🌼 ಕೋಡಿಂಗ್ ಮತ್ತು ಡಿಕೋಡಿಂಗ್ (Coding and Decoding ) 🌼
ಸಾಮಾನ್ಯವಾಗಿ ರಕ್ಷಣಾ (Defense) ಇಲಾಖೆಯಲ್ಲಿ ಮಾಹಿತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸಲು ಕೋಡಿಂಗ್ ವಿಧಾನ ಬಳಸುತ್ತಾರೆ. ಸಂಕೇತ ವ್ಯವಸ್ಥೆಯನ್ನು ಕೋಡ್ ಎನ್ನುವರು ಮೂರನೇ ವ್ಯಕ್ತಿಗೆ ತಿಳಿಯದಂತೆ ಸಂದೇಶ ಕಳುಹಿಸುವವರ ಮತ್ತು ಸ್ವೀಕರಿಸುವವರ ನಡುವೆ ಪ್ರಸಾರದ ವಿಧಾನವನ್ನು ಕೋಡಿಂಗ್ ಎನ್ನುವರು. ಕೋಡಿಂಗ್ - ಡಿಕೋಡಿಂಗ್ ವಿಧಾನದಲ್ಲಿ ಗುಪ್ತ ಲಿಪಿಗಳನ್ನು ಭೇದಿಸಿ ವಿಶೇಷ ಪದ ಅಥವಾ ಸಂದೇಶಗಳನ್ನು ಕಂಡು ಹಿಡಿಯುವ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗುತ್ತದೆ. ಕೋಡಿಂಗ್ ನ ಅರ್ಥವನ್ನು ತಿಳಿಯುವ ಪ್ರಕ್ರಿಯೆಗೆ ಡಿಕೋಡಿಂಗ್ ಎನ್ನುವರು.
ಕೋಡಿಂಗ್ & ಡಿಕೋಡಿಂಗ್ ನಲ್ಲಿ ಅಸಂಖ್ಯಾಂತ ವಿಧಗಳಿವೆ ಅವುಗಳಲ್ಲಿ ಪ್ರಮುಖವಾದವುಗಳನ್ನು ಚರ್ಚಿಸಲಾಗಿದೆ.
1). ಅಕ್ಷರ ಕೋಡಿಂಗ್ (Letter Coding) :
ಕೊಟ್ಟಿರುವ ಅಕ್ಷರಗಳನ್ನು ಬೇರೆಯ ನಿರ್ದಿಷ್ಟ ಅಕ್ಷರಗಳಿಂದ ಒಂದು ಸೂತ್ರಕ್ಕನುಸಾರವಾಗಿ ಬದಲಾಯಿಸಿರುತ್ತದೆ. ಆ ಸೂತ್ರವನ್ನು ಕಂಡು ಹಿಡಿದು ಅದರಂತೆ ಪ್ರಶ್ನೆಗಳಿಗೆ ಉತ್ತರಿಸಬೇಕು.
1) ಒಂದು ನಿರ್ದಿಷ್ಟ ಭಾಷೆಯಲ್ಲಿ HOUSE ನ್ನು GNTRD ನಿಂದ ಸೂಚಿಸಿದರೆ, CARROM ನ್ನು ಯಾವ ರೀತಿ ಸೂಚಿಸಲಾಗುತ್ತದೆ?
ಬಿಡಿಸುವ ವಿಧಾನ :
HOUSE ನ ಪ್ರತಿ ಅಕ್ಷರವನ್ನು ಸ್ಪಷ್ಟವಾಗಿ ಒಂದು ಸಂಖ್ಯೆಯನ್ನು ಕಳೆದು GNTRD ನ್ನು ಪಡೆಯಲಾಗಿದೆ.
(H-1=G), (O-1=N), (U-1=T), (S-1=R), (E-1=D).
ಆದ್ದರಿಂದ CARROM = ?
(C-1=B), (A-1=Z), (R-1=Q), (R-1=Q), (O-1=N), (M-1=L).
