ಸ್ನೇಹಿತರೇ ವಿಜಯದಶಮಿಯಂದು ಭಾರತೀಯರೆಲ್ಲರೂ ಶಮೀವೃಕ್ಷದ ತಪ್ಪಲು (ಎಲೆ) ಗಳನ್ನು ಪರಸ್ಪರ ಹಂಚುವುದು ವಾಡಿಕೆ. ಹಾಗಾದರೆ ಇದರ ಹಿಂದಿನ ಮರ್ಮವೇನು..?? ಏತಕ್ಕಾಗಿ ಈ ಶಮೀವೃಕ್ಷದ ತಪ್ಪಲನ್ನು ಎಲ್ಲರಿಗೂ ಹಂಚಲಾಗುತ್ತದೆ..!? ಇದರ ಹಿಂದಿರುವ ಪೌರಾಣಿಕ ಕಥೆಯಾದರೂ ಏನು ಎಂಬುದು ಎಲ್ಲರಿಗೂ ಕುತೂಹಲ ಕೆರಳಿಸುವ ವಿಷಯ. ಮಿತ್ರರೇ ಇದರ ಹಿಂದೊಂದು ರೋಚಕವಾದ ಕಥೆಯಿದೆ. ಅದೇನೆಂದು ತಿಳಿಯಲು ಮುಂದೆ ಓದಿ...!!!!
ಭರತ ಚಕ್ರವರ್ತಿಯು ಷಟ್ಕಂಢಗಳನ್ನು ಗೆದ್ದು, ಭಾರತಕ್ಕೆ ಬಂದ ನಂತರ ತನ್ನ ಖಜಾನೆಯಲ್ಲಿರುವ ಸಂಪತ್ತುಗಳಾದ ವ್ರಜ, ವೈಢೂರ್ಯವನ್ನು ಆ ದಿನ ತನ್ನ ರಾಜ್ಯದ ಎಲ್ಲರಿಗೂ ಹಂಚುವಾಗ ಖಜಾನೆ ಖಾಲಿ ಆದಾಗ, ತಾನು ಕುಳಿತಿದ್ದ ಶಮಿ (ಬನ್ನಿ 🌲) ಮರದ 🌿 ತಪ್ಪಲುಗಳನ್ನು ಹಂಚುವರು. ಪುಣ್ಯವಂತರಿಗೆ ಆ ತಪ್ಪಲುಗಳು ವ್ರಜ, ವೈಢೂರ್ಯಗಳಾಗುತ್ತವೆ ಎಂದು ಪುರಾಣದಲ್ಲಿ ಬರುತ್ತದೆ. ಇದರ ಪ್ರಾಪ್ತಿಗಾಗಿ ಇಂದು ಬನ್ನಿ ಮರದ ಬನ್ನಿ ಕೊಟ್ಟು ತೆಗೆದುಕೊಳ್ಳುವ ಸಂಪ್ರದಾಯ ಆಚರಣೆಯಲ್ಲಿದೆ. ಬನ್ನಿ ಕೊಟ್ಟು ಬಾಳು ಬಂಗಾರವಾಗಿರಲಿ ಎಂದು ಅರಸುವುದು ವಾಡಿಕೆ.. 🌲🌿🙏🏻🙏
🏻
ವಿಜಯ ದಶಮಿ ನಮ್ಮೆಲ್ಲರ ಬಾಳಿಗೆ ವಿಜಯವನ್ನೇ ಸದಾ ತಂದುಕೊಡಲಿ,, ಜಗದ್ವಿಖ್ಯಾತ ದಸರಾ ಹಬ್ಬದಂತೆ ಹೆಸರು, ಕೀರ್ತಿ ಪಡೆಯುವಂತಾಗಲಿ..✌🏻✌🏻 ಎಲ್ಲರಿಗೂ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು
-Team Edutube Kannada
No comments:
Post a Comment
If you have any doubts please let me know