✴ ಟಾಪ್ 51 ಪ್ರಶ್ನೋತ್ತರಗಳು : ನಿಮಗಾಗಿ ✴
🌺 ವಿಷಯ :- ಇತಿಹಾಸ 🌺
1) "ಭಾರತದ ಮೆಕವಲ್ಲಿ" ಎಂದು ಯಾರನ್ನು ಕರೆಯುತ್ತಾರೆ?
* ಕೌಟಿಲ್ಯ/ಚಾಣಕ್ಯ.
2) ರಾಜಾರಾಮ್ ಮೋಹನರಾಯ್ ರನ್ನು "ಭಾರತದ ನವೋದಯದ ಪಿತಾಮಹ" ಎಂದು ಕರೆದವರು ಯಾರು?
* ಮಹಾತ್ಮ ಗಾಂಧೀಜಿ.
3) ಹಿಟ್ಲರ್ ಸ್ಥಾಪಿಸಿದ ರಾಜಕೀಯ ಪಕ್ಷ ಯಾವುದು?
*ನಾಜಿಪಕ್ಷ.
4) "ಭಾರತದ ಷೇಕ್ಸ್ ಪಿಯರ್" ಎಂದು ಯಾರನ್ನು ಕರೆಯುತ್ತಾರೆ?
* ಕಾಳಿದಾಸ.
5) "ಭಾರತೀಯ ಪುನರುಜ್ಜೀವನದ ಪಿತಾಮಹ" ಯಾರು?
* ರಾಜರಾಮ್ ಮೋಹನ್ ರಾಯ್.
6) "ಭಾರತದ ನೆಪೋಲಿಯನ್" ಎಂದು ಯಾರನ್ನು ಕರೆಯುತ್ತಾರೆ?
* ಸಮುದ್ರಗುಪ್ತ.
7) ರಾಜಾರಾಮ್ ಮೋಹನ ರಾಯರಿಗೆ "ರಾಜಾ" ಎಂಬ ಬಿರುದು ನೀಡಿದವರು ಯಾರು?
* ಮೊಗಲ್ ಬಾದ್ ಷಾಹ (1829 ರಲ್ಲಿ).
8) "ಭಾರತದ ಗಿಳಿ" ಎಂದು ಯಾರನ್ನು ಕರೆಯುತ್ತಾರೆ?
* ಅಮೀರ್ ಖುಸ್ರು.
9) ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದವರು ಯಾರು?
* ಬಾಲಗಂಗಾಧರ ತಿಲಕ್.
10) ಆರ್ಯ ಸಮಾಜವನ್ನು ಯಾವಾಗ ಸ್ದಾಪಿಸಲಾಯಿತು?
* 1875 ರಲ್ಲಿ.(ಮುಂಬೈ).
11) ದಯಾನಂದ ಸರಸ್ವತಿಯವರ ಮೂಲ ಹೆಸರೇನು?
* ಮೂಲಶಂಕರ.
12) ಗಾಂಧೀಜಿಯ ರಾಜಕೀಯ ಗುರು ಯಾರು?
* ಗೋಪಾಲಕೃಷ್ಣ ಗೋಖಲೆ.
13) "ಸತ್ಯಾರ್ಥ ಪ್ರಕಾಶ" ಕೃತಿಯ ಕರ್ತೃ ಯಾರು?
* ಸ್ವಾಮಿ ದಯಾನಂದ ಸರಸ್ವತಿ.
14) ಸಿಂಧೂ ಬಯಲಿನ ನಾಗರಿಕರಿಗೆ ಸಂಬಂಧಿಸಿದ "ಸಾರ್ವಜನಿಕ ಈಜುಕೊಳ" ಎಲ್ಲಿದೆ?
* ಮೊಹೆಂಜೋದಾರೋ.
15) "ರೂಪಾರ್" ಯಾವ ರಾಜ್ಯದಲ್ಲಿದೆ?
* ಪಂಜಾಬ್.
16) ಅಲಹಾಬಾದ್ ಒಪ್ಪಂದವಾದದ್ದು ಯಾವಾಗ?
* 1765 ರಲ್ಲಿ.
17) "ಸೂಫಿ ಮಂದಿರ" ಎಲ್ಲಿದೆ?
* ಅಜ್ಮೀರ್ ದಲ್ಲಿದೆ.(ರಾಜಸ್ಥಾನ).
