☀ ಮಿತ್ರರೇ, 💐🙏
🌺 ವಿಶ್ವದ ಅತಿ ಎತ್ತರದ ಏಕತೆಯ ಪ್ರತಿಮೆ ಕುರಿತ ಮಹತ್ವದ ಮಾಹಿತಿ | Statue of Unity 🌺
‘ಉಕ್ಕಿನ ಮನುಷ್ಯ’ ಎಂದೇ ಜನಪ್ರಿಯರಾಗಿದ್ದ ‘ಸರ್ದಾರ ವಲ್ಲಭಬಾಯಿ ಪಟೇಲ್’ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ಗುಜರಾತ್ನಲ್ಲಿ ಸ್ಥಾಪಿಸಲಾಗುತ್ತಿದೆ. ಈ ಪ್ರತಿಮೆಯು ವಿಶ್ವದಲ್ಲೀಯೇ ಅತಿ ಎತ್ತರದ ಪ್ರತಿಮೆ ಎಂಬ ಹಿರಿಮೆಗೆ ಪಾತ್ರವಾಗಿದೆ.
ಇದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿದೆ. 2013 ರಲ್ಲಿ ಮೋದಿಯವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. ಈ ‘ಏಕತೆಯ ಪ್ರತಿಮೆ’ಯು ಗುಜರಾತನ ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮನಿಂದ, 1 ಕಿ. ಮೀ ದೂರದಲ್ಲಿರುವ ‘ ಸಾಧು ಬೆಟ್’ ದ್ವೀಪದಲ್ಲಿ ನಿರ್ಮಿಸಲಾಗುತ್ತಿದೆ. ಇದರ ಎತ್ತರ 182 ಮೀಟರ್ ಇರಲು ಕಾರಣ, ಗುಜರಾತ್ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿದ್ದು, ಇದರ ರೂಪಕವಾಗಿ ಪ್ರತಿಮೆಯ ಎತ್ತರವನ್ನು ಇಷ್ಟಕ್ಕೆ ನಿರ್ದಿಷ್ಟಗೊಳಿಸಲಾಗಿದೆ.
ಈ ಪ್ರತಿಮೆಯ ನಿರ್ಮಾಣಕ್ಕೆ ಕಾಂಕ್ರಿಟ್ ಮತ್ತು ಉಕ್ಕು ಬಳಸಳಾಗಿದ್ದು . ಹೊರ ಮೈಗೆ ಕಂಚು ಪ್ಯಾನೆಲ್ಗಳನ್ನು ಉಪಯೋಗಿಸಲಾಗಿದೆ. ಪ್ರತಿಮೆಯ ನಿರ್ಮಾಣದ ಹೊಣೆಯನ್ನು ಎಲ್. ಆಂಡ್.ಟಿ. ಕಂಪನಿ ವಹಿಸಿಕೊಂಡಿದೆ. 2018 ಅಕ್ಟೋಬರ್ ನಲ್ಲಿ ಈ ಪ್ರತಿಮೆಯ ಕಾರ್ಯ ಮುಗಿಯಲಿದ್ದು, ಸರ್ದಾರ ವಲ್ಲಭಬಾಯಿ ಅವರ ಜನ್ಮ ದಿನದಂದು ಅನಾವರಣೆಗೊಳ್ಳಲಿದೆ.
🌺 ಪ್ರಧಾನಿ ಕನಸು ಸಾಕಾರ
ಪ್ರಧಾನಿ ಮೋದಿ ಅವರ ಕನಸಿನ ಯೋಜನೆ ಇದು. ಗುಜರಾತ್ ಮೂಲದ ಸರ್ದಾರ್ ಅವರ ಬೃಹತ್ ಪ್ರತಿಮೆ ನಿರ್ಮಿಸಬೇಕೆಂಬ ಕನಸಿನೊಂದಿಗೆ ಮೋದಿ 2013ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಕನಸೀಗ ಸಾಕಾರಗೊಂಡಿದೆ.
🌺 ಎಲ್ಲಿದೆ ಪ್ರತಿಮೆ?
ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್ನಿಂದ 1 ಕಿ.ಮೀ ದೂರದಲ್ಲಿರುವ ‘ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಈ ಪ್ರತಿಮೆ ನಿರ್ಮಾಣದ ಹಿಂದೆ 250 ಎಂಜಿನಿಯರ್ಗಳು ಹಾಗೂ 3,400 ಕಾರ್ಮಿಕರ ಸತತ ಪರಿಶ್ರಮದ ಫಲವಿದೆ.
🌺 ಎಲ್ ಆ್ಯಂಡ್ ಟಿ ಹೆಗ್ಗಳಿಕೆ
ನ್ಯೂಯಾರ್ಕ್ನ ‘ಲಿಬರ್ಟಿ ಆಫ್ ಸ್ಟ್ಯಾಚ್ಯು’ವಿನ ಎತ್ತರದ (93 ಮೀಟರ್) ದಾಖಲೆಯನ್ನು ಅಳಿಸಿಹಾಕಲಿರುವ ‘ಯುನಿಟಿ ಆಫ್ ಸ್ಟ್ಯಾಚ್ಯು’ವಿನ ಯೋಜನಾ ನಿರ್ಮಾಣದ ಹೊಣೆ ವಹಿಸಿಕೊಂಡಿದ್ದು ಎಲ್ ಆ್ಯಂಡ್ ಟಿ ಕಂಪನಿ.
🌺 182 ಮೀಟರ್ ಏಕೆ?
ಗುಜರಾತ್ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿದ್ದು, ಇದರ ರೂಪಕವಾಗಿ ಪ್ರತಿಮೆಯ ಎತ್ತರವನ್ನು ಇಷ್ಟಕ್ಕೇ ನಿರ್ದಿಷ್ಟಗೊಳಿಸಲಾಗಿದೆ. ಅಂದಹಾಗೆ, 7 ಕಿ.ಮೀ ದೂರದಿಂದಲೇ ಪ್ರತಿಮೆಯನ್ನು ಗುರುತಿಸಬಹುದಾಗಿದೆ.
👉 ಯೋಜನೆಗೆ ಖರ್ಚಾದ ಮೊತ್ತ : 2,389 ಕೋಟಿ ರೂ.
ಮುಂದಿನ ದಿನಗಳಲ್ಲಿ ಈ ತಾಣಕ್ಕೆ ಪ್ರತಿದಿನ ಭೇಟಿ ನೀಡುವ ಪ್ರವಾಸಿಗರ ಅಂದಾಜು ಸಂಖ್ಯೆ : 15 ,000
ಮೊದಲ ಹಂತದ ಯೋಜನಾ ವಿಸ್ತಾರ ಪ್ರದೇಶ : 19,000 ಚ.ಮೀ.
ಬಳಸಿರುವ ಸಿಮೆಂಟ್ : 90,000 ಟನ್
ಬಳಸಿರುವ ಉಕ್ಕು : 25,000 ಟನ್
👉 ಏನೆಲ್ಲಾ ಇಲ್ಲಿದೆ?
– 52 ಕೊಠಡಿಗಳ ‘ಶ್ರೇಷ್ಠ ಭಾರತ್ ಭವನ್’ ಹೋಟೆಲ್, 250 ಟೆಂಟ್ಗಳಿರುವ ‘ಟೆಂಟ್ ಸಿಟಿ’.
– ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯ.
– 306 ಮೀಟರ್ ಉದ್ದದ ಮಾರ್ಬಲ್ ಫ್ಲೋರಿಂಗ್ ವಾಕ್ವೇ. ವೀಕ್ಷಣಾ ಗ್ಯಾಲರಿ.
– ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೊ ಗ್ಯಾಲರಿ, ಸಂಶೋಧನಾ ಕೇಂದ್ರ.
– ಪ್ರತಿಮೆಗೆ ಲೇಸರ್ ಬೆಳಕಿನ ವ್ಯವಸ್ಥೆ ಹಾಗೂ ಧ್ವನಿ ಪ್ರದರ್ಶನ.
No comments:
Post a Comment
If you have any doubts please let me know