🔯 ಭಾರತದ ವಾಯುಗುಣದ ಋತುಮಾನಗಳು ಮತ್ತು ಲಕ್ಷಣಗಳು 🔯
ಮುಖ್ಯಾಂಶಗಳು:
• ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ರಾಜಸ್ತಾನದ ಗಂಗಾನಗರ (52’ಸೆಂ) ಆಗಿದೆ.
• ಅತಿ ಹೆಚ್ಚು ಮಳೆ ಬೀಳುವ ಋತುಮಾನ ನೈರುತ್ಯ ಮಾನ್ಸೂನ್ ಕಾಲ ಆಗಿದೆ.
• ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ರಾಜಸ್ತಾನದ ರೂಯ್ಲಿ. (8.3 ಸೆಂ.ಮೀ.)
• ಭಾರತದಲ್ಲಿಯೇ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಮೇಘಾಲಯದ ಮಾಸಿನರಾಮ
• ಭಾರತದ ವ್ಯವಸಾಯವನ್ನು ಮಾನ್ಸೂನ್ ಮಳೆಯ ಜೊತೆಯಲ್ಲಿ ಆಡುವ ಜೂಜಾಟ ಎಂದು ಕರೆಯುತ್ತಾರೆ.
• ಭಾರತದ ವಾಯುಗುಣವನ್ನು ವಾರ್ಷಿಕವಾಗಿ 4 ಋತುಮಾನಗಳನ್ನಾಗಿ ವಿಂಗಡಿಸಲಾಗಿದೆ.
• ಭಾರತದಲ್ಲಿ ನೈರುತ್ಯ ಮನ್ಸೂನ್ ಎಂದರೆ ಮಳೆಗಾಲ ಎಂದರ್ಥ.
8. ಅಕ್ಟೋಬರ್ ತಿಂಗಳಲ್ಲಿ ಉಷ್ಣಾಂಶವು ಉತ್ತರಾರ್ದs ಗೋಳದಲ್ಲಿ ಕಡಿಮೆಯಾಗಲು ಕಾರಣ -
ಸೂರ್ಯನ ಕಿರಣಗಳು ದಕ್ಷಿಣಾರ್ಧ ಗೋಳದ ಮೇಲೆ ಲಂಬವಾಗಿ ಬೀಳುತ್ತವೆ ಅಥವಾ ಸೂರ್ಯನ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಓರೆಯಾಗಿ ಬೀಳುತ್ತವೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತವು ಯಾವ ಬಗೆಯ ವಾಯುಗುಣವನ್ನು ಹೊಂದಿದೆ?
ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ.
2. ಮಾನ್ಸೂನ್ ಮಾರುತ ಎಂದರೇನು?
ಮಾನ್ಸೂನ್ ಎಂಬ ಪದವು ಅರಬ್ಬಿ ಭಾಷೆಯ ಮೌಸಿಮ್ ಎಂಬ ಪದದಿಂದ ಬಂದಿದೆ.ಇದು ಋತು ಅಥವಾ ಕಾಲ ಎಂ ದರ್ಥ ಕೊಡುತ್ತದೆ.
3. ಯಾವ ಋತುವನ್ನು ಸಾಮಾನ್ಯವಾಗಿ ಮಳೆಗಾಲವೆಂದು ಕರೆಯುವರು?
ನೈರುತ್ಯ ಮಾನ್ಸೂನ್ ಮಾರುತಗಳನ್ನು ಸಾಮಾನ್ಯವಾಗಿ ಮಳೆಗಾಲವೆಂದು ಕರೆಯುವರು.
4. ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳಾವವು?
