ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್
ವಾರಣಸಿಯಲ್ಲಿ ಬೆಳೆದು ಬಿಎಚ್‌ಯು ಮತ್ತು ಎನ್‌ಸಿಸಿಯಲ್ಲೂ ಪಳಗಿದ ಶಿವಾಂಗಿ ಇನ್ನು ರಫೇಲ್ ಪೈಲಟ್. ಭಾರತೀಯ ವಾಯುಪಡೆಯ ರಾಫೇಲ್ ಸ್ಕ್ವಾಡ್ರನ್‌ನ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿ ಶಿವಾನಿ ನೇಮಕವಾಗಿದ್ದಾರೆ.
ಶಿವಾಂಗಿ ಸಿಂಗ್ ಈ ಹಿಂದೆ ಮಿಗ್ -21 ವಿಮಾನವನ್ನು ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ಈಗ ಅವರು ರಫೇಲ್ ಅವರ 17 ಗೋಲ್ಡನ್ ಆ್ಯರೋ ಸ್ಕ್ವಾಡ್ರನ್ (17 Golden Arrow Squadron) ತಂಡವನ್ನು ಸೇರಿದ್ದಾರೆ.
ಶಿವಾಂಗಿಗೆ ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ಶಿವಾಂಗಿ 2017ರಲ್ಲಿ ಭಾರತೀಯ ವಾಯುಪಡೆಗೆ ಸೇರಿದರು. ಅವರು ವಿಂಗ್ ಕಮಾಂಡರ್ ಅಭಿನಂದನ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಶಿವಾಂಗಿ ಜುಲೈ 2016ರಲ್ಲಿ ಮೈಸೂರಿನಲ್ಲಿ ನಡೆದ ಕಾಮನ್ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. ಬಳಿಕ ಇಲ್ಲಿಂದಲೇ ಅವರು ವಾಯುಪಡೆಯ ತರಬೇತಿಯನ್ನು ಪ್ರಾರಂಭಿಸಿದ್ದಾರೆ.
No comments:
Post a Comment
If you have any doubts please let me know