Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Wednesday, 28 October 2020

2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ, ಇಲ್ಲಿದೆ ಪುರಸ್ಕೃತರ ಪಟ್ಟಿ

🌺 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ, ಇಲ್ಲಿದೆ ಪುರಸ್ಕೃತರ ಪಟ್ಟಿ 🌺


🎇 ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ 🎇

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ 1ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, 25 ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.

🎇 ರಾಜ್ಯೋತ್ಸವ ಪ್ರಶಸ್ತಿ ಇತಿಹಾಸ 🎇

ರಾಜ್ಯೋತ್ಸವ ಪ್ರಶಸ್ತಿಯನ್ನು 1966ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ: ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.

ಆದರೆ, 2007ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ್ ಥಾಕೂರ್ ಪ್ರದಾನ ಮಾಡಿದ್ದರು. ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ. 1985ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು 2008ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.

ಕನ್ನಡ ರಾಜ್ಯೋತ್ಸವದ 65ನೇ ವರ್ಷಾಚರಣೆ ಸಂದರ್ಭದಲ್ಲಿ 65 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ. ನಾಟ್ಯ ವಿಧೂಷಿ ಜ್ಯೋತಿ ಪಟ್ಟಾಭಿರಾಮ್, ಸಾಹಿತಿ ರಾಮಣ್ಣ ಬ್ಯಾಟಿ ಸೇರಿದಂತೆ ಒಟ್ಟು 65 ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

👉  2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ  ಪುರಸ್ಕೃತರ ಪಟ್ಟಿ

ಸಾಹಿತ್ಯ ಕ್ಷೇತ್ರ:  ಧಾರವಾಡ ಜಿಲ್ಲೆಯ ಪ್ರೊ.ಸಿ.ಪಿ.ಸಿದ್ದಾಶ್ರಮ, ಕೋಲಾರ ಜಿಲ್ಲೆಯ ವಿ.ಮುನಿವೆಂಕಟಪ್ಪ, ಗದಗ ಜಿಲ್ಲೆಯ ರಾಮಣ್ಣ ಬ್ಯಾಟಿ (ವಿಶೇಷ ಚೇತನ), ದಕ್ಷಿಣ ಕನ್ನಡ ಜಿಲ್ಲೆಯ ವಲೇರಿಯನ್ ಡಿಸೋಜ (ವಲ್ಲಿವಗ್ಗ), ಯದಗಿರಿ ಜಿಲ್ಲೆಯ ಡಿ.ಎನ್.ಅಕ್ಕಿ.
ಸಂಗೀತ ಕ್ಷೇತ್ರ:  ರಾಯಚೂರು ಜಿಲ್ಲೆಯ ಅಂಬಯ್ಯ ನೂಲಿ, ಬೆಳಗಾವಿ ಜಿಲ್ಲೆಯ ಅನಂತ ತೇರದಾಳ, ಬೆಂಗಳೂರು ನಗರದ ಬಿ.ವಿ.ಶ್ರೀನಿವಾಸ್, ಗಿರಿಜಾ ನಾರಾಯಣ, ದಕ್ಷಿಣ ಕನ್ನಡದ ಕೆ.ಲಿಂಗಪ್ಪ ಶರಿಗಾರ ಕಟೀಲು.
ಮಾಧ್ಯಮ:  ಮೈಸೂರಿನ ಸಿ.ಮಹೇಶ್ವರನ್, ಬೆಂಗಳೂರಿನ ಟಿ.ವೆಂಕಟೇಶ್ ( ಈ ಸಂಜೆ ಪತ್ರಿಕೆಯ ಸಂಪಾದಕರು).
ನ್ಯಾಯಾಂಗ:  ಬೆಂಗಳೂರಿನ ಕೆ.ಎನ್.ಭಟ್, ಉಡುಪಿಯ ಎಂ.ಕೆ.ವಿಜಯಕುಮಾರ್.
ಯೋಗ:  ಮೈಸೂರಿನ ಡಾ.ಎ.ಎಸ್.ಚಂದ್ರಶೇಖರ್
ಶಿಕ್ಷಣ:  ಚಿಕ್ಕಮಗಳೂರು ಜಿಲ್ಲೆಯ ಎಂ.ಎನ್.ಷಡಕ್ಷರಿ, ಚಾಮರಾಜನಗರದ ಡಾ.ಆರ್.ರಾಮಕೃಷ್ಣ, ದಾವಣಗೆರೆಯ ಡಾ.ಎಂ.ಜಿ.ಈಶ್ವರಪ್ಪ, ಬೆಳಗಾವಿಯ ಅಶೋಕ್ ಶೆಟ್ಟರ್, ಗದಗ ಜಿಲ್ಲೆಯ ಡಿ.ಎಸ್.ದಂಡಿನ್.
ಹೊರನಾಡು ಕನ್ನಡಿಗ:  ದಕ್ಷಿಣ ಕನ್ನಡ ಜಿಲ್ಲೆ ಮೂಲದ ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ಮಹಾರಾಷ್ಟ್ರ ರಾಜ್ಯದ ಮುಂಬೈನ ಮುಲುಂಡದ ವಿದ್ಯಾ ಸಿಂಹಾಚಾರ್ಯ ಮಾಹುಲಿ.
ಕ್ರೀಡೆ:  ತುಮಕೂರು ಜಿಲ್ಲೆಯ ಎಚ್.ಬಿ.ನಂಜೇಗೌಡ, ಬೆಂಗಳೂರು ನಗರದ ಉಷಾರಾಣಿ.
ಸಂಕೀರ್ಣ:  ಕೋಲಾರ ಜಿಲ್ಲೆಯ ಡಾ.ಕೆ.ವಿ.ರಾಜು, ಹಾಸನದ ನಂ.ವೆಂಕೋಬರಾವ್, ಮಂಡ್ಯದ ಡಾ.ಕೆ.ಎಸ್.ರಾಜಣ್ಣ (ವಿಶೇಷ ಚೇತನ) ಹಾಗೂ ಮಂಡ್ಯದ ವಿ.ಲಕ್ಷ್ಮೀನಾರಾಯಣ (ನಿರ್ಮಾಣ್).
ಸಂಘ-ಸಂಸ್ಥೆ:  ಬೆಂಗಳೂರು ನಗರದ ಯೂತ್ ಫಾರ್ ಸೇವಾ ಹಾಗೂ ಬೆಟರ್ ಇಂಡಿಯಾ, ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ, ಬೆಂಗಳೂರ ಗ್ರಾಮಾಂತರ ಜಿಲ್ಲೆಯ ಯುವ ಬ್ರಿಗೇಡ್, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಧರ್ಮೋತ್ತಾನ ಟ್ರಸ್ಟ್.
ಸಮಾಜ ಸೇವೆ:  ಉತ್ತರ ಕನ್ನಡ ಜಿಲ್ಲೆಯ ಎನ್.ಎಸ್.(ಕುಂದರಗಿ)ಹೆಗಡೆ, ಚಿಕ್ಕಮಗಳೂರಿನ ಪ್ರೇಮಾ ಕೋದಂಡರಾಮ ಶ್ರೇಷ್ಠಿ ಹಾಗೂ ಮೋಹಿನಿ ಸಿದ್ದೇಗೌಡ, ಉಡುಪಿಯ ಮಣೆಗಾರ್ ಮೀರಾನ್ ಸಾಹೇಬ್.

ಕೃಪೆ : ಈ ಸಂಜೆ ಪತ್ರಿಕೆ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads