🌺 ಪ್ರಿಯ ಮಿತ್ರರೇ 💐🙏
🌺 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದಿನಾಂಕ 02-05-2019 ರ ಪ್ರಚಲಿತ ವಿದ್ಯಮಾನಗಳ ವಿವರಣೆ ಸಹಿತ ಪ್ರಶ್ನೋತ್ತರಗಳು : ನಿಮಗಾಗಿ 🌺
1. ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆ ಮಾಡುವಲ್ಲಿ ಕೆಳಗಿನ ಯಾವ ರಾಷ್ಟ್ರ ಮೊದಲ ಸ್ಥಾನದಲ್ಲಿದೆ?
1. ಇರಾಕ್
2. ಇರಾನ್
3. ಸೌದಿ ಅರೆಬಿಯಾ
4. ಮೇಲಿನ ಯಾವುದು ಅಲ್ಲ
ಸರಿಯಾದ ಉತ್ತರ : 1
ವಿವರಣೆ : ಸತತ ಎರಡನೇ ಹಣಕಾಸು ವರ್ಷದಲ್ಲಿಯೂ ಇರಾಕ್‌ನಿಂದ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆಯಾಗಿದೆ.
2018-19 ನೇ ಹಣಕಾಸು ವರ್ಷದಲ್ಲಿ 4.55 ಕೋಟಿ ಟನ್ ಕಚ್ಚಾ ತೈಲ ಆಮದಾಗಿದೆ. 2017-18ನೇ ಹಣಕಾಸು ವರ್ಷದಲ್ಲಿ 4.57 ಕೋಟಿ ಟನ್ ಆಮದಾಗಿತ್ತು.
2017-18ನೇ ಹಣಕಾಸು ವರ್ಷದವರೆಗೂ ಸೌದಿ ಅರೇಬಿಯಾ ಭಾರತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಪೂರೈಕೆ ಮಾಡುತ್ತಿತ್ತು.
ಆದರೆ 2017-18 ರಿಂದ ಇರಾಕ್ ಮೊದಲ ಸ್ಥಾನಕ್ಕೇರಿದೆ.
ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಇರಾನ್ ಮೂರನೇ ಸ್ಥಾನದಲ್ಲಿದೆ.
2. ದೇಶದ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ವಿ.ಕೆ.ಕೃಷ್ಣ ಮೆನನ್ ಅವರ'ಚಕರ್ಡ್ ಬ್ರಿಲಿಯನ್ಸ್ ದಿ ಮೆನಿ ಲೈವ್ಸ್ ಆಫ್ ವಿ.ಕೆ.ಕೃಷ್ಣ ಮೆನನ್' ಎಂಬ ಹೆಸರಿನ ಜೀವನ ಚರಿತ್ರೆಯನ್ನು ಯಾರು ಬರೆಯಲಿದ್ದಾರೆ?
1. ಜೈರಾಮ್ ರಮೇಶ್
2. ಪ್ರೇಮ್ ಚೌದರಿ
3. ಮನಮೋಹನ್ ಸಿಂಗ್
4. ಮೇಲಿನ ಯಾವುದು ಅಲ್ಲ
ಸರಿಯಾದ ಉತ್ತರ : 1
ವಿವರಣೆ : ದೇಶದ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ವಿ.ಕೆ.ಕೃಷ್ಣ ಮೆನನ್ ಅವರ ಜೀವನ ಚರಿತ್ರೆಯು ಪುಸ್ತಕ ರೂಪದಲ್ಲಿ ಹೊರಬರಲಿದೆ.ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಅವರು ಬರೆಯಲಿರುವ 'ಚಕರ್ಡ್ ಬ್ರಿಲಿಯನ್ಸ್ ದಿ ಮೆನಿ ಲೈವ್ಸ್ ಆಫ್ ವಿ.ಕೆ.ಕೃಷ್ಣ ಮೆನನ್' ಹೆಸರಿನ ಹೊತ್ತಿಗೆಯು 2020ಕ್ಕೆ ಮಾರುಕಟ್ಟೆಗೆ ಬರಲಿದೆ.
3. ಇತ್ತಿಚೆಗೆ 2019, ಮೇ, ಯಾವ ಉಗ್ರನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರನೆಂದು ಘೋಷಿಸಿದೆ?
