Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 10 October 2015

ನಮ್ಮ ರಾಜ್ಯ : ಕರ್ನಾಟಕ


[*][*][*] ಕರ್ನಾಟಕ ನಮ್ಮ ರಾಜ್ಯ [*][*][*]
  • ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
  • ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
  • ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
  • ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
  • ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
  • ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
  • ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
  • ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
  • 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
  • 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
  • ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
  • 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
  • ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

*** ಕರ್ನಾಟಕದ ಪ್ರಥಮಗಳು ***
  • ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
  • ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
  • ಕನ್ನಡ ಭಾಷೆಯ ಮೊದಲ ಪದ : ಇಸಿಲ.
  • ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
  • ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
  • ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
  • ಕನ್ನಡದ ಮೊದಲ ವಂಶ : ಕದಂಬ
  • ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
  • ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
  • ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

!!!!! ಕರ್ನಾಟಕದ ಭೌಗೋಳಿಕ ಸ್ಥಾನ !!!!!
  •  ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
  • ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
  • ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
  • ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
  • ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
  • ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
  • ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
  • ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
  • ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
  • ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
  • ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
  • ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

{}{}{} ಕರ್ನಾಟಕದ ವಿಸ್ತೀರ್ಣ {}{}{}
  • ಒಟ್ಟು ವಿಸ್ತೀರ್ಣ - 191791 ಚಕಿಮೀಗಳು.
  • ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ - 5.83
  • ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
  • ಜನಸಂಖ್ಯೆ - 61130704 (2011 ಜನಗಣತಿಯಂತೆ)
  • ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
  • ಕಂದಾಯ ವಿಭಾಗಗಳು - 04
  • ಮಹಾನಗರಗಳು - 10
  • ಜಿಲ್ಲೆಗಳು - 30
  • ತಾಲ್ಲೂಕಗಳು - 177
  • ಹೋಬಳಿಗಳು - 347
  • ಮುನಸಿಪಲ್ ಕಾರ್ಪೋರೇಷನಗಳು - 219
  • ಮಹಾನಗರಗಳು - ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
  • ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ - ಬೆಳಗಾವಿ
  • ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ - ಬೆಂಗಳೂರು ನಗರ
  • ನಾಲ್ಕು ಕಂದಾಯ ವಿಭಾಗಗಳು - ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

[][][] ಕರ್ನಾಟಕದ ಒಂದು ಪಕ್ಷಿನೋಟ [][][]
  • ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
  • ರಾಜ್ಯ ಪ್ರಾಣಿ - ಆನೆ.
  • ರಾಜ್ಯ ವೃಕ್ಷ - ಶ್ರೀಗಂಧ.
  • ರಾಜ್ಯಪುಷ್ಪ - ಕಮಲ
  • ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
  • ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
  • ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
  • ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
  • ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
  • ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
  • ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
  • ವಿಧಾನಸಭೆಯ ಸದಸ್ಯರ ಸಂಖ್ಯೆ - 225.
  • ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
  • ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
  • ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
  • ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
  • ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
  • ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
  • ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
  • ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
  • ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
  • ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
  • ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
  • ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.
  • ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ದತಿಗಳು ಜನನ
  • ಕರ್ನಾಟಕ  ಸಂಗೀತ ಪಿತಾಮಹ -  ಪುರಂದರ ದಾಸ
  • ಕರ್ನಾಟಕದ ಈಗಿನ ಮುಖ್ಯ ಮಂತ್ರಿ - ಸಿದ್ಧರಾಮಯ್ಯ 

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads