ಸಂಪೂರ್ಣ_ಕನ್ನಡ_ವ್ಯಾಕರಣ : ನಿಮಗಾಗಿ
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ವರ್ಣಮಾಲೆಯ ವಿಧಗಳು
* ಸ್ವರಗಳು
* ವ್ಯಂಜನಗಳು
* ಯೋಗವಾಹಗಳು
ಸ್ವರಗಳು: 13
“ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”.
ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಸ್ವರಗಳ ವಿಧಗಳು
* ಹ್ರಸ್ವ ಸ್ವರ
* ದೀರ್ಘ ಸ್ವರ
* ಪ್ಲುತ ಸ್ವರ
ಹ್ರಸ್ವ ಸ್ವರ: 6
“ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”.
ಉದಾ: ಅ ಇ ಉ ಋ ಎ ಒ
ದೀರ್ಘ ಸ್ವರ: 7
“ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”.
ಉದಾ: ಆ ಈ ಊ ಏ ಓ ಐ ಔ
ಪ್ಲುತ ಸ್ವರ:
“ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.
ಉದಾ: ಅಕ್ಕಾ, ಅಮ್ಮಾ
ಕ್+ಅ=ಕ
ಮ್+ಅ=ಮ
ಯ್+ಅ=ಯ
ಸಂಧ್ಯಾಕ್ಷರಗಳು: 4
ಏ, ಐ, ಒ, ಔ
ವ್ಯಂಜನಗಳು: 34
“ಸ್ವರಾಕ್ಷರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ”.
ವ್ಯಂಜನಗಳ ವಿಧಗಳು: 2
1. ವರ್ಗೀಯ ವ್ಯಂಜನಾಕ್ಷರಗಳು
2. ಅವರ್ಗೀಯ ವ್ಯಂಜನಾಕ್ಷರಗಳು
ವರ್ಗೀಯ ವ್ಯಂಜನಾಕ್ಷರಗಳು: 25
“ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.
ಉದಾ:
ಕ ವರ್ಗ – ಕ ಖ ಗ ಘ ಙ
ಚ ವರ್ಗ – ಚ ಛ ಜ ಝ ಞ
ಟ ವರ್ಗ – ಟ ಠ ಡ ಢ ಣ
ತ ವರ್ಗ – ತ ಥ ದ ಧ ನ
ಪ ವರ್ಗ– ಪ ಫ ಬ ಭ ಮ
ವರ್ಗೀಯ ವ್ಯಂಜನಾಕ್ಷರಗಳ ವಿಧಗಳು
* ಅಲ್ಪ ಪ್ರಾಣಾಕ್ಷರಗಳು
* ಮಹಾ ಪ್ರಾಣಾಕ್ಷರಗಳು
* ಅನುನಾಸಿಕಾಕ್ಷರಗಳು
ಅಲ್ಪ ಪ್ರಾಣಾಕ್ಷರಗಳು: 10
“ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ”.
ಉದಾ:
ಕ, ಚ, ಟ, ತ, ಪ
ಗ, ಜ, ಡ, ದ, ಬ
ಮಹಾ ಪ್ರಾಣಾಕ್ಷರಗಳು: 10
“ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ
ಉದಾ:
ಖ, ಛ ,ಠ, ಧ, ಫ
ಘ, ಝ, ಢ, ಧ, ಭ
ಅನುನಾಸಿಕಾಕ್ಷರಗಳು: 5
“ಮೂಗಿನ ಸಹಾಯದಿಂದುಚ್ಚರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ”
ಉದಾ:
ಙ, ಞ, ಣ, ನ, ಮ
ಅವರ್ಗೀಯ ವ್ಯಂಜನಾಕ್ಷರಗಳು: 9
“ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ಅವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು”.
ಉದಾ:
ಯ, ರ, ಲ, ವ, ಶ, ಷ, ಸ ,ಹ, ಳ
ಯೋಗವಾಹಗಳು: 2
“ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ”.
ಅಂ ಅಃ
ಯೋಗವಾಹಗಳ ವಿಧಗಳು
1. ಅನುಸ್ವಾರ ಂ
2. ವಿಸರ್ಗ ಃ
ಅನುಸ್ವಾರ {ಂ}
“ಯಾವುದೇ ಅಕ್ಷರವು ಒಂದು ಸೊನ್ನೆ(ಂ) ಬಿಂದು, ಎಂಬ ಸಂಕೇತವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”,
ಉದಾ: ಅಂಕ, ಒಂದು, ಎಂಬ
ವಿಸರ್ಗ {ಃ}
“ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೆಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು”
ಉದಾ: ಅಂತಃ, ದುಃಖ, ಸಃ, ನಃ
ಕನ್ನಡ ವರ್ಣಮಾಲೆ ಒಟ್ಟು ಅಕ್ಷರಗಳು ಸಂಖ್ಯೆ
ಕನ್ನಡ ವರ್ಣಮಾಲೆ (49)
ಸ್ವರಗಳು (13)
ಹ್ರಸ್ವ (06)
ದೀರ್ಘ (07)
ಪ್ಲುತ
ವ್ಯಂಜನಾಕ್ಷರಗಳು (34)
ವರ್ಗೀಯ (25) {ಅಲ್ಪಪ್ರಾಣ(10), ಮಹಾಪ್ರಾಣ (10), ಅನುನಾಸಿಕ (05)},
ಅವರ್ಗೀಯ (09)
ಯೋಗವಾಹ (02)
ಅನುಸ್ವಾರ (ಂ)
ವಿಸರ್ಗ (ಃ)
ಸಂಯುಕ್ತಾಕ್ಷರ
“ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ/ಒತ್ತಕ್ಷರ ಎಂದು ಕರೆಯುತ್ತೇವೆ”.
ಉದಾ:
ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಗ್ + ಗ್ + ಅ = ಗ್ಗ
ಸ್ + ತ್ + ರ್ + ಅ = ಸ್ತ್ರ
ಸಂಯುಕ್ತಾಕ್ಷರಗಳ ವಿಧಗಳು
1. ಸಜಾತಿಯ ಸಂಯುಕ್ತಾಕ್ಷರಗಳು
2. ವಿಜಾತೀಯ ಸಂಯುಕ್ತಾಕ್ಷರಗಳು
ಸಜಾತಿಯ ಸಂಯುಕ್ತಾಕ್ಷರಗಳು
“ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ”
ಉದಾ:
ಕತ್ತೆ – ಕ್ + ತ್ + ತ್ + ಎ
ಅಕ್ಕ – ಅ + ಕ್ + ಕ್ + ಅ
ಹಗ್ಗ , ಅಜ್ಜ , ತಮ್ಮ , ಅಪ್ಪ
ವಿಜಾತಿಯ ಸಂಯುಕ್ತಾಕ್ಷರಗಳು
“ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ”.
ಉದಾ:
1. ಅಗ್ನಿ- ಆ + ಗ್ + ನ್ + ಇ
2. ಆಪ್ತ – ಆ + ಪ್ + ತ್ + ಅ
ಸೂರ್ಯ, ಮಗ್ನ , ಸ್ವರ, ಪ್ರಾಣ
ಸಂಧಿ ಪ್ರಕರಣ
ಸಂಧಿ ಅರ್ಥ:
”ಉಚ್ಚಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು”
ಉದಾ:
ಗಾಣ + ಇಗ = ಗಾಣಿಗ
ಆಡು + ಇಸು = ಆಡಿಸು
ಹಸು + ಇನ = ಹಸುವಿನ
‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.
ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು
1. ಸ್ವರ ಸಂಧಿ:
”ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು”.
ಉದಾ:
1. ಊರು (ಉ) + (ವ) ಅನ್ನು = ಊರನ್ನು
2. ಮನೆ (ಎ) + (ಅ) ಅಲ್ಲಿ = ಮನೆಯಲ್ಲಿ
2. ವ್ಯಂಜನ ಸಂಧಿ:
“ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿ ಎನಿಸುವುದು”
ಉದಾ:
1. ಮಳೆ (ಕ) + (ಗ)ಕಾಲ = ಮಳೆಗಾಲ
2. ಬೆಟ್ಟದ(ತ) + (ದ)ತಾವರೆ = ಬೆಟ್ಟದಾವರೆ
ಸಂಧಿಗಳ ವಿಧಗಳು:
1. ಕನ್ನಡ ಸಂಧಿಗಳು
2. ಸಂಸ್ಕೃತ ಸಂಧಿಗಳು
ಕನ್ನಡ ಸಂಧಿಗಳ ವಿಧಗಳು
1. ಲೋಪ ಸಂಧಿ
2. ಆಗಮ ಸಂಧಿ
3. ಆದೇಶ ಸಂಧಿ
4. ಪ್ರಕೃತಿ ಭಾವ
1. ಲೋಪ ಸಂಧಿ:
”ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು”
ಉದಾ:
1. ಹಣದಾಸೆ – ಹಣದ + ಆಸೆ “ಅ” ಕಾರ
ಲೋಪ
2. ನಿನಗಲ್ಲದೆ – ನಿನಗೆ
+ ಅಲ್ಲದೆ “ಎ” ಕಾರ ಲೋಪ
3. ಅಲ್ಲೊಂದು – ಅಲ್ಲಿ + ಒಂದು “ಇ” ಕಾರ ಲೋಪ
4. ಊರಲ್ಲಿ – ಊರು + ಅಲ್ಲಿ “ಉ” ಕಾರ ಲೋಪ
2. ಆಗಮ ಸಂಧಿ:
”ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೇಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”.
