🌺🌺 ಪ್ರಿಯ ಮಿತ್ರರೇ,
ಹಲವಾರು #ಟಿಇಟಿ_ಸ್ಪರ್ಧಾಕಾಂಕ್ಷಿಗಳ ಅಪೇಕ್ಷೆಯ ಮೇರೆಗೆ ಈ ಅಮೂಲ್ಯವಾದ ಮಾಹಿತಿ 🌺🌺
⭕ ಶೈಕ್ಷಣಿಕ ಮನೋವಿಜ್ಞಾನದ ಸೂಪರ್ ಹಿಟ್ 70 ಪ್ರಶ್ನೋತ್ತರಗಳು ⭕
👉 ನಿಮಗಾಗಿ
#ಶೇರ್_ಮಾಡಿ
🌺⭕ ಶೈಕ್ಷಣಿಕ ಮನೋವಿಜ್ಞಾನ ⭕🌺
1) ಪದಯುತ್ಪತ್ತಿಯ ಪ್ರಕಾರ ಮನೋವಿಜ್ಞಾನವೆಂದರೇನು ?
ಎ) ವರ್ತನೆಯ ಅಧ್ಯಯನ
ಬಿ) ಪ್ರಜ್ಞಾವಸ್ಥೆಯ ಅಧ್ಯಯನ
ಸಿ) ಆತ್ಮದ ಅಧ್ಯಯನ *
ಡಿ) ಮನಸ್ಸಿನ ಅಧ್ಯಯನ
2) ವ್ಯಾಟ್ಸನ್ ರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ ಅಧ್ಯಯನವಾಗಿದೆ
ಎ) ಮನಸ್ಸು
ಬಿ ) ಆತ್ಮ
ಸಿ) ವರ್ತನೆ *
ಡಿ) ಪ್ರಜ್ಞಾವಸ್ಥೆ
3) ಶೈಕ್ಷಣಿಕ ಮನೋವಿಜ್ಞಾನ ಈ ಕೆಳಕಂಡ ಯಾವುದರ ಶಾಖೆಯಾಗಿದೆ?
ಎ) ತುಲನಾತ್ಮಕ ಮನೋವಿಜ್ಞಾನ
ಬಿ) ಅನ್ವಯಿಕ ಮನೋವಿಜ್ಞಾನ *
ಸಿ) ಸಾಮಾನ್ಯ ಮನೋವಿಜ್ಞಾನ
ಡಿ) ಶುದ್ಧ ಮನೋವಿಜ್ಞಾನ
4) ಬುದ್ಧಿಶೆಕ್ತಿಯನ್ನು ಮೂಲತ; ಈ ಕೆಳಕಂಡ ಯಾವ ಶಾಖೆಯಲ್ಲಿ ಅಧ್ಯಯನ ಮಾಡಲಾಗುತ್ತದೆ
ಎ) ಔದ್ಯೋಗಿಕ ಮನೋವಿಜ್ಞಾನ
ಬಿ) ವ್ಯಕ್ತಿತ್ವ ಮನೋವಿಜ್ಞಾನ
ಸಿ) ಶೈಕ್ಷಣಿಕ ಮನೋವಿಜ್ಞಾನ
ಡಿ) ಸಾಮಾನ್ಯ ಮನೋವಿಜ್ಞಾನ *
5) ಶೈಕ್ಷಣಿಕ ಮನೋವಿಜ್ಞಾನವು ಏನನ್ನು ಅಧ್ಯಯನ ಮಾಡುತ್ತದೆ
ಎ) ಆತ್ಮ
ಬಿ) ವರ್ತನೆ *
ಸಿ) ಮನಸ್ಸು
ಡಿ) ಪ್ರಜ್ಞೆ
6) ಶೈಕ್ಷಣಿಕ ಮನೋವಿಜ್ಞಾನ ಮೂಲತ:
ಎ) ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮನೋವಿಜ್ಞಾನ *
ಬಿ) ಶಿಕ್ಷಕ ಮನೋವಿಜ್ಞಾನ
ಸಿ) ತರಗತಿಯ ವಿದ್ಯಾರ್ಥಿಗಳ ಮನೋವಿಜ್ಞಾನ
ಡಿ) ಶಿಕ್ಷಣ ಸಂಸ್ಥೆಗಳ ಅಧ್ಯಯನ
7) ಅಂತರಾವಲೋಕನ ವಿಧಾನ
ಎ) ವಸ್ತು ನಿಷ್ಠವಾದುದು
ಬಿ) ವ್ಯಕ್ತಿ ನಿಷ್ಠವಾದುದು *
ಸಿ) ಸಮಂಜಸವಾದುದು
ಡಿ) ವಿಶ್ವಾಸರ್ಹವಾದುದು
8 ) ಅಂತರ್ವೀಕ್ಷಣಾ ವಿಧಾನವನ್ನು ಮನೋವಿಜ್ಞಾನದ ಅಧ್ಯಯನ ವಿಧಾನವಾಗಿ ಪರಿಚಯಿಸಿದವರು.?