18) "ಸೇಂಟ್ ಜಾರ್ಜ್ ಕೋಟೆ" ಎಲ್ಲಿದೆ?
* ಮದ್ರಾಸ್.
19) ಗಾಂಧೀಜಿಯವರು "ಮಾಡು ಇಲ್ಲವೇ ಮಡಿ" ಎಂಬ ಕರೆಯನ್ನು ಎಲ್ಲಿ ನೀಡಿದರು?
* ಮುಂಬೈನಲ್ಲಿ.
20) 3 ನೆಯ ತೀರ್ಥಂಕರ ಯಾರು?
* ಅಜಿತನಾಥ.
21) "ವೈಹಾಂಡ್ ಕದನ" ಯಾರ ಯಾರ ನಡುವೆ ನಡೆಯಿತು?
* ಆನಂದಪಾಲ ಮತ್ತು ಮಹಮ್ಮದ್ ಘಜ್ನಿ.
22) "ಚೌಸ ಕದನ" ಯಾರ ಯಾರ ನಡುವೆ ನಡೆಯಿತು?
* ಹುಮಾಯುನ್ ಮತ್ತು ಶೇರ್ ಷಾ.
23) 'ಅಮೀರ್ ಖುಸ್ರು' ಯಾರ ಆಸ್ಥಾನ ಕವಿ?
* ಅಲ್ಲಾವುದ್ದೀನ್ ಖಿಲ್ಜಿ.
24) 'ಮಹಾಬಲಿಪುರಂ ದೇವಾಲಯಗಳು' ಯಾರಿಗೆ ಸಂಬಂಧಿಸಿವೆ?
* ಚೋಳರಿಗೆ.
25) ಬ್ರಿಟಿಷರು ಮೊದಲ ವ್ಯಾಪಾರ ಕೋಠಿಯನ್ನು ಎಲ್ಲಿ ಸ್ಥಾಪಿಸಿದರು?
* ಸೂರತ್ ನಲ್ಲಿ.
26) ಭಾರತದಲ್ಲಿ ಫ್ರೇಂಚರ ಅಧಿಪತ್ಯ ಕೊನೆಗೊಂಡಿದ್ದು ಯಾವ ಯುದ್ಧದಿಂದ?
* ವಾಂಡಿವಾಷ್.
27) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಸ್ಥಾಪಿಸಿದವನು ಯಾರು?
* ಲಾರ್ಡ್ ಕರ್ಜನ್ (1904 ರಲ್ಲಿ).
28) ಕರ್ಜನ್ ವೈಲಿಯನ್ನು ಹತ್ಯೆ ಮಾಡಿದವನು ಯಾರು?
* ಮದನ್ ಲಾಲ್ ಡಿಂಗ್ರ.
29) ಕಣ್ವ ಕಾಳಗ ನಡೆದದ್ದು ಯಾವಾಗ?
* 1527 ರಲ್ಲಿ (ಬಾಬರ್ ಮತ್ತು ರಜಪೂತರ ನಡುವೆ).
30) ಬಾಬರ್ ಮತ್ತು ಇಬ್ರಾಹಿಂ ಲೋಧಿ ನಡುವೆ ನಡೆದ ಯುದ್ಧ ಯಾವುದು?
* ಮೊದಲ ಪಾಣಿಪತ್ ಕಾಳಗ ( 1526).
31) 'ಮೈಕಲ್ ಓ ಡೈಯರ್' ನನ್ನು ಹತ್ಯೆ ಮಾಡಿದವನು ಯಾರು?
* ಉದಂಸಿಂಗ್.
32) 'ಅಂಬರ್ ಕೋಟೆ' ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
33) ಕಾನೂನು ಭಂಗ ಚಳುವಳಿ ಪ್ರಾರಂಭವಾದಾಗ ಭಾರತದ ವೈಸರಾಯ ಯಾರಾಗಿದ್ದರು?
* ಲಾರ್ಡ್ ಇರ್ವಿನ್.
34) ಚಿತ್ತಗಾಂವ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದವನು ಯಾರು?
* ಸೂರ್ಯಸೇನ್.
35) ಫ್ರೇಂಚರಿಗೆ 'ಮಚಲೀಪಟ್ಟಣ' ನೀಡಿದವನು ಯಾರು?
