🌺 ಪ್ರಿಯ ಮಿತ್ರರೇ 💐🙏
🌺 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳ ವಿವರಣೆ ಸಹಿತ ಪ್ರಶ್ನೋತ್ತರಗಳು : ನಿಮಗಾಗಿ 💥
#Must_Share
1. ಭಾರತ ಸರ್ಕಾರದ ಅಧಿಕಾರಿ ಜೈದೀಪ್ ಸರ್ಕಾರ್ ಇತ್ತಿಚೆಗೆ ಯಾವ ದೇಶಕ್ಕೆ ಭಾರತದ ಹೈ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ?
1. ಅಮೆರಿಕ
2. ರಷ್ಯಾ
3. ದಕ್ಷಿಣ ಆಫ್ರಿಕಾ
4. ಶ್ರೀಲಂಕಾ
Correct Answer: option3
Justification: ಭಾರತ ಸರ್ಕಾರದ ಅನುಭವಿ ಅಧಿಕಾರಿ ಜೈದೀಪ್ ಸರ್ಕಾರ್ ದಕ್ಷಿಣ ಆಫ್ರಿಕಾಗೆ ಭಾರತದ ನೂತನ ಹೈಕಮಿಷನರ್ ಆಗಿ ಇತ್ತೀಚಿಗೆ ನೇಮಕಗೊಂಡಿದ್ದಾರೆ. ಇವರು 1987ರ ಬ್ಯಾಚ್‌ನ ಇಂಡಿಯನ್ ಫಾರಿನ್ ಸರ್ವಿಸ್ (ಐಎಫ್‌ಎಸ್) ಅಧಿಕಾರಿ. ಪ್ರಸ್ತುತ ಭೂತಾನ್‌ಗೆ ಭಾರತದ ರಾಯಭಾರಿಯಾಗಿದ್ದಾರೆ.
2. ವಿಶ್ವ ಮಲೇರಿಯಾ ದಿನವನ್ನು ಈ ಕೆಳಗಿನ ಯಾವ ದಿನದಂದು ಆಚರಿಸಲಾಗುತ್ತದೆ?
1. ಏಪ್ರಿಲ್-25
2. ಏಪ್ರಿಲ್-5
3. ಏಪ್ರಿಲ್-12
4. ಏಪ್ರಿಲ್-29
Correct Answer: option1
Justification: 2017 ರಲ್ಲಿ ವಿಶ್ವಸಂಸ್ಥೆಯ 60ನೇ ವಾರ್ಷಿಕ ಸಮ್ಮೇಳನ ನಡೆದಾಗ ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯ ದಿನ ಆಚರಿಸಲಾಗಿದೆ. ಅದಕ್ಕೂ ಮೊದಲು 2001 ರಿಂದ ಪ್ರತಿ ವರ್ಷ ಏಪ್ರಿಲ್-25 ವಿಶ್ವ ಮಲೇರಿಯಾ ದಿನ ಆಚರಿಸಲಾಗುತ್ತಿತ್ತು. ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಆಫ್ರಿಕಾದಲ್ಲಿ ಮಲೇರಿಯಾಕ್ಕೆ ಲಸಿಕೆ ಅವಿಸ್ಕರಿಸಲಾಗಿದೆ.30 ವರ್ಷಗಳ ಪ್ರಯತ್ನದ ಬಳಿಕ ಆರ್‌ಟಿಎಸ್‌ಎಸ್ ಲಸಿಕೆಯನ್ನು ಮಕ್ಕಳಲ್ಲಿ ಮಲೇರಿಯಾ ತಡೆಗಟ್ಟಲು ಬಳಸಬಹುದೆಂದು ಅನುಮತಿ ನೀಡಲಾಗಿದೆ.
3. ಇತ್ತಿಚೆಗೆ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದoption2ಿದ ಭಾರತದ ಅಮಿತ್ ಧನಕಾರ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದವರಾಗಿದ್ದಾರೆ?
1. ವೇಟ್‌ಲಿಫ್ಟಿಂಗ್
2. ಕುಸ್ತಿ
3. ಜಾವಲಿನ್ ಥ್ರೊ
4. ರಿಲೆ
Correct Answer: option2
Justification: ಭಾರತದ ಅಮಿತ್ ಧನಕಾರ್ ಮತ್ತು ರಾಹುಲ್ ಅವಾರೆ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ್ದಾರೆ.
ಕೃಪೆ : ಜ್ಞಾನಗಂಗೋತ್ರಿ ಅಕಾಡೆಮಿ
No comments:
Post a Comment
If you have any doubts please let me know