🎆 ಮೊಘಲ ಸಾಮ್ರಾಜ್ಯ (ಕ್ರಿ.ಶ 1526-1707) 🎆
ಬಾಬರ್ (ಕ್ರಿ.ಶ 1526-1530):-
ಬಾಬರನು ಮೊಘಲ ಸಾಮ್ರಾಜ್ಯದ ಸ್ಥಾಪಕನಾಗಿದ್ದಾನೆ. ಇವನು ಮೊದಲ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈತನ ನಿಜವಾದ ಹೆಸರು "ಜಾಹಿರುದ್ದೀನ್ ಮೊಹ್ಮದ್" ಆಗಿದೆ.
ಸಾಧನೆಗಳು:-
# ಕ್ರಿ.ಶ 1526 ರಲ್ಲಿ ಒಂದನೇ ಪಾಣಿಪತ್ ಕದನದಲ್ಲಿ ದೆಹಲಿ ಸುಲ್ತಾನರ ದೊರೆ ಇಬ್ರಾಹಿಂ ಲೋದಿಯನ್ನು ಸೋಲಿಸಿದನು.
# ಕ್ರಿ.ಶ 1527 ’ಕಣ್ವ’ ಕದನದಲ್ಲಿ ಮೇವಾರದ ರಾಣಾ ಸಂಘನನ್ನು ಸೋಲಿಸಿದ. ಭಾರತದಲ್ಲಿ ಸಾರ್ವಭೌಮತ್ವವನ್ನು ಸ್ಥಾಪಿಸಲು ಇದು ಸಹಕಾರಿಯಾಯಿತು.
# 1528 ರಲ್ಲಿ ಚಾಂದೇರಿಯ ಮೇದಿನಿರಾಯನನ್ನು ಸೋಲಿಸಿದನು.
# ಕ್ರಿ.ಶ 1521 ರಲ್ಲಿ ಘಾಘ್ರಾ ಯುದ್ಧದಲ್ಲಿ ಅಫ್ಘನರನ್ನು ಸೋಲಿಸಿದನು.
# ಇವನು ತುರ್ಕಿ ಭಾಷೆಯಲ್ಲಿ "ಬಾಬರ್ ನಾಮಾ" ಅಥವಾ "ತುಜಕ್-ಇ-ಬಾಬರಿ" ಎಂಬ ಆತ್ಮಕಥೆಯನ್ನು ಬರೆದಿದ್ದಾನೆ.
# ಕ್ರಿ.ಶ 1530 ರಲ್ಲಿ ಬಾಬರ್ ಮರಣಹೊಂದಿದನು. ಇವನ ಸಮಾದಿಯು ಕಾಬೂಲ್ ನಲ್ಲಿ ಕಂಡುಬರುತ್ತದೆ.
# ಇವನ ನಂತರ ಇವನ ಮಗ ಹುಮಾಯೂನ್ ಅಧಿಕಾರಕ್ಕೆ ಬಂದನು.
ಹುಮಾಯೂನ್ :-
# ಮೊದಲ ಆಳ್ವಿಕೆಯ ಅವಧಿ - 1530-40
# ಎರಡನೇ ಆಳ್ವಿಕೆಯ ಅವಧಿ - 1555-1556
# ಇವನು ಬಾಬರನ ಮಗನಾಗಿದ್ದು ತನ್ನ ಮೂವರು ಸಹೋದರರನ್ನು ವಿವಿಧ ಪ್ರಾಂತ್ಯಗಳ ರಾಜ್ಯಪಾಲರನ್ನಾಗಿ ಮಾಡಿದನು.
# ಇವನು 1532 ರಲ್ಲಿ ಮಹ್ಮದ್ ಲೋದಿಯನ್ನು ’ದೌರಹ’ದಲ್ಲಿ ಸೋಲಿಸಿ ಷೇರಷಹನಿಗೆ ಸೇರಿದ ಚುನಾರ ಕೋಟೆಗೆ ಮುತ್ತಿಗೆ ಹಾಕಿದಾಗ ಷೇರಷಹ ಶರಣಾಗತನಾದನು.
# ಇವನು "ದಿನ್ ಪನಾ" ಎಂಬ ಹೊಸ ನಗರವನ್ನು ನಿರ್ಮಿಸಿದನು.
# ಕ್ರಿ.ಶ 1539 ರ ಚೌಸಾ ಕದನ ಹಾಗೂ 1540 ರ ಕನೌಜ್ ಕದನದಲ್ಲಿ ಷೇರಷಹನಿಗೆ ಸೋತ ಹುಮಾಯೂನನು 15 ವರ್ಷಗಳ ಕಾಲ ರಾಷ್ಟ್ರಭ್ರಷ್ಟನಾದನು.
