Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Wednesday, 26 August 2020

ಕೆಪಿಎಸ್‌ಸಿ ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಪರೀಕ್ಷೆ -2020

ಕೆಪಿಎಸ್‌ಸಿ ಎಸ್‌ಡಿಎ, ಎಫ್‌ಡಿಎ ಹುದ್ದೆಗಳಿಗೆ ಪರೀಕ್ಷೆ ಯಾವಾಗ?

ಕೊರೊನಾ ನಡುವೆಯೇ ಕರ್ನಾಟಕ ಲೋಕಸೇವಾ ಆಯೋಗವು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದೆ.

ಕೊರೊನಾ ನಡುವೆಯೇ ಕರ್ನಾಟಕ ಲೋಕಸೇವಾ ಆಯೋಗವು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದೆ. ಇತ್ತೀಚೆಗಷ್ಟೆ ಸಹಾಯಕ ನಿಯಂತ್ರಕರು, ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳಿಗೆ ಯಶಸ್ವಿಯಾಗಿ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ. ಹಾಗಾಗಿ ಈಗ ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳ ಚಿತ್ತ ಈಗ ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಗಳತ್ತ ಇದೆ.

ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಮತ್ತು ಸಹಾಯಾಕ ನಿಯಂತ್ರಕರು ಹುದ್ದೆಗಳಿಗೆ ಪರೀಕ್ಷೆ ನಡೆಸಿದ ಬೆನ್ನಲ್ಲೇ, ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಹಲವು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಯಾವಾಗ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. 'ವಿಕ'ಗೆ ದೊರೆತ ಮೂಲಗಳ ಪ್ರಕಾರ ಕೆಪಿಎಸ್‌ಸಿಯು ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ವೇಳಾಪಟ್ಟಿಯನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿದಿದೆ.

ಕೆಪಿಎಸ್‌ಸಿಯು ಈಗಾಗಲೇ ಬಿಡುಗಡೆ ಮಾಡಿದ್ದ ವಿವಿಧ ಪರೀಕ್ಷೆಗಳ ವೇಳಾಪಟ್ಟಿಗಳ ಪೈಕಿ, ಉಳಿದಿರುವುದು 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಲಾ ಪರೀಕ್ಷೆಗಳು ಮಾತ್ರ. ಗೆಜೆಟೆಡ್‌ ಪ್ರೊಬೇಷನರಿ ಪೂರ್ವ ಭಾವಿ ಪರೀಕ್ಷೆ ನಡೆಸಿ, ಈಗಾಗಲೇ ಪ್ರಶ್ನೆಪತ್ರಿಕೆಗೆ ಸಂಬಂಧಿಸಿದ ಸರಿಯುತ್ತರಗಳನ್ನು ಪ್ರಕಟಿಸಿದೆ. ಇಲಾಖಾ ಪರೀಕ್ಷೆಯ ಪ್ರಕ್ರಿಯೆಗಳು ಒಂದು ಹಂತ ತಲುಪಿದ ತಕ್ಷಣ ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಗೂ ವೇಳಾಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸುವ ಸಾಧ್ಯತೆ ಇದೆ.

ಕೆಪಿಎಸ್‌ಸಿಯು ಫೆಬ್ರವರಿಯಲ್ಲಿ ಎಸ್‌ಡಿಎ ಹುದ್ದೆಗೆ ಅಧಿಸೂಚನೆ ಹೊರಡಿಸಿ, ಕೊರೊನಾ ಕಾರಣ ಅರ್ಜಿ ಸಲ್ಲಿಸಲು ಎರಡು ಭಾರಿ ದಿನಾಂಕ ವಿಸ್ತರಣೆ ಮಾಡಿ ಅಭ್ಯರ್ಥಿಗಳಿಗೆ ಅವಕಾಶ ನೀಡಿತ್ತು. ಜೂನ್‌ 01, 2020 ರ ವರೆಗೂ ಸಹ ಆಯೋಗದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಉಳಿಕೆ ಮೂಲ ವೃಂದ ಮತ್ತು ಹೈದೆರಾಬಾದ್ ಕರ್ನಾಟಕ ವೃಂದದ ಹುದ್ದೆಗಳು ಸೇರಿ ಒಟ್ಟು 1279 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ.

ಆಯೋಗವು ಒಟ್ಟು 1112 ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ. ಈ ಹಿಂದೆ ಎಸ್‌ಡಿಎ ಪರೀಕ್ಷೆಗೆ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಮತ್ತೆ ಪರೀಕ್ಷೆ ಮುಂದೂಡಲಾಗಿದೆ.

ಎಸ್‌ಡಿಎ ಮತ್ತು ಎಫ್‌ಡಿಎ ಎರಡು ಹುದ್ದೆಗಳಿಗೂ ಅತಿ ಶೀಘ್ರದಲ್ಲಿಯೇ ಪರೀಕ್ಷೆ ದಿನಾಂಕ ಬಿಡುಗಡೆ ಮಾಡಲಿದ್ದು, ಹುದ್ದೆಯ ಆಕಾಂಕ್ಷಿಗಳು ಸಿದ್ಧತೆಯ ಕಡೆ ಗಮನ ನೀಡಿರಿ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads