🌺 ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 🌺
1) ಮಹಾಭಾಷ್ಯ ಕೃತಿಯ ಕರ್ತೃ ಯಾರು?
ಪಾಣಿನಿ.
2) ಜೈನ ಧರ್ಮದ ಎರಡು ಧಾರ್ಮಿಕ ಗ್ರಂಥಗಳು ಯಾವುವು?
ಅಂಗ ಮತ್ತು ಉಪಾಂಗ.
3) "ಶಿಲಪ್ಪಾದಿಗಾರಂ" ಯಾವ ಭಾಷೆಯಲ್
ಲಿದೆ?
ತಮಿಳು.
4) "ಕರುನಾಡರ್" ಎಂದು ಉಲ್ಲೇಖವಿರುವುದು ಯಾವ ಗ್ರಂಥದಲ್ಲಿ?
ಶಿಲಪ್ಪಾದಿಗಾರಂ.
5) ನಾಣ್ಯಶಾಸ್ತ್ರ ಎಂದರೆ ......
ನಾಣ್ಯಗಳ ಅಧ್ಯಯನ.
6) ಶಾಸನಗಳ ಅಧ್ಯಯನವೇ .... ಶಾಸನಶಾಸ್ತ್ರ.
7) ರವಿಕಿರ್ತಿ ರಚಿಸಿದ ಶಾಸನ ಯಾವುದು?
ಐಹೊಳೆ ಶಾಸನ.
8) ಬಾರ್ಬೋಸಾ ಯಾವ ದೇಶದವನು?
ಪ್ರೋರ್ಚಗಲ್.
9) "ಜಿಯಾಗ್ರಫಿ" ಗ್ರಂಥ ಕರ್ತೃ ಯಾರು?
ಟಾಲಮಿ.
10) ಪ್ಯಾಲಿಯೋಲಿಥಿಕ್ ಏಜ್ ಎಂದರೆ?
ಹಳೆಯ ಶಿಲಾಯುಗ.
11) ಯಾವ ಭಾಷೆಯಲ್ಲಿ ಮಹೆಂಜೊದಾರೋ ಅಂದರೆ ಸತ್ತವರ ದಿಬ್ಬ?
ಸಿಂಧೀ.
12) "ಅಂಲಗೀರ್ ಪುರ" ಯಾವ ರಾಜ್ಯದಲ್ಲಿದೆ?
ಉತ್ತರಪ್ರದೇಶ.
13) ಆರ್ಯರು ಟಿಬೆಟ್ ಮೂಲದವರು ಎಂದವರು ಯಾರು?
ಸ್ವಾಮಿ ದಯಾನಂದ ಸರಸ್ವತಿ.
14) ವಿದ್ ಎಂದರೆ .....
ಜ್ಞಾನ ಎಂದರ್ಥ.
15) ಋಗ್ವೇದದ ಕಾಲದಲ್ಲಿ ಆರ್ಯರು ಎಲ್ಲಿ ವಾಸಿಸುತ್ತಿದ್ದರು?
ಹಳ್ಳಿಗಳಲ್ಲಿ.
16) ಜೈನ ಧರ್ಮದ ಪವಿತ್ರ ಚಿಹ್ನೆ ಯಾವುದು?
ಸ್ವಸ್ತಿಕ್.
17) ಆಸ್ತೆಯ ಎಂದರೆ .......
ಕಳ್ಳತನ ಮಾಡದಿರುವುದು.
18) ಬೌದ್ಧ ಧರ್ಮದ ಸ್ಥಾಪಕ ಯಾರು?
ಗೌತಮ ಬುದ್ಧ.
19) ದಿಗಂಬರರು ಎಂದರೆ ಯಾರು?
ಮಹಾವೀರನ ಅನುಯಾಯಿಗಳು.(ನಿರ್ವಸ್ತ್ರಧಾರಿಗಳು)
20) ಬುದ್ಧನನ್ನು ಏಷಿಯಾದ ಬೆಳಕು ಎಂದು ಕರೆದವರು ಯಾರು?
ಎಡ್ವಿನ್ ಅರ್ನಾಲ್ಡ್.
21) 3 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
ಪಾಟಲೀಪುತ್ರ.