ಆಗಮ ಸಂಧಿಯ ವಿಧಗಳು
ಎ: ‘ಯ’ ಕಾರ ಆಗಮ ಸಂಧಿ
ಬಿ: ‘ವ’ ಕಾರ ಆಗಮ ಸಂಧಿ
‘ಯ’ ಕಾರ ಆಗಮ ಸಂಧಿ:
” ಆ ಇ ಈ ಎ ಏ ಐ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವು ಆಗಮವಾಗುವುದು”.
ಉದಾ:
1. ಕೆರೆಯನ್ನು = ಕೆರೆ + ಅನ್ನು
2. ಕಾಯದೆ = ಕಾ + ಅದೆ
3. ಬೇಯಿಸಿದ = ಬೇ + ಇಸಿದ
ಕುರಿಯನ್ನು , ಮೀಯಲು, ಚಳಿಯಲ್ಲಿ
‘ವ’ ಕಾರ ಆಗಮ ಸಂಧಿ:
“ಅ ಉ ಊ ಋ ಓ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ನಡುವೆ “ವ” ಕಾರವೂ ಆಗಮವಾಗುವುದು”
ಉದಾ:
1. ಮಗುವಿಗೆ =ಮಗು + ಇಗೆ
2. ಗುರುವನ್ನು = ಗುರು + ಅನ್ನು
3. ಹೂವಿದು= ಹೂ + ಇದು
ಗೋವಿಗೆ, ಶಾಂತವಾಗಿ, ರಸವಾಗಿ
3. ಆದೇಶ ಸಂಧಿ:
“ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”
ಕ – ಗ
ಚ – ಜ
ಟ – ಡ
ತ – ದ
ಪ – ಬ
ಉದಾ:
1. ಮಳೆಗಾಲ = ಮಳೆ + ಕಾಲ
2. ಕಂಬನಿ = ಕಣ್ + ಪನಿ
3. ಕೈದಪ್ಪು = ಕೈ + ತಪ್ಪು
ಹೊಸಗನ್ನಡ, ಬೆಟ್ಟದಾವರೆ, ಕೊನೆಗಾಲ
4. ಪ್ರಕೃತಿ ಭಾವ ಸಂಧಿ:
“ಕೆಲವೆಡೆ ಸ್ವರಕ್ಕೆ ಸ್ವರ ಪರವಾದರೆ ಯಾವ ಸಂಧಿಕಾರ್ಯವು ನಡೆಯುವುದಿಲ್ಲ ಇದನ್ನು ಪ್ರಕೃತಿ ಭಾವ ಎಂದು ಕರೆಯುತ್ತಾರೆ”
ಉದಾ:
1. ಅಣ್ಣ ಓಡಿಬಾ = ಅಣ್ಣ + ಓಡಿಬಾ
2. ಅಬ್ಬಾ ಅದುಹಾವೆ? = ಅಬ್ಬಾ + ಅದುಹಾವೆ?
3. ರಾಮ ಎಲ್ಲಿದ್ದೀಯೆ? = ರಾಮ + ಎಲ್ಲಿದ್ದೀಯೆ?
ಸಂಸ್ಕೃತ ಸಂಧಿಗಳ ವಿಧಗಳು
1. ಸಂಸ್ಕೃತ ಸ್ವರ ಸಂಧಿಗಳು
2. ಸಂಸ್ಕೃತ ವ್ಯಂಜನ ಸಂಧಿಗಳು
ಸಂಸ್ಕೃತ ಸ್ವರ ಸಂಧಿಗಳ ವಿಧಗಳು
1. ಸವರ್ಣ ದೀರ್ಘ ಸಂಧಿ
2. ಗುಣ ಸಂಧಿ
3. ವೃದ್ಧಿ ಸಂಧಿ
4. ಯಣ್ ಸಂಧಿ
1. ಸವರ್ಣ ದೀರ್ಘ ಸಂಧಿ
”ಸವರ್ಣ ಸ್ವರಗಳು ಬಂದರೆ ಮುಂದೊಂದು ಬಂದಾಗ, ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘ ಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು
“ಅ – ಅ = ಆ,
ಅ – ಆ = ಆ,
ಇ – ಇ = ಈ,
ಇ – ಈ = ಈ
ಉ – ಉ = ಊ,
ಉ – ಊ = ಊ
ಉದಾ:
1. ದೇವಾಲಯ = ದೇವ + ಆಲಯ
2. ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ
3. ಗಿರೀಶ = ಗಿರಿ + ಈಶ
4. ಗುರೂಪದೇಶ = ಗುರು + ಉಪದೇಶ
ಶುಭಾಶಯ, ರವೀಂದ್ರ, ದೇವಾಸುರ, ಫಲಾಹಾರ, ಸೂರ್ಯಾಸ್ತ.
2. ಗುಣ ಸಂಧಿ
“ಅ, ಆ ಕಾರಗಳ ಮುಂದೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಏ” ಕಾರವೂ. ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಓ” ಕಾರವೂ, ಋ ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ “ಅರ್” ಕಾರವೂ ಆದೇಶವಾಗಿ ಬಂದರೆ ಅಂತಹ ಸಂಧಿಯನ್ನು “ಗುಣಸಂಧಿ” ಎಂದು ಕರೆಯಲಾಗುತ್ತದೆ”.
ಅ – ಆ,
ಇ – ಈ = ಏ
ಅ – ಆ,
ಉ – ಊ = ಓ
ಅ – ಆ, ಋ = ಅರ್
ಉದಾ:
1. ದೇವೇಂದ್ರ = ದೇವ + ಇಂದ್ರ
2. ಸಪ್ತರ್ಷಿ= ಸಪ್ತ + ಋಷಿ
3. ಸುರೇಂದ್ರ = ಸುರ + ಇಂದ್ರ
4. ಜನೋಪಕಾರ = ಜನ + ಉಪಕಾರ
ನಾಗೇಶ, ಏಕೋನ, ಚಂದ್ರೋದಯ, ಉಮೇಶ
3. ವೃದ್ಧಿ ಸಂಧಿ
“ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಐ” ಕಾರವೂ. ಓ, ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಔ” ಕಾರವೂ ಆದೇಶವಾಗಿ ಬರುತ್ತದೆ ಇದಕ್ಕೆ ವೃದ್ಧಿ ಸಂಧಿ ಎನ್ನುವರು”.
ಅ, ಆ – ಏ,
ಐ=ಐಅ,
ಆ – ಒ,
ಓ = ಔ
ಉದಾ:
1. ಏಕೈಕ = ಏಕ + ಏಕ
2. ವನೌಷಧಿ = ವನ + ಔಷಧಿ
3. ಜನೈಕ್ಯ = ಜನ + ಐಕ್ಯ
ವನೌಷಧ, ಸಿದ್ಧೌಷಧ, ಲೋಕೈಕವೀರ
4. ಯಣ್ ಸಂಧಿ
“ಇ, ಈ ಕಾರಗಳ ಮುಂದೆ ಅ, ಆ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಯ್” ಕಾರವೂ. ಉ, ಊ ಕಾರಗಳಿಗೆ “ವ್” ಕಾರವೂ ಋ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು”
ಇ, ಈ – ಅ, ಆ=’ಯ್’
ಉ, ಊ – ಅ, ಆ=’ವ್’
ಋ – ಅ, ಆ=’ರ್’
ಉದಾ:
1. ಪ್ರತ್ಯುತ್ತರ = ಪ್ರತಿ + ಉತ್ತರ
2. ಮನ್ವಂತರ = ಮನು + ಅಂತರ
3. ಜಾತ್ಯಾತೀತ = ಜಾತಿ + ಅತೀತ
4. ಮಾತ್ರಂಶ=ಮಾತೃ + ಅಂಶ
ಅತ್ಯವಸರ, ಮನ್ವಾದಿ, ಅತ್ಯಾಶೆ, ಗತ್ಯಂತರ
ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು
1. ಜಶ್ತ್ವ ಸಂಧಿ
2. ಶ್ಚುತ್ವ ಸಂಧಿ
3. ಅನುನಾಸಿಕ ಸಂಧಿ
1. ಜಶ್ತ್ವ ಸಂಧಿ
“ಪೂರ್ವ ಪದದ ಕೊನೆಯಲ್ಲಿರುವ ಕ, ಚ, ಟ, ತ, ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ವ್ಯಂಜನಾಕ್ಷರಗಳಾದ ಗ, ಜ, ಡ, ದ, ಬ ಗಳು ಆದೇಶವಾಗಿ ಬರುವುದಕ್ಕೆ ಜಶ್ತ್ವ ಸಂಧಿ ಎಂದು ಹೆಸರು”.