* ಮುಜಾಫರ್ ಜಂಗ್.
36) ಗಾಂಧಿ-ಇರ್ವಿನ್ ಒಪ್ಪಂದದ ಇನ್ನೊಂದು ಹೆಸರೇನು?
* ದೆಹಲಿ ಒಪ್ಪಂದ (1931).
37) ಆಗ್ರಾದ ಮೋತಿ ಮಸೀದಿಯ ನಿರ್ಮಾಪಕರು ಯಾರು?
* ಷಹಜಹಾನ್.
38) "ದಿವಾನ್-ಕಿ-ಖಾಸ್" ಎಲ್ಲಿದೆ?
* ಫತೇಪುರ್ ಸಿಕ್ರಿಯಲ್ಲಿದೆ.
39) "ಭಾರತದ ಸ್ಥಳೀಯ ಸರ್ಕಾರಗಳ ಜನಕ" ಯಾರು?
* ಲಾರ್ಡ್ ರಿಪ್ಪನ್.
40) ಕಾಳಿದಾಸ ಯಾರ ಆಸ್ಥಾನದಲ್ಲಿದ್ದನು?
* ಎರಡನೇ ಚಂದ್ರಗುಪ್ತ.
41) 1857 ರ ದಂಗೆಯಲ್ಲಿ ಬಿಹಾರದ ಮುಂದಾಳತ್ವ ವಹಿಸಿದವನು ಯಾರು?
* ಕುನ್ವರ್ ಸಿಂಗ್.
42) ಕಪ್ಪು ಕೋಣೆ ದುರಂತದಲ್ಲಿ ಮರಣ ಹೊಂದಿದವರ ಸಂಖ್ಯೆ ಎಷ್ಟು?
* 123.
43) "ಅಹಂ ಬ್ರಹ್ಮಾಸ್ಮಿ" ಎಂದು ಪ್ರತಿಪಾದಿಸಿದವರು ಯಾರು?
* ಶಂಕರಾಚಾರ್ಯರು.
44) 1757 ರ ಪ್ಲಾಸಿ ಕದನ ಯಾವ ತಿಂಗಳಿನಲ್ಲಿ ನಡೆಯಿತು?
* ಜೂನ್.
45) ಸ್ವರಾಜ್ ಪಕ್ಷ ಸ್ಥಾಪನೆಯಾದದ್ದು ಯಾವಾಗ?
* 1922 ರಲ್ಲಿ.
46) ಯಾವ ದೆಹಲಿ ಸುಲ್ತಾನನ್ನು "ವೈರುಧ್ಯಗಳ ಮಿಶ್ರಣ" ಎಂದು ಕರೆಯುತ್ತಾರೆ?
* ಮಹಮ್ಮದ್ ಬಿನ್ ತುಘಲಕ್.
47) "ತೊಘಲಕ್ ಒಬ್ಬ ಪರಸ್ವರ ವಿರುದ್ಧ ಗುಣಗಳ ಮಿಶ್ರಣ" ಎಂದು ಹೇಳಿದವರು ಯಾರು?
* ವಿ.ಎ.ಸ್ಮಿತ್.
48) "ಸಹಾಯಕ ಸೈನ್ಯ ಪದ್ದತಿ"ಯನ್ನು ಜಾರಿಗೆ ತಂದವನು ಯಾರು?
* ಲಾರ್ಡ್ ವೆಲ್ಲೆಸ್ಲಿ.
49) ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಗಾಂಧೀಜಿ ಕರೆ ನೀಡಿದ್ದು ಯಾವ ಚಳುವಳಿಯಲ್ಲಿ?
* ಅಸಹಕಾರ ಚಳುವಳಿ (1920-1922).
50) ಕನ್ನಡದ ಮೊದಲ ಪತ್ರಿಕೆ ಯಾವುದು?
* ಮಂಗಳೂರು ಸಮಾಚಾರ ( 1843, ಮೋಗ್ಲಿಂಗ್).
51) ಹರ್ಷವರ್ಧನ ಮಗಧದ ರಾಜನೆಂದು ಕರೆದುಕೊಂಡದ್ದು ಯಾವಾಗ?
* ಸಾ.ಶ. 641 ರಲ್ಲಿ.
No comments:
Post a Comment
If you have any doubts please let me know