ್ರಿ.ಶ 1191 ರಲ್ಲಿ ಪೃಥ್ವಿರಾಜನಿಂದ ಸೋತನು. ನಂತರ ಕ್ರಿ.ಶ 1192 ರಲ್ಲಿ ಎರಡನೇ ತರೈನ್ ಯುದ್ಧದಲ್ಲಿ ಮಹ್ಮದ್ ಘೋರಿಯು ಪೃಥ್ವಿರಾಜನನ್ನು ಕೊಲೆ ಮಾಡಿದನು.
12) ಭಾರತದ ಮೇಲೆ ಹದಿನೇಳು ಬಾರಿ ಆಕ್ರಮಣ ಮಾಡಿದ ವಿದೇಶಿಗ ಯಾರು?
A). ಮಹ್ಮದ್ ಘೋರಿ
B). ಮಹ್ಮದ್ ಘಜ್ನಿ
C). ಅಲ್ಬುಕರ್ಕ್
D). ಅಮೀರ್ ಹಸನ್
Correct Ans: (B)
ಮಹ್ಮದ್ ಘಜ್ನಿ ಅಫಘಾನಿಸ್ತಾನದ ನಾಯಕ. ಇವನು ಕ್ರಿ.ಶ 1000 ದಿಂದ 1026 ರವರೆಗೆ ಭಾರತದ ಮೇಲೆ ಹದಿನೇಳು ಬಾರಿ ಆಕ್ರಮಣ ಮಾಡಿದನು. ಇವನು 1025 ರಲ್ಲಿ ಭಾರತದ ಮೇಲೆ ಹದಿನಾರನೆಯ ದಾಳಿ ನಡೆಸಿದ್ದು ಗುಜರಾತಿನ ಸೋಮನಾಥ ದೇವಾಲಯದ ಮೇಲೆ.
No comments:
Post a Comment
If you have any doubts please let me know