# ಈ ಅವಧಿಯಲ್ಲಿ ಕ್ರಿ.ಶ 1542 ರ ಅಕ್ಟೋಬರ್ 15 ರಂದು ಅಮರಕೋಟ್ ನಲ್ಲಿ ಅಕ್ಬರ್ ಜನಿಸಿದ.
# ಕ್ರಿ.ಶ 1555 ರಲ್ಲಿ ಲಾಹೋರನ್ನು ವಶಪಡಿಸಿಕೊಂಡನು. ಅದೇ ಸಮಯದಲ್ಲಿ ಸಿರಹೀಂದ್ ಬಳಿ ಅಫಘಾನ್ ರನ್ನು ಸೋಲಿಸಿ ಕಳೆದುಕೊಂಡ ರಾಜ್ಯವನ್ನು ಮತ್ತೆ ಪಡೆದನು.
# ಕ್ರಿ.ಶ 1556 ರಲ್ಲಿ ಗ್ರಂಥಾಲಯದ ಮೆಟ್ಟಿಲುಗಳಿಂದ ಜಾರಿ ಬಿದ್ದು ಮರಣ ಹೊಂದಿದನು.
ಸೂರ್ ವಂಶ (ಕ್ರಿ.ಶ 1540-1555)
ಷೇರ ಷಾ ಸೂರಿ (ಕ್ರಿ.ಶ 1540-1545)
# ಇವನು ಸೂರ್ ವಂಶದ ಸ್ಥಾಪಕನಾಗಿದ್ದಾನೆ. ಇವನ ಮೊದಲ ಹೆಸರು ’ಫರೀದ್’ ಆಗಿತ್ತು.
# ಇವನು ಹುಲಿಯನ್ನು ಕೊಂದು ಷೇರ್ ಖಾನ್ ಆದನು. ನಂತರ ಸಿಂಹಾಸನಕ್ಕೆ ಬಂದ ಮೇಲೆ ’ಷೇರ್ ಷಾ’ ಆದನು.
# ಇವನು ಬೃಹತ್ತಾದ ಹೆದ್ದಾರಿಯನ್ನು ನಿರ್ಮಿಸಿದನು. "ದಿ ಗ್ರಾಂಡ್ ಟ್ರಂಕ್ ಹೆದ್ದಾರಿ" ಅಥವಾ ’ಸಡಕ್-ಇ-ಆಜಂ’ ಎಂಬ ಹೆದ್ದಾರಿಯನ್ನು ನಿರ್ಮಿಸಿದನು. ಇದು ಕಲ್ಕತ್ತಾದಿಂದ ಪೇಷಾವರದವರೆಗೆ ಕಂಡುಬರುತ್ತದೆ.
# ಹೆದ್ದಾರಿಗುಂಟ 1700 ಸರಾಯ್ (ತಂಗುದಾಣ) ಗಳನ್ನು ನಿರ್ಮಿಸಿದನು.
# ಇವನು ’ದಾಮ್’ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದನು. ಆದ್ದರಿಂದ ಇವನನ್ನು "ಭಾರತದ ರೂಪಾಯಿ ನಾಣ್ಯದ ತಳಹದಿಗಾರ" ಎನ್ನಲಾಗುತ್ತದೆ.
# ದೆಹಲಿಯಲ್ಲಿ ಪುರಾನಾ ಕಿಲ್ಲಾ ಎಂಬ ಕೋಟೆಯನ್ನು ನಿರ್ಮಿಸಿದನು.
# ಇವನು ಕ್ರಿ.ಶ 1545 ರಲ್ಲಿ ಕಾಲಿಂಜರ್ ಕೋಟೆಯಲ್ಲಿ ಸತ್ತನು. ಇವನ ಸಮಾದಿ ಬಿಹಾರದ ಸಸ್ರಾಮದಲ್ಲಿದೆ. ಇವರ ವಂಶದ ಕೊನೆಯ ದೊರೆ ಸಿಕಂದರ್ ಸೂರಿಯಾಗಿದ್ದಾನೆ.
# ಸೂರ್ ವಂಶದ ನಂತರ ಹುಮಾಯೂನ್ ತನ್ನ ಸಾಮ್ರಾಜ್ಯವನ್ನು ಕ್ರಿ.ಶ 1555 ರಲ್ಲಿ ಮತ್ತೆ ಪಡೆದುಕೊಂಡನು. ಹುಮಾಯೂನ್ ನ ನಂತರ ಅವನ ಮಗ ಅಕ್ಬರ್ ಅಧಿಕಾರಕ್ಕೆ ಬಂದನು
No comments:
Post a Comment
If you have any doubts please let me know