ಎ) ರಚನಾವಾದಿಗಳು *
ಬಿ) ವರ್ತನಾವಾದಿಗಳು
ಸಿ) ಮನೋವಿಶ್ಲೇಷಣಾವಾದಿಗಳು
ಡಿ) ಗೆಸ್ಟಾಲ್ ವಾದಿಗಳು
9) ಮೊದಲ ಮನೋವಿಜ್ಞಾನದ ಪ್ರಯೋಗಾಲಯವನ್ನು ಸ್ಥಾಪಿಸಿದವರು
ಎ) ವಿಲಿಯಂ ಜೇಮ್ಸ್
ಬಿ) ಸಿಗ್ಮಂಡ್ ಫ್ರಾಯ್ಡ್
ಸಿ) ವುಡ್ ವರ್ತ್
ಡಿ)ವಿಲ್ ಹೆಲ್ಮ್ ವೊಂಟ್ *
10) ಮೊದಲ ಮನೋವಿಜ್ಞಾನದ ಪ್ರಯೋಗಾಲಯವನ್ನು ಇಲ್ಲಿ ಸ್ಥಾಪಿಸಲಾಯಿತು.?
ಎ) ಮಿನ್ನೆಸೋಟ್
ಬಿ) ಪ್ಯಾರಿಸ್
ಸಿ)ಪ್ರಾಂಕ್ ಫರ್ಟ್
ಡಿ) ಲಿಪ್ಜಿಗ್ *
11)ಅಂತರ್ವೀಕ್ಷಣಾ ವಿಧಾನವನ್ನು ಟೀಕಿಸಿದ ಮನೋವಿಜ್ಞಾನಿಗಳು.?
ಎ) ಗೆಸ್ಟಾಲ್ಟ್ ವಾದಿಗಳು
ಬಿ) ವರ್ತನಾವಾದಿಗಳು ★
ಸಿ) ಕ್ರಿಯಾತ್ಮಕವಾದಿಗಳು
ಡಿ) ರಚನಾವಾದಿಗಳು
12) ವರ್ತನೆಯ ಅಧ್ಯಯನದ ತುಂಬಾ ನಿಖರವಾದ ಮತ್ತು ವಸ್ತು ನಿಷ್ಠವಾದ ವಿಧಾನವೆಂದರೆ.?
ಎ) ವ್ಯಕ್ತಿಚರಿತ್ರೆ ವಿಧಾನ
ಬಿ)ಚಿಕಿತ್ಸಾ ವಿಧಾನ
ಸಿ) ವೀಕ್ಷಣಾ ವಿಧಾನ
ಡಿ) ಪ್ರಾಯೋಗಿಕ ವಿಧಾನ ★
13) ಸಮಸ್ಯಾತ್ಮಕ ವ್ಯಕ್ತಿಯನ್ನು ಆಳವಾಗಿ ಅಧ್ಯಯನ ಮಾಡಲು ಸೂಕ್ತವಾದ ಮನೋವಿಜ್ಞಾನಿಕ ವಿಧಾನ.?
ಎ) ಅಂತರ್ವೀಕ್ಷಣೆ
ಬಿ) ವೀಕ್ಷಣೆ
ಸಿ) ಪ್ರಾಯೋಗಿಕ ವಿಧಾನ
d) ವ್ಯಕ್ತಿಅಧ್ಯಯನ ★
14) ಪ್ರಶ್ನಾವಳಿಯ ವಿಧಾನವನ್ನು ಪರಿಚಯಿಸಿದವರು.?
ಎ) ಗೆಸೆಲ್
ಬಿ) ಸ್ಟ್ಯಾನ್ಲಿಹಾಲ್ ★
ಸಿ) ಪಿಯಾಜಿ
ಡಿ)ವೂಂಟ್
15)ಕಿಂಡರ್ ಗಾರ್ಟನ್ ವಿಧಾನದ ಶಿಕ್ಷಣವನ್ನು ಪರಿಚಯಿಸಿದ ಶಿಕ್ಷಣತಜ್ಞರು.?
ಎ) ಮಾಂಟೇಸೋರಿ
ಬಿ) ಜಾನ್ ಲಾಕ್
ಸಿ) ಫ್ರೆಡರಿಕ ಫ್ರೊಬೆಲ್ ★
ಡಿ) ಆಲ್ ಫ್ರೆಡ್ ಬೀನೆ
16) ಶಿಕ್ಷಕರ ತರಬೇತಿಗಾಗಿ ಮೊದಲಿಗೆ ತರಬೇತಿ ಶಾಲೆಯನ್ನು ಆರಂಭಿಸಿದವರು ಯಾರು.?