ಉದಾ:
1. ವಾಗೀಶ = ವಾಕ್ + ಈಶ
2. ಅಜಂತ = ಅಚ್ + ಅಂತ
3. ಷಡಂಗ = ಷಟ್ +ಅಂಗ
4. ಸದ್ಭಾವ = ಸತ್ +ಭಾವ
5. ಅಜ್ಜ = ಅಪ್ + ಜ
ದಿಗಂತ, ಅಜೌದಿ, ಷಡಾನನ, ಚಿದಾನಂದ, ಅಬ್ಧಿ
2. ಶ್ಚುತ್ವ ಸಂಧಿ
”ಶ್ಚು ಎಂದರೆ ಶಕಾರ ಚ ವರ್ಗಾಕ್ಷರಗಳು (ಶ್ ಶಕಾರ ಚು=ಚ ವ ಜ ಝ ಞ) ಈ ಆರು ಅಕ್ಷರಗಳೇ “ಶ್ಚು” ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ. ಇವುಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂಧಿ ಎಂದು ಹೆಸರು”.
ಸ ಕಾರಕ್ಕೆ – ಶ ಕಾರವು
ತ ವರ್ಗಕ್ಕೆ– ಚ ವರ್ಗವು (ಆದೇಶವಾಗಿ ಬರುತ್ತವೆ)
ಉದಾ:
1. ಸಜ್ಜನ = ಸತ್ + ಜನ
2. ಚಲಚಿತ್ರ = ಚಲತ್ + ಚಿತ್ರ
3. ಶರಶ್ಚಂದ್ರ = ಶರತ್ + ಚಂದ್ರ
ಜಗಜ್ಯೋತಿ, ಪಯಶ್ಯಯನ
3. ಅನುನಾಸಿಕ ಸಂಧಿ
“ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ನ ಣ ಮ ಗಳು ಆದೇಶವಾಗಿ ಬರುವುದಕ್ಕೆ ಅನುನಾಸಿಕ ಸಂಧಿ ಎಂದು ಹೆಸರು”.
ಉದಾ.
1. ವಾಙ್ಮಯ = ವಾಕ್ + ಮಯ
2. ಚಿನ್ಮೂರ್ತಿ = ಚಿತ್ + ಮೂರ್ತಿ
3. ತನ್ಮಯ = ತತ್ + ಮಯ
ಸನ್ಮಾನ, ಅಮ್ಮಯ, ಸನ್ಮಣಿ, ಚಿನ್ಮೂಲ
ಸಮಾಸ ಪ್ರಕರಣ
“ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ದವಾಗುವುದಕ್ಕೆ ಸಮಾಸ ಎಂದು ಹೆಸರು”
ಉದಾ:
1. ತಲೆಯಲ್ಲಿ (ಅಲ್ಲಿ) + (ನೋವು) ನೋವು = ತಲೆನೋವು
2. ಕಣ್ಣಿನಿಂದು (ಇಂದ) +(ಕುರುಡ) ಕುರುಡ = ಕಣ್ಣುಕುರುಡ
ವಿಗ್ರಹ ವಾಕ್ಯ
“ಸಮಾಸದ ಅರ್ಥ
ವನ್ನು ಬಿಡಿಸಿ ಹೇಳುವ ಮಾತುಗಳ
ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು”.
ಉದಾ:
ಸಮಸ್ತಪದ = ಪೂರ್ವಪದ + ಉತ್ತರ ಪದ
1. ದೇವಮಂದಿರ= ದೇವರ + ಮಂದಿರ
2. ಹೆಜ್ಜೇನು=ಹಿರಿದು + ಜೇನು
3. ಮುಂಗಾಲು= ಕಾಲಿನ + ಮುಂದು
(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ)
ಸಮಾಸ ಪದಗಳಾಗುವ ಸನ್ನಿವೇಶಗಳು
1. ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ
2. ಕನ್ನಡ – ಕನ್ನಡ ಶಬ್ದಗಳು ಸೇರಿ
ತದ್ಭವ-ತದ್ಭವ ಶಬ್ದಗಳು ಸೇರಿ
3. ಅಚ್ಚಗನ್ನಡ ಶಬ್ದ– ತದ್ಭವ ಶಬ್ದಗಳು ಸೇರಿ ಸಮಾಸಪದಗಳಾಗುತ್ತವೆ.
ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಲಾರದು.
ಸಮಾಸದ ವಿಧಗಳು
1. ತತ್ಪುರುಷ ಸಮಾಸ
2. ಕರ್ಮಧಾರೆಯ ಸಮಾಸ
3. ದ್ವಿಗು ಸಮಾಸ
4. ಅಂಶಿ ಸಮಾಸ
5. ದ್ವಂದ್ವ ಸಮಾಸ
6. ಬಹುವ್ರೀಹಿ ಸಮಾಸ
7. ಕ್ರಿಯಾ ಸಮಾಸ
8. ಗಮಕ ಸಮಾಸ
1. ತತ್ಪುರುಷ ಸಮಾಸ
“ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು”.
ಉದಾ:
1. ಮರದ + ಕಾಲ = ಮರಗಾಲ
2. ಬೆಟ್ಟದ + ತಾವರೆ = ಬೆಟ್ಟದಾವರೆ
3. ಕೈ + ತಪ್ಪು = ಕೈತಪ್ಪು
4. ಹಗಲಿನಲ್ಲಿ + ಕನಸು = ಹಗಲುಗನಸು
ಅರಮನೆ, ಎದೆಗುಹೆ, ಜಲರಾಶಿ, ತಲೆನೋವು
2. ಕರ್ಮಧಾರೆಯ ಸಮಾಸ
“ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ”
ಉದಾ:
1. ಹೊಸದು + ಕನ್ನಡ = ಹೊಸಗನ್ನಡ
2. ಹಿರಿದು + ಜೇನು = ಹೆಜ್ಜೇನು
3. ಕಿರಿಯ + ಗೆಜ್ಜೆ = ಕಿರುಗೆಜ್ಜೆ
ಕೆಂದುಟಿ, ಚಿಕ್ಕಮಗು, ಸಿಡಿಮದ್ದು, ಪಂದತಿ
3. ದ್ವಿಗು ಸಮಾಸ
“ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ”
ಉದಾ:
1. ಒಂದು + ಕಣ್ಣು = ಒಕ್ಕಣ್ಣು
2. ಎರಡು + ಬಗೆ = ಇಬ್ಬಗೆ
3. ಸಪ್ತ + ಸ್ವರ = ಸಪ್ತಸ್ವರ
ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು
4. ಅಂಶಿ ಸಮಾಸ
“ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು”
ಅಂಶವೆಂದರೆ ‘ಭಾಗ’ ಅಥವಾ ‘ಅವಯವ’
ಉದಾ:
1. ತಲೆಯ + ಮುಂದು = ಮುಂದಲೆ
2. ಬೆರಳಿನ + ತುದಿ = ತುದಿಬೆರಳು
3. ಕರೆಯ + ಒಳಗು = ಒಳಗೆರೆ
ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ
5. ದ್ವಂದ್ವ ಸಮಾಸ
“ಎರಡು ಅಥವಾ ಹೆಚ್ಚು ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು”
ಉದಾ:
1. ಕೆರೆಯೂ + ಕಟ್ಟಿಯೂ + ಬಾವಿಯೂ = ಕೆರೆ ಕಟ್ಟೆ ಬಾವಿಗಳು
2. ಕಾಫಿಯೂ + ತಿಂಡಿಯೂ = ಕಾಫಿ-ತಿಂಡಿ
3. ಬೆಟ್ಟವೂ + ಗುಡ್ಡವೂ = ಬೆಟ್ಟಗುಡ್ಡಗಳು
4. ಅಣ್ಣನು + ತಮ್ಮನು= ಅಣ್ಣತಮ್ಮಂದಿರು
ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ
6. ಬಹುವ್ರೀಹಿ ಸಮಾಸ
“ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು”.