ಉತ್ತರ : BZQQNL
2) MYSTIFY ಯನ್ನು NZTUJEZ ಎಂದು ಸೂಚಿಸಿದರೆ NEMESIS ಅನ್ನು ಹೇಗೆ ಸೂಚಿಸಲಾಗಿದೆ?
ಬಿಡಿಸುವ ವಿಧಾನ :
MYSTIFY ಇದರ ಪ್ರತಿಯೊಂದು ಅಕ್ಷರಗಳನ್ನು ಒಂದು ಸಂಖ್ಯೆ ಕೂಡಿ NZTUJEZ ಅಕ್ಷರಗಳನ್ನು ಪಡೆಯಲಾಗಿದೆ.
(M+1=N), (Y+1=Z), (S+1=T), (T+1=U), (I+1=J), (F+1=E), (Y+1=Z).
ಆದ್ದರಿಂದ NEMESIS = ?
(N+1=O), (E+1=F), (M+1=N), (E+1=F), (S+1=T), (I+1=J), (S+1=T).
ಉತ್ತರ : OFNFTJT
2) ಸಂಖ್ಯಾ ಕೋಡಿಂಗ್ (Number Coding) :
ಕೆಲವು ಪದಗಳಿಗೆ ಸಂಖ್ಯೆಯ ಮೌಲ್ಯ ಅಥವಾ ಸಂಖ್ಯೆಗಳಿಗೆ ಅಕ್ಷರ ಸಂಜ್ಞಾಗಳನ್ನು ನೀಡಲಾಗಿರುತ್ತದೆ. ಸಂಜ್ಞಾಗಳನ್ನು ನೀಡಿರುವ ನಿರ್ದೇಶನದಂತೆ ಅಥವಾ ನಿಯಮದಂತೆ ಸಮಸ್ಯೆಯನ್ನು ಬಿಡಿಸಬೇಕಾಗುತ್ತದೆ.
1) PAINT ನ್ನು 74128 ಹಾಗೂ EXCEL ನ್ನು 93596 ಸೂಚಿಸುತ್ತಾ ಹೋದರೆ ACCEPT ಇದನ್ನು ಹೇಗೆ ಸೂಚಿಸಬಹುದು?
ಬಿಡಿಸುವ ವಿಧಾನ :
ಅಕ್ಷರಗಳನ್ನು ಈ ಕೆಳಗಿನಂತೆ ಸೂಚಿಸಲಾಗಿದೆ.
P=7, A=4, I=1, N=2, T=8.
E=9, X=3, C=5, L=6.
ಆದ್ದರಿಂದ ACCEPT ಯಲ್ಲಿ A=4, C=5, C=5, E=9, P=7, T=8.
ಉತ್ತರ = 455978
3) ಮಿಶ್ರ ಅಕ್ಷರ ಕೋಡಿಂಗ್ (Mixed Letter Coding) :
ಎರಡಕ್ಕಿಂತ ಹೆಚ್ಚು ಪೂರ್ಣ ಸಂದೇಶಯನ್ನು ಕೋಡ್ ಭಾಷೆಯಲ್ಲಿ ಕೊಡಲಾಗಿರುತ್ತದೆ, ಅದಕ್ಕೆ ಸಂಬಂಧಪಟ್ಟಂತೆ ಒಂದು ನಿರ್ದಿಷ್ಟ ಪದದ ಕೋಡ್ ನ್ನು ಕೇಳಲಾಗುತ್ತದೆ. ಅಂತಹ ಕೋಡ್ ವಿಶ್ಲೇಷಿಸಲು ಕೊಟ್ಟಿರುವ ಮಾಹಿತಿಯಲ್ಲಿ ಎರಡು ಸಂದೇಶಗಳನ್ನು ಆರಿಸಲಾಗುತ್ತದೆ. ಏಕರೀತಿಯ ಕೋಡ್ ಆ ಶಬ್ಧವಾಗುವುದು. ಹೀಗೆ ಮುಂದುವರಿದು ಸಂಭವನೀಯ ಜೋಡಿ ಕೋಡ್ ಗಳನ್ನು ಗುರ್ತಿಸುತ್ತಾ ಸಂಪೂರ್ಣ ಸಂದೇಶವನ್ನು ವಿಶ್ಲೇಷಿಸಬಹುದು.
1) ಒಂದು ವೇಳೆ 'nso ptr kli chn' ಇದು sharma gets marriage gift ಎಂದು ptr lnm wop chn ಇದು tti wop nitil wife gives marriage gift ಎಂದು ಹಾಗೂ ಇದು 'he gives nothing' ಎಂದು ಸೂಚಿಸಲ್ಪಟ್ಟರೆ 'gives' ಇದರ ಕೋಡ್ ಏನೆಂದಾಗುವುದು?
ಬಿಡಿಸುವ ವಿಧಾನ :
ಎರಡನೇ ಹಾಗೂ ಮೂರನೆ ಹೇಳಿಕೆಗಳ ಸಾಮಾನ್ಯ ಶಬ್ದವು 'gives' ಆಗಿದೆ. ಹಾಗೂ ಸಾಮಾನ್ಯ ಕೋಡ್ ಇದು 'wop' ಆಗಿದೆ. ಆದ್ದರಿಂದ 'wop' ಇದು 'gives' ಎಂದಾಗುತ್ತದೆ.
ಉತ್ತರ :wop
4) ಮಿಶ್ರ ಸಂಖ್ಯೆ ಕೋಡಿಂಗ್ (Mixed Number Coding) :
ಕೆಲವು ಸಂಖ್ಯೆಗಳ ಗುಂಪುಗಳು ಒಂದು ನಿರ್ದಿಷ್ಟ ಸೂಕ್ಷವಾದ ಸಂದೇಶ ನೀಡುತ್ತವೆ ಆ ಸಮಯದಲ್ಲಿ ಸ್ಪರ್ಧಾರ್ಥಿಗಳು ಕೋಡ್ ಮತ್ತು ಸಂದೇಶಗಳನ್ನು ಪರಸ್ಪರ ಹೋಲಿಸಿ, ಆಗ ಅವರು ಕಂಡುಕೊಳ್ಳುವ ಮಾಹಿತಿಯ ಆಧಾರದ ಮೇಲೆ ಪ್ರತಿ ಶಬ್ಧದ ಸಂಖ್ಯಾ ಕೋಡ್ ನ್ನು ಕಂಡು ಹಿಡಿದು ಸಂದೇಶವನ್ನು ರೂಪಿಸಬೇಕಾಗುತ್ತದೆ.
1) ಒಂದು ಕೋಡ್ ನಲ್ಲಿ '324' ಎಂದರೆ 'light is bright' ಎಂದು. '629' ಎಂದರೆ 'girl is beautiful' ಎಂದು ಹಾಗೂ '4758' ಇದನ್ನು I prefer bright clothes ಎಂದು ಅರ್ಥೈಸಿ ಕೊಂಡರೆ ಯಾವ ಸಂಖ್ಯೆ 'light' ಆಗುತ್ತದೆ?
3 24 7
ಬಿಡಿಸುವ ವಿಧಾನ :
ಮೊದಲ ಮತ್ತು ಎರಡನೆಯ ಹೇಳಿಕೆಯಲ್ಲಿರುವ ಸಾಮಾನ್ಯ ಶಬ್ಧ 'is' ಮತ್ತು ಸಾಮಾನ್ಯ ಸಂಖ್ಯಾ ಕೋಡ್ '2'. ಆದ್ದರಿಂದ 2=is.
ಮೊದಲ ಹಾಗೂ ಮೂರನೇ ಹೇಳಿಕೆಯ ಸಾಮಾನ್ಯ ಶಬ್ಧ 'bright' ಹಾಗೂ ಸಾಮಾನ್ಯ ಸಂಖ್ಯಾ ಕೋಡ್ '4'. ಆದ್ದರಿಂದ 4=bright ಹೀಗೆ ಮೊದಲ ಹೇಳಿಕೆಯು '3' ಇದು 'light' ಎಂದಾಗುವದು.
ಉತ್ತರ : light = 3
No comments:
Post a Comment
If you have any doubts please let me know