ಎ) ಜಾನ್ ಹೆನ್ರಿ ಪೆಸ್ಟಾಲಜಿ ★
ಬಿ) ಪ್ರೊಬೆಲ್
ಸಿ) ಜಾನ್ ಫ್ರೆಡರಿಕ್ ಹಬಾರ್ಟ್
ಡಿ) ಟರ್ಮನ್
17) ವರ್ಣ ತಂತುಗಳಲ್ಲಿ ಅನುವಂಶೀಯ ಗುಣಗಳನ್ನು ಹೊಂದಿರುವ ಅಂಶಗಳಾವು಼ವು
ಎ) ಪರಮಾಣಗಳು
ಬಿ) ಅಣುಗಳು
ಸಿ) ಪ್ರೋಟನ್ ಗಳು
ಡಿ) ಗುಣಾಣುಗಳು ★
18) ೨೩ನೇ ಜೊತೆ ವರ್ಣತಂತುಗಳನ್ನು ಈ ರೀತಿಯಲ್ಲಿ ಕರೆಯುವರು
ಎ) ಅನುವಂಶೀಯ ವರ್ಣತಂತು
ಬಿ) ಲಿಂಗನಿರ್ಧಾರಕ ವರ್ಣತಂತು ★
ಸಿ) ರೋಗ ನಿರ್ಧಾರಕ ವರ್ಣತಂತು
ಡ) ಬಣ್ಣದ ವರ್ಣತಂತು
19) x ಮತ್ತು y ವರ್ಣತಂತುಗಳೆರಡು ಕಂಡು ಬರುವುದು ಈ ಕೆಳಗಿನ ಯಾವ ಕೋಶಗಳಲ್ಲಿ
ಎ) ಹೆಣ್ಣು ಲಿಂಗಾಣುಗಳು
ಬಿ) ಗಂಡು ಲಿಂಗಾಣುಗಳು ★
ಸಿ) ಮೆದುಳಿನ ಕೋಶಗಳು
ಡಿ ) ಮಾನವನ ಕೋಶಗಳು
20) ಮಗುವಿನ ಲಿಂಗ ನಿರ್ಧಾರ ವಾಗುವುದು
ಎ) ತಾಯಿಯ ವರ್ಣತಂತುಗಳಿಂದ
ಬಿ) ತಂದೆಯ ವರ್ಣತಂತುಗಳಿಂದ ★
ಸಿ) ನೈಜ ಆಕಸ್ಮಿಕತೆಯಿಂದ
ಡಿ) ತಂದೆ ತಾಯಿಯ ವರ್ಣತಂತುಗಳಿಂದ
21) ಮಾನವನಲ್ಲುಂಟಾಗುವ ಗುಣಾತ್ಮಕ ಬದಲಾವಣಿಗಳನ್ನು ..........ಎಂದು ಕರೆಯುವರು
ಎ)ಬೆಳವಣಿಗೆ
ಬಿ) ವಿಕಾಸ ★
ಸಿ) ಪರಿಪಕ್ವನ
ಡಿ) ವ್ಯಕ್ತಿತ್ವ
22)ಪರಿಪಕ್ವನಕಿಂತ ಮುಂದಾಗಿ ತರಬೇತಿ ನೀಡುವುದು-
ಎ) ಸಾಮಾನ್ಯವಾಗಿ ಉಪಯುಕ್ತವಾದುದು
ಬಿ) ಸಾಮಾನ್ಯವಾಗಿ ನಿರರ್ಥಕ ★
ಸಿ) ಸಾಮಾನ್ಯವಾಗಿ ತೊಂದರೆ ಉಂಟುಮಾಡುವಂಥದ್ದು
ಡಿ) ಮೇಲಿನ ಯಾವುದು ಅಲ್ಲ
23) ವ್ಯಕ್ತಿಯ ಬೆಳವಣಿಗೆಯ ಯಾವ ಅವಧಿಯನ್ನು ಕೂಟಯುಗ ಎಂದು ಕರೆಯುತ್ತಾರೆ ?
ಎ) ಉತ್ತರ ಬಾಲ್ಯ ★
ಬಿ) ತಾರುಣ್ಯವ್ಯವಸ್ಥ
ಸಿ) ಪೂರ್ವಬಾಲ್ಯ
ಡಿ) ಪ್ರೌಢಾವಸ್ಥೆ
24) ವ್ಯಕ್ತಿಯ ಜೀವಮಾನದ ೬ ರಿಂದ ೧೨ ವಯಸ್ಸಿನವರೆಗೆ ಇರುವ ಅವಧಿಯನ್ನು ........ಎಂದು ಕರೆಯುತ್ತಾರೆ
ಎ) ತಾರುಣ್ಯ
ಬಿ) ಪೂರ್ವಬಾಲ್ಯ
ಸಿ) ಉತ್ತರ ಬಾಲ್ಯ ★
ಡಿ) ಪ್ರೌಢಾವಸ್ಥೆ
25)ಕೂಟ ಪೂರ್ವ ಯುಗ ಪ್ರಶ್ನಿಸುವ ವಯಸ್ಸು ಮತ್ತು ಅನುಕರಣಿಯ ವಯಸ್ಸು ಎಂದು ಮನೋವಿಜ್ಞಾನಿಗಳು ಪರಿಗಣಿಸಿರುವ ವಿಕಾಸದ ಹಂತ ಯಾವುದು ?
ಎ) ಪೂರ್ವ ತಾರುಣ್ಯ
ಬಿ) ಪೂರ್ವ ಬಾಲ್ಯ ★
ಸಿ) ಉತ್ತರ ಬಾಲ್ಯ
ಡಿ) ತಾರುಣ್ಯವಸ್ಥೆ
26) ತಾರುಣ್ಯವಸ್ಥೆಯ ಬೆಳವಣಿಗೆಯ ತತ್ವಗಳಲ್ಲಿ ಶೀಘ್ರಬೆಳವಣಿಗೆಯ ತತ್ವ ನೀಡಿದವರಾರು ?
ಎ) ಇ ಬಿ ಹರ್ಲಾಕ್
ಬಿ) ಥಾರ್ನಡೈಕ್
ಸಿ) ಸ್ಟಾನ್ಲಿಹಾಲ್ ★
ಡ್) ಪ್ರನ್ಸಿಸ್ ಗಾಲ್ಟನ್
27) ಹೆಚ್ಚಿನ ದೈಹಿಕ ಶಕ್ತಿ ಬಳಸಿ ಆಟವಾಡುವಂತಹ ಕ್ರೀಡೆಗಳಲ್ಲಿ ಹುಡುಗರ ಆಸಕ್ತಿ ಯಾವ ಹಂತದಲ್ಲಿ ಅತೀ ಹೆಚ್ಚಾಗಿರುತ್ತದೆ
ಎ) ಪೂರ್ವ ಬಾಲ್ಯ
ಬಿ) ಉತ್ತರಬಾಲ್ಯ ★
ಸಿ) ಹದಿಹರೆಯ
ಡಿ) ವಯಸ್ಕಹಂತ
28) ಪಿಯಾಜಿಯವರು ಜ್ಞಾನಾತ್ಮಕ ವಿಕಾಸದಲ್ಲಿ ...........ಪ್ರಮುಖ ಹಂತಗಳನ್ನು ಗುರ್ತಿಸಿದ್ದಾರೆ
ಎ) ಎರಡು
ಬಿ) ಮೂರು
ಸಿ) ನಾಲ್ಕು ★
ಡಿ) ಐದು
29) ಸಂವೇದನಾ ಗತಿ ಹಂತ ಒಳಗೊಳ್ಳುವ ಕಾಲ ಜೀವನದ ಮೊದಲ
ಎ) ೧ವರ್ಷ
ಬಿ) ೨ವರ್ಷ ★
ಸಿ) ೪ವರ್ಷ
ಡಿ) ೬ವರ್ಷ
30) ಬ್ರೂನರ್ ರವರ ಜ್ಞಾನಾತ್ಮಕ ಬೆಳವಣಿಗೆಯ ಹಂತಗಳಲ್ಲಿ ಪ್ರಮುಖ ಅಂಶಗಳ ಸರಿಯಾದ ಅನುಕ್ರಮ
ಎ) ಕ್ರಿಯೆ,ಬಿಂಬ, ಪದಗಳು ★
ಬಿ) ಬಿಂಬ,ಕ್ರಿಯೆ, ಪದಗಳು
ಸಿ) ಪದಗಳು,ಕ್ರಿಯೆ,ಬಿಂಬ
ಡಿ) ಕ್ರಿಯ.ಪದಗಳು, ಬಿಂಬ
31) ಸಾಮಾನ್ಯಕಂಡುಬರುವಂತೆ ಹುಡುಗಿಯರು
ಎ) ಹುಡುಗರಿಗಿಂತ ಕಡಿಮೆ ಅಸೊಯ ಭಾವನೆ ಹೊಂದಿರುತ್ತಾರೆ
ಬಿ) ಹುಡುಗರಷ್ಟೆ ಅಸೊಯ ಭಾವನೆ ತೋರುತ್ತಾರೆ
ಸಿ) ಅಸೊಯವನ್ನು ಹೊಂದಿರುವುದಿಲ್ಲ
ಡಿ) ಹುಡುಗರಿಗಿಂತ ಹೆಚ್ಚು ಅಸೊಯ ಭಾವನೆ ಹೊಂದಿರುತ್ತಾರೆ ★
32) ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳು ಆಗಾಗ್ಗೆ ಕಾಣಿಸಿಕೊಳ್ಳಲು ಕಾರಣ
ಎ) ಪರಿಸರ ಸಮಸ್ಯಗಳು
ಬಿ) ಪೋಷಕರ ಮನೋಭಾವ
ಸಿ) ಪೋಷಕರ ತಿರಸ್ಕಾರ
ಡಿ) ಮೇಲಿನ ಎಲ್ಲವೂ ★
33) ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಪ್ರಮುಖಪಾತ್ರ ನಿರ್ವಹಿಸುವ ಗ್ರಂಥಿ ....
ಎ) ಅಡ್ರಿನಲ್ ಗ್ರಂಥಿ ★
ಬಿ) ಥೈರಯಿಡ್ ಗ್ರಂಥಿ
ಸಿ) ಪಿಟ್ಯೂಟರಿ ಗ್ರಂಥಿ
ಡಿ) ಪ್ಯಾರಾ ಥೈರಯಿಡ್ ಗ್ರಂಥಿ
34)ವರ್ತನಾವಾದಿ ಮನೋವಿಜ್ಞಾನಿಗಳ ಗುಂಪಿಗೆ ಸೇರದ ಮನೋವಿಜ್ಞಾನಿ
ಎ) ಸ್ಕಿನ್ನರ್
ಬಿ) ಕೋಹ್ ಲರ್ ★
ಸಿ) ಗುತ್ರಿ
ಡಿ) ಥಾರ್ನ್ ಡೈಕ್
35)ಬೆಳವಣಿಗೆ ಮತ್ತು ವಿಕಾಸ ಇವುಗಳ ನಡುವಣ ಸಂಬಂಧದ ಬಗ್ಗೆ ಯಾವ ಹೇಳಿಕೆ ಸರಿಯಾದುದಾಗಿದೆ
ಎ) ವಿಕಾಸ ಬೆಳವಣಿಗೆಯನ್ನು ಒಳಗೊಳ್ಳುತ್ತದೆ ★
ಬಿ) ಬೆಳವಣಿಗೆ ಮತ್ತು ವಿಕಾಸ ಒಂದೇ ಆಗಿವೆ
ಸಿ) ಮೇಲಿನವುಗಳಲ್ಲಿ ಯಾವುದು ಅಲ್ಲ
ಡಿ) ಬೆಳವಣಿಗೆ ವಿಕಾಸಕ್ಕಿಂತಲೂ ಹೆಚ್ಚಾದುದು
36) ಬಹುಮುಖ ವಿಕಸನವು ಈ ಮೂಲಕ ಸಾದ್ಯವಾಗಬಲ್ಲದು
ಎ) ಶಿಕ್ಷಕರು
ಬಿ) ಬೌದ್ಧಿಕ ಸಾಮಾರ್ಥ್ಯಗಳು
ಸಿ) ಜ್ಞಾನವಲಯ ಭಾವನಾತ್ಮಕ ವಲಯ ಮತ್ತು ಸೈಕೋಮೋಟರ್ ವಲಯ ★
ಡಿ) ಭಾವನೆಗಳ ಪ್ರಬುದ್ಧತೆ
37) ವ್ಯಕ್ತಿಯ ವಿಕಾಸದ ಹಂತಗಳಲ್ಲಿ ಅತ್ಯಂತ ಕಡಿಮೆ ಅವದಿಯ ಹಂತ ....
ಎ) ಶೈಶವ ★
ಬಿ) ಮಧ್ಯವಯಸ್ಸು
ಸಿ)ವ್ರದ್ದಪ್ಯ
ಡಿ ) ತಾರುಣ್ಯ
38) ಪರಿಪಕ್ವನ ಈ ಕೆಳಗಿನ ಯಾವುದರಲ್ಲಿ ಸಹಾಯ ಮಾಡುತ್ತದೆ ...
ಎ) ಕಲಿಕೆ ★
ಬಿ) ಕಲ್ಪನೆ
ಸಿ) ಹಗಲುಗನಸು
ಡಿ) ಸ್ಮ್ರತಿ
39) ಮಗುವಿನ ಹಸುಳೆತನದ ಅವಧಿ....
ಎ) ೩ನೇ ವಾರದಿಂದ ೬ತಿಂಗಳವರೆಗೆ
ಬಿ) ೩ನೇವಾರದಿಂದ ೧೨ತಿಂಗಳವರೆಗೆ
ಸಿ) ೩ನೇವಾರದಿಂದ ೧೮ತಿಂಗಳವರೆಗೆ
ಡಿ) ೩ನೇ ವಾರದಿಂದ ೨೪ ತಿಂಗಳವರೆಗೆ ★
40) ವಿಕಾಸ ಸಂಬಂಧ ಕ್ರಿಯಗಳು ಎಂಬ ಪರಿಕಲ್ಪನೆಯನ್ನು ಹೆಚ್ಚು ಪ್ರಚಾರಪಡಿಸಿದವರು
ಎ) ಸ್ಕಿನ್ನರ್
ಬಿ) ವೆಷ್ಲರ್
ಸಿ) ಹ್ಯಾವಿಗರ್ಸ್ಟ ★
ಡಿ )ಜೇರ್ಸಿಲ್ಡ್
41) ಮಾನವನಲ್ಲಿಂಟಾಗುವ ಪರಿಮಾಣಾತ್ಮಕ ಬದಲಾವಣೆಗಳನ್ನು ......... ಎನ್ನುತೇವೆ
ಎ) ಬೆಳವಣಿಗೆ ★
ಬಿ) ವಿಕಾಸ
ಸಿ) ವ್ಯಕ್ತಿತ್ವ
ಡಿ) ಪರಿಪಕ್ವನ
42) ತಳಿಶಾಸ್ತ್ರದ ಪಿತಾಮಹ....
ಎ) ಚಾರ್ಲ್ಸ್ ಡಾರ್ವಿನ್
ಬಿ) ಜಾನ್ ಗ್ರಿಗೋರ್ ಮೆಂಡೆಲ್ ★
ಸಿ) ಬ್ರೌನ್ ಜಿ ಎಚ್
ಡಿ) ಜೆನ್ ಸನ್
43) ಒಂದು ಮಗು ತನ್ನ ತಂದೆ ತಾಯಂದಿರಿಂದ ಅನುವಂಶೀಯವಾಗಿ ಪಡೆದುಕೊಳ್ಳುವ ಒಟ್ಟು ವರ್ಣತಂತುಗಳ ಸಂಖ್ಯೆ -
ಎ) ೪೨
ಬಿ) ೪೪
ಸಿ) ೪೬ ★
ಡಿ) ೪೮
44) ಈ ಕೆಳಗಿನವುಗಳಲ್ಲಿ ಯಾವುದು ವೈಯಕ್ತಿಕ ಬುದ್ಧಿಶಕ್ತಿ ಪರೀಕ್ಷೆಗೆ ಊದಾಹರಣೆಯಾಗಿದೆ
ಎ) ಸ್ಟಾನ್ ಫೋರ್ಡ್ ಬೀನೆ ಪರೀಕ್ಷೆ ★
ಬಿ) ಒಟಿಸ್ ಪರೀಕ್ಷೆ
ಸಿ) ಆರ್ಮಿ ಆಲ್ಪಾ
ಡಿ) ಆರ್ಮಿ ಬೀಟಾ
45) ಮಕ್ಕಳಿಗಾಗಿ ಮೊಟ್ಟಮೊದಲ ಬುದ್ಧಿಪರೀಕ್ಷೆಯನ್ನು ರೂಪಿಸಿದ ಮನೋವಿಜ್ಞಾನಿ
ಎ) ಟರ್ಮನ್
ಬಿ) ಬೀನೆ ★
ಸಿ) ತರ್ಸ್ಟೋನ್
ಡಿ) ಗಾಲ್ಟನ್
46) ಮೊದಲ ಸಮೂಹ ಬದ್ಧಿಶಕ್ತಿ ಪರೀಕ್ಷೆ ಯಾವುದು
ಎ) ವೆಷ್ಲರ್ ಬುದ್ಧಿಶಕ್ತಿ ಪರೀಕ್ಷೆ
ಬಿ) ಟಿ ಎ ಟಿ
ಸಿ) ಸ್ಟಾನ್ ಫೋರ್ಡ್ ಬೀನೆ ಪರೀಕ್ಷೆ
ಡಿ) ಆರ್ಮಿ ಆಲ್ಟಾ ★
೪7) ಬುದ್ಧಿಶಕ್ತಿಯ ದ್ವಿಕಾರಕ ಸಿದ್ಧಾಂತವನ್ನು ಪ್ರತಿಪಾದಿಸಿದವರು
ಎ) ಗಿಲ್ ಪೋರ್ಡ್
ಬಿ) ಗಾಲ್ಟನ್
ಸಿ) ಸ್ಪಿಯರ್ ಮನ್ ★
ಡಿ) ತರ್ಸ್ಟೋನ್
48) ಬುದ್ಧಿಶಕ್ತಿ ತುಂಬಾ ವೇಗವಾಗಿ ವಿಕಾಸಗೊಳ್ಳುವ ಹಂತ
ಎ)ಶೈಶವ
ಬಿ) ಬಾಲ್ಯಾವಸ್ಥೆ ★
ಸಿ) ವಯಸ್ಕತನ
ಡಿ) ಮಧ್ಯವಯಸ್ಸು
49) ಪ್ರತಿಭಾನ್ವಿತ ಮಕ್ಕಳಿಗೆ ಸೂ಼ಚಿಸಿರುವ ಪರಿಹಾರ ಕ್ರಮಗಳು-
ಎ)ವೇಗವರ್ಧನ
ಬಿ) ಪ್ರತ್ಯೇಕೀಕರಣ
ಸಿ) ಸಂಪದೀಕರಣ
ಡಿ)ಮೇಲಿನ ಎಲ್ಲವೂ ★
50)ಸೃಜನಾತ್ಮಕ ಪ್ರಕ್ರಿಯೆಯು ಒಳಗೊಂಡಿರುವ ಹಂತಗಳು/ಸೋಪಾನಗಳು
ಎ) ೨
ಬಿ) ೩
ಸಿ) ೪ ★
ಡಿ) ೫
51) ಪ್ರಗತಿಶೀಲ ಮಾತೃಕೆಗಳ ಪರೀಕ್ಷೆಯ ಕರ್ತೃ
ಎ) ರೇವನ್ ★
ಬಿ) ಶ್ರೀಮಾಲಿ
ಸಿ) ಬೀನೇ
ಡಿ) ಜಲೋಟಾ
52) ರಾಮನ ಬುದ್ಧಿಶಕ್ತಿಯ ಸೂಚ್ಯಾಂಕ ೧೫೦ ಮತ್ತು ಮಾನಸಿಕ ವಯಸ್ಸು ೯ ವರ್ಷಗಳಾದರೆ ಅವನ ನಿಜವಾದ ವಯಸ್ಸು ಎಷ್ಟು ?
ಎ) ೮ ವರ್ಷ
ಬಿ) ೬ ವರ್ಷ ★
ಸಿ) ೧೦ ವರ್ಷ
ಡಿ) ೯ ವರ್ಷ
೫3) ಕನ್ನಡದಲ್ಲಿ ಬುದ್ಧಿಶಕ್ತಿ ಮಾಪನಗಳನ್ನು ಅಭಿವೃದ್ಧಿ ಪಡಿಸಿದವರು
ಎ) ಟರ್ಮನ್
ಬಿ) ಭೀನೆ
ಸಿ) ವಿ ವಿ ಕಾಮತ್ ★
ಡಿ) ವೆಷ್ಲರ್
54) ವ್ಯಕ್ತಿ ವ್ಯಕ್ತಿಗಳಲ್ಲಿ ಕಂಡುಬರುವ ವ್ಯತ್ಯಾಸವನ್ನು .......ಎಂದು ಕರೆಯುವರು
ಎ) ವೈಯಕ್ತಿಕ ಭಿನ್ನತೆ ★
ಬಿ) ವ್ಯಕ್ತಿತ್ವದ ಭಿನ್ನತೆ
ಸಿ) ವೈಯಕ್ತಿಕ ಲಕ್ಷಣ
ಡಿ) ಸಾಮಾಜಿಕ ಭಿನ್ನತೆ
55) ಹಿಂದುಳಿಯುವಿಕೆಯ ತೀವ್ರತೆಯನ್ನು ಯಾವುದರಿಂದ ಅರಿಯಬಹುದು
ಎ) ಶೈಕ್ಷಣಿಕ ಸಾದನೆ
ಬಿ) ಐ ಕ್ಯೂ ★
ಸಿ) ಸಂಖ್ಯಾಶಾಸ್ತ್ರದಿಂದ
ಡಿ) ವೀಕ್ಷಣೆಯಿಂದ
56) ಮಾನಸಿಕ ನ್ಯೂನತೆಯುಳ್ಳವರಲ್ಲಿ ಕಂಡುಬರುವ ಬುದ್ಧಿಶಕ್ತಿ ಸೂಚ್ಯಂಕದ ವ್ಯಾಪ್ತಿ
ಎ) ೦-೨೫
ಬಿ) ೦-೩೦
ಸಿ)೨೫-೫೦
ಡಿ) ೦-೭೦ ★
57) ಸಂವೇಗಾತ್ಮಕ ಬುದ್ಧಿಶಕ್ತಿ ಎಂಬ ಪರಿಕಲ್ಪನೆಯನ್ನು ಮೊಟ್ಟಮೊದಲು ಪರಿಚಯಿಸಿದ ಮನೋವಿಜ್ಞಾನಿಗಳು
ಎ) ಡೇನಿಯಲ್ ಗೋಲ್ ಮನ್
ಬಿ) ಗಾರ್ಡ್ ನರ್ ಮತ್ತು ಟಾರೆನ್ಸ್
ಸಿ) ಜಾನ್ ಮೇಯರ್ ಮತ್ತು ಪೀಟರ್ ಸಾಲೋವಿ ★
ಡಿ) ಥಾರ್ನ್ ಡೈಕ್ ಮತ್ತು ಟಾರೆನ್ಸ್
58) ಸೃಜನಶೀಲತೆಯ ಬೆಳವಣಿಗೆಯ ಅಂತಿಮ ಹಂತ
ಎ) ಪರೀಕ್ಷಿಸುವಿಕೆ/ಪರಿಷ್ಕರಣೆ ★
ಬಿ) ವೀಕ್ಷಣೆ
ಸಿ) ಅಂತ:ಸ್ಪುರಣೆ
ಡಿ) ಸುಪ್ತತೆ
59) ವಿಶೇಷ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಿ ಆರ್ ಟಿ ಯ ಅರ್ಥ
ಎ) ಸಾಮಾರ್ಥ್ಯಾಧಾರಿತ ಪರೀಕ್ಷೆ ★
ಬಿ) ಸಾಮಾರ್ಥ್ಯಾಧರಿತ ಟ್ಯಾಂಜಿಂಟ್
ಸಿ) ವಿಮರ್ಶೆ ಸಂಬದಿತ ಪರೀಕ್ಷೆ
ಡಿ) ವಿಷಯಾಧಾರಿತ ಪರೀಕ್ಷೆ
60) ಮಾನಸಿಕ ನ್ಯೂನತೆಯುಳ್ಳ ಮಕ್ಕಳನ್ನು ಪತ್ತೆ ಹಚ್ಚಲು ತುಂಬಾ ಉಪಯುಕ್ತವಾದ ಪರೀಕ್ಷೆಗಳೆಂದರೆ
ಎ) ವ್ಯಕ್ತಿತ್ವದ ಪರೀಕ್ಷೆಗಳು
ಬಿ) ಮನೋಧೋರಣಾ ಮಾಪಕಗಳು
ಸಿ) ಬುದ್ಧಿಶಕ್ತಿ ಪರೀಕ್ಷೆಗಳು ★
ಡಿ) ಅಭಿಕ್ಷಮತೆ ಪರೀಕ್ಷೆಗಳು
61) ಮನಸಿಕ ವಯಸ್ಲು ಮತ್ತು ದೈಹಿಕ ವಯಸ್ಸು ಒಂದೇಯಾಗಿದ್ದಾಗ ಅವನ ಬುದ್ಧಿಶಕ್ತಿ ಸೂಚ್ಯಾಂಕವು .......ಆಗಿರುತ್ತದೆ
ಎ) ೯೫
ಬಿ) ೯೮