ಉದಾ:
ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ
ಶಾಂತಿಯ + ಖನಿಯಾಗಿರುವನು + ಯಾವನೋ=ಶಾಂತಿಖನಿ
ಸಹಸ್ರ +ಅಕ್ಷಿಗಳು + ಯಾರಿಗೋ =ಸಹಸ್ರಾಕ್ಷ
ಪಂಕದಲ್ಲಿ + ಜನಿಸಿದ್ದು+ಯಾವುದೊ=ಪಂಕಜ
ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ
7. ಕ್ರಿಯಾ ಸಮಾಸ
“ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ”.
ಉದಾ:
ಸುಳ್ಳನ್ನು +ಆಡು=ಸುಳ್ಳಾಡು
ಕಣ್ಣನ್ನು +ತೆರೆ=ಕಣ್ದೆರೆ
ವಿಷವನ್ನು +ಕಾರು =ವಿಷಕಾರು
ಕೈಯನ್ನು +ಮುಗಿ=ಕೈಮುಗಿ
ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು
8. ಗಮಕ ಸಮಾಸ
“ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು”.
ಉದಾ:
ಸರ್ವನಾಮಕ್ಕೆ:
ಅವನು +ಹುಡುಗ=ಆ ಹುಡುಗ
ಇವಳು + ಹುಡುಗಿ = ಈ ಹುಡುಗಿ
ಯಾವುದು+ ಮರ=ಯಾವಮರ
ಕೃಂದತಕ್ಕೆ:
ಮಾಡಿದುದು+ಅಡುಗೆ =ಮಾಡಿದಡುಗೆ
ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು
ಉಡುವುದು+ದಾರ=ಉಡುದಾರ
ಸುಡುಗಾಡು, ಬೆಂದಡಿಗೆ, ಕಡೆಗೋಲು
ಗುಣವಾಚಕಕ್ಕೆ:
ಹಸಿಯದು +ಕಾಯಿ=ಹಸಿಯಕಾಯಿ
ಹಳೆಯದು +ಕನ್ನಡ=ಹಳೆಗನ್ನಡ
ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು
ಸಂಖ್ಯೆಗೆ:
ನೂರು +ಹತ್ತು =ನೂರಹತ್ತು
ಮೂವತ್ತು+ಆರು=ಮೂವತ್ತಾರು
ಮೂವತ್ತು, ಹೆಪ್ಪತ್ತು, ಇಪ್ಪತೈದು.
ಲಿಂಗಗಳು
‘ಒಂದು ನಾಮಪ್ರಕೃತಿ’ ಯಾವ ಜಾತಿಗೆ ಸೇರಿದೆ ಎಂಬುದನ್ನು ಹೇಳುವುದೇ ಲಿಂಗವೆಂದು ಹೆಸರು’
ಲಿಂಗಗಳ ವಿಧಗಳು:-
ಲಿಂಗಗಳಲ್ಲಿ ಮುಖ್ಖವಾಗಿ ಮೂರು ವಿಧಗಳುಂಟು
ಕೇಶಿ ರಾಜನ ಪ್ರಕಾರ ‘ಲಿಂಗಂವೊಂಬತ್ತು ತೆರೆಂ’
1. ಪುಲ್ಲಿಂಗ
2. ಸ್ತ್ರೀಲಿಂಗ
3. ನಪುಂಸಕಲಿಂಗ
1. ಪುಲ್ಲಿಂಗ:-
“ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ”
“ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬಥೃವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.”
ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ
2. ಸ್ತೀಲಿಂಗ:-
‘ಸ್ತೀಯನ್ನು ಕುರಿತು ಹೇಳುವ ಶಬ್ದಗಳೇ ಸ್ತೀಲಿಂಗ’
“ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ಹೆಂಗಸು ಎಂಬ ಅಥ್ ಹೊಳೆಯುವುದೋ ಅದ ಸ್ತೀಲಿಂಗ”
ಉದಾ:- ರಾಣಿ, ರಾಧೆ, ತಾಯಿ, ಅಕ್ಕ, ತಂಗಿ, ಚಲುವೆ, ಅರಸಿ, ಚಿಕ್ಕಮ್ಮ,……ಇತ್ಯಾದಿ
3.ನಪುಂಸಕ ಲಿಂಗ:-
“ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು-ಗಂಡಸು ಎರಡೂ ಅಲ್ಲದ ಅಥ್ರ ವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕ ಲಿಂಗ ಎನಿಸುವುದು.”
“ಪುಲ್ಲಿಂಗವೂ ಅಲ್ಲದ, ಸ್ತೀಲಿಂಗವೂ ಅಲ್ಲದ ಲಿಂಗಗಳು ನಪುಂಸಕ ಲಿಂಗಗಳಾಗಿವೆ.”
ಉದಾ:- ಮನೆ, ನೆಲ, ಬೆಂಕಿ, ಹೊಲ, ಗದ್ದೆ, ತೋಟ, ಮರ, ಆಕಾಶ, ಬಂಗಾರ,…..ಇತ್ಯಾದಿ
ಲಿಂಗಗಳ ಅನ್ಯ ವಿಧಗಳು:-
1. ಪುನ್ನಪುಂಸಕ ಲಿಂಗಗಳು:-
“ಎಲ್ಲಾ ಗ್ರಹವಾಚಕ ಶಬ್ದಗಳನ್ನು ಪುಲ್ಲಿಂಗ, ಹಾಗೂ ನಪುಂಸಕ ಲಿಂಗದಂತೆಯೂ
ಪ್ರಯೋಗದಲ್ಲಿ ಬಳಸುತ್ತೇವೆ. ಆದ
ಯಾ ಪದ ಪ್ರಕರಣ : 08
“ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ” ಅಥವಾ “ಒಂದು ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.”
ಉದಾ :
1) ದೀಪವು ಉರಿಯುತ್ತದೆ.
2)ಹಸುವು ಹಾಲನ್ನು ಕೊಡುತ್ತದೆ.
3)ತಾಯಿಯು ಅಡುಗೆಯನ್ನು ಮಾಡುತ್ತಾಳೆ.
4)ಅಣ್ಣ ಊಟವನ್ನು ಮಾಡುವ್ನು.
5)ದೇವರು ಒಳ್ಳೆದನ್ನು ಮಾಡಲಿ.
ಮೇಲಿನ ಉದಾ-ಗಳಲ್ಲಿ ಗೆರೆ ಎಳೆದಿರುವ ಪದಗಳೆಲ್ಲವೂ ಕ್ರಿಯೆಯ ಅರ್ಥವನ್ನು ಸೂಚಿಸುವ ಶಬ್ದಗಳಾಗಿರುವುದತಿಂದ ಕ್ತಿಯಾಪದಗಳು ಎನಿಸುತ್ತದೆ.
ಮೇಲಿನ ಶಬ್ದಗಳಲಿ “ಉರಿ ಕೊಡು ಮಾಡು” ಎಂಬ ಶಬ್ಧ ಕ್ರಿಯೆಯ ಅರ್ಥಕೊಡುವ ಮೂಲ ರೂಪವಾಗಿದೆ..ಧಾತು ಅಥವಾ ಕ್ರಿಯಾ ಪ್ರಕೃತಿ“
ಕ್ರಿಯಾ ಪದದ ಮೂಲ ರೂಪಕ್ಕೆ ಧಾತು/ಕ್ರಿಯಾಪ್ರಕೃತಿ ಎಂದು ಹೆಸರು ”ಅಥವಾ“ಕ್ರಿಯಾರ್ಥವನ್ನು ಕೂಡುವುದಾಗೆಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ/ಧಾತು ಎಂದು ಎಂದು ಹೆಸರು”ಧಾತುಗಳಿಗೆ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ.
ಉದಾ :
ಧಾತು + ಪ್ರತ್ಯಯ + ಕ್ರಿಯಾಪದ
ಮಾಡು + ತ್ತಾನೆ + ಮಾಡುತ್ತಾನೆ
ಯತ್ನ + ಇಸು + ಯತ್ನಿಸು
ಕನ್ನಡ + ಇಸು + ಕನ್ನಡಿಸು
ಭಾವ + ಇಸು + ಭಾವಿಸು
ರಕ್ಷ + ಇಸು + ರಕ್ಷಿಸು
ಓಡು +ತ್ತಾನೆ + ಓಡುತ್ತಾನೆ
ಧಾತುಗಳ ವಿಧಗಳು
ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.