• ಅಕ್ಷಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ಸಾಗರಗಳಿಂದ ಇರುವ ದೂರ,
• ಮಾರುತಗಳು ಬೀಸುವ ದಿಕ್ಕು, ಪರ್ವತ ಸರಣಿಗಳು ಹಬ್ಬಿರುವ ರೀತಿ, ಸಾಗರ ಪ್ರವಾಹಗಳು
5. ಭಾರತದ ವ್ಯವಸಾಯವು ‘ಮಾನ್ಸೂನ್ ಮಾರುತಗಳೊಡನೆ ಆಡುವ ಜೂಜಾಟವಾಗಿದೆ’ ಚರ್ಚಿಸಿ
• ಭಾರತದ ಜನತೆಯ ಪ್ರಧಾನ ಉದ್ಯೋಗವು ವ್ಯವಸಾಯವಾಗಿರುವದರಿಂದ ನೈಋತ್ಯ
• ಮಾನ್ಸೂನ್ ಮಾರುತಗಳು ಒಂದು ವಿಧದಲ್ಲಿ ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತವೆ.
• ಈ ಮಳೆಯು ವಿಫಲವಾದರೆ ಬರಗಾಲ ಬರುವದು.
• ಅತಿ ಹೆಚ್ಚಾದಾಗ ಪ್ರವಾಹ ಉಂಟಾಗಿ ಪ್ರಾಣಹಾನಿ ಮತ್ತು ಆಸ್ತಿಗಳಿಗೆ ಹಾನಿ ಉಂಟಾಗುತ್ತದೆ.
• ಆದ್ದರಿಂದ ಭಾರತದ ವ್ಯವಸಾಯವನ್ನು ಮಾನ್ಸೂನ್
ಮಳೆಯೊಡನೆ ಆಡುವ ಜೂಜಾಟ ಎಂದು ಕರೆಯುತ್ತಾರೆ.
6. ನೈರುತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್ ತಿಂಗಳಿನ ಆರಂಭದೊಡನೆ ಹಿಂದಿರುಗಲು ಪ್ರಾರಂಭಿಸುತ್ತವೆ ಕಾರಣ ಕೊಡಿ.
ಏಕೆಂದರೆ ಭಾರತದ ಒಳನಾಡಿನ ಉಷ್ಣಾಂಶ ಕಡಿಮೆಯಾಗಿ ಒತ್ತಡ ಹೆಚ್ಚಾಗುತ್ತಾ ಹೋಗುವದರಿಂದ ಮಾನ್ಸೂನ್ ಮಾರುತಗಳು ಹಿಂದಿರುಗಲು ಪ್ರಾರಂಭಿಸುತ್ತವೆ.
7. ಮಾವಿನ ಹೊಯ್ಲು ಎಂದರೇನು?
• ಬೇಸಿಗೆಯ ಅವಧಿಯಲ್ಲಿ ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಎಪ್ರೀಲ್ ಹಾಗೂ ಮೇ ತಿಂಗಳಲ್ಲಿ ಅಲ್ಲಲ್ಲಿ ಮಳೆಯಾಗುತ್ತದೆ.
• ಈ ಮಳೆಯನ್ನು ಪಶ್ಚಿಮ ಬಂಗಾಳದಲ್ಲಿ ಕಾಲಬೈಸಾಕಿ, ದಕ್ಷಿಣ
ಭಾರತದಲ್ಲಿ ಕಾಫಿ ತುಂತುರು ಹಾಗೂ ಮಾವಿನ ಹೊಯ್ಲು ಎಂದು ಕರೆಯುತ್ತಾರೆ.
8. ಭಾರತವನ್ನು ಪ್ರವೇಶಿಸುವ ನೈರುತ್ಯ ಮಾನ್‍ಸೂನ್ ಮಾರುತಗಳ ಎರಡು ಕವಲುಗಳು ಯಾವುವು?
ಅವುಗಳೆಂದರೆ
1. ಅರಬ್ಬಿ ಸಮುದ್ರ ಶಾಖೆ,
2. ಬಂಗಾಳಕೊಲ್ಲಿ ಶಾಖೆ
No comments:
Post a Comment
If you have any doubts please let me know