1. ಹಫೀಜ್ ಸಯೀದ್
2. ಅನ್ವರ್ ಅಲ್-ಅವ್ಲಾಕಿ
3. ಮಸೂದ್ ಅಜರ್
4. ಮೇಲಿನ ಯಾವುದು ಅಲ್ಲ
ಸರಿಯಾದ ಉತ್ತರ : 3
ವಿವರಣೆ : ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್ (ಜೆಈಎಂ)ಉಗ್ರ ಸಂಘಟನೆ ಮುಖ್ಯಸ್ಥ, ಪುಲ್ವಾಮಾ ದಾಳಿ ಹಾಗೂ ಸಂಸತ್ ದಾಳಿ ಮಾಸ್ಟರ್‌ಮೈಂಡ್ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ.
ತ್ರಿವಿಧ ಪ್ರಹಾರ
ತಕ್ಷಣದಿಂದಲೇ ಎಲ್ಲಾ ಆಸ್ತಿಪಾಸ್ತಿಗಳ ಮುಟ್ಟುಗೋಲು; ಹಣಕಾಸು ಮೂಲಗಳ ಬಂದ್
ಯಾವುದೇ ದೇಶಕ್ಕೆ ಪ್ರಯಾಣಿಸಲು ಪ್ರವೇಶಿಸಲು ನಿರ್ಬಂಧ.
ಎಲ್ಲಾ ಬಗೆಯ ಶಸ್ತ್ರಾಸ್ತ್ರ್ರಗಳ ನೇರ/ ಪರೋಕ್ಷ ಖರೀದಿ, ಮಾರಾಟ, ಸಂಗ್ರಹ ಮತ್ತು ಬಳಕೆಯ ಮೇಲೆ ಕಠಿಣ ನಿರ್ಬಂಧ
🌺 ನಿಷೇಧಿತ ಪ್ರಮುಖ ಉಗ್ರರು/ಸಂಘಟನೆಗಳು 🌺
ಹಫೀಜ್ ಸಯೀದ್, ಲಷ್ಕರೆ ತಯ್ಬಾ ಮುಖ್ಯಸ್ಥ
ಜೈಷೆ ಮೊಹ್ಮದ್, ಪಾಕ್ ಮೂಲದ ಉಗ್ರ ಸಂಘಟನೆ
ಅಲ್ ಖಾಯಿದಾ, ಆಫ್ಘನ್ ಮೂಲದ ಉಗ್ರ ಸಂಘಟನೆ
ಅಲಿ ಸಯ್ಯದ್ ಮುಹ್ಮದ್ ಮುಸ್ತಫಾ ಅಲ್-ಬಕ್ರಿ, ಈಜಿಪ್ಟ್ ಜಿಹಾದಿ
ಅನ್ವರ್ ಅಲ್-ಅವ್ಲಾ ಕಿ, ಅಲ್ ಖಾಯಿದಾ ಉಗ್ರ
4. ವಿಶ್ವ ಶೂಟಿಂಗ್ ಶ್ರೇಣಿ (Ranking)ನಲ್ಲಿ ಕೆಳಗಿನ ಯಾರು ನಂ.1 ಸ್ಥಾನಕ್ಕೇರಿದ್ದಾರೆ?
1. ಅಪೂರ್ವಿ ಚಾಂಡೆಲಾ
2. ಅಂಜಲಿ ಭಾಗವತ್
3. ಹೀನಾ ಸಿಂಧು ಶ್ರೇಯಸಿ ಸಿಂಗ್
4. ಮೇಲಿನ ಯಾವುದು ಅಲ್ಲ
ಸರಿಯಾದ ಉತ್ತರ : 1
ವಿವರಣೆ : ಭಾರತದ ಅನುಭವಿ ಶೂಟರ್ ಅಪೂರ್ವಿ ಚಾಂಡೆಲಾ ಪರಿಷ್ಕೃತ ವಿಶ್ವ ಶೂಟಿಂಗ್ ಶ್ರೇಣಿ (Ranking)ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಅಪೂರ್ವಿ ಅವರು 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಅಗ್ರ ಸ್ಥಾನಕ್ಕೇರಿದರು.
No comments:
Post a Comment
If you have any doubts please let me know