1) ಮೂಲಧಾತು (ಸಹಜ) ಗಳು
2)ಸಾಧಿತ ಧಾತುಗಳು
1). ಮೂಲ ಧಾತುಗಳು :
“ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು”
ಉದಾ : ಮಾಡು, ಹೋಗು , ಬರು, ನಡೆ, ನೋಡು, ಓದು, ಹುಟ್ಟು, ಅಂಜು, ಸುತ್ತು, ಬಿತ್ತು , ಹೊಗಳು , ತೆಗಳು , ಎಳೆ , ಸೆಳೆ ತಿಳಿ , ಅರಿ , ಸುರಿ, ಅರಸು, ಸೆಳೆ, ಇತ್ಯಾದಿ
ಮೂಲಧಾತು + ಪ್ರತ್ಯಯ =ಕ್ರಿಯಾಪದ
ಮಾಡು + ತ್ತಾನೆ =ಮಾಡುತ್ತಾನೆ
ನೋಡು + ಇಸು =ನೋಡಿಸು
ತಿನ್ನು +ತ್ತಾನೆ = ತಿನ್ನುತ್ತಾಳೆ
2)ಸಾಧಿತ ಧಾತುಗಳು :
“ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ , ಅನುಕರಣ ಶಬ್ಧಗಳ ಮೇಲೆ ‘ಇಸು’ ಪ್ರತ್ಯಯ ಸೇರಿದಾಗ ಸಾಧಿತ ಧಾತುಗಳೆನಿಸುತ್ತವೆ.”ಇವಕ್ಕೆ ಪ್ರತ್ಯಯಾಂತ ಧಾತು ಎಂತಲೂ ಕರೆಯುತ್ತಾರೆ.
ಉದಾ :
ನಾಮಪ್ರಕೃತಿ + ಪ್ರತ್ಯಯ + ಸಾಧಿತ ಧಾತು
ಅಬ್ಬರ + ಇಸು + ಅಬ್ಬರಿಸು
ಕಳವಳ + ಇಸು + ಕಳವಳಿಸು
ಕನ್ನಡ + ಇಸು + ಕನ್ನಡಿಸು
ಚಿತ್ರ + ಇಸು + ಚಿತ್ರಿಸು
ಸ್ತುತಿ + ಇಸು + ಸುತ್ತಿಸು
ಸಿದ್ದಿ + ಇಸು + ಸಿದ್ದಿಸು
ಓಲಗ + ಇಸು + ಓಲಗಿಸು
ಮಲಗು + ಇಸು + ಮಲಗಿಸು
ಪ್ರೀತಿ +ಇಸು + ಪ್ರೀತಿಸು
ರಕ್ಷ + ಇಸು + ರಕ್ಷಿಸು
ಧಗಧಗ + ಇಸು + ಧಗಧಗಿಸು
ಥಳ ಥಳ + ಇಸು + ಥಳ ಥಳಿಸು
ಭಾವ ಸೂಚಕಗಳಾದ ಸಂಸ್ಕೃತ ಶಬ್ದಗಳು “ಇಸು” ಪ್ರತ್ತಯಯಗಳನ್ನು ಹೊಂದಿ ಸಾಧಿತ ಧಾತುಗಳಾಗುತ್ತವೆ.
ಉದಾ : ಯತ್ತಿಸಯ, ಸ್ತುತಿಸು, ಜಯಿಸು, ಲೇಪಿಸು, ಶೋಕಿಸು, ಭಾವಿಸು , ಇತ್ಯಾದಿ ಎಲ್ಲ ಧಾತುಗಳಿಗೂ ಪ್ರೇರಣಾರ್ಥಕದಲ್ಲಿ ‘ಇಸು’ ಪ್ರತ್ಯಯ ಸೇರುತ್ತದೆ. ಇವಕ್ಕೆ ಪ್ರೇರಣಾರ್ಥಕ ಧಾತುಗಳು ಎಂದು ಹೆಸರು.
ಪ್ರೇರಣೆ ಎಂದು “ಇನೋಬ್ಬರಿಂದ ಕೆಲಸ ಮಾಡಿಸುವುದು”
ಉದಾ : ಮೂಡಿಸು ಕಲಿಸು, ಬರೆಯಿಸು, ನುಡಿಸು ಹೇಳಿಸು, ಇತ್ಯಾದಿ
ಸಕರ್ಮಕ ಧಾತುಗಳು ಮತ್ತು ಅಕರ್ಮಕ ಧಾತುಗಳು ಎಂದು ವಿಧಗಳುಂಟು
ಸಕರ್ಮಕ ಧಾತುಗಳು :
“ಅರ್ಥಪೂರ್ತಿಗಾಗಿ ಅರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ ಸಕರ್ಮಕ ಧಾತು ಎಂದು ಹೆಸರು”
“ಈ ಸಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದ ಏನನ್ನು ಎಂಬ ಪ್ರಶ್ನೆಯು ಉದ್ಬವಿಸುತ್ತದೆ. ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೂಚಿಸಲು ವನ್ನು ಉಪಯೋಗಿಸಲಾಗುತ್ತದೆ.
ಉದಾ :
ಕರ್ತೃಪದ ಪರ್ಮಪದ ಕ್ರಿಯಾಪದ
ರಾಮನ್ನು ಮರವನ್ನು ಕಡಿಯುತ್ತಾನೆ
ಭೀಮನ್ನು ಬಕಾಸುನನ್ನು ಕೊಂದನು
ದೇವರು ಲೋಕವನ್ನು ರಕ್ಷಿಸುವನ್ನು
ಶಿಲ್ಪಿಗಳು ಗುಡಿಯನ್ನು ಕಟ್ಟಿದರು
ವಿದ್ಯಾರ್ಥಿಗಳು ಪಾಠವನ್ನು ಓದಿದರು
ಹುಡುಗರು ಕೆಲಸವನ್ನು ಮಾಡುತ್ತಾರೆ
ಅನೇಕರು ನದಿಯನ್ನು ದಾಟಿದರು
ಸಾಧುಗಳು ದೇವರನ್ನು ನಂಬುತ್ತಾರೆ
ಹುಡುಗಿ ಪಾತ್ರೆಯನ್ನು ತೋಳೆಯುತ್ತಾಳೆ
ಅಕರ್ಮಕ ಧಾತುಗಳು :
ಕರ್ಮಪದದ ಅಪೇಕ್ಷೆಯಿಲ್ಲದೇ ಪೂಣಾರ್ಥವನ್ನು ಕೊಡಲು ಸಮ್ಥವಾದ ಧಾತುಗಳನ್ನು ಅಕರ್ಮಕ ಧಾತು ಎಂದುಕರೆಯುತ್ತೇವೆ.
ಈ ಅಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದಕ್ಕೆ ಉದ್ಬವಿಸುವ ಪ್ರಶ್ನೆಗೆ ಉತ್ತರವನ್ನು ಸೂಚಿಸಲು ಕರ್ಮಪದವನ್ನು ಪ್ರಯೋಗ ಮಾಡಲಾಗುವುದಿಲ್ಲ.
ಉದಾ :
ಕರ್ತೃಪದ ಕ್ರಿಯಾಪದ ಧಾತು
ಮಗು ಹುಟ್ಟಿತು ಹುಟ್ಟು
ರಾಮನು ಬಂದನು ಬಂದ
ಮಳೆ ಬೀಳುತ್ತದೆ ಬೀಳು
ಮಗುವು ಅಳುತ್ತಿದೆ ಅಳು
ಕೂಸು ಮಲಗಿತು ಮೊಲಗು
ರಾಮನು ಓಡಿದನ್ನು ಓಡು
ಆಕಾಶ ಹೊಳೆಯುತ್ತಿದೆ ಹೊಳೆ
ಅವನು ಬದುಕಿದನು ಬದುಕು
ಕಳ್ಳರು ಹೆದರಿದರು ಹೆದರು
ಅವರು ಸೇರಿದರು ಸೇರು
ಇವಳು ನೆನೆದಳು ನೆನೆ
ಹುಡುಗರು ಓದಿದರು ಓದು
ಕರ್ತೃ ಪದ :
“ಕ್ರಿಯೆಯ ಕೆಲಸವನ್ನು ಯಾರು ಮಾಡಿದರು / ಯಾವುದು ಮಾಡಿತು ಎಂದು ತಿಳಿಸುವ ಪದವನ್ನು ಕರ್ತೃಪದವೆಂದು ಕರೆಯುವರು.”
ಕರ್ಮ ಪದ : “ಕ್ರಿಯಾ ಪದದ ಅರ್ಥವನ್ನು ಪೂರ್ತಿಗೊಳಿಸುವ ಪದಗಳಿಗೆ ಕರ್ಮಪದಗಳೆಂದು ಹೆಸರು.”
ಕ್ರಿಯಾ ಪದ : “ಕೆಲಸವನ್ನು ಹೇಳುವ ಪದವನ್ನು ಕ್ರಿಯಾಪದವೆಂದು ಕರೆಯುವರು.”
