🌸 "ಪ್ರಚಲಿತ ವಿದ್ಯಮಾನಗಳು" 🌸
🌼ದೇಶದ ಅತೀ ದೊಡ್ಡ ನದಿ ಮೇಲಿನ ರೋಪ್ ವೇ ಅಸ್ಸಾಂನಲ್ಲಿ ಲೋಕಾರ್ಪಣೆ 🌼
ಭಾರತ ದೇಶದ ಅತೀ ದೊಡ್ಡ ನದಿ ಮೇಲಿನ ರೋಪ್ ವೇಯನ್ನು ಅಸ್ಸಾಂನಲ್ಲಿ ಇಂದು ಉದ್ಘಾಟನೆ ಮಾಡಲಾಯಿತು.
⏩ ಪ್ರವಾಸೋಧ್ಯಮ ಅಭಿವೃದ್ಧಿ ಯೋಜನೆಯಡಿಯಲ್ಲಿ ಬ್ರಹ್ಮಪುತ್ರ ನದಿಯ ದಡಗಳನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿರುವ ಈ ರೋಪ್ ವೇಯ ಕಾಮಗಾರಿಯನ್ನು 2006 ರಲ್ಲಿ ಪ್ರಾರಂಭಿಸಲಾಗಿತ್ತು.
⏩ 2019 ರ ಅಂತ್ಯಕ್ಕೆ ಇದು ಪೂರ್ಣಗೊಂಡಿತ್ತು. ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ರೋಪ್ ವೇ ಉದ್ಘಾಟನೆ ವಿಳಂಬವಾಗಿತ್ತು. ಇದೀಗ ರೋಪ್ ವೇಯನ್ನು ಲೋಕಾರ್ಪಣೆ ಮಾಡಲಾಗಿದೆ.
⏩ ಬ್ರಹ್ಮಪುತ್ರ ನದಿ ಮೇಲೆ ಸುಮಾರು 2 ಕಿ.ಮೀ ಉದ್ಧವಿರುವ ಈ ರೋಪ್ ವೇ ಪ್ರಸ್ತುತ ದೇಶದಲ್ಲಿರುವ ನದಿ ಮೇಲಿನ ಅತೀ ದೊಡ್ಡ ಅಥವಾ ಅತೀ ಉದ್ಧದ ರೋಪ್ ವೇ ಎಂಬ ಕೀರ್ತಿಗೆ ಭಾಜನವಾಗಿದೆ. ಇದನ್ನು ಬಳಸಿ ಸಾರ್ವಜನಿಕರು ಕೇವಲ ಏಳು ನಿಮಿಷಗಳಲ್ಲಿ ಆಚಿನ ದಡವನ್ನು ತಲುಪಬಹುದಾಗಿದೆ.
⏩ 56 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸಂಪೂರ್ಣ ಯೋಜನೆಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
No comments:
Post a Comment
If you have any doubts please let me know