ಸಿ) ೧೦೦ ★
ಡಿ) ೧೧೦
62) ೧೦ ವರ್ಷದ ಭೀಮನ ಮಾನಸಿಕ ವಯಸ್ಸು ೨೦ ವರ್ಷವಾದರೆ ಅವನ ಬುದ್ಧಿಶಕ್ತಿ ಸೂಚ್ಯಂಕವೆಷ್ಟು
ಎ)೧೦೦
ಬಿ) ೨೦೦ ★
ಸಿ) ೬೦
ಡಿ) ೧೨೦
63) ವೃತ್ತಿ ಆಸಕ್ತಿ ತಪಶೀಲು ಪಟ್ಟಿಯನ್ನು ರೂಪಿಸಿದವರು
ಎ) ಸ್ಟ್ರಾಂಗ್ ★
ಬಿ) ಆರ್ ಪಿ ಸಿಂಗ್
ಸಿ) ಕುಡಾರ್
ಡಿ) ತರ್ಸ್ಟೋನ್
64) ಐ ಕ್ಯೂ 55 ಇರುವಂತಹ ವ್ಯಕ್ತಿಯನ್ನು ........ಎಂದು ಕರೆಯುವರು
ಎ) ಮೂಢ
ಬಿ) ಮಂಕ (ಮೊರಾನ್) ★
ಸಿ) ಮೂರ್ಖ
ಡಿ) ಬುದ್ಧಿಮಾಂಧ್ಯತೆಯ ಸೀಮಾ ರೇಖೆಯಲ್ಲಿರುವವ
65) ಮಾನಸಿಕ ವಯಸ್ಸು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ
ಎ) ವ್ಯಕ್ತಿಯ ನೈಜವಾದ ವಯಸ್ಸು
ಬಿ) ನಿಖರವಾದ ಬುದ್ಧಿಶಕ್ತಿಯ ಮಟ್ಟ ★
ಸಿ) ವ್ಯಕ್ತಿಯ ದೈಹಿಕ ವಯಸ್ಸು
ಡಿ) ಸಂವೇಗಾತ್ಮಕ ಸಾಮರ್ಥ್ಯ
66) ಬುದ್ಧಿಶಕ್ತಿಯ ಸಮೂಹಕಾರಕ ಸಿದ್ಧಾಂತವನ್ನು ಅಭಿವೃದ್ದಿ ಪಡಿಸಿದವರು
ಎ) ಸ್ಪಿಯರ್ ಮನ್
ಬಿ) ತರ್ಸ್ಟೋನ್ ★
ಸಿ) ಸೈಮನ್
ಡಿ) ಗಿಲ್ ಫೋರ್ಡ್
67) ಬುದ್ಧಿಶಕ್ತಿ ಪರಿಕ್ಷೆಯಲ್ಲಿ ಭಾಷೆಯನ್ನು ಬಳಸಿದಿದ್ದರೆ ಅಂತಹ ಪರೀಕ್ಷೆಯನ್ನು ..... ಎನ್ನುವರು ಎ) ಕಾರ್ಯತ್ಮಕ ಪರೀಕ್ಷೆ ★
ಬಿ) ಕಾರ್ಯತ್ಮಕವಲ್ಲದ ಪರೀಕ್ಷೆ
ಸಿ) ಶಾಬ್ಧಿಕ ಪರೀಕ್ಷೆ
ಡಿ) ಸಂಖ್ಯಾ ಪರೀಕ್ಷೆ
68) ಅವಳಿ ಮಕ್ಕಳಲ್ಲಿ ಕೂಡಾ ಹಲವಾರು ವ್ಯತ್ಯಾಸಗಳಿರುವುದಕ್ಕೆ ಇದು ಕಾರಣವಾಗಿದೆ
ಎ) ಸೃಜನಶೀಲತೆ
ಬಿ) ಬುದ್ಧಿಶಕ್ತಿ
ಸಿ) ವೈಯಕ್ತಿಕ ಭಿನ್ನತೆ ★
ಡಿ) ಅನುವಂಶೀಯತೆ
69) ದೈಹಿಕ ಹಾಗೂ ಮಾನಸಿಕ ಲಕ್ಷಣಗಳಲ್ಲಿ ಸಾಮಾನ್ಯ ಮಕ್ಕಳಿಂದ ಭಿನ್ನರಾದವರು
ಎ) ಸಾಮಾನ್ಯ ಮಕ್ಕಳು
ಬಿ) ವಿಶಿಷ್ಟ (ಅಸಾಮಾನ್ಯ) ಮಕ್ಕಳು ★
ಸಿ) ಪ್ರತಿಭಾನ್ವಿತ ಮಕ್ಕಳು
ಡಿ) ಮಾನಸಿಕ ನ್ಯೂನತೆಯುಳ್ಳವರು
70) ಮಕ್ಕಳಲ್ಲಿ ಕಲಿಯುವಿಕೆಯ ಪ್ರದಾನ ವಿಧಾನ ಯಾವುದು ?
ಎ) ಅನುಕರಣೆ ★
ಬಿ) ಓದುವಿಕೆ
ಸಿ)ಬರೆಯುವಿಕೆ
ಡಿ) ಆಲಿಸುವಿಕೆ
Super sir great information sir and plz inform to maths and science thnk u so much
ReplyDelete