ಕ್ರಿಯಾ ರೂಪಗಳು :
“ಕ್ರಿಯಾ ರೂಪಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು”
1)ಕಾಲರೂಪಗಳು
2)ಅರ್ಥ ರೂಪಗಳು
ಕಾಲರೂಪಗಳು ವರ್ತಮಾನ ಭೂತ ಭವಿಷ್ಯತ್ ಉತ್ತ ದ ವ
1) ಕಾಲರೂಪಗಳು :
“ವರ್ತಮಾನ , ಭೂತ , ಮತ್ತು ಭವಿಷ್ಯತ್ ಕಾಲಗಳಲ್ಲಿ ಕಂಡುಬರುವ ಕ್ರಿಯೆಗಳ ಸನ್ನಿವೇಶಗಳನ್ನು ತಿಳಿಸುವ ರೂಪಗಳಿಗೆ ಕಾಲರೂಪಗಳು ಎನ್ನಲಾಗಿದೆ.”
ಪ್ರತಿಯೊಂದು ಕಾಲಗಳಲ್ಲಿ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕ್ಇಯಾರೂಪಗಳಾಗುತ್ತವೆ.
ಕಾಲ ರೂಪಗಳ ವಿಧಗಳು :ಕಾಲ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು.
1)ವರ್ತಮಾನ ಕಾಲ.
2)ಭೂತ ಕಾಲ.
3)ಭವಿಷ್ಯತ್ ಕಾಲ.
1) ವರ್ತಮಾನ ಕಾಲದ ಕ್ರಿಯಾರೂಪ :
“ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚುಸುವ ಕ್ರಿಯಾಪದವು ವರ್ತಮಾನ ಕಾಲದ ಕ್ರಿಯಾಪದವೆನಿಸುವುದು.”
ವರ್ತಕಾಲದಲ್ಲಿ ಧಾತುವಿಗೂ , ಅಖ್ಯಾತ ಪ್ರತ್ಯಯಕ್ಕೂ ನಡುವೆ “ಉತ್ತ” ಎಂಬ ಕಾಲ ಸೂಚಕ ಪ್ರತ್ಯಯವೂ ಉರುವುದು.
ಉದಾ :
ಧಾತು + ಕಾ.ಸೂ +
ಅಖ್ಯಾತ =ಕ್ರಿಯಾಪದ
ಪ್ರತ್ಯಯ ಪ್
್ದರಿಂದ ಇವನ್ನು ಪುನ್ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.”
ಉದಾ:-
ಸೂರ್ಯ ಚಂದ್ರ ಶನಿ ಮಂಗಳ, ಇತ್ಯಾದಿ
ಚಂದ್ರ ಮೂಡಿತು – ನಪುಂಸಕ ಲಿಂಗ
ಚಂದ್ರ ಮೂಡಿದನ – ಪುಲಿಂಗ
ಶನಿಯು ಕಾಡುತ್ತದ – ನಪುಂಸಕ ಲಿಂಗ
ಶನಿಯು ಕಾಡಿದನು – ಪುಲಿಂಗ
ಸೂರ್ಯ ಉದಯವಾಯಿತು- ನಪುಂಸಕ ಲಿಂಗ
ಸೂರ್ಯ ಉದಯವಾದನು – ಪುಲಿಂಗ
2.ಸ್ತ್ರೀ ನಪುಂಸಕ ಲಿಂಗಗಳು:-
“ನಾಮಪದಗಳು ಸಂಧಭ ಕ್ಕನುಗುಣವಾಗಿ ಸ್ತೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತೇವೆ ಆದುದರಿಂದ ಇದಕ್ಕೆ ಸ್ತೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.”
ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತೀ,ಸರಸ್ವತಿ, ಕೃಪೆ ಮಾಡಿತು, ಸ್ತೀ ನಪುಂಸಕ ಲಿಂಗಸರಸ್ವತಿ, ಕೃಪ ಮಾಡಿದಳು, ಸ್ತೀ,ಹುಡುಗಿ, ಓಡುತ್ತದೆ, ಸ್ತೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತೀ
1. ನಿತ್ಯ ನಪುಂಸಕ ಲಿಂಗಗಳು
“ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.”
ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು
2. ವಾಚ್ಯ ಲಿಂಗಗಳು :
“ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ.”
ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ
ನೀನು ಗಂಡಸು — ಪು
ಕೆಟ್ಟ ಹುಡುಗಿ——ಸ್ತ್ರೀ
ಕೆಟ್ಟ ನಾಯಿ——ನಪುಂ
ನಾನು ದೊಡ್ಡವನು——ಪು
ನಾನು ದೊಡ್ಡವಳು—–ಸ್ತ್ರೀ
ನಾನು ದೊಡ್ಡದು——ನಪುಂ
ಲಿಂಗಗಳ ಪ್ರಯೋಗ
ಗುಣವಾಚಕ ಶಬ್ದಗಳು :
ಪುಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ಒಳ್ಳೆಯವನು ಒಳ್ಳೆಯವಳು ಒಳಿತು
ದೊಡ್ಡವನು ದೊಡ್ಡವಳು ದೊಡ್ಡದು
ಹೊಸಬನು ಹೊಸಬಳು ಹೊಸದು
ಸರ್ವನಾಮ ಶಬ್ದಗಳು :
ಪುಲ್ಲಿಂಗ ಸ್ತ್ರೀಲಿಂಗ ನಪುಂಸಕ ಲಿಂಗ
ಅವನು ಅವಳು ಅದು
ಇವನು ಇವಳು ಇದು
ಯಾವನು ಯಾವಳು ಯಾವುದು
ನಾನು ನಾನು ನಾನು
ನೀನು ನೀನು ನೀನು
ಸಂಖ್ಯಾವಾಚಕ ಶಬ್ದಗಳಲ್ಲಿಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ಒಬ್ಬನು ಒಬ್ಬಳು ಒಂದು
ಇಬ್ಬರು ಇಬ್ಬರು ಎರಡು
ಮೂವರು ಮೂವರು ಮೂರು ಇತ್ಯಾದಿ
ವಚನಗಳು
ವಚನಗಳು : 06
“ಸಾಹಿತ್ಯದ ದೃಷ್ಷಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ. ಆದರೆ ವ್ಯಾಕರಣದ ದೃ಼ಷ್ಠಯಲ್ಲಿ ವಚನ ಎಂದರೆ ” ಸಂಖ್ಯೆ” ಎಂದರ್ಥ.
ವಚನಗಳ ವಿಧಗಳು :
ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು. ಅವುಗಳೆಂದರೆ :
1) ಏಕವಚನ.
2)ಬಹುವಚನ
1) ಏಕವಚನ : “ಒಬ್ಬ ವ್ಯಕ್ತಿ, ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ಬಗಳಿಗೆ ಏಕವಚನ ಎಂದು ಕರೆಯಲಾಗಿದೆ.
ಉದಾ : ಅರಸು, ನೀನು, ಮನೆ , ನಾನು, ಮರ, ಕವಿ , ತಂದೆ, ತಾಯಿ, ರಾಣಿ, ಊರು, ಇತ್ಯಾದಿ
2) ಬಹುವಚನ : “ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು.
ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು, ರಾಣಿಯರು, ಊರುಗಳು ಇತ್ಯಾದಿ…
ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು, ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ.
C) ಆರು :
ಗಂಡಸರು,
ಹೆಂಗಸರು,
ಮುದುಕರು
ಜಾಣೆಯರು,
ಗೆಳೆತಿಯರು,
ಅರಸರು
ಗೆಳೆಯರು,
ಆಟಗಾರರು,
ಸೊಸೆಯರು
ಅತ್ತೆಯರು, ಇತ್ಯಾದಿ
ಆ) ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ.
ಅಣ್ಣಂದಿರು
ಗಂಡಂದಿರು
ಅಕ್ಕಂದಿರು, ತಮ್ಮಂದಿರು
ಭಾವಂದಿರು
ಮಾವಂದಿರು, ಇತ್ಯಾದಿಗಳು
ಇ) (ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.
ಉದಾ :
ಋಷಿಗಳು,
ಗುರುಗಳು,
ದೊರೆಗಳು,
ಮುನಿಗಳು
ಹೆಣ್ಣುಗಳು,
ತಮದೆಗಳು, ಇತ್ಯಾದಿ
(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ.
ಉದಾ :
ಮರಗಳು
ದೇವತೆಗಳು
ಹಸುಗಳು
ಎಮ್ಮೆಗಳು
ಕೊಳಗಳು
ಹುಲಿಗಳು
ಹಳ್ಳಿಗಳು
ಕೆರೆಗಳು
ಕಲ್ಲುಗಳು, ಇತ್ಯಾದಿ
ವಿಭಕ್ತಿ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯಗಳು : 07
ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.
ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.
ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ನಾಮಪದಗಳ ಬಾಗು ತ್ತವೆ ವಿಭಕ್ತಿ ಪ್ರತ್ಯಯವೆಂದುಹೆಸರು”
ಅಥವಾ “ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.”
ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ…
ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು…
ವಿಭಕ್ತಿ ಪ್ರತ್ಯಯಗಳ ವಿಧಗಳು :ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟು ವಿಧಗಳಿವೆ..
ವಿಭಕ್ತಿಯ ಹೆಸರು ಪ್ರತ್ಯಯ
1)ಪ್ರಥಮವಿಭಕ್ತಿ ಉ
2)ದ್ವಿತೀಯವಿಭಕ್ತಿ ಅನ್ನು
3)ತೃತೀಯವಿಭಕ್ತಿ ಇಂದ
4)ಚತುರ್ಥಿವಿಭಕ್ತಿ ಗೆ, ಇಗೆ
5)ಪಂಚಮಿವಿಭಕ್ತಿ ದೆಸೆಯಿಂದ
6)ಷಷ್ಠಿವಿಭಕ್ತಿ ಅ
7)ಸಪ್ತಮಿವಿಭಕ್ತಿ ಅಲ್ಲಿ
8)ಸಂಭೋಧನವಿಭಕ್ತಿ ಮ ಏ
ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟುವಿಭಕ್ತಿಗಳು ಕಾರಕಾರ್ಥಗಳು ಪ್ರತ್ಯಯಗಳು
1)ಪ್ರಥಮ ಕತೃರ್ಥ ಉ
2)ದ್ವಿತೀಯ ಕರ್ಮಾರ್ಥ ಅನ್ನು
3)ತೃತೀಯ ಕರಣಾರ್ಥ ಇಂದ
4)ಚತುರ್ಥೀ ಸಂಪ್ರಧಾನ ಗೆ
5)ಪಂಚಮಿ ಅಪಧಾನ ದೆಸೆಯಿಂದ
6)ಷಷ್ಠಿ ಸಂಭಂಧ ಅ
7)ಅಪ್ತಮಿ ಅಧಿಕರಣ ಅಲ್ಲಿ
8)ಸಂಬೋಧನ ಅಭಿಮುಖೀ ಏ.ಆಕರಣಹಳಗನ್ನಡ ವಿಭಕ್ತಿ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯ ರೂಪಗಳು
1)ಪ್ರಥಮಾ ಮ್ ಮ್ ರಾಮಂ
2)ದ್ವಿತೀಯಾ ಅಮ್ ರಾಮನಂ
3)ತೃತೀಯ ಇಮ್ ರಾಮನಿಂ
4)ಚತುರ್ಥೀ ಗೆ ರಾಮಂಗೆ
5)ಪಂಚಮಿ ಅತ್ತಣಿಂ ರಾಮನತ್ತಣಿಂ
6)ಷಷ್ಠಿ ಅ ರಾಮನ
7)ಸಪ್ತ
ಮಿ ಒಳ್ ರಾಮನೊಳ್
ಕ್ರಿಯಾಪದ ಪ್ರಕರಣ
ಕ್ರಿ
ರತ್ಯಯ ಏ. ವಚನ ಬ. ವಚನಹೊಗು +ಉತ್ತ + ಆನೆ =ಹೋಗುತ್ತಾನೆ – ತ್ತಾರೆ
ಹ
ೊಗು + ಉತ್ತ + ಆಳೆ = ಹೋಗುತ್ತಾಳೆ – ತ್ತಾರೆ
ಹೋಗು + ಉತ್ತ + ಆದೆ = ಹೋಗುತ್ತದೆ – ತ್ತವೆ
ಹೋಗು +ಉತ್ತ + ಈಯ = ಹೋಗುತ್ತೀಯೆ – ತ್ತೀರಿ
ಹೋಗು + ಉತ್ತ + ಏನೆ = ಹೋಗುತ್ತೇನೆ – ತ್ತೇವೆ
ಕಾಲರೂಪಗಳುವರ್ತಮಾನ ಭೂತ ಭವಿಷ್ಯತ್ಉತ್ತ ದ ವ
2) ಭೂತ ಕಾಲ ಕ್ರಿಯಾರೂಪ :
“ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ “ದ” ಎಂಬ ಕಾಲ ಸೂಚಕ.ಪ್ರತ್ಯಯವು ಬರುವುದು”
ಉದಾ :
ತಿಳಿ – ಇದು ಒಂದು ಧಾತು ಶಬ್ಧಧಾತು + ಕಾ . ಸೂ ಪ್ರ + ಅಖ್ಯಾತ ಪ್ರ = ಕ್ರಿಯಾಪದ ಏ. ವ ಬಹುವಚನ
ತಿಳಿ + ದ + ಅನು = ತಿಳಿದನು ತಿಳಿದರುತಿಳಿ + ದ + ಅಳು = ತಿಳಿದಳು ತಿಳಿದರು
ತಿಳಿ + ದ + ಇತು = ತಿಳಿಯಿತು ತಿಳಿದವುತಿಳಿ + ದ + ಎ = ತಿಳಿದೆ ತಿಳಿದಿರಿ
ತಿಳಿ + ದ + ಎನು = ತಿಳಿದೆನು ತಿಳಿದೆವು
3)ಭವಿಷ್ಯತ್ ಕಾಲದ ಕ್ರಿಯಾರೂಪ :
“ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ .ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ “ವ” ಅಥವ “ಉವ” ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.
ಉದಾ :
ಕೊಡು – ಇದು ಒಂದು ಧಾತು ಶಬ್ಧಧಾತು + ಕಾ .ಸೂ + ಅಖ್ಯಾತ = ಕ್ರಿಯಾಪದ
ಪ್ರತ್ಯಯ ಪ್ರತ್ಯಯ ಏ.ವಚನ ಬಹುವಚನ
ಕೊಡು + ವ + ಅನು = ಕೊಡುವನು ಕೊಡುವರು
ಕೊಟು + ವ + ಅಳು = ಕೊಡುವಳು ಕೊಡುವರು
ಕೊಡು + ವ + ಅದು = ಕೊಡುವುದು ಕಡುವುದು
ಕೊಡು + ವ + ಎ = ಕೊಡುವೆ ಕೊಡುವಿರಿ
ಕೊಡು + ವ + ಎನು = ಕೊಡುವೆನು ಕೊಡುವೆವು.
ಅರ್ಥರೂಪಗಳು :
“ಕ್ರಿಯಾಪದಗಳು ಕಾಲ ರೂಪಗಳನ್ನು ಹೊಂದುವುದಲ್ಲದೆ ಅರ್ಥ ರೂಪಗಳನ್ನು ಹೊಂದಿರುತ್ತವೆ .ಅರ್ಥ ರೂಪಗಳಲ್ಲಿ ಧಾತುವಿಗೆ ಅಖ್ಯಾತ ಪ್ರತ್ಯಯ ಗಳು ನೇರವಾಗಿ ಸೇರಿಕೊಳ್ಳುತ್ತವೆ .”“ಅರ್ಥರೂಪಗಳು, ಆಜ್ಞೆ, ಹಾರೈಕೆ , ನಿಷೇಧ, ಸಂಶಯ ಮುಂತಾದ ಅರ್ಥಗಳನ್ನು ಸೂಚಿಸುತ್ತವೆ.”
ಅರ್ಥರೂಪಗಳ ವಿಧಗಳು :
ಅರ್ಥ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು
1) ವಿದ್ಯರ್ಥಕ ರೂಪ
2)ನಿಷೇಧಾರ್ಥಕ ರೂಪ
3)ಸಂಭಾವನಾರ್ಥಕ ರೂಪ
1) ವಿಧ್ಯರ್ಥಕ ರೂಪ :
” ವಿಧಿ ಎಂದರೆ “ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”
ಉದಾ :
ಧಾತು + ಅಖ್ಯಾತ ಪ್ರತ್ಯಯ = ವಿಧ್ಯರ್ಥಕ ಕ್ರಿಯಾ
ಹೋಗು + ಅಲಿ = ಹೋಗಲಿಬರೆ + ಇರಿ = ಬರೆಯಿರಿ
ಹೋಗು + ಓಣ = ಹೋಗೋಣ
ಬರೆ + ಓಣ = ಬರೆಯೋಣ
ಉದಾ :
1) ಕಣ್ಣು ಕಾಣದ ಮುದುಕನಿಗೆ ಭಕ್ಷೆ ನೀಡಿ ತಾಯಿ – ಕೋರಿಕೆ
2) ಮಳೆಬೆಳೆಗಳು ಚೆನ್ನಾಗಿ ನಡೆಯಲಿ.
