ಕೇರಳದಲ್ಲಿ ಮೊದಲ ಬಾರಿಗೆ ‘ಗ್ರೀನ್ ಚೆಕ್‌ಪೋಸ್ಟ್’
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾದ ‘ವಾಗಮನ್’ ಬೆಟ್ಟ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ‘ಗ್ರೀನ್ ಚೆಕ್‌ಪೋಸ್ಟ್’ಗಳನ್ನು ಕೇರಳ ಸರ್ಕಾರ ಸ್ಥಾಪಿಸಿದೆ.
ಇಲ್ಲಿನ ಪರಿಸರವನ್ನು ಕಾಪಾಡುವ ಉದ್ದೇಶದಿಂದ ಹಾಗೂ ಈ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಗುರಿಯನ್ನು ಇರಿಸಿಕೊಂಡು, ಬೆಟ್ಟಕ್ಕೆ ಇರುವ ಐದು ಪ್ರವೇಶ ಮಾರ್ಗಗಳಲ್ಲಿ ‘ಹರಿತ ಕೇರಳಂ’(ಹಸಿರು ಕೇರಳ)ಯೋಜನೆಯಡಿ ‘ಹಸಿರುಸೇನೆ’ಯನ್ನು ಸರ್ಕಾರ ನಿಯೋಜಿಸಿದೆ.
ಈ ಪ್ರದೇಶದಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಪರಿಸರಕ್ಕೆ ಹಾನಿಯಾಗದಂತೆ, ಹಿಂದಿನ ಸೌಂದರ್ಯವನ್ನು ಮರುಕಳಿಸುವ ಉದ್ದೇಶದಿಂದ ಈ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ.
No comments:
Post a Comment
If you have any doubts please let me know