22) ದೀಪವಂಶ ಮತ್ತು ಮಹಾವಂಶ ಎನ್ನುವವು .....
ಸಿಲೋನಿನ ಕೃತಿಗಳು.
23) ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಯಾವ ಜಿಲ್ಲೆಯಲ್ಲಿವೆ?
ಚಿತ್ರದುರ್ಗ.
24) ಮೆಗಾಸ್ಥನಿಸ್ ಯಾವ ದೇಶದ ರಾಯಭಾರಿ?
ಗ್ರೀಕ್.
25) "ಗಾಥಸಪ್ತಸತಿ" ಎಂಬ ಕೃತಿಯನ್ನು ರಚಿಸಿದವನು ಯಾರು?
ಹಾಲ.
26) ಗಾಥಸಪ್ತಸತಿ ಯಾವ ಭಾಷೆಯಲ್ಲಿದೆ?
ಪ್ರಾಕೃತ.
27) ಹಾಲ ಶಾತವಾಹನರ ಎಷ್ಟನೇ ದೊರೆ?
17 ನೇ.
28) ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
ಕಾನಿಷ್ಕ.
29) ಕಾನಿಷ್ಕನ ರಾಜಧಾನಿ ಯಾವುದಾಗಿತ್ತು?
ಪುರುಷಪುರ.
30) ಪುರುಷಪುರದ ಇಂದಿನ ಹೆಸರೇನು?
ಪೇಷಾವರ.
31) ಗಾಂಧಾರ ಎಂಬ ಸ್ಥಳ ಯಾವ ರಾಷ್ಟ್ರದಲ್ಲಿದೆ?
ಆಪ್ಘಾನಿಸ್ತಾನ.
32) ದೇವಿಚಂದ್ರ ಗುಪ್ತಂ ಕೃತಿಯ ಕರ್ತೃ ಯಾರು?
ವಿಶಾಖದತ್ತ.
33) ಸಮುದ್ರ ಗುಪ್ತ ಯಾವ ಸಂತತಿಯ ದೊರೆ?
ಗುಪ್ತ.
34) ಸಮುದ್ರಗುಪ್ತನ ದಂಡನಾಯಕ ಯಾರು?
ಹರಿಸೇನ.
35) ಹರಿಸೇನ ಯಾರ ಆಸ್ಥಾನದ ಕವಿ?
ಸಮುದ್ರಗುಪ್ತ.
36) ಅಸ್ಸಾಂನ ಹಳೆಯ ಹೆಸರೇನು?
ಕಾಮರೂಪ.
37) ಫಾಹಿಯಾನ ಒಬ್ಬ ------ ಯಾತ್ರಿಕ.
ಚೀನಾ.
38) ಅಮರಕೋಶ ಕೃತಿಯ ಕರ್ತೃ ಯಾರು?
ಅಮರಸಿಂಹ.
39) ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
ಸಂಘಂ ಸಾಹಿತ್ಯ.
40) ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
ಸಾ.ಶ. 949 ರಲ್ಲಿ.
41) ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
ಚೋಳರು ಮತ್ತು ರಾಷ್ಟ್ರಕೂಟರು.
42) ರಾಜರಾಜೇಶ್ವರ ದೇವಾಲಯ ಎಲ್ಲಿದೆ?
ತಂಜಾವೂರಿನಲ್ಲಿದೆ.
43) ರಾಜರಾಜೇಶ್ವರ ದೇವಾಲಯದ ಮತ್ತೊಂದು ಹೆಸರೇನು?
ಬೃಹದೇಶ್ವರ.
44) ರಾಜರಾಜೇಶ್ವರ ದೇವಾಲಯ ಕಟ್ಟಿಸಿದವನು ಯಾರು?
ಒಂದನೇ ರಾಜರಾಜಚೋಳ.
45) ರಾಜರಾಜೇಶ್ವರ ದೇವಾಲಯವನ್ನು ಒಂದನೇ ರಾಜರಾಜಚೋಳ ಕಟ್ಟಿಸಿದ್ದು ಯಾವಾಗ?
* ಸಾ.ಶ. 1009 ರಲ್ಲಿ.
No comments:
Post a Comment
If you have any doubts please let me know