"¤ªÀÄVzÀÄ UÉÆvÉÛ?"
ಎರಡು ಭಾಷೆಗಳನ್ನು ಕೇಂದ್ರ ಸರ್ಕಾರ ಆಡಳಿತ ಭಾಷೆಯನ್ನಾಗಿ ಬಳಸಲಾಗುತ್ತಿದೆ.
ಮೊದಲನೇ ಭಾಷೆ ಹಿಂದಿಯನ್ನು, ಎರಡನೇ ಭಾಷೆಯನ್ನಾಗಿ ಇಂಗ್ಲೀಷ್ ಅನ್ನು ಬಳಸಲಾಗುತ್ತಿದೆ.
ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ರಾಷ್ಟ್ರದಾದ್ಯಂತ ಉತ್ತೇಜಿಸಲು 1986ರಿಂದ ಎರಡು ಪ್ರಮುಖ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ. ಪ್ರತಿ ವರ್ಷವೂ ಕೇಂದ್ರ ಸರ್ಕಾರದ ಇಲಾಖೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು ಒಳಗೊಂಡಂತೆ ಸಾಧನೆ ತೋರಿದ ಇಬ್ಬರಿಗೆ 'ಇಂದಿರಾಗಾಂಧಿ ರಾಜ ಭಾಷಾ ಪುರಸ್ಕಾರ' ಹಾಗೂ 'ರಾಜೀವ್ ಗಾಂಧಿ ಜ್ಞಾನ-ವಿಜ್ಞಾನ ಮೌಲಿಕ ಲೇಖನ್ ಪುರಸ್ಕಾರ'ಗಳನ್ನು ಕೇಂದ್ರ ಸರ್ಕಾರ ಪ್ರಶಸ್ತಿಗಳನ್ನು ನೀಡುತ್ತಿದೆ. ಈ ಪುರಸ್ಕಾರಗಳ ಹೆಸರನ್ನು 2015ರಿಂದ ಬದಲಾಯಿಸಲಾಗಿದೆ.
ಇಂದಿರಾಗಾಂಧಿ ರಾಜಭಾಷಾ ಪುರಸ್ಕಾರ ಪ್ರಶಸ್ತಿಯ ಹೆಸರನ್ನು 'ರಾಜಭಾಷಾ ಕೀರ್ತಿ ಪುರಸ್ಕಾರ' ಮತ್ತು ರಾಜೀವ್ ಗಾಂಧಿ ಜ್ಞಾನ- ವಿಜ್ಞಾನ ಮೌಲಿಕ ಪುಸ್ತಕ ಲೇಖನ ಪುರಸ್ಕಾರದ ಹೆಸರನ್ನು 'ರಾಜಭಾಷಾ ಗೌರವ್ ಪುರಸ್ಕಾರ' ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
* ಹಿಂದಿ ಅತಿ ಹೆಚ್ಚು ಮಾತನಾಡುವ ವಿಶ್ವದ ನಾಲ್ಕನೇ ಭಾಷೆಯಾಗಿದೆ
No comments:
Post a Comment
If you have any doubts please let me know