3) ದೇವರು ನಿನಗರ ಒಳ್ಳೆಯದನ್ನು ಮಾಡಲಿ.
4) ಅವರು ಪಾಠವನ್ನು ಓದಲಿ – ಅಜ್ಞೆ.
5) ಅವನು ಹಾಳಾಗಿ ಹೋಗಲಿ – ಅಪ್ಪಣೆ.
6) ಅವನಿಗೆ ಜಯವಾಗಲಿ – ಹಾರೈಕೆ.
2) ನಿಷೇಧಾರ್ಥಕ ರೂಪ :
“ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.
ಉದಾ :
ಧಾತು + ಅ. ಪ್ರತ್ಯಯ + ನಿಷೇದಾರ್ಥಕ ಕ್ರಿ ರೂಪ
ಹೋಗು + ಅಳು + ಹೋಗಳು
ಬರೆ + ಅನು + ಬರೆಯನು
ಮಾಡು + ಎವು + ಮಾಡೆವು
ಕುಡಿ + ಅಳು + ಕುಡಿಯಳು
ಮಾಡು + ಅದು + ಮಾಡದು
3) ಸಂಭಾವನಾರ್ಥಲ ಕ್ರಿಯಾಪದ :
ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು” ಈತು, ಈಯೆ, ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.
ಉದಾ :
ಧಾತು + ಅಖ್ಯಾತ ಪ್ರ = ಸಂಭಾವನಾರ್ಥಕ ರೂಪ
ಮಾಡು + ಆನು = ಮಾಡಾನು
ಬರೆ + ಆನು = ಬರೆದಾನು
ಕುಡಿ + ಏನು = ಕುಡಿದೇನು
ಬರೆ + ಏವು = ಬರೆದೇವು
ಕುಡಿ + ಏವು = ಕುಡಿದೇವು
ಮಾಡು + ಈತು = ಮಾಡೀತು
ತಿಳಿ + ಆನು = ತಿಳಿದಾನು……ಇತ್ಯಾದಿ
ಅಖ್ಯಾತ ಪ್ರತ್ಯಯಗಳು :
“ಪುರುಷ, ವಚನ, ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುವಿಗೆ ಸೇರುವ ಪ್ರತ್ಯಯಗಳಿಗೆ ಅಖ್ಯಾತ ಪ್ರತ್ಯಯಗಳೆಂದು ಹೆಸರು.”
ಕ್ರಿಯಾ ಪದದ ರೂಪಗಳು :
ರೂಪ ಹಾಗೂ ಕೆಲಸಕ್ಕೆ ಅನುಗುಣವಾಗಿ ಕ್ರಿಯಾಪದಗಳು ಬಳಕೆಯಾಗುತ್ತವೆ.ಅವುಗಳು ಈ ಕೆಳಕಂಡಂತಿವೆ.
1) ಪೂರ್ಣ ಕ್ರಿಯಾಪದಗಳು.
2)ಸಾಪೇಕ್ಷ ಕ್ರಿಯಾಪದಗಳು.
3)ಸಂಯುಕ್ತ ಕ್ರಿಯಾಪದಗಳು.
1) ಪೂರ್ಣಕ್ರಿಯಾಪದಗಳು :
“ಕಾಲ, ರೂಪ, ಅರ್ಥಗಳನ್ನು ಹೊಂದಿರುವ ಕ್ರಿಯಾಪದಗಳು ವಾಕ್ಯಗಳ ಅರ್ಥವನ್ನು ಪೂರ್ಣಗೊಳಿಸುತ್ತವೆ ಇಂತಹ ಕ್ರಿಯಾ ಪದಗಳಿಗೆ ಪೂರ್ಣಕ್ರಿಯಾಪದ ಎಂದು ಹೆಸರು.”
ಉದಾ : ಪದ್ಮಾವತಿಯು ತಿಂಡಿಯನ್ನು ತಿಂದಳು.
2) ಸಾಪೇಕ್ಷ ಕ್ರಿಯಾ ಪದಗಳು :
“ತಮ್ಮ ಅರ್ಥವನ್ನು ಮುಗಿಸುವುದಕ್ಕೆ ಬೇರೊಂದು ಕ್ರಿಯಾ ಪದಗಳು ಎಂದು ಹೆಸರು.”
ಉದಾ : ಕನಕದಾಸರು ದೇವರ ನಾಮವನ್ನು ಹಾಡುತ್ತಾ ಭಿಕ್ಷೆ ಬೀಡುತ್ತಾರೆ.”
3) ಸಂಯುಕ್ತ ಪದಗಳು :
“ಎರಡು / ಹಲವು ಧಾತುಗಳ ಬೇರೆ ಬೇರೆ ಕ್ರಿಯಾ ರೂಪಗಳು ಸೇರಿ ಆಗುವ ಕ್ರಿಯಾಪದಕ್ಕೆ ” ಸಂಯುಕ್ತ ಕ್ರಿಯಾಪದ” ಎಂದು ಹೆಸರು.”
✍
*#FDA&SDA*
*ಮುಂದೆ ಬರುವ ಪರೀಕ್ಷಾ*
*ಹಿತ ದೃಷ್ಟಿಯಿಂದ*
*#ಸಾಮಾನ್ಯ ಕನ್ನಡ ಪತ್ರಿಕೆಯಲ್ಲಿ ಕೇಳಬಹುದಾದ ಪ್ರಮುಖ ತತ್ಸಮ ತದ್ಬವ*
*ಸಿರಿ ಕನ್ನಡ ' ಪಠ್ಯಪುಸ್ತಕದಲ್ಲಿನ ತತ್ಸಮ~ತದ್ಭವಗಳು*
*ಸಿರಿ ಕನ್ನಡ ' ಪಠ್ಯಪುಸ್ತಕದಲ್ಲಿನ ತತ್ಸಮ~ತದ್ಭವಗಳು*
*01)ಅಂಕುಶ ~ ಅಂಕುಸ*
*02)ಅರ್ಕ. ~ ಎಕ್*ಕ
*03)ಅಟವಿ ~ ಅಡವಿ*
*04)ಅಮೃತ ~ ಅಮರ್ದು*
*05)ಕಣಿ. ~ ಗಣಿ*
*06)ಕಲಶ ~ಕಲಸ*
*07)ಕಾರ್ಯ. ~ ಕಜ್ಜ*
*08) ಕಾವ್ಯ ~ ಕಬ್ಜ*
*09)ಕುಠಾರ ~ ಕೊಡಲಿ*
*10)ಕೋಕಿಲಾ~ ಕೋಗಿಲೆ*
*11)ಗ್ರಹ ~ ಗರ*
*12)ಚಂದ್ರ. ~ ಚಂದಿರ*
*13)ಚೀರ. ~ ಸೀರೆ*
*14)ತಟ ~ತಡಿ*
*15) ತಪಸ್ವಿ ~ ತವಸ*ಿ
*16)ದೃಷ್ಟಿ ~ ದಿಟ್ಟ
ಿ*
*17) ದಾತೃ ~ ದಾತಾರ*
*18)ದಿಶಾ ~ ದೆಸೆ*
*20)ದೀಪಿಕಾ ~ ದೀವಿಗೆ*
*21)ದ್ಯೂತ ~ಜೂಜು*
*22)ಪಕ್ಷಿ. ~ ಹಕ್ಕಿ*
*23) ಪಟ್ಟಣ ~ ಪತ್ತನ*
*24)ಪಾದುಕಾ~ಹಾವುಗೆ*
*25)ಪುಣ್ಯ. ~ಹೂನ್ಯ*
*26)ಪ್ರಸಾದ ~ ಹಸಾದ*
*27)ಬ್ರಹ್ಮ ~ ಬೊಮ್*ಮ
*28)ಭಕ್ತ ~ ಬಕುತ*
*29) ಮುಖಶಾಲೆ ~ ಮೊಗಸಾಲೆ*
*30) ಯಶ ~ಜಸ*
*31) ಯಜ್ಞ. ~ಜನ್ನ
*32)ರಾಜ. ~ರಾಯ*
*33)ವರ್ಷ~ ವರುಸ/ಬರಿಸ*
*34)ವ್ಯಯ ~ಬೀಯ*
*35)ವಂದ್ಯಾ ~ಬಂಜೆ*
*36)ವಂಶ ~ ಬಂಚ*
*37)ವ್ಯಾಪಾರಿ ~ ಬೆಹಾರಿ*
38)ವಿದ್ಯಾಧರ ~ಬಿಜ್ಜೋದರ
39)ವಿಜ್ಞಾನ ~ಬಿನ್ನಾಣ
40)ವಿಜ್ಞಾಪನೆ~ ಬಿನ್ನಹ
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know